ಬೋರ್ಡ್ ಎಕ್ಸಾಂ ಮುಗಿದ ನಂತರ ರಜೆಯಲ್ಲಿ ಏನೆಲ್ಲಾ ಮಾಡಬಹುದು ಗೊತ್ತಾ

By Nishmitha B

ಬೋರ್ಡ್ ಎಕ್ಸಾಂ ಮುಗಿಯಲು ಇನ್ನೇನೋ ಕೆಲವೇ ದಿನಗಳು ಬಾಕಿ ಇವೆ ಅಷ್ಟೇ. ಪರೀಕ್ಷೆ ಮುಗಿದ ನಂತರ ನೀವೇನು ಮಾಡಬಹುದು ಎಂಬ ಐಡಿಯಾ ಏನಾದ್ರೂ ನಿಮಗೆ ಇದೆಯಾ. ಪಾರ್ಟಿ, ನಿದ್ರೆ , ಪಿಕ್ ನಿಕ್ ಇಲ್ಲ ಇಷ್ಟು ರಜೆಯಲ್ಲಿ ಏನು ಮಾಡಬಹುದು ಎಂದು ನೀವು ಇನ್ನೂ ಕೂಡಾ ಯೋಚಿಸ್ತಾ ಇದ್ದೀರಾ.. ಹಾಲಿಡೇ ಸೀಸನ್ ನಲ್ಲಿ ನೀವೇನು ಮಾಡಬೇಕು ಎಂದು ಕೆರಿಯರ್ ಇಂಡಿಯಾ ನಿಮಗೆ ಸಲಹೆ ನೀಡುತ್ತಿದೆ

ಸಮ್ಮರ್ ಕ್ಯಾಂಪ್:
 

ಸಮ್ಮರ್ ಕ್ಯಾಂಪ್:

ನೀವು ತುಂಬಾ ಚಿಕ್ಕವರಾಗಿದ್ದರೆ ನಿಮಗಾಗಿ ಅನೇಕ ಸಮ್ಮರ್ ಕ್ಯಾಂಪ್‌ಗಳು ಇರುತ್ತವೆ. ಒಂದು ವೇಳೆ ದೊಡ್ಡವರಾಗಿದ್ದರೆ ಕೇಲವೇ ಕಲವು ಸಮ್ಮರ್ ಕ್ಯಾಂಪ್ ಗಳು ಇವೆ. ಅಷ್ಟೇ ಅಲ್ಲ ಪರ್ಸನಾಲಿಟಿ ಡೆವಲೆಪ್ ಮೆಂಟ್ ಗಾಗಿ ಇರುವ ಕ್ಲಾಸ್, ಫೈನ್ ಆರ್ಟ್ಸ್, ಸ್ಪೋರ್ಟ್ಸ್ ಇನ್ನಿತ್ತರ ಸಾಹಸಮಯ ಕ್ರೀಡೆಗಳಿಗೆ ಸೇರಿಕೊಳ್ಳಿ. ಇಂತಹ ಚಟುವಟಕೆಗಳಿಂದ ನಿಮ್ಮ ಪರ್ಸನಾಲಿಟಿ ಇನ್ನೂ ಚೆನ್ನಾಗಿ ಆಗುತ್ತದೆ

ಪ್ರವೇಶ ಪರೀಕ್ಷೆಗೆ ಸಿದ್ಧರಾಗಿ:

ಪ್ರವೇಶ ಪರೀಕ್ಷೆಗೆ ಸಿದ್ಧರಾಗಿ:

ಈಗಾಗಲೇ ಬೋರ್ಡ್ ಎಕ್ಸಾಂ ನಿಮ್ಮನ್ನ ಸಾಕಷ್ಟು ಸತಾಯಿಸಿರುತ್ತದೆ. ಬೋರ್ಡ್ ಎಕ್ಸಾಂಗಾಗಿ ನೀವು ಹೆಚ್ಚಿನ ಸಮಯ ಓದಿನಲ್ಲಿ ವ್ಯಯಿಸಿದ್ದೀರಿ. ಹಾಗಾಗಿ ನಿಮ್ಮ ಜ್ಞಾನ ಯಾವತ್ತೂ ವೇಸ್ಟ್ ಆಗುವುದಿಲ್ಲ. ನಿಮಗೆ ಯಾವ ಕೆರಿಯರ್ ನಲ್ಲಿ ಇಂಟ್ರೆಸ್ಟ್ ಇದೆಯೋ ಅದಕ್ಕೆ ಸಂಬಂಧಪಟ್ಟ ಎಕ್ಸಾಂ ಬಗ್ಗೆ ಮಾಹಿತಿ ಪಡೆದುಕೊಳ್ಳಿ. ಎಂಟ್ರೆಸ್ ಎಕ್ಸಾಂ ಗೆ ಇಲ್ಲಿ ಕ್ಲಿಕ್ ಮಾಡಿ.

