NEET Result: ನೀಟ್ ಫಲಿತಾಂಶ ತೃಪ್ತಿಯಾಗಿಲ್ವಾ...ಹಾಗಿದ್ರೆ ಏನು ಮಾಡಬೇಕು ಇಲ್ಲಿದೆ ಮಾಹಿತಿ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು (ಎನ್‌ಟಿಎ) ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೀಟ್) 2020 ರ ಫಲಿತಾಂಶವನ್ನು ನಿನ್ನೆ ಪ್ರಕಟಿಸಿದೆ. ಪರೀಕ್ಷೆಗೆ ಹಾಜರಾಗಲು ನೋಂದಾಯಿಸಿಕೊಂಡ 15,97,435 ಅಭ್ಯರ್ಥಿಗಳಲ್ಲಿ 7,71,500 ಮಂದಿ ಪರೀಕ್ಷೆಗೆ ಹಾಜರಾಗಿದ್ದರು.

ನೀಟ್ ಫಲಿತಾಂಶದ ನಂತರ ಮುಂದೇನು ಇಲ್ಲಿದೆ ಮಾಹಿತಿ

 

ಪ್ರತಿವರ್ಷ ಸುಮಾರು 1 ರಿಂದ 1.5 ಲಕ್ಷ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯಲು ವಿದೇಶಕ್ಕೆ ಹೋಗುತ್ತಾರೆ. ಆದರೆ ಈ ವರ್ಷ ಶಿಕ್ಷಣ ತಜ್ಞರ ಮಾಹಿತಿಯ ಪ್ರಕಾರ ಕಡಿಮೆ ವಿದ್ಯಾರ್ಥಿಗಳು ವಿದೇಶದಲ್ಲಿ ಅಧ್ಯಯನ ಮಾಡುವ ನಿರೀಕ್ಷೆಯಿದೆ ಮತ್ತು ಇದರಿಂದ ಉನ್ನತ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಕಟ್-ಆಫ್ ಹೆಚ್ಚಾಗುವ ಸಾಧ್ಯತೆಯಿದೆ. ಅಂತಹ ಸಂದರ್ಭದಲ್ಲಿ, ಪರೀಕ್ಷೆಯನ್ನು ಉತ್ತೀರ್ಣಗೊಳಿಸಿದರೂ ಉತ್ತಮ ಅಂಕಗಳನ್ನು ಪಡೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಒಳ್ಳೆಯ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳುವುದು ಕಷ್ಟವಾಗಿರುತ್ತದೆ.

ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಅಧ್ಯಯನ ಮಾಡಲು ಅವಕಾಶವಿದ್ದರೂ, ಸಾಮಾನ್ಯವಾಗಿ ಅರ್ಜಿ ಸಲ್ಲಿಸಿದವರ ಪೈಕಿ ಶೇಕಡಾ ಒಂದರಷ್ಟು ವಿದ್ಯಾರ್ಥಿಗಳು ವಿದೇಶದಲ್ಲಿ ಅಧ್ಯಯನ ಮಾಡುತ್ತಾರೆ. ಆದರೆ ಈ ವರ್ಷ ಪೋಷಕರು ಮತ್ತು ವಿದ್ಯಾರ್ಥಿಗಳು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿರುವ ಹಿನ್ನೆಲೆಯಲ್ಲಿ ರಾಯಭಾರ ಕಚೇರಿಗಳನ್ನು ಸಹ ಮುಚ್ಚಲಾಗಿದ್ದು, ವೀಸಾ ಅನುಮೋದನೆಗಳು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಉನ್ನತ ವಿಶ್ವವಿದ್ಯಾಲಯಗಳಿಂದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಶಿಕ್ಷಣ ನೀಡಲಾಗುತ್ತಿದೆ ಇಂತಹ ಸಂದರ್ಭದಲ್ಲಿ, ವಿದೇಶಕ್ಕೆ ಹೋಗಲು ಆಲೋಚಿಸುವವರ ಸಂಖ್ಯೆ ಮತ್ತಷ್ಟು ಕಡಿಮೆಯಾಗುತ್ತದೆ " ಎಂದು ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ (ಎಇಎಸ್ಎಲ್) ನ ವೈದ್ಯಕೀಯ, ರಾಷ್ಟ್ರೀಯ ಶೈಕ್ಷಣಿಕ ನಿರ್ದೇಶಕ ಅನುರಾಗ್ ತಿವಾರಿ ಹೇಳಿದ್ದಾರೆ.

