ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ರೀತಿಯ ಗುರಿಗಳಿರುತ್ತವೆ ಆದರೆ ಆ ಗುರಿಯನ್ನು ತಲುಪಲು ಕೆಲವೊಮ್ಮೆ ವಿಫಲವುಂಟಾಗುತ್ತವೆ ಕಾರಣ ಸರಿಯಾದ ಮಾರ್ಗದರ್ಶನ ಸಿಕ್ಕಿರುವುದಿಲ್ಲ. ಹಲವು ವಿದ್ಯಾರ್ಥಿಗಳು ಇನ್ನೇನು ಪರೀಕ್ಷೆಗಳು ಎದುರಾಗಲಿರುವ ಬಗೆಗೆ ಚಿಂತೆಯಲ್ಲಿ ಅಧ್ಯಯನದೆಡೆ ಗಮನ ಕೊಟ್ಟೀರುತ್ತೀರಿ. ಆದರೆ ಪರೀಕ್ಷೆಯ ನಂತರ ಏನು ಎನ್ನುವ ಪ್ರಶ್ನೆಗಳಿಗೆ ಹಲವರಲ್ಲಿ ಉತ್ತರವೇ ಇರುವುದಿಲ್ಲ. ಹಾಗಾಗಿ ನಾವು ನಿಮ್ಮ ಮಾರ್ಗದರ್ಶಕರಾಗಿ ಇಂದು ನಿಮಗೆ ಗಗನಸಖಿಯಾಗುವುದು ಹೇಗೆ ಎಂಬ ನಿಮ್ಮ ಪ್ರಶ್ನೆಗಳಿಗೆ ನಾವು ಉತ್ತರ ನೀಡುತ್ತೇವೆ.
ಹಲವು ವಿದ್ಯಾರ್ಥಿನಿಯರಿಗೆ ತಾವು ಸುಂದರವಾಗಿದ್ದೇವೆ ಗಗನಸಖಿಯಾಗಬೇಕೆಂಬ ಆಸೆ ಹೊತ್ತಿರುತ್ತಾರೆ ಅಥವಾ ಯಾರೋ ನಿನಗೆ ಗಗನಸಖಿ ಸೂಕ್ತ ಉದ್ಯೋಗ ಎಂದು ಸಲಹೆಯನ್ನಿತ್ತಿರುತ್ತಾರೆ. ಹಾಗಿದ್ದರೆ ಗಗನಸಖಿಯಾಗಲು ಏನೆಲ್ಲಾ ಕೋರ್ಸುಗಳಿವೆ ಎಂಬುದನ್ನು ಇಲ್ಲಿ ತಿಳಿಯಿರಿ.

ಗಗನಸಖಿಯಾಗಲು ಕೋರ್ಸ್:
ಗಗನಸಖಿಯಾಗಲು ಹಲವು ಕೋರ್ಸ್ಗಳು ಇವೆ ಹಾಗಾಗಿ ಗಗನಸಖಿಯಾಗಲು ಆಸಕ್ತರು ಆ ವಿಷಯದಲ್ಲಿ ಡಿಪ್ಲೋಮ ಅಥವಾ ಪದವಿ ಅಥವಾ ಪ್ರಮಾಣಪತ್ರವನ್ನು ಪಡೆಯಬಹುದು. ಈ ಅಧ್ಯಯನಗಳನ್ನು ಮಾಡಿದಲ್ಲಿ ಕೌಶಲ್ಯ, ಡ್ರೆಸ್ಸಿಂಗ್ ಸೆನ್ಸ್, ಹಲವು ಜನರ ಬಳಿ ಹೇಗೆ ಸಂವಹನ ಮಾಡಬೇಕು, ತುರ್ತು ಪರಿಸ್ಥಿತಿಯಲ್ಲಿ ಹೇಗೆ ಕ್ರಮಕೈಗೊಳ್ಳಬೇಕು ಹೀಗೆ ಹತ್ತು ಹಲವು ವಿಷಯಗಳನ್ನು ಕಲಿಯಬಹುದು ಹಾಗಾಗಿ ಕೋರ್ಸ್ಗಳ ಮಾಹಿತಿಯನ್ನು ಇಲ್ಲಿ ನೀಡಲಿದ್ದೇವೆ.
ಪದವಿ ಕೋರ್ಸ್ :
ವಿದ್ಯಾರ್ಥಿಗಳು 12ನೇ ತರಗತಿ ಅಧ್ಯಯನದ ನಂತರ ಗಗನಸಖಿಯಾಗಲು 3ವರ್ಷದ ಪದವಿಯನ್ನು ಮಾಡಬಹುದು.
