Speech On Babasaheb Ambedkar Jayanthi : ಅಂಬೇಡ್ಕರ್ ಜಯಂತಿ ಪ್ರಯುಕ್ತ ಭಾಷಣ ಮಾಡುವುದು ಹೇಗೆ ?

ಸಂವಿಧಾನದ ಪಿತಾಮಹ ಡಾ ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರು ಭಾರತ ಸ್ವಾತಂತ್ರ್ಯದ ಇತಿಹಾಸದಲ್ಲಿ ಅತ್ಯಂತ ಪ್ರಮುಖ ವ್ಯಕ್ತಿ. ಅಂಬೇಡ್ಕರ್ ಅವರು ನಾಗರಿಕ ಹಕ್ಕುಗಳ ಕಾರ್ಯಕರ್ತರಾಗಿದ್ದರು ಮತ್ತು ಅವರು ಹಲವಾರು ತಾರತಮ್ಯಗಳ ವಿರುದ್ಧ ಹೋರಾಡಿದರು. ಅವರು ಭಾರತದಲ್ಲಿ ದಲಿತ ಬೌದ್ಧ ಚಳವಳಿಯ ಹಕ್ಕುಗಳ ಪರವಾಗಿ ನಿಂತರು. ಸಮಾನತೆಯನ್ನು ನಂಬಿದ್ದರು ಮತ್ತು ಜೀವನದಲ್ಲಿ ಮಹಿಳೆಯರು ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿಯ ಹಕ್ಕಿಗಾಗಿ ಹೋರಾಡಿದರು.

ಅಂಬೇಡ್ಕರ್ ಜಯಂತಿ ಪ್ರಯುಕ್ತ ಭಾಷಣ ಮಾಡಲು ಇಲ್ಲಿದೆ ಮಾಹಿತಿ

ಮಹಾನ್ ನಾಯಕ ಡಾ. ಬಿ.ಆರ್ ಅಂಬೇಡ್ಕರ್ ಅವರು ಏಪ್ರಿಲ್ 14 ರಂದು ಜನಿಸಿದರು ಮತ್ತು ಈ ದಿನವನ್ನು ಭೀಮ ಜಯಂತಿ ಎಂದು ವ್ಯಾಪಕವಾಗಿ ಆಚರಿಸಲಾಗುತ್ತದೆ. ನಾವು ಭೀಮರಾವ್ ಅವರ 131 ನೇ ಜನ್ಮ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಮಕ್ಕಳು ಭಾಷಣ ಮಾಡಲು ಮಾಹಿತಿ ಜೊತೆಗೆ ಕೆಲವು ಮಾದರಿಗಳನ್ನು ಇಲ್ಲಿ ನೀಡಿದ್ದೇವೆ.

ಭಾಷಣ 1 :

ಇಲ್ಲಿ ಉಪಸ್ಥಿತರಿರುವ ಮುಖ್ಯೋಪಾಧ್ಯಾಯರಿಗೆ, ಶಿಕ್ಷಕರಿಗೆ ಮತ್ತು ನನ್ನೆಲ್ಲಾ ಸ್ನೇಹಿತರಿಗೆ ಶುಭೋದಯ

ನಾವಿಂದು ಅಂಬೇಡ್ಕರ್ ಜಯಂತಿಯನ್ನು ಆಚರಿಸುತ್ತಿದ್ದೇವೆ. ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು 'ಬಾಬಾಸಾಹೇಬ್' ಎಂದೂ ಕರೆಯಲಾಗುತ್ತಿತ್ತು. ನಾವು ಅಂಬೇಡ್ಕರ್ ಅವರ ಹೆಸರನ್ನು ಕೇಳಿದ ತಕ್ಷಣವೇ ನೆನಪಾಗುವ ವಿಷಯವೆಂದರೆ 'ಸಂವಿಧಾನದ ಪಿತಾಮಹ' ಎಂದು. ಇನ್ನೊಂದೆಡೆ ಬಾಬಾಸಾಹೇಬರ ಕೃತಿಗಳು ಮತ್ತು ಸಾಮಾಜಿಕ ನಿಲುವು ಸಂವಿಧಾನವನ್ನು ರಚಿಸುವ ಕಾರ್ಯವನ್ನು ಮೀರಿದ್ದು ಎಂಬುದನ್ನು ನಾವು ತಿಳಿಯಲೇಬೇಕು.