ವಿದ್ಯಾಮಂದಿರ್ ತರಗತಿಗಳ ನಿರ್ದೇಶಕರಾದ ಸೌರಭ್ ಕುಮಾರ್, "ಹೆಚ್ಚಿನ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟ್ ಪಡೆಯಲು ಆಶಿಸುತ್ತಾರೆ . ಒಂದು ವೇಳೆ ಅಭ್ಯರ್ಥಿಗೆ ಅದನ್ನು ಪಡೆಯಲು ಸಾಧ್ಯವಾಗದಿದ್ದರೆ ಅವರು ಖಾಸಗಿ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಅಧ್ಯಯನ ಮಾಡಬೇಕಿರುತ್ತದೆ. ಆದರೆ ಅದು ಸುಮಾರು 80 ಲಕ್ಷದಿಂದ 1 ಕೋಟಿ ರೂ. ಗಳ ವೆಚ್ಚ ತಗುಲುವ ಸಾಧ್ಯತೆ ಇರುತ್ತದೆ. ಇನ್ನು ವಿದ್ಯಾರ್ಥಿಗಳು ಬಿಡಿಎಸ್ ಅಥವಾ ಪಶುವೈದ್ಯಕೀಯ ಕೋರ್ಸ್‌ಗಳನ್ನು ಆರಿಸಿಕೊಳ್ಳಬಹುದು. ಆಯುಷ್ ಸಚಿವಾಲಯವು ಹಲವಾರು ಶ್ರೇಣಿಯ ಕೋರ್ಸ್‌ಗಳನ್ನು ಸಹ ನೀಡುತ್ತದೆ. 60,000 ಕ್ಕಿಂತ ಕಡಿಮೆ ರ್ಯಾಂಕ್ ಇರುವವರಿಗೆ ಮ್ಯಾನೇಜ್ಮೆಂಟ್ ಸೀಟ್ ಅಥವಾ ಬಿಫಾರ್ಮಾ ಕೋರ್ಸ್ ಗಳು ಉಳಿದಿವೆ. ಇನ್ನು ಇದಕ್ಕೆ ಪರೋಕ್ಷವಾಗಿ ಜೈವಿಕ ತಂತ್ರಜ್ಞಾನ, ನರ್ಸಿಂಗ್, ಭೌತಚಿಕಿತ್ಸೆಯಂತಹ ಬಿಎಸ್ಸಿ ಕೋರ್ಸ್ ಗಳನ್ನು ಮಾಡಬಹುದು. ಇನ್ನು ಇದೂ ಕೂಡ ಸಾಧ್ಯವಾಗದಿದ್ದಲ್ಲಿ ಪದವಿಪೂರ್ವ ಮಟ್ಟದಲ್ಲಿ ಪ್ರಾಣಿಶಾಸ್ತ್ರ, ಜೀವಶಾಸ್ತ್ರ ಅಥವಾ ರಸಾಯನಶಾಸ್ತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ಇವುಗಳಲ್ಲಿ ಸ್ನಾತಕೋತ್ತರ ವಿಭಾಗದಲ್ಲಿ ಅಧ್ಯಯನ ಕೂಡ ಮಾಡಬಹುದು.

 

