ಈ ಕಾಲೇಜುಗಳು ತಮ್ಮ ಕ್ಯಾಂಪಸ್‍ನಿಂದಲೇ ಸಖತ್ ಫೇಮಸ್

ಕಾಲೇಜು ಲೈಫು ನಮ್ಮ ಜೀವನದ ಅತ್ಯಂತ ಪ್ರಮುಖ ಘಟ್ಟ ಹಾಗೂ ಸದಾ ಜೀವನಪೂರ್ತಿ ನೆನಪಿನಲ್ಲಿ ಉಳಿಯುವಂತಹ ಹಂತ ಎಂದು ನಾವೆಲ್ಲರೂ ಒಪ್ಪಿ ಕೊಳ್ಳುತ್ತೇವೆ. ನಮಗೆಲ್ಲರಿಗೂ ನಮ್ಮ ಕಾಲೇಜು ದಿನದ ನೆನಪುಗಳು ತುಂಬಾ ಮಧುರವಾದ ನೆನಪುಗಳು. ಇನ್ನು ಕಾಲೇಜು ದಿನಗಳಲ್ಲಿ ಕಾಂಪಸ್ ಏರಿಯಾ ತುಂಬಾ ನೆನಪಿಗೆ ಉಳಿಯುವಂತದ್ದು. ನಾವೆಲ್ಲರೂ ಕ್ಲಾಸ್ ರೂಂಗಿಂತ ಹೆಚ್ಚಾಗಿ ಕ್ಯಾಂಪಸ್‍ನಲ್ಲಿ ಕಾಲಕಳೆದಿರುತ್ತೇವೆ. ಹಾಗಾಗಿ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಜತೆ ಏನೋ ಒಂದು ರೀತಿಯ ಅಟ್ಯಾಚ್‍ಮೆಂಟ್ ಇರುತ್ತದೆ.

ಬೆಸ್ಟ್ ಕಾಲೇಜು ಕ್ಯಾಂಪಸ್ ಗಳು

 

ಇನ್ನು ಭಾರತದಲ್ಲಿ ಅದೆಷ್ಟೋ ಶಿಕ್ಷಣ ಸಂಸ್ಥೆಗಳಿವೆ. ಯಾವುದಾದ್ರೂ ಒಂದು ವಿಷಯಕ್ಕೆ ಈ ಶಿಕ್ಷಣ ಸಂಸ್ಥೆಗಳು ಫೇಮಸ್ ಆಗಿವೆ. ಬನ್ನಿ ನಾವಿವತ್ತು ನಿಮಗೆ ಬೆಸ್ಟ್ ಕಾಲೇಜು ಕ್ಯಾಂಪಸ್ ಗಳ ಬಗ್ಗೆ ಮಾಹಿತಿ ನೀಡುತ್ತೇವೆ. ಭಾರತದ ಫೇಮಸ್ ಕಾಲೇಜು ಕ್ಯಾಂಪಸ್‍ಗಳ ಲಿಸ್ಟ್ ಇಲ್ಲಿದೆ


1 ವೆಲ್ಲೂರ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ, ವೆಲ್ಲೂರ್ ಕ್ಯಾಂಪಸ್

ತಮಿಳು ನಾಡಿನಲ್ಲಿ ಈ ಕಾಲೇಜು ಇದೆ. ಇಲ್ಲಿನ ಕ್ಯಾಂಪಸ್ ಹಸಿರು ವಾತಾವರಣದಿಂದ ಕೂಡಿದೆ. ಇಲ್ಲಿ ನೀವು ಸ್ವಚ್ಛಂದವಾಗಿ ಉಸಿರಾಡಬಹುದು. ಅಷ್ಟೇ ಅಲ್ಲ ಹೆಚ್ಚು ಗಿಡ ಮರಗಳು ಇಲ್ಲಿ ಇರುವುದರಿಂದ ನೀವು ಮರ ಗಿಡಗಳ ಮಧ್ಯೆ ಅಡ್ಡಾಡಬಹುದು.

2 ಜೆಪೀ ಯೂನಿವಸಿಟಿ ಆಫ್ ಇಂರ್ಫೋಮೇಶನ್ ಟೆಕ್ನಾಲಾಜಿ, ಹಿಮಾಚಲ ಪ್ರದೇಶ:

ಈ ಕಾಲೇಜು ಹಿಮಾಲಯ ಪರ್ವತಗಳಿಂದ ಆವೃತವಾಗಿದೆ. ಅಷ್ಟೇ ಅಲ್ಲ ಹಿಮಗಳ ಮಧ್ಯೆ ಈ ಕಾಲೇಜು ಸ್ಥಾಪಿತವಾಗಿದೆ. ಅಷ್ಟೇ ಅಲ್ಲ ಕೊರೆಯುವ ಚಳಿ ಮಧ್ಯೆ ಬಿಸಿ ಬಿಸಿ ಕಾಫಿ ಕುಡಿದು ಈ ಕಾಲೇಜು ಕ್ಯಾಂಪಸ್ ಅಡ್ಡಾಡುವುದೇ ಒಂದು ಮಜಾ. ಈ ಕಾಲೇಜು ಕ್ಯಾಂಪಸ್ ಶಾಂತವಾಗಿದ್ದು ನಿಮ್ಮಲ್ಲೂ ಕೂಡಾ ಶಾಂತ ಮನಸ್ಥತಿಯನ್ನೇ ಮೂಡಿಸುತ್ತದೆ.

3 ಗೋವಿಂದ್ ಬಲ್ಲಾಭ್ ಪಾಂಟ್ ಇಂಜಿನಿಯರಿಂಗ್ ಕಾಲೇಜು, ಪೌರಿ ಗರ್ವಾಲ್:

ಗರ್ವಾಲ್ ಎಂಬಲ್ಲಿನ ಇಡಿಲ್ಲಿಕ್ ಬೆಟ್ಟ ಗುಡ್ಡ ಗಳ ಮಧ್ಯೆ ಈ ಕಾಲೇಜು ಸ್ಥಾಪಿತಗೊಂಡಿದೆ. ಇಲ್ಲಿ ಮುಂಜಾನೆ ಹಿಮದ ಸೊಬಗು ನಿಮ್ಮನ್ನ ಸ್ವಾಗತಿಸುತ್ತದೆ. ಇಲ್ಲಿ ಕಲಿಯುವುದು ಎಂದ್ರೆ ಅದುವೇ ಒಂದು ಸೌಭಾಗ್ಯವಿದ್ದಂತೆ.

4 ದಿ ಫಾರೆಸ್ಟ್ ರಿಸರ್ಚ ಇನ್‍ಸ್ಟಿಟ್ಯೂಟ್ - ಡೆಹರಡೂನ್:

ಪ್ರಕೃತಿಯ ನಿಯಾಮಾವಳಿಗೆ ದಿ ಫಾರೆಸ್ಟ್ ರಿಸರ್ಚ ಇನ್‍ಸ್ಟಿಟ್ಯೂಟ್ ಆಫ್ ಡೆಹರಡೂನ್ ಬೆಸ್ಟ್ ಸ್ಥಳ. ಇದು ಬರೀ ಕ್ಯಾಂಪಸ್ ಮಾತ್ರವಲ್ಲದೇ ಬೆಸ್ಟ್ ಟೂರಿಸ್ಟ್ ಸ್ಪಾಟ್ ಕೂಡಾ. ನೀವು ಡೆಹರಡೂನ್‍ಗೆ ವಿಸಿಟ್ ಮಾಡಿದ್ದೇ ಆದಲ್ಲಿ ತಪ್ಪದೇ ಇಲ್ಲಿಗೂ ವಿಸಿಟ್ ಮಾಡಲು ಮರೆಯದಿರಿ

5 ಎಸ್‍ಎಸ್‍ಎನ್ ಕಾಲೇಜು ಆಫ್ ಇಂಜಿನಿಯರಿಂಗ್, ಚೆನ್ನೈ:

ಶ್ರೀ ಸಿವಸುಬ್ರಹ್ಮಣಿಯ ನಡಾರ್ ಕಾಲೇಜು ಆಫ್ ಇಂಜಿನಿಯರಿಂಗ್, ಈ ಕಾಲೇಜು ಎಸ್‍ಎಸ್‍ಎನ್ ಕಾಲೇಜು ಎಂದೇ ಫೇಮಸ್. ಚೆನ್ನೈನ ಓಲ್ಡ್ ಮಹಾಬಲಿಪುರಂ ರೋಡ್, ಕಲಾವಕ್ಕಂ ಎಂಬಲ್ಲಿ 250 ಎಕರೆಯಲ್ಲಿ ಈ ಕಾಲೇಜು ಸ್ಥಾಪನೆ ಗೊಂಡಿದೆ. 1996 ರಲ್ಲಿ ಈ ಕಾಲೇಜು ಸ್ಥಾಪಿಸಲಾಗಿದ್ದು, ಇಂದಿಗೂ ಇಲ್ಲಿನ ಕಾಲೇಜು ಕ್ಯಾಂಪಸ್ ನೋಡುವುದೇ ಕಣ್ಣಿಗೆ ಒಂದು ಹಬ್ಬವಿದ್ದಂತೆ.