ಅಂಬೇಡ್ಕರ್ ತಮ್ಮ ಜೀವನದುದ್ದಕ್ಕೂ ಹಲವಾರು ಸುಧಾರಣೆಗಳನ್ನು ತಂದರು ಮತ್ತು ದಲಿತರು ಹಾಗೂ ಅಸ್ಪೃಶ್ಯರಿಗೆ ಸಮಾನ ಹಕ್ಕುಗಳಿಗಾಗಿ ಒತ್ತಾಯಿಸಿ ಪ್ರತಿಭಟನೆಗಳನ್ನು ನಡೆಸಿದರು. ಭಾರತದ ದಲಿತರಿಗೆ ಬಾಬಾಸಾಹೇಬರು ದೇವರಿದ್ದಂತೆ ಹಾಗಾಗಿ ಅವರನ್ನು ಗೌರವಿಸಿದರು ಮತ್ತು ಅವರ ಪ್ರತಿಯೊಂದು ಮಾತನ್ನೂ ಧಾರ್ಮಿಕವಾಗಿ ಅನುಸರಿಸಿದರು. ಮಹಾನ್ ವ್ಯಕ್ತಿ ಅಂಬೇಡ್ಕರ್ ವರ್ಗ ಮತ್ತು ಜಾತಿಯನ್ನು ಲೆಕ್ಕಿಸದೆ ತುಳಿತಕ್ಕೊಳಗಾದವರ ಮತ್ತು ಬಡವರ ಹಕ್ಕುಗಳಿಗಾಗಿ ಹೋರಾಡಿದರು.

ಆ ಮಹಾನ್ ಉದಾತ್ತ ಆತ್ಮವನ್ನು ನೆನಪಿಸಿಕೊಳ್ಳುವ ಮತ್ತು ಅವರ ನಂಬಿಕೆಗಳು, ಬೋಧನೆಗಳು ಮತ್ತು ಕಾರ್ಯಗಳನ್ನು ಗೌರವಿಸುವ ಸುದಿನ. ಅವರು ಕನಸು ಕಂಡಂತೆ ಭಾರತವನ್ನು ದೇಶವನ್ನಾಗಿ ಮಾಡಲು ನಾವು ಪ್ರತಿಜ್ಞೆ ಮಾಡಬೇಕು.

ಅವಕಾಶ ನೀಡಿದಕ್ಕೆ ಧನ್ಯವಾದಗಳು...

ಅಂಬೇಡ್ಕರ್ ಜಯಂತಿ ಪ್ರಯುಕ್ತ ಭಾಷಣ ಮಾಡಲು ಇಲ್ಲಿದೆ ಮಾಹಿತಿ

ಸರಳ ಸಾಲುಗಳಲ್ಲಿ ಭಾಷಣ 2 :

1) ಡಾ.ಬಿ.ಆರ್ ಅಂಬೇಡ್ಕರ್ ಅವರ ಜಯಂತಿಯನ್ನು ಪ್ರತಿ ವರ್ಷ ಏಪ್ರಿಲ್ 14 ರಂದು ಆಚರಿಸಲಾಗುತ್ತದೆ.

2) 'ಭಾರತೀಯ ಸಂವಿಧಾನದ ಶಿಲ್ಪಿ' ಎಂದು ಪರಿಗಣಿಸಲ್ಪಟ್ಟ ಡಾ. ಅಂಬೇಡ್ಕರ್ ಅವರು 1891 ರ ಏಪ್ರಿಲ್ 14 ರಂದು ಮಧ್ಯಪ್ರದೇಶದಲ್ಲಿ ಜನಿಸಿದರು.

3) ದೇಶಾದ್ಯಂತ ಅಂಬೇಡ್ಕರ್ ಅವರ ಪ್ರತಿಮೆಗಳಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಮತ್ತು ಡಾ. ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ದಿನವನ್ನು ಆಚರಿಸಲಾಗುತ್ತದೆ.

4) ಸಂಸತ್ತಿನಲ್ಲಿ ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಎಲ್ಲಾ ರಾಜಕೀಯ ಪಕ್ಷಗಳ ಸದಸ್ಯರು ಅವರಿಗೆ ಪುಷ್ಪ ನಮನ ಸಲ್ಲಿಸುತ್ತಾರೆ.

5) ಈ ದಿನ ರಾಷ್ಟ್ರದಾದ್ಯಂತ ವಿವಿಧ ಮೆರವಣಿಗೆಗಳು ಮತ್ತು 'ಶೋಭಾ ಯಾತ್ರೆ'ಗಳನ್ನು ನಡೆಸಲಾಗುತ್ತದೆ.

