ಆಫೀಸ್‌ನಲ್ಲಿ ಯಾವತ್ತೂ ಸಹದ್ಯೋಗಿಗಳ ಜತೆ ಈ ಬಗ್ಗೆ ಚರ್ಚೆ ಬೇಡ

ಆಫೀಸ್‌ ವಾತಾವರಣದಲ್ಲಿ ಸಹದ್ಯೋಗಿಗಳಿಂದ ನಮ್ಮ ವರ್ಕ್ ಲೈಫ್ ಹೆಚ್ಚು ಇಂಟ್ರಸ್ಟಿಂಗ್ ಆಗಿರುತ್ತದೆ. ಸಹದ್ಯೋಗಿಗಳ ಜತೆ ಫ್ರೆಂಡ್ ಶಿಪ್ ಅದು ಕೆಲವೊಮ್ಮೆ ಅನಿರೀಕ್ಷಿತವಾಗಿರುತ್ತದೆ. ಕೆಲವೊಮ್ಮೆ ದಿನದ ಕೊನೆಯಲ್ಲಿ ಈ ಸ್ನೇಹ ಹೇಗೆ ಟರ್ನ್ ಆಗುತ್ತದೆ ಎಂದು ಗ್ಯಾರಂಟಿ ಕೊಡಲು ಸಾಧ್ಯವಿಲ್ಲ.

ಆಫೀಸ್‌ನಲ್ಲಿ ಯಾವತ್ತೂ ಸಹದ್ಯೋಗಿಗಳ ಜತೆ ಈ ಬಗ್ಗೆ ಚರ್ಚೆ ಬೇಡ

 

ನಿಮಗೆ ಆಶ್ಚರ್ಯವಾಗಬಹುದು ನಾವ್ಯಾಕೆ ಹಾಗೆ ಹೇಳಿದ್ದೀವಿ ಎಂದು, ಇದು ಕನ್ವರ್ಸೇಶನ್ ಲೆವಲ್ ಅವಲಂಭಿಸಿರುತ್ತದೆ. ಕೆಲವೊಂದು ವಿಚಾರಗಳನ್ನ ನೀವು ಸಹದ್ಯೋಗಿಗಳ ಜತೆ ಓಪನ್ ಆಗಿ ಮಾತನಾಡಿದರೆ ಅದರಿಂದ ನಿಮ್ಮ ಕೆಲಸಕ್ಕೆನೇ ಕತ್ತರಿ ಬೀಳಬಹುದು. ನೀವು ಯಾವುದೇ ಬ್ಯಾಡ್ ಇಂಟೇಶನ್ ಇಲ್ಲದೆನೆಯೇ ಓಪನ್ ಆಗಿ ಮಾತನಾಡಿರಬಹುದು ಆದ್ರೆ ಅದು ನಿಮ್ಮ ಬೆನ್ನಿಗೆ ಚೂರಿ ಹಾಕುವ ಸಂಭವ ಎದುರಾಗಬಹುದು.

ಇತರ ಸಹದ್ಯೋಗಿಗಳ ಜತೆ ಏನೆಲ್ಲಾ ವಿಷಯ ಮಾತನಾಡಬಾರದು:

ನಿಮಗೆಷ್ಟು ಸ್ಯಾಲರಿ ಸಿಗುತ್ತದೆ:

ಹೌದು ಸ್ಯಾಲರಿ ಬಗೆಗಿನ ಮಾತು ನಿಮ್ಮನ್ನ ಮತ್ತಷ್ಟು ಸಂಕಷ್ಟಕ್ಕೆ ತಳ್ಳಬಹುದು. ನಿಮಗೆ ನಿಮ್ಮ ಸಹದ್ಯೋಗಿಗಳಿಗಿಂತ ದ್ವಿಗುಣ ಪಟ್ಟು ವೇತನ ಸಿಕ್ಕರೆ, ಅದನ್ನ ಅವರ ಜತೆ ಹೇಳಬೇಡಿ. ಒಂದು ವೇಳೆ ಹೇಳಿದ್ರೆ ಇದರಿಂದ ಅವರು ನಿಮ್ಮ ಮೇಲೆ ಅಸಮಾಧಾನ ಪಡುವರು. ಅಷ್ಟೇ ಅಲ್ಲ ಇದು ನಿಮ್ಮ ಸಂಬಂಧಗಳ ಮಧ್ಯೆ ಬಿರುಕು ಮೂಡಿಸಬಹುದು.

