ಕಾಲೇಜ್ ವಿದ್ಯಾರ್ಥಿಗಳಿಗೆ ಆನ್ಲೈನ್ ​​ಕಲಿಕೆ ಪ್ರಯೋಜನಗಳು

ಇಂಟರ್ನೆಟ್ ಬಂದ ನಂತರ ಎಲ್ಲವೂ ಆನ್‌ಲೈನ್ ಮಯ ಆಗಿದೆ. ಶಾಪಿಂಗ್‌ನಿಂದ ಹಿಡಿದು ಪ್ರತಿಯೊಂದು ಕೆಲಸವೂ ಆನ್‌ಲೈನ್ ಆಗಿದೆ. ಇದೀಗ ಶಿಕ್ಷಣ ಕ್ಷೇತ್ರಕ್ಕೂ ಆನ್‌ಲೈನ್ ಕಾಲಿಟ್ಟಿದೆ.

By Kavya

ಆನ್‌ಲೈನ್ ಶಿಕ್ಷಣ ಅಥವಾ ಆನ್‌ಲೈನ್ ಕಲಿಕೆಯು ಭಾರತೀಯ ಶಿಕ್ಷಣದ ಭವಿಷ್ಯವಾಗಿದೆ. ಕೆಲವೇ ಕೆಲವು ಸಮಯದಲ್ಲಿ ಆನ್‌ಲೈನ್ ಶಿಕ್ಷಣವು ಶಿಕ್ಷಣದ ಒಂದು ಭಾಗವಾಗಿಬಿಟ್ಟಿದೆ. ಹೆಚ್ಚಿನ ಸಂಖ್ಯೆಯ ಕಾಲೇಜು ವಿದ್ಯಾರ್ಥಿಗಳು ಈ ಆನ್‌ಲೈನ್ ಶಿಕ್ಷಣದತ್ತ ಒಲವು ತೋರಿಸುತ್ತಿದ್ದಾರೆ. ವಿಶ್ವವಿದ್ಯಾನಿಲಯಗಳು, ಕಾಲೇಜುಗಳು ತಮ್ಮ ಶೈಕ್ಷಣಿಕ ಪಠ್ಯಕ್ರಮದಲ್ಲಿ ಆನ್‌ಲೈನ್ ಶಿಕ್ಷಣವನ್ನು ಅಳವಡಿಸಿದೆ. ಯಾವ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಕಾಲೇಜುಗೆ ಹೋಗಲು ಅನಾನುಕೂಲವಾಗುತ್ತದೋ ಅಂತಹ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣ ಉಪಕಾರಿಯಾಗಿದೆ. ನೀವು ಆನ್‌ಲೈನ್ ಶಿಕ್ಷಣದ ಮೊರೆ ಹೋಗಬೇಕೋ ಬೇಡವೋ ಎನ್ನುವ ಕನ್‌ಫ್ಯೂಶನ್‌ನಲ್ಲಿದ್ದೀರಾ ಹಾಗಾದ್ರೆ ಇಲ್ಲಿದೆ ಕೆಲವು ಟಿಪ್ಸ್...

1. ಆಯ್ಕೆಗಳು

1. ಆಯ್ಕೆಗಳು

ಆನ್‌ಲೈನ್ ಶಿಕ್ಷಣದಲ್ಲಿ ನಿಮಗೆ ಸಾಕಷ್ಟು ಕೋರ್ಸ್‌ನ ಆಯ್ಕೆಗಳು ಸಿಗುತ್ತದೆ. ನಿಮಗಿಷ್ಟ ಬಂದದ್ದನ್ನು ಆಯ್ಕೆ ಮಾಡಬಹುದು. ಅದೇ ಕಾಲೇಜ್‌ನಲ್ಲಿ ಅಥವಾ ವಿಶ್ವವಿದ್ಯಾನಿಲಯದಲ್ಲಿ ಕಲಿಯುತ್ತೀರಾದರೆ ಕೆಲವೇ ಕೆಲವು ಕೋರ್ಸ್ಗಳು ಲಭ್ಯವಿರುತ್ತದೆ.

2. ಸ್ಥಳಕ್ಕೆ ಹೊಂದಿಕೊಳ್ಳುವಿಕೆ

2. ಸ್ಥಳಕ್ಕೆ ಹೊಂದಿಕೊಳ್ಳುವಿಕೆ

ಹಿಂದೆಲ್ಲಾ ಉನ್ನತ ವ್ಯಾಸಾಂಗಕ್ಕೆ ಮೆಟ್ರೋ ಸಿಟಿಗಳಿಗೆ ತೆರಳಬೇಕಿತ್ತು. ಬೇರೆ ಊರಿಗೆ ಹೋಗಬೇಕಿತ್ತು. ಆದರೆ ಈಗ ಆನ್‌ಲೈನ್ ಶಿಕ್ಷಣದಿಂದಾಗಿ ನೀವ ಇರುವ ಸ್ಥಳದಲ್ಲೇ ವಿದ್ಯಾಭ್ಯಾಸ ಮಾಡಬಹುದು.ಈಗ ಕೇವಲ ಒಂದು ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಇದ್ದರೆ ಸಾಕು. ಇಂಟರ್ನೆಟ್ ಮುಖಾಂತರ ನಿಮ್ಮ ಭೋಧಕರನ್ನು ಸಂಪರ್ಕಿಸಬಹುದು.

3. ಸಮಯದ ಮಿತಿ ಇಲ್ಲ
 

3. ಸಮಯದ ಮಿತಿ ಇಲ್ಲ

ಯಾವುದೇ ಕಾಲೇಜು ಹೋಗುವ ವಿದ್ಯಾರ್ಥಿಯನ್ನು ