ಸಣ್ಣ ಕಂಪನಿಯಲ್ಲಿ ಕೆಲಸ... ಆದ್ರೆ ಲಾಭಗಳು ಹಲವಾರು!

By Kavya

ಬ್ಯುಸಿನೆಸ್ ಜಗತ್ತಿನಲ್ಲಿ ಕೆಲಸ ಮಾಡುವುದ್ರಲ್ಲಿ ಒಳ್ಳೆಯ ವಿಷಯವೆಂದ್ರೆ ನಿಮ್ಮ ಅಗತ್ಯಕ್ಕೆ ತಕ್ಕಂತೆ ಇಲ್ಲಿ ನಡೆಯುತ್ತದೆ. ಹೇಗೆ ಕೆಲವು ಜನರಿಗೆ ದೊಡ್ಡ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡಲು ಮಜಾ ಆಗುತ್ತೋ ಅದೇ ರೀತಿ ಅದೆಷ್ಟೋ ಮಂದಿಗೆ ಚಿಕ್ಕ ಚಿಕ್ಕ ಕಂಪನಿಯಲ್ಲಿ ಕೆಲಸ ಮಾಡಲು ಮನಸ್ಸಾಗುತ್ತದೆ.

 
ಸಣ್ಣ ಕಂಪನಿಯಲ್ಲಿ ಕೆಲಸ ಮಾಡುವುದರಿಂದ ಆಗುವ ಪ್ರಯೋಜನಗಳು

ದೊಡ್ಡ ದೊಡ್ಡ ಆಫೀಸ್‌ಗಳಲ್ಲಿ ಉದ್ಯೋಗಸ್ಥರಿಗೆ ಹಲವಾರು ಬಗೆಯ ಸೌಲಭ್ಯಗಳು ಸಿಗುತ್ತದೆ. ಹಾಗಾಗಿ ಇಲ್ಲಿ ಉದ್ಯೋಗಸ್ಥರ ಸಂಖ್ಯೆ ಕೂಡಾ ಹೆಚ್ಚೇ ಇರುತ್ತದೆ. ಆದ್ರೆ ಚಿಕ್ಕ ಚಿಕ್ಕ ಕಂಪನಿಗಳಲ್ಲಿ ಉದ್ಯೋಗಸ್ಥರ ಸಂಖ್ಯೆಯೂ ಕಡಿಮೆ ಇರುತ್ತದೆ. ಹಾಗಾಗಿ ಇಲ್ಲಿ ನಿಮಗೆ ಹೆಚ್ಚು ಜನರ ಜತೆ ಮಾತನಾಡಬೇಕು ಎಂಬ ಟೆನ್ಶನ್ ಕೂಡಾ ಇರುವುದಿಲ್ಲ. ದೊಡ್ಡ ಕಂಪನಿಗಳಿಂದ ಚಿಕ್ಕ ಕಂಪನಿಗಳಲ್ಲಿ ಕೆಲಸ ಮಾಡುವ ಅನುಭವ ಕೂಡಾ ಭಿನ್ನವಾಗಿರುತ್ತದೆ ಅಷ್ಟೇ ಅಲ್ಲ ಇದರ ಲಾಭಗಳು ಕೂಡಾ ಬೇರೆಯೇ ಆಗಿರುತ್ತದೆ.

ಹೌದು ಇವತ್ತು ನಾವು ನಿಮಗೆ ತಿಳಿಸಿಕೊಡುತ್ತಿದ್ದೇವೆ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವುದಕ್ಕಿಂತ ಚಿಕ್ಕ ಕಂಪನಿಯಲ್ಲಿ ಕೆಲಸ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು.

ಚಿಕ್ಕ ಕಂಪನಿಯಲ್ಲಿ ಕೆಲಸ ಮಾಡುವುದರಿಂದ ಆಗುವ ಪ್ರಯೋಜನಗಳು:

ಕಮ್ಮಿ ಜನರ ಜತೆ ಮಾತು:

ಒಂದು ವೇಳೆ ನೀವು ದೊಡ್ಡ ಕಂಪನಿಯಲ್ಲಿ ತುಂಬಾ ಜನರ ಮಧ್ಯೆ ಕೆಲಸ ಮಾಡುತ್ತಿದ್ದರೆ, ನಿಮಗೆ ಕೆಲಸದತ್ತ ಫೋಕಸ್ ಮಾಡಲು ಕಷ್ಟವಾಗಬಹುದು. ಇಂತಹ ಜಾಗದಲ್ಲಿ ನಿಮಗೆ ಕೆಲಸ ಮಾಡಲು ಡಿಸ್ಟರ್ಬ್ ಕೂಡಾ ಆಗಬಹುದು. ನಿಮ್ಮ ಸುತ್ತ ಮುತ್ತ ನಿಮ್ಮ ಸಹದ್ಯೋಗಿಗಳು ಕುಳಿತಿದ್ದಾಗ ನಿಮಗೆ ಕೆಲಸ ಮಾಡಲು ಸಾಧ್ಯವಾಗದೇ ನೀವು ಅವರ ಜತೆ ಸುಮ್ಮನೆ ಕಾಲಹರಣ ಮಾಡಿ ಕಾಲಕಳೆಯುವ ಸಂಭವವುಂಟಾಗಬಹುದು. ಕೆಲಸದ ಜತೆ ಜತೆ ಮಾತು ಕೂಡಾ ಹೆಚ್ಚಾಗಿ ಕೆಲಸದತ್ತ ನಿಮಗೆ ಗಮನಹರಿಸಲು ಸಾಧ್ಯವಾಗದೇ ಇರಬಹುದು.