ಪದವಿಯಲ್ಲಿ ಬಿಎಸ್ಸಿ ಇನ್ ಏರ್ ಲೈನ್ಸ್, ಟೂರಿಸಮ್ ಮತ್ತು ಹಾಸ್ಪಿಟಾಲಿಟಿ ಮತ್ತು ಏರ್ ಪೋರ್ಟ್ ಮ್ಯಾನೇಜ್ಮೆಂಟ್ ಮತ್ತು ಕ್ಯಾಬಿನ್ ಕ್ರಿವ್ ಟ್ರೈನಿಂಗ್ ನಲ್ಲಿ ಬಿಬಿಎ ಪದವಿಯನ್ನು ಯನ್ನು ಮಾಡಬಹುದು. ಈ ಕೋರ್ಸ್ ಗಳನ್ನು ಮಾಡುವುದರಿಂದ ಹೆಚ್ಚು ಜ್ಞಾನ ಪಡೆಯುವುದರ ಜೊತೆಗೆ ಪ್ರಾಕ್ಟಿಕಲ್ ಎಕ್ಸ್ ಪೀರಿಯನ್ಸ್ ಕೂಡ ಪಡೆಯಬಹುದು. ಹಾಗಿದ್ದಾಗ ವಿದ್ಯಾರ್ಥಿಗಳಿಗೆ ಇನ್ನಷ್ಟು ಅನುಭವವನ್ನು ನೀಡುವ ಜೊತೆಗೆ ಉದ್ಯೋಗಕ್ಕೆ ಬೇಕಿರುವ ಸಂಪೂರ್ಣ ಕೌಶಲ್ಯವನ್ನು ಕಲಿಯಬಹುದು.
ಡಿಪ್ಲೋಮ ಕೋರ್ಸ್ :
ವಿದ್ಯಾರ್ಥಿಗಳು ಗಗನಸಖಿಯಾಗಲು ಆಸೆ ಹೊಂದಿರುತ್ತಾರೆ ಆದರೆ ಸರಿಯಾದ ಸಮಯದಲ್ಲಿ ಸರಿಯಾದ ಆಯ್ಕೆಯನ್ನು ಮಾಡಲಾಗದೇ ಇದ್ದರೆ ಬೇಸರ ಪಡುವ ಅಗತ್ಯವಿಲ್ಲ. 3 ವರ್ಷಗಳ ಪದವಿಯನ್ನು ಮಾಡಲು ಆಗದ್ದಿದ್ದಲ್ಲಿ ಬೇಸರ ಪಡುವ ಅಗತ್ಯವಿಲ್ಲ ಯಾಕೆಂದರೆ ಈ ವಿಷಯಗಳಲ್ಲಿ ನೀವು ಡಿಪ್ಲೋಮ ಕೋರ್ಸ್ ಕೂಡ ಮಾಡಬಹುದು.ಏರ್ ಹೋಸ್ಟೆಸ್ ಹಾಸ್ಪಿಟಾಲಿಟಿ ಟ್ರೈನಿಂಗ್ , ಏವಿಯೇಷನ್ ಮತ್ತು ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್, ಗ್ಲೋಬಲ್ ಏವಿಯೇಶನ್ ಮತ್ತು ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್, ಹಾಸ್ಪಿಟಾಲಿಟಿ, ಟ್ರಾವೆಲ್ ಮತ್ತು ಕಸ್ಟಮರ್ ಸರ್ವೀಸ್ ಮತ್ತು ಪ್ರೊಫೆಶನಲ್ ಕ್ಯಾಬಿನ್ ಕ್ರಿವ್ ಸರ್ವೀಸಸ್ ಈ ಕೋರ್ಸ್ ಗಳ ಒಂದು ವರ್ಷದ ಡಿಪ್ಲೋಮವನ್ನು ಮಾಡಬಹುದು.
ಸರ್ಟಿಫಿಕೇಟ್ ಕೋರ್ಸುಗಳು:
ಪದವಿ, ಡಿಪ್ಲೋಮ ಕೋರ್ಸುಗಳನ್ನು ಮಾಡಿಲ್ಲ ಈ ವೃತ್ತಿಯಲ್ಲಿ ಕೆಲಸನಿರ್ವಹಿಸಲು ಆಸಕ್ತಿ ಇದೆ ಎನ್ನುವ ಅಭ್ಯರ್ಥಿಗಳಿಗೊಂದು ಉಪಯುಕ್ತ ಮಾಹಿತಿ ಏನೆಂದರೆ ಅತಿ ಬೇಗನೆ ಯಾರು ಗಗಸಖಿ ಉದ್ಯೋಗದ ನಿರೀಕ್ಷೆಯಲ್ಲಿ ಇರುತ್ತಾರೋ ಅವರು ಪದವರಿ ನಂತರ 3 ರಿಂದ 6 ತಿಂಗಳ ಸರ್ಟಫಿಕೇಟ್ ಕೋರ್ಸ್ ಗಳನ್ನು ಮಾಡಬಹುದು. ಕೇವಲ 3ರಿಂದ 6 ತಿಂಗಳುಗಳಲ್ಲಿ ಏರ್ ಹೋಸ್ಟೆಸ್ ಟ್ರೈನಿಂಗ್, ಇಂಟರ್ ನ್ಯಾಷನಲ್ ಏರ್ ಲೈನ್ಸ್ ಮತ್ತು ಟ್ರ್ಯಾವೆಲ್ ಮ್ಯಾನೇಜ್ಮೆಂಟ್ , ಏವಿಯೇಶನ್ ಮತ್ತು ಹಾಸ್ಪಿಟಾಲಜಿ ಮ್ಯಾನೇಜ್ಮೆಂಟ್,ನೈಟ್ ರೇಟಿಂಗ್, ಹಾಸ್ಪಿಟಾಲಿಟಿ,ಟ್ರ್ಯಾವೆಲ್ ಮತ್ತು ಕಸ್ಟಮರ್ ಸರ್ವೀಸ್, ಪರ್ಸನಾಲಿಟಿ ಡೆವಲೆಪ್ಮೆಂಟ್ ಕೋರ್ಸುಗಳಲ್ಲಿ ತೊಡಗಿಕೊಳ್ಳಬಹುದು.ಇದಿಷ್ಟೂ ಕೋರ್ಸುಗಳು ನೀವು ಗಗನಸಖಿಯಾಗಿಲು ಇರುವ ಮೆಟ್ಟಿಲುಗಳು. ಅದಲ್ಲದೇ ಈ ಕೋರ್ಸುಗಳು ಎಲ್ಲೆಲ್ಲಿ ಲಭ್ಯವಿದೆ ಎನ್ನುವುದನ್ನೂ ಮುಂದೆ ತಿಳಿಸಲಿದ್ದೇವೆ ನೋಡಿ

ಭಾರತದಲ್ಲಿ ಅತಿ ಹೆಚ್ಚು ಪ್ರಾಮುಖ್ಯತೆ ಪಡೆದ ಕಾಲೇಜುಗಳು ಇಲ್ಲಿವೆ:
- ರಾಜೀವ್ ಗಾಂಧಿ ಮೆಮೋರಿಯಲ್ ಕಾಲೇಜ್ ಆಫ್ ಎರೋನಾಟಿಕ್ಸ್.ಜಯಪುರ
- ಏರ್ ಹೋಸ್ಟೆಸ್ ಅಕಾಡೆಮಿ,ದೆಹಲಿ,ಪುಣೆ,ಬೆಂಗಳೂರು,
- ಫ್ರಾಂಕ್ ಫಿನ್ ಇನ್ಸ್ಟಿಟ್ಯೂಟ್ ಆಫ್ ಏರ್ ಹೋಸ್ಟೆಸ್, ದೆಹಲಿ,ಮುಂಬೈ
- ಯೂನಿವರ್ಸಲ್ ಏರ್ ಹೋಸ್ಟೆಸ್ ಅಕಾಡೆಮಿ,ಚೆನ್ನೈ,
- ಜೆಟ್ ಏರ್ ವೇಸ್ ಟ್ರೈನಿಂಗ್ ಅಕಾಡೆಮಿ, ಮುಂಬೈ
- ಪಿಟಿಸಿ ಏವಿಯೇಶನ್ ಅಕಾಡೆಮಿ, ಚೆನ್ನೈ ಮತ್ತು ಬೆಂಗಳೂರು
- ಇಂದಿರಾಗಾಂಧಿ ಇನ್ಸ್ಟ್ರಿಟ್ಯೂಟ್ ಆಫ್ ಎರೋನಾಟಿಕ್ಸ್,ಜಯಪುರ,ಅಹಮದಾಬಾದ್, ಗಜಿಯಾಬಾದ್ ಮತ್ತು