6) ಬಾಬಾಸಾಹೇಬರ ಜನ್ಮ ವಾರ್ಷಿಕೋತ್ಸವವನ್ನು ಆಚರಿಸಲು ಜನರು ಮುಂಬೈನ ಚೈತ್ಯ ಭೂಮಿ ಸ್ಮಾರಕದಲ್ಲಿ ಇಂದು ಸೇರುತ್ತಾರೆ.

7) ಅಂಬೇಡ್ಕರ್ ಜಯಂತಿ ಆಚರಣೆಗೆ ಚಾಲನೆ ನೀಡಿದ ಜನಾರ್ದನ್ ಸದಾಶಿವ ರಂಫೀಸ್ ಅವರು 1928 ರಲ್ಲಿ ಡಾ.ಅಂಬೇಡ್ಕರ್ ಅವರ ಮೊದಲ ಜನ್ಮದಿನವನ್ನು ಆಚರಿಸಿದರು.

8) 1956 ರ ಅಕ್ಟೋಬರ್ 14 ರಂದು ಅಂಬೇಡ್ಕರ್ ಅವರು ಬೌದ್ಧ ಧರ್ಮವನ್ನು ಸ್ವೀಕರಿಸಿದ ನಾಗಪುರದ ದೀಕ್ಷಾ ಭೂಮಿಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

9) ಈ ಸಂದರ್ಭವನ್ನು ದೇಶದಾದ್ಯಂತ ಅತ್ಯಂತ ಉಲ್ಲಾಸ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ ಜೊತೆಗೆ ಡಾ. ಅಂಬೇಡ್ಕರ್ ಅವರು ಪ್ರತಿಪಾದಿಸಿದ ಬೋಧನೆಗಳನ್ನು ಅನುಸರಿಸಲು ಜನರು ಪ್ರತಿಜ್ಞೆ ಮಾಡುತ್ತಾರೆ.

10) ಅಂಬೇಡ್ಕರ್ ಜಯಂತಿಯು ಸಮಾನತೆ, ಸೌಹಾರ್ದತೆ ಮತ್ತು ಶಾಂತಿಯ ಬಗ್ಗೆ ಜನರಿಗೆ ಅರಿವು ಮೂಡಿಸುವ ದಿನವಾಗಿದೆ ಮತ್ತು ನಮ್ಮ ಸಂವಿಧಾನವನ್ನು ನೀಡಿದ ವ್ಯಕ್ತಿತ್ವವನ್ನು ನೆನಪಿಸಿಕೊಳ್ಳುವ ದಿನವಾಗಿದೆ.

ಭಾಷಣ 3 :

ಗೌರವಾನ್ವಿತ ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಶಿಕ್ಷಕರು ಮತ್ತು ನನ್ನ ಆತ್ಮೀಯ ಸ್ನೇಹಿತರಿಗೆ ಶುಭಾಶಯಗಳು

ಇಂದಿನ ಸಮಾರಂಭಕ್ಕೆ ನಾನು ನಿಮ್ಮೆಲ್ಲರನ್ನು ಸ್ವಾಗತಿಸುತ್ತೇನೆ. ಅಂಬೇಡ್ಕರ್ ಜಯಂತಿಯು ಪ್ರತಿಯೊಬ್ಬ ಭಾರತೀಯನಿಗೂ ಬಹಳ ಮುಖ್ಯವಾದ ದಿನವಾಗಿದೆ ಏಕೆಂದರೆ ಈ ದಿನವು ಅವರ ಜನ್ಮ ದಿನವನ್ನು ಸೂಚಿಸುತ್ತದೆ. ಅಂಬೇಡ್ಕರ್ ಅವರ ಸಂಪೂರ್ಣ ಹೆಸರು ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಮತ್ತು ಅವರು 1891 ರ ಏಪ್ರಿಲ್ 14 ರಂದು ಭಾರತದ ಮಧ್ಯಪ್ರದೇಶದ ಮೊವ್ ಪಟ್ಟಣದಲ್ಲಿ ಜನಿಸಿದರು. ಅವರ ತಂದೆ ರಾಮಜಿ ಮಾಲೋಜಿ ಸಕ್ಪಾಲ್ ಮತ್ತು ತಾಯಿ ಭೀಮಾಬಾಯಿ. ಅವರನ್ನು ಜನಪ್ರಿಯವಾಗಿ 'ಬಾಬಾಸಾಹೇಬ್' ಎಂದು ಕರೆಯಲಾಗುತ್ತಿತ್ತು.

