Essay On Anti Child Labour Day : ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಕ್ಕೆ ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ

ಪ್ರತಿಯೊಂದು ರಾಷ್ಟ್ರವೂ ಅಭಿವೃದ್ಧಿ ಹೊಂದಲು ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಬಯಸುತ್ತದೆಯಾದರೂ, ಅದು ತನ್ನಲ್ಲಿರುವ ಎಲ್ಲಾ ಅನಿಷ್ಟ ಪದ್ಧತಿಗಳನ್ನು ತೆಗೆದುಹಾಕದ ಹೊರತು ಅದನ್ನು ಸಾಧಿಸಲು ಸಾಧ್ಯವಿಲ್ಲ. ಸಮಾಜದಲ್ಲಿ ಅನೇಕ ಅನಿಷ್ಟ ಪದ್ಧತಿಗಳು ಚಾಲ್ತಿಯಲ್ಲಿವೆ ಅವುಗಳನ್ನು ನಾವು ದಿನನಿತ್ಯ ನೋಡುತ್ತಲೇ ಇದ್ದೇವೆ. ಅವುಗಳಲ್ಲಿ ಒಂದಾದ ರಾಷ್ಟ್ರದ ಉತ್ಪಾದಕತೆಯನ್ನು ನಿಧಾನವಾಗಿ ತಿನ್ನುತ್ತಿರುವ 'ಬಾಲ ಕಾರ್ಮಿಕ' ಪದ್ಧತಿ.

ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಪ್ರಯುಕ್ತ ಪ್ರಬಂಧ

ಈ ಬಾಲ ಕಾರ್ಮಿಕ ಪದ್ಧತಿಯು ಅನೇಕ ಕಾರಣಗಳಿಂದ ಜಾರಿಯಲ್ಲಿದೆ. ಆದರೆ ಇದನ್ನು ತೊಡೆದು ಹಾಕಲು ಅದೆಷ್ಟೇ ಪ್ರಯತ್ನ ಪಟ್ಟರೂ ಕೂಡ ಅನೇಕ ಕಡೆಗಳಲ್ಲಿ ಬಾಲ ಕಾರ್ಮಿಕರು ಕಾಣಸಿಗುತ್ತಾರೆ. ಈ ಅನಿಷ್ಟ ಪದ್ಧತಿಯನ್ನು ತೊಡೆದು ಹಾಕಲು ಮತ್ತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನವನ್ನು ಆಚರಿಸಲಾಗುವುದು. ಈ ದಿನದ ಕುರಿತು ವಿದ್ಯಾರ್ಥಿಗಳು ಮತ್ತು ಮಕ್ಕಳು ಪ್ರಬಂಧ ಬರೆಯಲು ಮಾಹಿತಿಯನ್ನು ಇಲ್ಲಿ ನೀಡಿದ್ದೇವೆ ಓದಿ ತಿಳಿಯಿರಿ.

ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಪ್ರಯುಕ್ತ ಪ್ರಬಂಧ

ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಪ್ರಯುಕ್ತ ಸರಳ ಸಾಲುಗಳಲ್ಲಿ ಪ್ರಬಂಧ :

1) ಬಾಲ ಕಾರ್ಮಿಕರು ಜೀವನೋಪಾಯಕ್ಕಾಗಿ ಮಕ್ಕಳನ್ನು ಕೆಲಸದಲ್ಲಿ ತೊಡಗಿಸಿಕೊಳ್ಳುವುದನ್ನು ಸೂಚಿಸುತ್ತದೆ.

2) ಶಾಲೆಗೆ ತೆರಳಬೇಕಿರುವ ಮಕ್ಕಳ ಹಕ್ಕನ್ನು ಕಸಿದುಕೊಳ್ಳುತ್ತದೆ ಮತ್ತು ಅವರಿಗೆ ಒಂದು ರೀತಿಯ ಅಪಾಯಕಾರಿ ಹಾಗೂ ಹಾನಿಕಾರಕ ವಾತಾವರಣವನ್ನು ಸೃಷ್ಟಿಸುತ್ತದೆ.