ನೀಟ್ ಪರೀಕ್ಷೆ ತೆಗೆದುಕೊಳ್ಳುವ ಪ್ರತಿಯೊಬ್ಬರೂ ವೈದ್ಯಕೀಯ ಅಧ್ಯಯನ ಮಾಡಲು ಬಯಸುವುದಿಲ್ಲ. ಕೆಲವರು 12 ನೇ ತರಗತಿಯಲ್ಲಿ ವೈದ್ಯೀಯ ವಿಷಯವನ್ನು ಹೊಂದಿರುವ ಕಾರಣ ಪರೀಕ್ಷೆಗೆ ಹಾಜರಾಗುತ್ತಾರೆ. ನೀಟ್‌ಗೆ ಹಾಜರಾಗುವ ಸುಮಾರು 15 ಲಕ್ಷ ವಿದ್ಯಾರ್ಥಿಗಳಲ್ಲಿ, ಸುಮಾರು ಐದು ಲಕ್ಷ ಜನರು ವೈದ್ಯಕೀಯದ ಬಗ್ಗೆ ಆಸಕ್ತಿ ಹೊಂದಿದ್ದಾರೆ ಮತ್ತು ನಿಜವಾದ ಉತ್ಸಾಹ ಹೊಂದಿರುವವರು ತಮ್ಮ ಸ್ಟ್ರೀಮ್ ಅನ್ನು ಬದಲಾಯಿಸಬಾರದು ಮತ್ತು ಒಂದು ವರ್ಷವನ್ನು ಬಿಡುವ ಬಗ್ಗೆ ಯೋಚಿಸಬಹುದು. 12 ನೇ ತರಗತಿಯೊಂದಿಗೆ ಇಂತಹ ಉನ್ನತ ಸ್ಪರ್ಧಾತ್ಮಕ ಮಟ್ಟದ ರಾಷ್ಟ್ರೀಯ ಪರೀಕ್ಷೆಗೆ ಸಿದ್ಧತೆ ಮಾಡುವುದು ಸುಲಭವಲ್ಲ ಮತ್ತು ವಿದ್ಯಾರ್ಥಿಗಳು ಅದಕ್ಕಾಗಿ ತಮ್ಮನ್ನು ತಾವು ಕಡೆಗಣಿಸಿಕೊಳ್ಳಬಾರದು ಎಂದು ಅವರು ಹೇಳಿದರು.

ನಿರ್ಧಿಷ್ಟತೆಯ ಬಗ್ಗೆ ವಿವರಿಸಿದ ಮೋಷನ್ ಎಜುಕೇಶನ್‌ನ ವ್ಯವಸ್ಥಾಪಕ ನಿರ್ದೇಶಕ ನಿತಿನ್ ವಿಜಯ್, ಕೋರ್-ಅಲ್ಲದ ವಿಷಯಗಳಿಗೆ ಕಡಿಮೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಿದ್ದು, ಇದನ್ನು ವಿದ್ಯಾರ್ಥಿಗಳು ಕಡೆಗಣಿಸುವಂಥಿಲ್ಲ. ಏಕೆಂದರೆ ಇಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳಿವೆ. ಈ ಕ್ಷೇತ್ರಗಳು ವಿದ್ಯಾರ್ಥಿಗಳಿಗೆ ಸುರಕ್ಷಿತ ವೃತ್ತಿಜೀವನವನ್ನು ನೀಡುವ ಸಾಮರ್ಥ್ಯವನ್ನು ಹೊಂದಿವೆ ಅಂತಹ ಕೆಲವು ಕ್ಷೇತ್ರಗಳೆಂದರೆ ಜೆನೆಟಿಕ್ ಎಂಜಿನಿಯರಿಂಗ್, ಬಯೋಟೆಕ್ನಾಲಜಿ, ಬಯೋಸ್ಟಾಟಿಕ್, ಟೆಲಿಮೆಡಿಸಿನ್ ಇವು ವೈದ್ಯಕೀಯ ಕ್ಷೇತ್ರದಲ್ಲಿ ಅಗ್ರಗಣ್ಯ ಕ್ಷೇತ್ರಗಳಾಗಿವೆ.