- ಛಂದಿಗರ್ ಇಂನ್ಸ್ಟಿಟ್ಯೂಟ್ ಫಾರ್ ಪರ್ಸನಾಲಿಟಿ, ಎಟಿಕ್ವಿಟಿ ಮತ್ತು ಗ್ರೂಮಿಂಗ್ (ಐಪಿಇಜಿ ಭಾರತ)
ಈ ಎಲ್ಲಾ ಕಾಲೇಜುಗಳಲ್ಲಿ ಈ ಕೋರ್ಸುಗಳು ಲಭ್ಯವಿರುತ್ತವೆ. ಆಸಕ್ತ ಗಗನಸಖಿಯಾಗಬೇಕೆಂಬ ಕನಸ್ಸುಳ್ಳ ವಿದ್ಯಾರ್ಥಿಗಳು/ಅಭ್ಯರ್ಥಿಗಳು ಈ ಮೇಲೆ ತಿಳಿಸಿರುವ ಕಾಲೇಜುಗಳ ವೆಬ್ ಸೈಟ್ ಗೆ ಹೋಗಿ ವಿವರಗಳನ್ನು ಓದಿಕೊಂಡು ಅರ್ಜಿ ಸಲ್ಲಿಸಿ ಕೋರ್ಸುಗಳನ್ನು ಮಾಡಿ ಉತ್ತಮ ಭವಿಷ್ಯವನ್ನು ಕಂಡುಕೊಳ್ಳಿ.ನಿಮಗೀಗ ಗಗನಸಖಿಯಾಗಲು ಬೇಕಿರುವ ಕೋರ್ಸುಗಳ ಬಗೆಗೆ ತಿಳಿದಿದೆಯಲ್ಲವೇ ಹಾಗಾದ್ರೆ ಮತ್ಯಾಕೆ ತಡ ಈಗಲೇ ಕಾಲೇಜುಗಳ ವೆಬ್ ಸೈಟ್ ಪರೀಕ್ಷಿಸಿ ಭವಿಷ್ಯಕ್ಕೆ ಬೇಕಿರುವ ದಾರಿಗಳನ್ನು ಇಂದೇ ಹುಡುಕಿಕೊಳ್ಳಿ.

ಏರ್ ಹೋಸ್ಟೆಸ್ ಆಗಲು ಬೇಕಿರುವ ಅರ್ಹತೆ:
ಇನ್ನೂ ಹೆಚ್ಚಿನವರಿಗೆ ಈ ಕೋರ್ಸ್ ಗಳ ಮಾಹಿತಿ ಸಿಕ್ಕ ಮೇಲೆ ಈ ಕೋರ್ಸ್ ಗಳನ್ನು ಮಾಡಲು ಅಥವಾ ಏರ್ ಹೋಸ್ಟೆಸ್ ಆಗಲು ಅರ್ಹತೆ ಏನಿರಬೇಕು ಅನ್ನೋದನ್ನ ಕೂಡ ತಿಳಿದಿರಲೇಬೇಕು. ಹಾಗಾಗಿ ಏರ್ ಹೋಸ್ಟೆಸ್ ಆಗಲು ಏನೆಲ್ಲಾ ಅರ್ಹತೆ ಬೇಕು ಅನ್ನೋದನ್ನ ತಿಳಿಯಿರಿ.
ಒಟ್ಟ ಅಭ್ಯರ್ಥಿಯು ಏರ್ ಹೋಸ್ಟೆಸ್ ಅಥವಾ ಫ್ಲೈಟ್ ಸ್ಟೀವರ್ಡ್ ಆಗಿರಲು ಕೆಲವು ಮಾನದಂಡಗಳನ್ನು ಪೂರೈಸಬೇಕು.
ಏರ್ ಹೋಸ್ಟೆಸ್ ಮತ್ತು ಫ್ಲೈಟ್ ಸ್ಟೀವರ್ಡ್ ಆಗಲು ಕನಿಷ್ಟ 18 ರಿಂದ ಗರಿಷ್ಟ 26 ವರ್ಷ ವಯೋಮಿತಿಯನ್ನು ಹೊಂದಿರಬೇಕು. ಕೆಲವೊಂದು ಸಂಸ್ಥೆಗಳಲ್ಲಿ ವಯೋಮಿತಿ ಬದಲಾಗಬಹುದು.
ಏರ್ ಹೋಸ್ಟೆಸ್ ಮತ್ತು ಫ್ಲೈಟ್ ಸ್ಟೀವರ್ಡ್ ಆಗಲು 10+2 (ವಿಜ್ಞಾನ, ಕಲಾ ಮತ್ತು ವಾಣಿಜ್ಯ) ವಿದ್ಯಾರ್ಹತೆಯನ್ನು ಹೊಂದಿರಬೇಕು.
