ಸಂವಹನ ಕೌಶಲ್ಯವನ್ನು ಉತ್ತಮವಾಗಿಸಲು ಇಲ್ಲಿದೆ 7 ಟಿಪ್ಸ್

ಪ್ರತಿಯೊಂದು ಕ್ಷೇತ್ರದಲ್ಲೂ ಸ್ಪರ್ಧೇ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಪ್ರತಿ ವರ್ಷ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು CAT, MAT or other MBA ನಂತಹ ಪರೀಕ್ಷೆಯನ್ನು ಬರೆಯುತ್ತಾರೆ.

By Kavya

ಪ್ರತಿಯೊಂದು ಕ್ಷೇತ್ರದಲ್ಲೂ ಸ್ಪರ್ಧೇ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಪ್ರತಿ ವರ್ಷ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು CAT, MAT or other MBA ನಂತಹ ಪರೀಕ್ಷೆಯನ್ನು ಬರೆಯುತ್ತಾರೆ. ಇರುವ ಕೆಲವೇ ಕೆಲವು ಸೀಟುಗಳಿಗೆ ಸಾವಿರಾರು ಮಂದಿ ಪರೀಕ್ಷೆ ಬರೆಯುತ್ತಾರೆ. ನೀವು ಸೀಟು ಗಿಟ್ಟಿಸಿಕೊಳ್ಳಬೇಕಾದರೆ ಮೊದಲಿಗೆ ನಿಮ್ಮ ಸಂವಹನ ಕೌಶಲ್ಯವನ್ನು ಉತ್ತಮವಾಗಿಸಿಕೊಳ್ಳಬೇಕು. ಸಂವಹನ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಕೆಲವು ಟಿಪ್ಸ್ ಇಲ್ಲಿದೆ.

1. ಬಾಡಿ ಲ್ಯಾಂಗ್ವೆಜ್

1. ಬಾಡಿ ಲ್ಯಾಂಗ್ವೆಜ್

ನೀವು ಕೇವಲ ನಿಮ್ಮ ಮೈಂಡ್‌ನಲ್ಲಿ ಮಾತನಾಡುವುದಲ್ಲ ನೀವು ಮಾತನಾಡುವಾಗ ನಿಮ್ಮ ಬಾಡಿ ಲ್ಯಾಂಗ್ವೆಜ್ ಕೂಡಾ ಮುಖ್ಯವಾದುದು. ಇತರರನ್ನು ನಿಮ್ಮ ಮಾತಿನ ಮೂಲಕ ಸೆಳೆಯಬೇಕಾದರೆ ಬಾಡಿ ಲ್ಯಾಂಗ್ವೆಜ್‌ನ್ನು ಬೆಳೆಸಿಕೊಳ್ಳಬೇಕು. ಇಲ್ಲಿ ನೀವು ಏನನ್ನು ಹೇಳುತ್ತಿದ್ದೀರಾ ಎನ್ನುವುದಕ್ಕಿಂತ ನೀವು ವಿಷ್ಯವನ್ನು ಯಾವ ರೀತಿ ಅರ್ಥ ಮಾಡಿಸುತ್ತೀರಾ ಎನ್ನುವುದು ಮುಖ್ಯವಾಗುತ್ತದೆ.

 

 

2.ಅಭಿವ್ಯಕ್ತಿತ್ವವನ್ನು ಹುಡುಕಿ

2.ಅಭಿವ್ಯಕ್ತಿತ್ವವನ್ನು ಹುಡುಕಿ

ಮೊದಲಿಗೆ ನೀವು ಮಾಡಬೇಕಾಗಿರುವುದೇನೆಂದರೆ ನೀವು ಏನನ್ನು ಫೀಲ್ ಮಾಡುತ್ತೀರೋ ಅದನ್ನು ಬಹಿರಂಗಪಡಿಸಿ. ಭಾಷೆ ಒಂದು ಸಮಸ್ಯೆಯೇ ಅಲ್ಲ. ನಿಮ್ಮ ಫ್ಯಾಮಿಲಿ ಕಾರ್ಯಕ್ರಮದಲ್ಲಿ ನಡೆಯುವ ಗುಂಪು ಚರ್ಚೆಯಲ್ಲಿ ಭಾಗವಹಿಸಿ.

3. ಇತರರು ಹೇಳುವುದನ್ನು ಆಲಿಸಿ
 

3. ಇತರರು ಹೇಳುವುದನ್ನು ಆಲಿಸಿ

ನೀವು ಇತರರಲ್ಲಿ ಸರಿಯಾಗಿ ಮಾತನಾಡಬೇಕಾದರೆ ಮೊದಲು ನಿಮ್ಮ ಮುಂದಿರುವವರು ಏನನ್ನು ಹೇಳುತ್ತಿದ್ದಾರೆ ಎನ್ನುವುದನ್ನು ಆಲಿಸಿ. ನೀವು ಮಾತನಾಡುತ್ತಿರುವ ವಿಷ್ಯ, ನಿಮ್ಮ ಎದುರಿಗಿರುವ ವ್ಯಕ್ತಿಯ ವಿಷ್ಯಕ್ಕೆ ಹೊಂದಾಣಿಕೆಯಾಗುತ್ತಿಲ್ಲವೆಂದಾದಲ್ಲಿ ಮಾತನಾಡುವುದರಲ್ಲಿ ಯಾವುದೇ ಪ್ರಯೋಜನವಿಲ್ಲ.