"ಈ ಕ್ಷೇತ್ರಗಳನ್ನು ಅನುಸರಿಸುವಾಗ, ಒಬ್ಬರಿಗೆ ರೋಗಿಗಳೊಂದಿಗೆ ನೇರವಾಗಿ ವ್ಯವಹರಿಸಲು ಸಾಧ್ಯವಾಗದಿದ್ದರೂ ಸಹ, ಅವರು ಬಹಳಷ್ಟು ವೈದ್ಯರೊಂದಿಗೆ ವ್ಯವಹರಿಸುತ್ತಾರೆ ಮತ್ತು ಅವರಿಗೆ ಸಹಾಯ ಮಾಡುತ್ತಾರೆ. ಇಂದು ಬಳಸುತ್ತಿರುವ ಯಂತ್ರಗಳು ಎಐ, ಎಂಎಲ್ ಜೊತೆಗೆ ಮೈತ್ರಿ ಮಾಡಿಕೊಂಡಿವೆ, ಇವುಗಳನ್ನು ಒಂದು ಹಂತದಲ್ಲಿ ಎಂಜಿನಿಯರಿಂಗ್ ಡೊಮೇನ್‌ಗಳೆಂದು ಪರಿಗಣಿಸಲಾಗಿತ್ತು. ಈ ಉದಯೋನ್ಮುಖ ಕೋರ್ಸ್‌ಗಳನ್ನು ಅಧ್ಯಯನ ಮಾಡುವ ಪದವೀಧರರು ಈ ಯಂತ್ರಗಳು ಮತ್ತು ತಂತ್ರಜ್ಞಾನಗಳ ಬಗ್ಗೆ ಉತ್ತಮ ತಿಳುವಳಿಕೆಯನ್ನು ಹೊಂದಿರುತ್ತಾರೆ "ಎಂದು ವಿಜಯ್ ಹೇಳಿದರು.

ವರ್ಷವನ್ನು ಡ್ರಾಪ್ ಮಾಡಲು ಆಲೋಚಿಸುವ ವಿದ್ಯಾರ್ಥಿಗಳಿಗೆ, "ಒಬ್ಬ ವಿದ್ಯಾರ್ಥಿಯು ತಾವು ಮಾಡಿರುವ ಅಧ್ಯಯನಕ್ಕಿಂತ ಉತ್ತಮವಾದ ಅಧ್ಯಯನ ಮಾಡಬಹುದೆಂದು ಭಾವಿಸಿದರೆ ಮತ್ತು ಕೋರ್ ವಿಷಯವನ್ನು ಅಧ್ಯಯನ ಮಾಡಲು ಬಯಸಿದರೆ. ಅವರು ಖಂಡಿತವಾಗಿಯೂ ಡ್ರಾಪ್-ಮಾಡಿದ ವರ್ಷವನ್ನು ಪರಿಗಣಿಸಬೇಕು. ನೀಟ್ ತಯಾರಿಗಾಗಿ ಇಡೀ ವರ್ಷವನ್ನು ಮೀಸಲಿಟ್ಟರೆ ಉತ್ತಮ ಫಲಿತಾಂಶಗಳನ್ನು ನೋಡಲು ಸಾಧ್ಯವಾಗುತ್ತದೆ. ಒಬ್ಬರು ತಮ್ಮ ತಪ್ಪಿನಿಂದ ಕಲಿಯಲು ಸಾಧ್ಯವಾಗುವವರೆಗೂ, ಅವರು ಉತ್ತಮ ಸ್ಕೋರ್ ಮಾಡಲು ಸಾಧ್ಯವಾಗುತ್ತದೆ. ಮೊದಲ ಪ್ರಯತ್ನದಲ್ಲಿ ವಿದ್ಯಾರ್ಥಿಗಳು 250 ಅಂಕಗಳನ್ನು ಪಡೆದಿರುತ್ತಾರೆ ಆದರೆ ಎರಡನೇ ಪ್ರಯತ್ನದಲ್ಲಿ 600 ಅಂಕಗಳನ್ನು ಪಡೆದಿರುವುದನ್ನು ನಾನು ನೋಡಿದ್ದೇನೆ. ಎಲ್ಲರೂ ಮಾಡಬೇಕಾಗಿರುವುದು ಸಣ್ಣಪುಟ್ಟ ತಪ್ಪುಗಳತ್ತ ಗಮನ ಹರಿಸುವುದು. ಸಣ್ಣ ಬದಲಾವಣೆಗಳು ದೊಡ್ಡ ಪರಿಣಾಮವನ್ನು ಬೀರುತ್ತವೆ. ಹಾಗಾಗಿ ಈ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ಗಮನವಹಿಸಿದ್ದಲ್ಲಿ ಮಾತ್ರ ಉತ್ತಮವಾಗಿ ನೀಟ್ ಪರೀಕ್ಷೆಯನ್ನು ಪಾಸ್ ಮಾಡಬಹುದು.

For Quick Alerts
ALLOW NOTIFICATIONS  
For Daily Alerts

English summary
Are you unhappy with neet results here is the information what to do. Read on
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X