ಏರ್ ಹೋಸ್ಟೆಸ್ ಮತ್ತು ಫ್ಲೈಟ್ ಸ್ಟೀವರ್ಡ್ ಆಗಲು ಅವಿವಾಹಿತರಿಗೇ ಹೆಚ್ಚು ಆದ್ಯತೆ ನೀಡಲಾಗುವುದು.
ಏರ್ ಹೋಸ್ಟೆಸ್ ಮತ್ತೂ ಫ್ಲೈಟ್ ಸ್ಟೀವರ್ಡ್ ಆಗುವ ಅಭ್ಯರ್ಥಿಗಳು ಹಿಂದಿ, ಇಂಗ್ಲೀಷ್ ಮತ್ತು ಇತರೆ ಭಾಷೆಗಳನ್ನು ಬಲ್ಲವರಾಗಿರಬೇಕು.
ಏರ್ ಹೋಸ್ಟೆಸ್ ಆಗಲು 5 ಫೀಟ್ ಮತ್ತು 2 ಇಂಚುಗಳ ಹೈಟ್ ಹೊಂದಿರಬೇಕು ಮತ್ತು ಫ್ಲೈಟ್ ಸ್ಟೀವರ್ಡ್ ಆಗಲು 5 ಫೀಟ್ 10 ಇಂಚು ಹೈಟ್ ಅನ್ನು ಹೊಂದಿರಬೇಕು.
ಏರ್ ಹೋಸ್ಟೆಸ್ ಮತ್ತು ಫ್ಲೈಟ್ ಸ್ಟೀವರ್ಡ್ ಆಗಲು ಸ್ವಲ್ಪ ಸುಂದರವಾಗಿರುವುದರ ಜೊತೆಗೆ ಕಣ್ಣಿನ ದೃಷ್ಟಿ (6/6 ಎರಡೂ ಕಣ್ಣುಗಳಲ್ಲಿ ಸರಿಪಡಿಸಲಾಗುವುದಿಲ್ಲ) ಚೆನ್ನಾಗಿರಬೇಕು.
ಇನ್ನೂ ಇದಿಷ್ಟೂ ಮಾನದಂಡಗಳೊಂದಿಗೆ ಕೋರ್ಸ್ ಮಾಡಲು ಅರ್ಜಿ ಸಲ್ಲಿಸುವುದು ಅನ್ನೋದು ಮುಖ್ಯ ಆಗತ್ತೆ. ಅಭ್ಯರ್ಥಿಗಳು ಕಾಲೇಜುಗಳ ವೆಬ್ ಸೈಟ್ ಗೆ ಹೋಗಿ ಅಲ್ಲಿ ನೀಡಲಾಗಿರುವ ಮಾಹಿತಿಯನ್ನು ಓದಿಕೊಂಡು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ನೇರವಾಗಿ ಕಾಲೇಜುಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಪಡೆಯಬಹುದು.

ಕೋರ್ಸ್ ಗಳಿಗೆ ಆಯ್ಕೆ ಪ್ರಕ್ರಿಯೆ:
ಈ ಕೊರ್ಸುಗಳಿಗೆ ಯಾವ ರೀತಿಯ ಆಯ್ಕೆ ಪ್ರಕ್ರಿಯೆ ಇರುತ್ತದೆ ಎಂಬುದನ್ನು ತಿಳಿದಿದ್ದಲ್ಲಿ ನಿಮಗೆ ಹೆಚ್ಚು ಸಹಕಾರಿಯಾಗಬಲ್ಲದು.
ಏರ್ ಹೋಸ್ಟೆಸ್ ಕೋರ್ಸುಗಳಿಗೆ ಅಭ್ಯರ್ಥಿಗಳನ್ನು ಮೂರು ರೀತಿಯ ಆಯ್ಕೆ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ. ಯಾವುವೆಂದರೆ ಮೊದಲು ಲಿಖಿತ ಪರೀಕ್ಷೆ, ಗುಂಪು ಚರ್ಚೆ ಮತ್ತು ಸಂದರ್ಶನಗಳ ಮೂಲಕ ನಿಮ್ಮನ್ನು ಆಯ್ಕೆ ಮಾಡಲಾಗುವುದು.
ಲಿಖಿತ ಪರೀಕ್ಷೆಯು ಅಭ್ಯರ್ಥಿಗಳ ಕೌಶಲ್ಯ, ರೀಸನಿಂಗ್ ಸ್ಕಿಲ್ಸ್ ಮತ್ತು ಜನಲರ್ ಅವೇರ್ನೆಸ್ ಬಗೆಗೆ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.