3) ಬಾಲಕಾರ್ಮಿರಾಗಲು ಒಂದು ಮುಖ್ಯ ಕಾರಣವೆಂದರೆ ಬಡತನ, ಇಲ್ಲಿ ಮಕ್ಕಳು ಒಂದು ದಿನದ ಆಹಾರವನ್ನು ಸಂಪಾದಿಸಲು ದುಡಿಮೆ ಮಾಡುತ್ತಾರೆ.

4) ಬಾಲ ಕಾರ್ಮಿಕ ಪದ್ಧತಿಯು ಮಾನಸಿಕವಾಗಿ, ದೈಹಿಕವಾಗಿ ಮತ್ತು ಸಾಮಾಜಿಕವಾಗಿ ಅಪಾಯಕಾರಿ ಮತ್ತು ಮಕ್ಕಳಿಗೆ ಹಾನಿಕಾರಕ ಪದ್ಧತಿಯೂ ಹೌದು.

5) ಬಾಲಕಾರ್ಮಿಕ ಪದ್ಧತಿಯಿಂದ ಮಕ್ಕಳು ಗುಲಾಮರಾಗುತ್ತಾರೆ. ಮಕ್ಕಳು ತಮ್ಮ ಕುಟುಂಬದಿಂದ ಬೇರ್ಪಟ್ಟು, ತಮ್ಮ ಯಜಮಾನನಿಗೆ ಬಂಧಿತ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ.

6) ಬಾಲ ಕಾರ್ಮಿಕರು ತಮ್ಮ ಕೆಲಸದ ವಾತಾವರಣದಲ್ಲಿ ಗಂಭೀರವಾದ ಸಮಸ್ಯೆಯನ್ನು ಎದುರಿಸುತ್ತಾರೆ.

7) ಮಕ್ಕಳು ಕೃಷಿ ಕೆಲಸಗಳು, ಬೇಟೆ, ಅರಣ್ಯ ಮತ್ತು ಮೀನುಗಾರಿಕೆಯಲ್ಲಿ ತೊಡಗುತ್ತಾರೆ.

8) ಮಕ್ಕಳು ಕೈಗಾರಿಕಾ ವಲಯದಲ್ಲಿ ಕಲ್ಲುಗಣಿಗಾರಿಕೆ, ಉತ್ಪಾದನೆ, ನಿರ್ಮಾಣ ಮತ್ತು ಇತರ ಸಂಬಂಧಿತ ಚಟುವಟಿಕೆಗಳಲ್ಲಿ ಕೆಲಸ ಮಾಡುವ ಮೂಲಕ ಆರೋಗ್ಯ ಸಂಬಂಧಿತ ಕಾಯಿಲೆಗಳಿಗೆ ಒಳಗಾಗುತ್ತಾರೆ.

9) ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ರಿಯಲ್ ಎಸ್ಟೇಟ್, ಸಮುದಾಯ ಮತ್ತು ಸಾಮಾಜಿಕ ಸೇವೆಗಳನ್ನು ಒಳಗೊಂಡಿರುವ ಸೇವಾ ವಲಯಗಳಲ್ಲಿ ಮಕ್ಕಳು ಬಾಲ ಕಾರ್ಮಿಕರಾಗಿ ದುಡಿಯುತ್ತಾರೆ.

10) ಅನೇಕ ದೇಶಗಳಲ್ಲಿ ನಡೆಯುತ್ತಿರುವ ಮಕ್ಕಳ ಕಳ್ಳಸಾಗಣೆಯ ಪರಿಣಾಮವಾಗಿ ಬಾಲಕಾರ್ಮಿಕತೆಯನ್ನು ಹುಟ್ಟುಹಾಕುತ್ತಿದೆ.

ಒಟ್ಟಾರೆ ಈ ಗಂಭೀರ ಸಮಸ್ಯೆಯನ್ನು ತೊಡೆದು ಹಾಕಲು ನಾವು ನೀವೆಲ್ಲಾ ಪಣ ತೊಡಬೇಕು, ಆಗ ಮಾತ್ರ ಈ ಪದ್ಧತಿಯನ್ನು ಸಮಾಜದಿಂದ ಗಟ್ಟಿಯಾಗಿ ತೊಡೆದು ಹಾಕಲು ಸಾಧ್ಯವಾಗುತ್ತದೆ.

For Quick Alerts
ALLOW NOTIFICATIONS  
For Daily Alerts

English summary
Anti child labour day is on june 12. Here is the information to write essay.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X