6 ಬಿರ್ಲಾ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಆಂಡ್ ಸೈನ್ಸ್, ಪಿಲನಿ -ಗೋವಾ:

ಬಿರ್ಲಾ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಆಂಡ್ ಸೈನ್ಸ್, ಪಿಲನಿ ಕಾಲೇಜು, ಬಿಐಟಿಎಸ್ ಪಿಲನಿ ಎಂದೇ ಫೇಮಸ್. ಗೋವಾದಲ್ಲಿರುವ ಈ ಕಾಲೇಜು, 2004ರಲ್ಲಿ ಸ್ಥಾಪಿಸಲಾಯಿತು. ಈಗ ತಿಳಿತ್ತಾ ಗೋವಾ ಬರೀ ಎಂಜಾಯ್ ಮಾಡಲು ಮಾತ್ರವಲ್ಲ, ಸ್ಟಡೀಸ್ ಗೂ ಬೆಸ್ಟ್ ಸ್ಥಳ ಎಂದು.

7ಎನ್‍ಐಟಿ - ಶ್ರೀನಗರ:

ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ, ಶ್ರೀನಗರ ಈ ಕಾಲೇಜು ಎನ್‍ಐಟಿ ಎಂದೇ ಪೇಮಸ್. ಜಮ್ಮು ಮತ್ತು ಕಾಶ್ಮೀರಾದ ಶ್ರೀನಗರದಲ್ಲಿ ಈ ಕಾಲೇಜು ಸ್ಥಾಪಿತವಾಗಿದೆ. ಮಿನಿಸ್ಟ್ರಿ ಆಫ್ ಹ್ಯೂಮನ್ ರಿಸೋರ್ಸ ಡೆವಲಪ್‍ಮೆಂಟ್ ಅಂಡರಲ್ಲಿ ಈ ಕಾಲೇಜು ಕಾರ್ಐನಿರ್ವಹಿಸುತ್ತದೆ. 160 ರಲ್ಲಿ ಸ್ಥಾಪನೆ ಗೊಂಡಿರುವ ಈ ಕಾಲೇಜು, ಇಲ್ಲಿನ ಆಕರ್ಷಕವಾದ ದೃಶ್ಯಾವಳಿ ಮತ್ತು ಹಸಿರುಮನೆ ನಿಮ್ಮನ್ನ ಆಕರ್ಷಿಸುತ್ತದೆ. ಆದರ್ಶ ಶೈಕ್ಷಣಿಕ ಸೌಲಭ್ಯಗಳೊಂದಿಗೆ ಉತ್ತಮ ಕ್ಯಾಂಪಸನ್ನ ಈ ಶಿಕ್ಷಣ ಸಂಸ್ಥೆ ನಿಮಗೆ ಪ್ರಚುರ ಪಡಿಸುತ್ತಿದೆ.

 

8 ಐಐಟಿ ಗುವಾಹಟಿ:

ಈ ಕಾಲೇಜು ತನ್ನ ಆರ್ಕಿಟೆಕ್ಚರ್ ವರ್ಕ ನಿಂದ ಸಖತ್ ಫೇಮಸ್. ಈ ಕಾಲೇಜು ಪ್ರತಿ ವರ್ಷ ಕಟ್ಟಡ ಮರು ನಿರ್ಮಾಣಕ್ಕೆ ಕೋಟ್ಯಾಂತರ ಹಣ ಖರ್ಚು ಮಾಡುತ್ತದೆ. 700 ಎಕರೆಯಲ್ಲಿ ನಿರ್ಮಾಣವಾಗಿರುವ ಈ ಕಾಲೇಜು, ಬ್ರಹ್ಮಪುತ್ರ ಕಿನಾರೆಯಲ್ಲಿ ಸ್ಥಾಪಿತಗೊಂಡಿದೆ. ಕಣಿವೆ ಹಾಗೂ ಕಾಡಿನ ಮಧ್ಯೆ ಈ ಕಾಲೇಜು ನಿರ್ಮಾಣವಾದಂತಿದೆ. ಎತ್ತ ನೋಡಿದರೂ ಹಸಿರು ಕಾನನ ನಿಮ್ಮ ಕಣ್ಣ ಮುಂದೆ ಬರುವುದು. ಈ ಹಸಿರು ಗಿಡಗಳ ಮಧ್ಯೆ ಕಲಿಯುದೇ ಒಂದು ಭಾಗ್ಯ

For Quick Alerts
ALLOW NOTIFICATIONS  
For Daily Alerts

  English summary
  Deciding a college education has become more complicated. college life is one of the most happening and best phases of our life. we all have many lovely memories of our college campuses. here is the list of Top beautyful college campuses in india
  --Or--
  Select a Field of Study
  Select a Course
  Select UPSC Exam
  Select IBPS Exam
  Select Entrance Exam

  ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
  Kannada Careerindia

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more