ಲಿಖಿತ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಯು ಗುಂಪು ಚರ್ಚೆ ಸುತ್ತಿಗೆ ಆಯ್ಕೆಯಾಗುತ್ತಾರೆ . ಇಲ್ಲಿ ಅಭ್ಯರ್ಥಿಗಳ ಸಂವಹನ ಕೌಶಲ್ಯ ಮತ್ತು ಅವರ ತಾಳ್ಮೆಯ ಪ್ರಮಾಣವನ್ನು ತಿಳಿಯುವ ಪರೀಕ್ಷೆಗಳನ್ನು ನಡೆಸಲಾಗುವುದು.
ಕೊನೆಯಲ್ಲಿ ಸಂದರ್ಶನವನ್ನು ಕೈಗೊಳ್ಳಲಾಗುವುದು. ಇಲ್ಲಿ ನಿಮ್ಮ ವ್ಯಕ್ತಿತ್ವ ಮತ್ತು ನಿಮ್ಮ ಪ್ಯಾಷನ್ ಬಗೆಗಿನ ಆಸಕ್ತಿಯನ್ನು ಆಧಾರಿಸಿ ಆಯ್ಕೆ ಮಾಡಲಾಗುತ್ತದೆ.
ಈ ರೀತಿಯಾಗಿ ಒಂದೊಂದು ಸಂಸ್ಥೆಗಳು ವಿಭಿನ್ನ ರೀತಿಯಲ್ಲಿ ಆಯ್ಕೆ ಪ್ರಕ್ರಿಯೆಯನ್ನು ಒಳಗೊಂಡಿರುತ್ತವೆ. ಸಂಸ್ಥೆಗಳ ನಿರ್ದೇಶಾನಾಲಯ ಮತ್ತು ನಿಯಮಾನುಸಾರ ಅಭ್ಯರ್ಥಿಗಳನ್ನು ಕೋರ್ಸುಗಳಿಗೆ ಆಯ್ಕೆ ಮಾಡಲಾಗುವುದು.
ಈ ರೀತಿಯಾಗಿ ಆಯ್ಕೆಯಾದ ಅಭ್ಯರ್ಥಿಗಳನ್ನು 6ತಿಂಗಳುಗಳ ಕಾಲ ತರಬೇತಿ ಅವಧಿಗೆ ಒಳಪಡಿಸಲಾಗುವುದು. ತದನಂತರ ಅವರನ್ನು ಏರ್ ಹೋಸ್ಟೆಸ್ ವೃತ್ತಿಯಲ್ಲಿ ಮುಂದುವರೆಯಲು ಅವಕಾಶ ನೀಡಲಾಗುವುದು.

ಏರ್ ಹೋಸ್ಟೆಸ್ ಪ್ರಮುಖ ಜವಾಬ್ದಾರಿಗಳು/ ಕರ್ತವ್ಯಗಳು:
ಏರ್ ಹೋಸ್ಟೆಸ್ ಗಳು ಹಲವು ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಬೇಕಿರುತ್ತದೆ.
* ಆನ್ ಗ್ರೌಂಡ್ ಅಂದರೆ ಫ್ಲೈಟ್ ಚಲಿಸುವ ಮುಂಗಡ ಜವಾಬ್ದಾರಿಗಳು
* ಫ್ಲೈಟ್ ಚಲಿಸುವ ಸಂದರ್ಭದಲ್ಲಿನ ಜವಾಬ್ದಾರಿಗಳು
* ಲ್ಯಾಂಡಿಂಗ್ ಸಮಯದಲ್ಲಿನ ಜವಾಬ್ದಾರಿಗಳು
ಆನ್ ಗ್ರಾಂಡ್ / ಫ್ಲೈಟ್ ಚಲಿಸುವ ಮುನ್ನ ಮಾಡಬೇಕಿರುವ ಕರ್ತವ್ಯಗಳು:
ಏರ್ ಹೋಸ್ಟೆಸ್ ಗಳು ಅಗತ್ಯ ಮೆಡಿಕಲ್ ಕಿಟ್ ಗಳನ್ನು ಒಯ್ಯುವುದು, ವಿಮಾನದಲ್ಲಿ ಸೌಲಭ್ಯವಿರುವ ಶೌಚಾಲಯವನ್ನು ಶುಚಿಯಾಗಿಡುವುದು, ಅಗತ್ಯವಾದ ಆಹಾರವಿದೆಯೇ ಎಂದು ಪರಿಶೀಲಿಸಿಕೊಳ್ಳುವುದು, ಪ್ರಯಾಣಿಕರ ಟಿಕೆಟ್ ಗಳನ್ನು