ದೂರ ಶಿಕ್ಷಣದ ಮೂಲಕ ಎಂಬಿಎ ಪಡೆಯುವುದರ ಲಾಭ

Posted By: Vinaykumar

ಎಂ.ಬಿ.ಎ ಪದವಿಯು ಸ್ನಾತಕೋತ್ತರ ಪದವಿಗಳಲ್ಲಿ ಉತ್ತಮ ಪದವಿ ಎಂದು ಗುರುತಿಸಿಕೊಂಡಿರುವುದಲ್ಲದೇ ದೀರ್ಘಕಾಲ ಬೇಡಿಕೆಯಿರುವ ಪದವಿಯಾಗಿಯು ಗುರುತಿಸಿಕೊಂಡಿದೆ. ಶಿಕ್ಷಣವು ಅತ್ಯಂತ ದುಬಾರಿಯಾಗಿರುವ ಇಂದಿನ ದಿನಗಳಲ್ಲಿ ಸುಲಭವಾಗಿ ಕಡಿಮೆ ಖರ್ಚಿನಲ್ಲೇ ನೀವು ನಿಮ್ಮ ಸ್ನಾತಕೋತ್ತರ ಪದವಿಯ ಕನಸನ್ನು ನನಸು ಮಾಡಿಕೊಳ್ಳಬಹುದು. ಅದು ಹೇಗೆ ಎನ್ನುವ ಕುತೂಹಲ ನಿಮಗಿದ್ಯಾ ಹಾಗಾದರೆ ಇದನ್ನು ಓದಿ.

ರೆಗ್ಯುಲರ್ ಎಂ.ಬಿ.ಎ ಗಿಂತ ದೂರ ಶಿಕ್ಷಣದ ಮೂಲಕ ಎಂಬಿಎ ಪಡೆಯುವುದರ ಲಾಭ

ಎಂ.ಬಿ.ಎ ಫೈನಾನ್ಸ್

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅದರಲ್ಲೂ ವ್ಯವಹಾರಿಕ ಪ್ರಪಂಚದಲ್ಲಿ ಹಣಕಾಸಿನ ವಿವಿಧ ಆಯಾಮಗಳನ್ನು ತಿಳಿದಿರುವ ವೃತ್ತಿಪರರಿಗೆ ಬೇಡಿಕೆ ತುಸು ಹೆಚ್ಚಾಗಿಯೇ ಇದೆ. ಈ ನಿಟ್ಟಿನಲ್ಲಿ ನೋಡುವುದಾದರೆ ಎಂ.ಬಿ.ಎ ವ್ಯಾಸಂಗದಲ್ಲೇ ವಿಶೇಷ ಸ್ಥಾನ ಪಡೆದಿರುವ ಫೈನಾನ್ಸ್ ಅತ್ಯಂತ ಉಪಯುಕ್ತವಾದ ಪದವಿಯಾಗಿದೆ. ವಿದ್ಯಾರ್ಥಿಗಳಿಗೆ ಅರ್ಥಶಾಸ್ತ್ರ, ಅಂಕಿಅಂಶ, ನಾಯಕತ್ವ ಮತ್ತು ಮಾರುಕಟ್ಟೆ ಸೇರಿದಂತೆ ವಾಣಿಜ್ಯದ ವಿವಿಧ ಆಯಾಮಗಳ ಬಗ್ಗೆ ಭದ್ರ ಬುನಾದಿ ಹಾಕುವಲ್ಲಿ ಎಂ.ಬಿ.ಎ ಫೈನಾನ್ಸ್ ಸಹಕಾರಿಯಾಗಿದೆ. ಈ ಪದವಿಯನ್ನು ಗಳಿಸುವುದರ ಮೂಲಕ ಎಂ.ಬಿ.ಎ ಪದವಿದರರನ್ನು ಬಯಸುವ ಸಂಸ್ಥೆಗಳಲ್ಲಿ ನೀವು ನಿಮ್ಮದೇ ಆದ ವೃತ್ತಿ ಮಾರ್ಗವನ್ನು ಕಂಡುಕೊಳ್ಳಬಹುದು.