ಅವರು ಐದು ವರ್ಷದವರಾಗಿದ್ದಾಗ ತನ್ನ ತಾಯಿಯನ್ನು ಕಳೆದುಕೊಂಡರು. ಅವರ ತಮ್ಮ ಶಿಕ್ಷಣವನ್ನು ಮುಂಬೈನಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ (ಬಿಎ) ಮಾಡಿದರು ಮತ್ತು ತಮ್ಮ ಉನ್ನತ ಶಿಕ್ಷಣವನ್ನು ಮುಂದುವರಿಸಲು ಅಮೆರಿಕಕ್ಕೆ ಹೋದರು. ತದನಂತರ ಇಂಗ್ಲೆಂಡ್‌ನಲ್ಲಿ ತಮ್ಮ ಪದವಿಯನ್ನು ಮುಗಿಸಿ 1923 ರಲ್ಲಿ ಭಾರತಕ್ಕೆ ಮರಳಿದರು.

ಭಾರತದಲ್ಲಿ ಅವರು ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ತಮ್ಮ ಕಾನೂನನ್ನು ಪ್ರಾರಂಭಿಸಿದರು ಜೊತೆಗೆ ಅವರ ಸಾಮಾಜಿಕ ಕಾರ್ಯವನ್ನು ಪ್ರಾರಂಭಿಸಿದರು ಅದಾಗ್ಯೂ ಶಿಕ್ಷಣದ ಮಹತ್ವವನ್ನು ಸಾರಿದರು. ಅವರು ತಮ್ಮ ಹಕ್ಕುಗಳಿಗಾಗಿ ಹೋರಾಡಲು ಮತ್ತು ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಜನರಿಗೆ ಸಹಾಯ ಮಾಡಿದರು. ಅಂಬೇಡ್ಕರ್ ಅವರು "ಜಾತಿ ವಿನಾಶ" ಎಂಬ ಪುಸ್ತಕವನ್ನು ಸಹ ಬರೆದರು, ಅದರಲ್ಲಿ ಅವರು ಭಾರತವನ್ನು ಬಾಧಿಸುತ್ತಿರುವ ಜಾತಿ, ವರ್ಗ, ಜನಾಂಗ ಮತ್ತು ಲಿಂಗದ ಆಧಾರದ ಮೇಲೆ ತಾರತಮ್ಯದ ಬಗ್ಗೆ ಚರ್ಚಿಸಿದ್ದಾರೆ. ಒಟ್ಟಾರೆ ಅವರು ಸಾಮಾಜಿಕ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರಿಂದ ಜನರು ಅವರನ್ನು 'ಬಾಬಾಸಾಹೇಬ್' ಎಂದು ಕರೆಯಲು ಪ್ರಾರಂಭಿಸಿದರು.

ಭಾರತದ ಸಂವಿಧಾನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರಿಂದ ಅವರನ್ನು ನಮ್ಮ ಭಾರತೀಯ ಸಂವಿಧಾನದ ಪಿತಾಮಹ ಎಂದು ಕರೆಯಲಾಗುತ್ತದೆ. ಆ ಸಮಯದಲ್ಲಿ ಭಾರತೀಯ ಸಂವಿಧಾನದ ಅತ್ಯಂತ ನಿರ್ಣಾಯಕ ವಿಷಯವೆಂದರೆ ಮೀಸಲಾತಿ ವ್ಯವಸ್ಥೆ, ಇದರ ಮುಖ್ಯ ಗುರಿ ಸಮಾಜದ ದುರ್ಬಲ ವರ್ಗದ ಉನ್ನತಿ ಮತ್ತು ಅವರ ಜೀವನಶೈಲಿಯ ಸುಧಾರಣೆ ಜೊತೆಗೆ ಅವರನ್ನು ಮುಂಚೂಣಿಗೆ ತರುವುದು.