ಪ್ರವೇಶಗಳು:

ಪ್ರವೇಶಗಳು:

ಚಿಕ್ಕವರಿದ್ದಾಗ ಮಕ್ಕಳಿಗೆ ಯಾವ ಶಾಲೆಗೆ ಸೇರಿಸುವುದು ಎಂದು ಹೆತ್ತವರು ಯೋಚಿಸುತ್ತಾರೆ. ಆದ್ರೆ ಇದೀಗ ನೀವು ದೊಡ್ಡವರಾಗಿದ್ದೀರಿ. ಮುಂದಿನ ಶಿಕ್ಷಣಾಭ್ಯಸದ ಬಗ್ಗೆ ನೀವೇ ಜವಬ್ದಾರಿ ತೆಗೆದುಕೊಳ್ಳಲು ತಯಾರಾಗ ಬೇಕು. ಯಾವ ಕಾಲೇಜು ಸೇರಿದರೆ ಬೆಸ್ಟ್ ಅನ್ನೋ ಮಾಹಿತಿ ನೀವೇ ಕಲೆಹಾಕಿಕೊಳ್ಳಿ.

ಮೊದಲಿಗೆ ಯಾವ ಕೋರ್ಸ್ ಬೆಸ್ಟ್ ಎಂದು ಇತರರ ಜತೆ ಚರ್ಚಿಸಿ. ಅಷ್ಟೇ ಅಲ್ಲ ಬಳಿಕ ಬೆಸ್ಟ್ ಕಾಲೇಜುಗಳ ಬಗ್ಗೆ ಒಂದು ಲಿಸ್ಟ್ ಮಾಡಿ. ಕಾಲೇಜು ಪ್ರವೇಶ ಪರೀಕ್ಷೆ ಬಗ್ಗೆ ಹಾಗೂ ಫೀಸ್, ಸಬ್‌ಜೆಕ್ಟ್ ಬಗ್ಗೆ ಮಾಹಿತಿ ಕಲೆಹಾಕಿ. ಬಳಿಕ ಬೆಸ್ಟ್ ಕಾಲೇಜು ಆಯ್ಕೆ ಮಾಡಿಕೊಳ್ಳಿ

ಕೆರಿಯರ್ ಕೌನ್ಸಿಲಿಂಗ್ ಮಾಡಿಕೊಳ್ಳಿ:
 

ಕೆರಿಯರ್ ಕೌನ್ಸಿಲಿಂಗ್ ಮಾಡಿಕೊಳ್ಳಿ:

ಪರೀಕ್ಷೆ ಮುಗಿದ ಬಳಿಕ ಮುಂದೇನು ಮಾಡುವುದೆಂದು ವಿದ್ಯಾರ್ಥಿಗಳು ತುಂಬಾ ಕಂಫ್ಯೂಸ್ ಆಗಿರುತ್ತಾರೆ. ಅಂತಹ ಸಮಯದಲ್ಲಿ ಅವರು ಕೌನ್ಸಿಲಿಂಗ್ ಗೆ ಒಳಗಾಗುವುದು ಬೆಸ್ಟ್. ಯಾವ ಕೆರಿಯರ್ ಆಯ್ಕೆ ಮಾಡಿಕೊಂಡ್ರೆ ಬೆಸ್ಟ್ ಅನ್ನೋ ಸಲಹೆ ಅವರಿಗೆ ಕೌನ್ಸಿಲಿಂಗ್ ನಿಂದ ಸಿಗುತ್ತದೆ. ಕೌನ್ಸಿಲಿಂಗ್ ನಿಂದ ನಿಮಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆ ಅನ್ನೋ ಮಾಹಿತಿ ಸಿಗುತ್ತದೆ

ಹೊಸತನದ ಪ್ರಯೋಗ:

ಹೊಸತನದ ಪ್ರಯೋಗ:

ಬೋರ್ಡ್ ಎಕ್ಸಾಮ್ ಗೆ ಓದಿ ನೀವು ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ತುಂಬಾ ಬಳಲಿರುತ್ತೀರಾ. ಆದಕ್ಕಾಗಿ ನೀವು ಎಲ್ಲಿಯಾದ್ರೂ ಟೂರ್ ಹೋಗುವುದು ಬೆಸ್ಟ್. ಟೂರ್ ಹೋದಾಗ ನಿಮಗೆ ಹೊಸ ಹೊಸ ಸಂಗತಿಗಳು ತಿಳಿಯುತ್ತವೆ. ಯಾವ ಕೆರಿಯರ್ ಬೆಸ್ಟ್ ಅನ್ನೋ ಮಾಹಿತಿ ಕೂಡಾ ಸಿಗುತ್ತದೆ. ಅಷ್ಟೇ ಅಲ್ಲ ನಿಮಗೆ ಹೊಸತೇನಾದ್ರು ಕಲಿಯಲು ಅವಕಾಶ ಸಿಗುತ್ತದೆ