ಬೇರೆಯವರ ಬಗ್ಗೆ ಕೆಟ್ಟದಾಗಿ ಮಾತನಾಡುವುದು:

ನೀವು ನಿಮ್ಮ ಸಹದ್ಯೋಗಿಗಳ ಜತೆ ಇದ್ದಾಗ ಆಫೀಸ್‌ನ ಇತರ ಉದ್ಯೋಗಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ. ಯಾಕೆಂದ್ರೆ ಮತ್ತೆಯಾವತ್ತಾದ್ರೂ ನಿಮ್ಮ ಸಹದ್ಯೋಗಿಗಳು ಅವರ ಬಳಿ ಈ ವಿಷಯ ಹೇಳುವ ಸಂಭವವಿರುತ್ತದೆ. ಇದರಿಂದ ನೀವು ಎಲ್ಲರ ನಿಷ್ಟುರ ಕಟ್ಟಿಕೊಳ್ಳುವಿರಿ.

ವೈಯಕ್ತಿಕ ಜೀವನ:

ಸಹದ್ಯೋಗಿಗಳ ಜತೆ ಔಟಿಂಗ್ ಮಾಡಿದಾಗ ಜಸ್ಟ ಚಿಲ್ ಆಗಿ ಮಾತನಾಡಿ ಹಾಗೆಯೇ ನಿಮ್ಮ ಜೀವನದ ಬಗ್ಗೆ ಅವರ ಜತೆ ಹಂಚಿಕೊಳ್ಳಿ. ಆದ್ರೆ ಅತಿಯಾಗಿ ನಿಮ್ಮ ಫ್ಯಾಮಿಲಿ ಬಗ್ಗೆ ಚರ್ಚೆ ಮಾಡಲು ಹೋಗಬೇಡಿ. ಪರ್ಸನಲ್ ಲೈಫ್ ಬಗ್ಗೆ ಆಳವಾಗಿ ಸಹದ್ಯೋಗಿಗಳ ಜತೆ ಚರ್ಚೆ ಮಾಡಲು ಹೋಗಬೇಡಿ.

ನಿಮ್ಮ ತಪ್ಪನ್ನ ಹೇಳಬೇಡಿ:

ಸಮಯ ಬದಲಾದಂತೆ ನಿಮ್ಮ ಫ್ರೆಂಡ್‌ಶಿಪ್ ಕೂಡಾ ಬದಲಾಗಬಹುದು. ಇಂದು ಜತೆಗಿದ್ದ ಕೋ- ವರ್ಕರ್ಸ್ ನಾಳೆ ನಿಮ್ಮನ್ನೇ ದೂಷಿಸಬಹುದು. ಹಾಗಾಗಿ ಯಾವತ್ತಾದ್ರೂ ಅವರು ನಿಮ್ಮದೊಂದಿಗೆ ಮನಸ್ತಾಪ ಮಾಡಿಕೊಂಡಾಗ ನಿಮ್ಮ ತಪ್ಪನ್ನ ಮತ್ತೊಬ್ಬರ ಬಳಿ ಹೇಳುವ ಸಂಭವವಿರುತ್ತದೆ

ಆಫೀಸ್‌ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ:

ಇದು ಹೆಚ್ಚಿನ ಮಂದಿಗೆ ಇರುವ ಕೆಟ್ಟ ಅಭ್ಯಾಸ. ಆಫೀಸ್ ವಾತಾವರಣ ಇಷ್ಟವಿಲ್ಲ ಎಂದಾದ್ರೆ ಸುಮ್ಮನೆ ಇದ್ದು ಬಿಡಿ. ಯಾಕೆಂದ್ರೆ ಯಾರೂ ಕೂಡಾ ಅದೇ ಆಫೀಸ್‌ನಲ್ಲಿ ಇರಿ ಎಂದು ನಿಮಗೆ ಫೋರ್ಸ್ ಮಾಡುವುದಿಲ್ಲ. ಬದಲಿಗೆ ಸಹದ್ಯೋಗಿಗಳ ಜತೆ ನಿಮ್ಮ ಆಫೀಸನ್ನ ಇತರ ಆಫೀಸ್ ಜತೆ ಹೋಲಿಸಿ ಕೀಳಾಗಿ ಮಾತನಾಡಬೇಡಿ. ಇದು ನಿಮ್ಮ ಬಾಸ್ ಕಿವಿಗೆ ಯಾರಿಂದಾದ್ರೂ ತಲುಪಿದ್ರೆ ನೀವು ಕೆಲಸ ಕಳೆದುಕೊಳ್ಳುವ ಸಂಭವವಿರುತ್ತದೆ

For Quick Alerts
ALLOW NOTIFICATIONS  
For Daily Alerts

  English summary
  Yoh have avoid discussing these things with co-worker. Such things are often reached out to your superior person and it can thus affect your career. you must not be having a bad intention when you talk about certain things but what if it backfires you.
  --Or--
  Select a Field of Study
  Select a Course
  Select UPSC Exam
  Select IBPS Exam
  Select Entrance Exam

  ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
  Kannada Careerindia

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more