ಆಫೀಸ್ ತುಂಬಾ ನಿಮ್ಮದೇ ಜಾಗ:

ದೊಡ್ಡ ದೊಡ್ಡ ಕಂಪನಿಗಳಲ್ಲಿ ಎಲ್ಲೆಲ್ಲಿ ಜಾಗ ಇರುತ್ತೋ ಅಲ್ಲಲ್ಲಿ ಉದ್ಯೋಗಿಗಳನ್ನ ಕೂರಿಸುತ್ತಾರೆ. ಆದ್ರೆ ಚಿಕ್ಕ ಚಿಕ್ಕ ಕಂಪನಿಗಳಲ್ಲಿ ಉದ್ಯೋಗಸ್ಥರು ಕೂಡಾ ಕಮ್ಮಿಯೇ ಇರುತ್ತಾರೆ. ಎಲ್ಲಿ ಜನರು ಕಡಿಮೆ ಇರುತ್ತಾರೋ ಅಲ್ಲಿ ಜಾಗ ಕೂಡಾ ಕಮ್ಮಿಯೇ ಇರುತ್ತದೆ. ಚಿಕ್ಕ ಕಂಪನಿಯಲ್ಲಿ ನೀವು ನಿಮ್ಮ ಜಾಗವನ್ನ ಯಾರ ಜತೆಯೂ ಹಂಚಿಕೊಳ್ಳುವ ಪ್ರಸಂಗವಿರುವುದಿಲ್ಲ. ನಿಮ್ಮ ಅಕ್ಕಪಕ್ಕದವರ ಚಿಂತೆ ಬಿಟ್ಟು, ನಿಮ್ಮ ಕೆಲಸದತ್ತ ಗಮನ ಕೊಡಿ.

 

ಟೈಂ ಬಗ್ಗೆ ಕಟ್ಟುನಿಟ್ಟು ಇರಲ್ಲ:

ದೊಡ್ಡ ದೊಡ್ಡ ಆಫೀಸ್‌ಗಳಲ್ಲಿ ಎಲ್ಲದ್ದಕ್ಕೂ ಟೈಂ ಫಿಕ್ಸ್ ಆಗಿರುತ್ತದೆ. ಅಷ್ಟೇ ಅಲ್ಲ ದೊಡ್ಡ ದೊಡ್ಡ ಕಂಪನಿಯಲ್ಲಿ ತುಂಬಾ ಉದ್ಯೋಗಿಗಳು ಇರುವುದರಿಂದ ನಿಮ್ಮ ಮೇಲೆ ನಿಗ ಇಡಲು ಸಿಸಿಟಿವಿ ಅಳವಡಿಸಿರುತ್ತಾರೆ. ಅಷ್ಟೇ ಅಲ್ಲ ಅಟೆಂಡೇಸ್ ಗೋಸ್ಕರ ಮಷಿನ್ ಕೂಡಾ ಫಿಕ್ಸ್ ಮಾಡಿರುತ್ತಾರೆ. ಆದ್ರೆ ಚಿಕ್ಕ ಕಂಪನಿಗಳಲ್ಲಿ ಈ ರೀತಿ ಇರುವುದಿಲ್ಲ. ಇಲ್ಲಿ ಉದ್ಯೋಗಿಗಳು ಕಮ್ಮಿ ಇರುವುದರಿಂದ ರೆಕಾರ್ಡ್ ಗಳು ಕೂಡಾ ಕಮ್ಮಿಯಾಗಿಯೇ ಇರುತ್ತದೆ ಅದು ಕೂಡಾ ಕಾಗದದ ರೂಪದಲ್ಲಿ ಇರುತ್ತದೆ. ಚಿಕ್ಕ ಕಂಪನಿಗಳಲ್ಲಿ ಸಿಸಿಟಿವಿ, ಅಟೆಂಡೆಂಸ್ ಮಷಿನ್ ಕೂಡಾ ಇರುವುದಿಲ್ಲ. ಇವುಗಳೆಲ್ಲಾ ಇಲ್ಲದೇ ಇರುವುದರಿಂದ ನೀವು ರಿಲಾಕ್ಸ್ ಆಗಿ ಕೆಲಸ ಮಾಡಬಹುದು. ಇದೆಲ್ಲಾ ಚಿಕ್ಕ ಚಿಕ್ಕ ಕಂಪನಿಗಳಲ್ಲಿ ಕೆಲಸ ಮಾಡುವುದರಿಂದ ಆಗುವ ಪ್ರಯೋಜನಗಳು.

For Quick Alerts
ALLOW NOTIFICATIONS  
For Daily Alerts

English summary
When you are looking for new job, do you ever take the size of the company into account? would you rather work for a large company or a small , medium sized business. small businesses offer excellent career opportunities. and when it comes to getting noticed, the smaller the stage, the greater your chances are of stealing the scene.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X