ಪಾರ್ಟ್ ಟೈಂ ಇಲ್ಲ ಇಂಟರ್ನ್ ಆಗಿ ಕೆಲಸ ಮಾಡಿ:

ಪಾರ್ಟ್ ಟೈಂ ಇಲ್ಲ ಇಂಟರ್ನ್ ಆಗಿ ಕೆಲಸ ಮಾಡಿ:

ಮುಂದಿನ ಕೆರಿಯರ್ ಆಯ್ಕೆ ಮಾಡುವ ಮುನ್ನ ಇಲ್ಲ ಉನ್ನತ ಶಿಕ್ಷಣ ಮುಂದುವರೆಸುವ ಮುನ್ನ ರಜೆಯಲ್ಲಿ ಎಲ್ಲಿಯಾದ್ರೂ ಪಾರ್ಟ್ ಟೈಂ ಆಗಿ ದುಡಿಯಿರಿ. ಇಲ್ಲ ಇಂಟರ್ನ್ ಆಗಿ ಕೂಡಾ ಕೆಲಸ ಮಾಡಿ. ಇದರಿಂದ ನೀವು ಕಾಲೇಜಿನಲ್ಲಿ ಕಲಿತದ್ದಕ್ಕಿಂತ ಹೆಚ್ಚಿನದನ್ನು ಕಲಿಯುವ ಅವಕಾಶ ಸಿಗುವುದು. ನೀವು ಶಿಕ್ಷಣ ಮುಂದುವರೆಸುದಾದರೂ ಕೂಡಾ ನಿಮಗೆ ಇಲ್ಲಿ ಕಲಿತಂತದ್ದು ಸಹಾಯಕೆ ಬರುತ್ತದೆ. ಅಷ್ಟೇ ಅಲ್ಲ ಮುಂದೆ ಬೇರೆ ಎಲ್ಲಿಯಾದ್ರೂ ಕೆಲಸಕ್ಕೆ ಅಪ್ಲೈ ಮಾಡುವಾಗ ಪಾರ್ಟ್ ಟೈಂ ಜಾಬ್ ಅನುಭವ ಕೂಡಾ ನೀವು ಅವರಿಗೆ ತಿಳಿಸಬಹುದು. ಇದರಿಂದ ನೀವು ಬೇಗನೇ ಉದ್ಯೋಗವಕಾಶ ಗಿಟ್ಟಿಸಿಕೊಳ್ಳುತ್ತೀರಿ

ಸರ್ಟಿಫಿಕೇಟ್ ಕೋರ್ಸ್ ಮಾಡಿ

ಸರ್ಟಿಫಿಕೇಟ್ ಕೋರ್ಸ್ ಮಾಡಿ

ನಿಮ್ಮ ಕೆರಿಯರ್ ಇಂಟ್ರಸ್ಟಿಗೆ ತಕ್ಕಂತೆ ಅನೇಕ ಕೋರ್ಸ್ ಗಳು ಲಭ್ಯವಿದೆ. ಈ ಕೋರ್ಸ್ ಗಳು ಒಂದರಿಂದ ಎರಡು ತಿಂಗಳು ಇರಬಹುದು. ನೀವು ರಜಾದಿನಗಳಲ್ಲಿ ನಿಮ್ಮ ಕೆರಿಯರ್ ಇಂಟ್ರೆಸ್ಟ್ ಗೆ ತಕ್ಕಂತೆ ಕೋರ್ಸ್ ಮಾಡಿದ್ರೆ ಬೆಸ್ಟ್. ಇದರಿಂದ ಮುಂದೆ ಉದ್ಯೋಗ ಹುಡುವ ಸಮಯದಲ್ಲಿ ಇಂತಹ ಕೋರ್ಸ್ ಗಳ ಸರ್ಟಿಫಿಕೇಟ್ ನಿಮಗೆ ಪ್ಲಸ್ ಪಾಯಿಂಟ್ ಆಗಲಿದೆ.

For Quick Alerts
ALLOW NOTIFICATIONS  
For Daily Alerts

English summary
There are hardly ten more days left for the board exams to end. Do you have any idea about what you would be doing after the exams? Party? Sleep? Go on a vacation? Or are you still wondering as to how you could optimally make use of the long holidays
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more