ಎಂ.ಬಿ.ಎ ದೂರಶಿಕ್ಷಣ

ಬಿಡುವಿಲ್ಲದ ಕೆಲಸದ ಸಮಯ ಹಾಗೂ ವಿದ್ಯಾಭ್ಯಾಸಕ್ಕೆ ಪೂರಕವಾದ ವಾತವರಣ ಇಲ್ಲದೇ ಇರುವುದೇ ಉನ್ನತ ಶಿಕ್ಷಣ ಪಡೆಯಲು ವಿಫಲವಾಗುತ್ತಿರುವ ಅನೇಕರ ಸಮಸ್ಯೆಯಾಗಿದೆ. ಕೆಲವೊಮ್ಮೆ ದುಬಾರಿ ಶುಲ್ಕ ಹಾಗೂ ಅತಿಯಾದ ಕಾಂಪಿಟೇಶನ್ ಮುಲಕವೂ ಓದಲು ಅವಕಾಶ ಸಿಗದೆ ಎಂ.ಬಿ.ಎ ಶಿಕ್ಷಣದಿಂದ ಹಲವು ಮಂದಿ ವಂಚಿತರಾಗಿದ್ದಾರೆ.  ಆಧುನಿಕ ಶಿಕ್ಷಣ ಪದ್ಧತಿಯೂ ಈ ಸಮಸ್ಯೆಗೆ ಪರಿಹಾರ ನೀಡುವುದರ ಮೂಲಕ ವಿದ್ಯಾರ್ಥಿ ಮತ್ತು ಅವರು ಬಯಸುವ ಶಿಕ್ಷಣವನ್ನು ನೀಡುವ ಕಾರ್ಯ ಮಾಡುತ್ತಿದೆ.  ಶಿಕ್ಷಣದ ಗುಣಮಟ್ಟದಲ್ಲಿ ಅತ್ಯಂತ ಕಡಿಮೆ ರಾಜಿ ಮಾಡಿಕೊಂಡು ದೂರಶಿಕ್ಷಣ ವ್ಯವಸ್ಥೆ ಇಂದಿನ ದಿನಗಳಲ್ಲಿ ಎಂ.ಬಿ.ಎ ಪದವಿ ನೀಡುತ್ತಿದೆ. ಡಿಜಿಟಲ್ ತಂತ್ರಜ್ಞಾನವೂ ಇದಕ್ಕೆ ಪೂರಕವಾಗಿದ್ದು, ಆಕಾಂಕ್ಷಿಗಳಿಗಾಗಿ ನೇರ ಹಾಗೂ ಆಪ್ತ ಸಲಹಾ ಮೂಲಕ ಪರಸ್ಪರ ಚರ್ಚಿಸಿ ಕಲಿಯುವಂತಹ ವೇದಿಕೆಯನ್ನು ನಿರ್ಮಿಸಿದೆ.  ಇದರಿಂದ ವಿದ್ಯಾರ್ಥಿಗಳು ವಾಸ್ತವವನ್ನು ಗ್ರಹಿಸುತ್ತ ಕಲಿಯಬಹುದು.  ಯುವ ವೃತ್ತಿಪರರು ಅವರಿಗೆ ಅನುಕುಲವಾಗುವ ರೀತಿಯಲ್ಲಿ ಅವರಿರುವ ಸ್ಥಳದಿಂದಲೇ ತಮ್ಮ ದೈನಂದಿನ ಕೆಲಸ ಮತ್ತು ವೈಯಕ್ತಿಕ ಬೇಡಿಕೆಗಳ ನಡುವೆಯೂ ಎಂ.ಬಿ.ಎ ಶಿಕ್ಷಣವನ್ನು ಪಡೆಯಬಹುದು. ಪಠ್ಯವನ್ನು ಮೊಬೈಲ್ ಅಪ್ಲಿಕೇಶನ್‍ಗಳ ಮೂಲಕವೂ ಪಡೆಯಬಹುದಾಗಿದೆ. ದೂರಶಿಕ್ಷಣವನ್ನು ಒದಗಿಸುವವರು ಪಾಠಗಳನ್ನು ರೆಕಾರ್ಡ್ ಮಾಡುವುದರ ಜೊತೆಗೆ ಸುಲಭವಾಗಿ ಪಠ್ಯಕ್ಕೆ ಸಂಬಂಧಿಸಿದ ಹಾಗೂ ಪರೀಕ್ಷಾ ವಿಧಾನ ಮತ್ತು ಪರೀಕ್ಷೆಗೆ ಸುಲಭವಾಗಿ ಪ್ರವೇಶ ಪಡೆಯುವ ಅನುಕೂಲ ನಿರ್ಮಿಸಿದ್ದಾರೆ.