ಪರಿಶೀಲಿಸುವುದು, ಪ್ರಯಾಣಿಕರ ಲಗೇಜ್ ಗಳನ್ನು ಸೂಕ್ತವಾದ ಸ್ಥಳದಲ್ಲಿ ಇರಿಸಲು ಸಹಾಯ ಮಾಡುವುದು, ಪ್ರಯಾಣಿಕರ ಸೀಟ್ ಬೆಲ್ಟ್ ಬಗೆಗೆ ಎಚ್ಚರ ವಹಿಸುವುದು, ಲಭ್ಯವಿರುವ ಮೆಡಿಕಲ್ ಕಿಟ್ ಬಗೆಗೆ ಪ್ರಯಾಣಿಕರಲ್ಲಿ ಮಾಹಿತಿ ನೀಡುವುದು ಮತ್ತು ಪ್ಲೇನ್ ಟೇಕ್ ಆಫ್ ಗೆ ಎಲ್ಲವೂ ಸಿದ್ದವಾಗಿದೆ ಎಂಬ ಮಾಹಿತಿಯನ್ನು ಪೈಲೆಟ್ ಗೆ ನೀಡುವುದು. ಇದಿಷ್ಟೂ ಫ್ಲೈಟ್ ಚಲಿಸುವ ಮುನ್ನ ಮಾಡಬೇಕಿರುವ ಕರ್ತವ್ಯಗಳಾಗಿರುತ್ತವೆ.
ಪ್ಲೇನ್ ಚಲಿಸುವ ಸಂದರ್ಭದಲ್ಲಿ ಮಾಡಬೇಕಿರುವ ಕರ್ತವ್ಯಗಳು:
ಪ್ರಯಾಣಿಕರು ಸೀಟ್ ಬೆಲ್ಟ್ ಹಾರಿರುವರೇ ಎಂದು ಒಮ್ಮೆ ಪರಿಶೀಲಿಸುವುದು, ಪ್ರಯಾಣಿಕರಿಗೆ ಊಟ ಉಪಹಾರಗಳನ್ನು ನೀಡುವುದು ಮತ್ತು ಪ್ರಯಾಣಿಕರಿಗೆ ಅಗತ್ಯ ಮಾಹಿತಿಗಳನ್ನು ರವಾನಿಸುವುದು ಈ ರೀತಿಯ ಕರ್ತವ್ಯಗಳನ್ನು ನಿರ್ವಹಿಸಬೇಕಿರುತ್ತದೆ.
ವಿಮಾನವು ಲ್ಯಾಂಡಿಂಗ್ ಆಗುವ ಸಂದರ್ಭದಲ್ಲಿ ಮಾಡಬೇಕಿರುವ ಕರ್ತವ್ಯಗಳು:
ವಿಮಾನವು ಲ್ಯಾಂಡ್ ಆಗುವ ಸಂದರ್ಭದಲ್ಲಿ ಪ್ರಯಾಣಿಕರ ಹಣ ಮತ್ತು ಅವರ ಸ್ಟಾಕ್ ಎಷ್ಟು ಉಳಿದಿದೆ ಅವುಗಳ ಬಗೆಗಿನ ಮಾಹಿತಿಯನ್ನು ಕಲೆ ಹಾಕಿ ಒಮ್ಮೆ ಪರಿಶೀಲಿಸಿಕೊಳ್ಳಬೇಕಿರುತ್ತದೆ. ಒಟ್ಟಾರೆ ಇದಿಷ್ಟೂ ಏರ್ ಹೋಸ್ಟೆಸ್ ನ ಕರ್ತವ್ಯವಾಗಿರುತ್ತದೆ.

ಉದ್ಯೋಗ ವಿವರ:
ವಿದ್ಯಾರ್ಥಿಗಳು ಕೋರ್ಸ್ ಮುಗಿಸಿ ಕೆಲಸ ಹೇಗೆ ಹುಡುಕುವುದು ಎನ್ನುವ ಚಿಂತೆ ಬೇಡ. ಸಾಮಾನ್ಯವಾಗಿ ಈ ಕೆಳಗೆ ನೀಡಿರುವ ಪ್ರಮುಖ ನೇಮಕಾತಿ ಮಾಡುವವರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಇಂಡಿಯನ್ ಏರ್ ಲೈನ್ಸ್, ಅಲೈಯನ್ಸ್ ಏರ್, ಏರ್ ಇಂಡಿಯಾ, ಸಹರಾ ಇಂಡಿಯಾ, ಗೋ ಏರ್, ಜೆಟ್ ಏರ್ ವೇಸ್, ಬ್ರಿಟೀಶ್ ಏರ್ ವೇಸ್, ಇಂಡಿಗೋ, ಗಲ್ಫ್ ಏರ್, ಡೆಲ್ಟಾ ಏರ್ ಲೈನ್ಸ್ ಮತ್ತು ಸಿಂಗಾಪುರ ಏರ್ ಲೈನ್ಸ್.