ಭೀಮರಾವ್ ಅಂಬೇಡ್ಕರ್ ಅವರನ್ನು ಇಂದಿಗೂ ಎಲ್ಲರೂ ಸ್ಮರಿಸುತ್ತಿದ್ದಾರೆ ಏಕೆಂದರೆ ಅವರ ಸಕ್ರಿಯ ಸಾಮಾಜಿಕ ಕಾರ್ಯ ಮತ್ತು ಹಿಂದುಳಿದವರ ಉನ್ನತಿಗಾಗಿ ಅವರು ನೀಡಿದ ಅಪಾರ ಕೊಡುಗೆಗಳು. ವಾಸ್ತವವಾಗಿ ಅವರನ್ನು ಸ್ಮರಿಸುವ ಸಲುವಾಗಿ ಏಪ್ರಿಲ್ 14 ಅನ್ನು ವಾರ್ಷಿಕ ಹಬ್ಬವಾಗಿ ಆಚರಿಸಲಾಗುತ್ತದೆ. 2015 ರಿಂದ ಈ ದಿನವನ್ನು ಭಾರತದಾದ್ಯಂತ ಸಾರ್ವಜನಿಕ ರಜಾದಿನವಾಗಿ ಆಚರಿಸಲಾಗುತ್ತಿದೆ ಮತ್ತು ಅಂಬೇಡ್ಕರ್ ಜಯಂತಿಯನ್ನು ನಮ್ಮ ದೇಶದಲ್ಲಿ ಮಾತ್ರವಲ್ಲದೆ ಪ್ರಪಂಚದ ಇತರ ಭಾಗಗಳಲ್ಲಿಯೂ ಆಚರಿಸಲಾಗುತ್ತದೆ.

ಈ ದಿನ ಅವರ ಅನುಯಾಯಿಗಳು ನಾಗಪುರದ ದೀಕ್ಷಾ ಭೂಮಿ ಮತ್ತು ಮುಂಬೈನ ಚೈತ್ಯ ಭೂಮಿಯಲ್ಲಿ ಮೆರವಣಿಗೆಗಳನ್ನು ನಡೆಸುತ್ತಾರೆ. ನಮ್ಮ ಗೌರವಾನ್ವಿತ ಸಾರ್ವಜನಿಕ ವ್ಯಕ್ತಿಗಳಾದ ರಾಷ್ಟ್ರಪತಿ, ಪ್ರಧಾನ ಮಂತ್ರಿಗಳು ಮತ್ತು ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ನವದೆಹಲಿಯ ಭಾರತೀಯ ಸಂಸತ್ತಿನಲ್ಲಿ ಭೀಮರಾವ್ ಅಂಬೇಡ್ಕರ್ ಅವರ ಪ್ರತಿಮೆಗೆ ಗೌರವ ಸಲ್ಲಿಸುವುದು ವಾಡಿಕೆ. ಇದನ್ನು ದೇಶಾದ್ಯಂತ ವಿಶೇಷವಾಗಿ ದಲಿತರು ಆಚರಿಸುತ್ತಾರೆ, ಅವರು ಇತರರಿಗೆ ಅನುಸರಿಸಲು ಮಾದರಿಯಾದ ನಂತರ ಬೌದ್ಧಧರ್ಮವನ್ನು ಎತ್ತಿಹಿಡಿದರು. ಭಾರತದಲ್ಲಿ ಜನರು ಸ್ಥಳೀಯ ಪ್ರತಿಮೆಗಳನ್ನು ವೀಕ್ಷಿಸಲು ಮತ್ತು ಗೌರವ ಸಲ್ಲಿಸಲು ಅಪಾರ ಸಂಖ್ಯೆಯಲ್ಲಿ ಸೇರುತ್ತಾರೆ ಹಾಗೂ ಅವರ ಮೆರವಣಿಗೆಯನ್ನು ದೊಡ್ಡ ಸಂಭ್ರಮದಿಂದ ಮಾಡುತ್ತಾರೆ.

ಆದ್ದರಿಂದ ಈ ಮಹತ್ವದ ದಿನಕ್ಕಾಗಿ ಒಂದಾಗೋಣ ಮತ್ತು ನಮ್ಮ ದೇಶದ ಸಮಗ್ರ ಬೆಳವಣಿಗೆಗೆ ಕೈ ಜೋಡಿಸಿದ ಎಲ್ಲವನ್ನೂ ನೆನಪಿಸಿಕೊಳ್ಳೋಣ.

ಜೈ ಹಿಂದ್.

For Quick Alerts
ALLOW NOTIFICATIONS  
For Daily Alerts

English summary
Ambedkar jayanti is on april 14. Here is how to do speech on dr. babasaheb ambedkar jayanthi for students and children.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X