4. ಪುಸ್ತಕ ಓದಿ

4. ಪುಸ್ತಕ ಓದಿ

ಹೆಚ್ಚು ಪುಸ್ತಕಗಳನ್ನು ಓದಲು ಪ್ರಯತ್ನಿಸಿ. ಈ ಮೂಲಕ ನಿಮ್ಮ ಜ್ಞಾನವನ್ನು ಹೆಚ್ಚಿಸಿ. ಪುಸ್ತಕ ಓದುವುದರಿಂದ ಹೊರ ಪ್ರಪಂಚದ ಅರಿವು ನಿಮಗಾಗುತ್ತದೆ. ನಿಮ್ಮ ತಿಳುವಳಿಕೆಯೂ ಹೆಚ್ಚುತ್ತದೆ.

 

 

5. ಶ್ರಮವಹಿಸಿ

5. ಶ್ರಮವಹಿಸಿ

ಒಮ್ಮೆ ನಿಮ್ಮ ಸಂವಹನ ಕೌಶಲ್ಯ ಸ್ವಲ್ಪ ಉತ್ತಮವಾದರೆ ಅದನ್ನು ಅಲ್ಲಿಗೆ ನಿಲ್ಲಿಸಬೇಡಿ. ಹೀಗೆ ಮಾಡಿದರೆ ಬೇರೆಯವರು ಸಂವಹನ ಕೌಶಲ್ಯದಲ್ಲಿ ನಿಮಗಿಂತ ಮುಂದೆ ಸಾಗಬಹುದು. ಹಾಗಾಗಿ ನಿಮ್ಮನ್ನು ನೀವು ಇನ್ನಷ್ಟು ಉತ್ತಮಗೊಳಿಸಬೇಕಾದರೆ ಸಾಕಷ್ಟು ಶ್ರಮವಹಿಸಿ.

6. ಅಭ್ಯಾಸ

6. ಅಭ್ಯಾಸ

ಪ್ರತಿದಿನ ಅಭ್ಯಾಸ ಮಾಡುವುದರಿಂದ ನಿಮ್ಮ ಸಂವಹನ ಕೌಶಲ್ಯ ಉತ್ತಮವಾಗಬಲ್ಲದು. ನಿಮಗೆ ಭಾಷೆ ಸರಿಯಾಗಿ ಬರದಿದ್ದರೂ ಇತರರಲ್ಲಿ ಮಾತನಾಡಲು ಪ್ರಯತ್ನಿಸಿ. ನಿಮ್ಮ ಮೇಲಿನ ಭರವಸೆಯನ್ನು ಕಳೆದುಕೊಳ್ಳಬೇಡಿ. ಅಭ್ಯಾಸ ಮಾಡುತ್ತಾ ಇರಿ ಕೊನೆಗೆ ಒಂದು ದಿನ ನೀವು ಅದರಲ್ಲಿ ಯಶಸ್ಸನ್ನು ಪಡೆಯುತ್ತೀರಾ.

7. ಇಂಗ್ಲೀಷ್ ಸಿನಿಮಾ ನೋಡಿ

7. ಇಂಗ್ಲೀಷ್ ಸಿನಿಮಾ ನೋಡಿ

ಹೆಚ್ಚೆಚ್ಚು ಇಂಗ್ಲೀಷ್ ಸಿನಿಮಾ ನೋಡುವುದರಿಂದ ನಿಮ್ಮ ಭಾಷೆ ಇನ್ನಷ್ಟು ಉತ್ತಮವಾಗಬಲ್ಲದು. ಇಂಗ್ಲೀಷ್ ಪುಸ್ತಕಗಳನ್ನು ಓದಿ ಇದರಿಂದ ನಿಮ್ಮ ಗ್ರಾಮರ್ ಸರಿಯಾಗುತ್ತದೆ. ಸಬ್‌ಟೈಟಲ್ ಮೂಲಕ ಇಂಗ್ಲೀಷ್ ಸಿನಿಮಾ ನೋಡಲು ಪ್ರಾರಂಭಿಸಿ. ಇದು ನಿಮ್ಮ ಇಂಗ್ಲೀಷ್ ಜ್ಞಾನವನ್ನು ಹೆಚ್ಚಿಸಲು ಸಹಕಾರಿಯಾಗಿದೆ.

For Quick Alerts
ALLOW NOTIFICATIONS  
For Daily Alerts

English summary
If one wants to grab that much coveted seat, the only way in which they can go about it is by improve their communication skills.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X