ಈ ಹುದ್ದೆಗಳಿಗೆ ಆಯ್ಕೆಯಾದವರು ಪಡೆಯುವ ವೇತನದ ಮಾಹಿತಿ:
ಈ ಹುದ್ದೆಗಳಿಗೆ ಆಯ್ಕೆಯಾದ ಅರ್ಹ ಅಭ್ಯರ್ಥಿಗಳಿಗೆ ಏರ್ ಲೈನ್ ನ ನಿಯಮಾನುಸಾರ , ಏರ್ ಲೈನ್ಸ್ ನ ರೆಪ್ಯುಟೇಶನ್ , ಏರ್ ಹೋಸ್ಟೆಸ್ ಅನುಭವದ ಆಧಾರದ ಮೇಲೆ ವೇತನವನ್ನು ನೀಡಲಾಗುವುದು. ಅಂತರರಾಷ್ಟ್ರೀಯ ವಿಮಾನಯಾನಗಳಲ್ಲಿ ಆರಂಭಿಕ ವೇತನ ತಿಂಗಳಿಗೆ 50,000/-ರೂ ಇಂದ ಪ್ರಾರಂಭವಾಗುತ್ತದೆ.ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ಹೋಲಿಸಿದರೆ ಅಂತರಾಷ್ಟ್ರೀಯ ಏರ್ ಲೈನ್ಸ್ ಉತ್ತಮ ವೇತನವನ್ನು ನೀಡುತ್ತದೆ. ದೇಶೀಯ ವಿಮಾನಯಾನ ಸಂಸ್ಥೆಗಳಲ್ಲಿ ಏರ್ ಹೋಸ್ಟೆಸ್ ಗಳಿಗೆ ಆರಂಭಿಕ ಸಂಬಳ ಪ್ರತಿ ತಿಂಗಳು ರೂ 25,000/-ರಿಂದ 40,000/-ರೂಗಳ ವರೆಗೆ ನೀಡಲಾಗುತ್ತದೆ. ತದನಂತರ ಇದು 80,000/- ರಿಂದ 1,25,000/-ರೂಗಳ ವರೆಗೆ ಅನುಭವದ ಆಧಾರದ ಮೇಲೆ ಹೆಚ್ಚಳ ಮಾಡಲಾಗುವುದು. ಫ್ಲೈಟ್ ಮೇಲ್ವಿಚಾರಕ ಹುದ್ದೆಗಳಿಗೂ ಸಹ ಅದೇ ವೇತನವನ್ನು ನೀಡಲಾಗುವುದು.
ಏರ್ ಹೋಸ್ಟೆಸ್ ಆಗಲು ಕೋರ್ಸ್ ಪೂರ್ಣಗೊಂಡ ನಂತರ ಅಭ್ಯರ್ಥಿಯು ದೇಶೀಯ ವಿಮಾನಯಾನ ಸಂಸ್ಥೆಗಳೊಂದಿಗೆ ಕೆಲಸ ಮಾಡಲು ಅವಕಾಶವನ್ನು ಪಡೆಯುತ್ತಾರೆ. ಅಭ್ಯರ್ಥಿಯು ಅನುಭವದ ಆಧಾರದ ಮೇಲೆ ವಿಮಾನ ವಾಣಿ ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳೊಂದಿಗೆ ಕೆಲಸ ಮಾಡಬಹುದು. ಏರ್ ಹೋಸ್ಟೆಸ್ ವೃತ್ತಿ ಜೀವನವು ಅತ್ಯುತ್ತಮ ಬೆಳವಣಿಗೆಯ ಅವಕಾಶಗಳನ್ನು ನೀಡುತ್ತದಲ್ಲದೇ ಏರ್ ಹೋಸ್ಟೆಸ್ ನಿವೃತ್ತಿಯ ನಂತರವೂ ಕೆಲವು ಬಗೆಯ ಕಾರ್ಯಾಚರಣೆಯ ಕರ್ತವ್ಯಗಳನ್ನು ನಿಭಾಯಿಸುವ ಅವಕಾಶಗಳನ್ನು ಪಡೆದುಕೊಳ್ಳಬಹುದು.