ಈಗ ಎಂಬಿಎ ಸುಲಭ

ಇಂಟಿಗ್ರೇಟೆಡ್ ದೂರ ಶಿಕ್ಷಣ

ಶಿಕ್ಷಣದಲ್ಲಿ ಮತ್ತಷ್ಟು ಪ್ರಗತಿ ಸಾಧಿಸಲು ಹಲವು ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ದೂರಶಿಕ್ಷಣ ವ್ಯವಸ್ಥೆಯು ಈಗ ಭಾರತದ ವಿಶ್ವವಿದ್ಯಾಲಯಗಳ ಕ್ಯಾಂಪಸ್ ಮೀರಿ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಂಡಿದೆ. ಪಾಂಡಿಚೆರಿ ವಿಶ್ವವಿದ್ಯಾಲಯದಂತಹ ಶಿಕ್ಷಣ ಸಂಸ್ಥೆಗಳು ಈ ರೀತಿಯ ಆಧುನಿಕ ಶಿಕ್ಷಣ ವ್ಯವಸ್ಥೆಯ ಜೊತೆ ಕೈ ಜೋಡಿಸಿದ್ದು ದೂರಶಿಕ್ಷಣದ ಮೂಲಕ ಎಂ.ಬಿ.ಎ ಶಿಕ್ಷಣ ನೀಡುತ್ತಿವೆ. ವಿಶ್ವವಿದ್ಯಾಲಯದ ನಿಯಮಗಳ ಅನುಸಾರವಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದು ನುರಿತ ಶಿಕ್ಷಕರಿಂದಲೇ ಬೋಧನೆ ನೀಡಲಾಗುತ್ತದೆ. ಪದವಿಯನ್ನು ಕೂಡ ಸಂಸ್ಥಯಿಂದಲೇ ನೀಡಲಾಗುವುದು. ಡೌನ್‍ಲೋಡ್ ಮಾಡಬಹುದಾದ ಪಠ್ಯಗಳು, ಇ-ಗ್ರಂಥಾಲಯ ಮತ್ತು ವಿಶ್ಲೇಷಣೆಗಳ ಮೂಲಕ ಮತ್ತಷ್ಟು ಅನುಕೂಲ ಒದಗಿಸಿದ್ದು ಎಲ್ಲವೂ ಒಂದೆ ಸೂರಿನಡಿ ದೊರೆಯುತ್ತದೆ.

ಸುಲಭವಾಗಿ ದೂರಶಿಕ್ಷಣದ ಎಂ.ಬಿ.ಎ ಪಡೆಯಿರಿ

ನೀವು ಉತ್ತಮ ವ್ಯವಹಾರದ ಶಿಸ್ತನ್ನು ಬಯಸುವ ವಿದ್ಯಾರ್ಥಿಯಾಗಿರಬಹುದು ಅಥವಾ ಎಂ.ಬಿ.ಎ ಪದವಿ ಮೂಲಕ ನಿಮ್ಮ ವೃತ್ತಿಯ ಪ್ರೊಫೈಲ್‍ನ್ನು ಮತ್ತಷ್ಟು ಹೆಚ್ಚಿಸಿಕೊಳ್ಳವವರಾಗಿರಬಹುದು, ದೂರಶಿಕ್ಷಣ ಪ್ರತಿಯೊಬ್ಬರಿಗೂ ಅವಕಾಶ ಕಲ್ಪಸಿದೆ. ಎಲ್ಲೆಡೆ ಗುಣಮಟ್ಟದ ಶಿಕ್ಷಣ ನೀಡುತ್ತ ಕೌಶಲ್ಯ ಭಾರತದ ನಿರ್ಮಾಣದಲ್ಲಿ ತೊಡಗಿರುವ ಈ ಸಂದರ್ಭದಲ್ಲಿ ನೀವೂ ಕೂಡ ಭಾಗವಹಿಸಿ , ದೂರಶಿಕ್ಷಣದ ಮೂಲಕ ನಿಮ್ಮ ಭವಿಷ್ಯವನ್ನು ಕಂಡುಕೊಳ್ಳಿ.

English summary
A MBA correspondence in this day and age is possible with very little compromise to the quality of the experience

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia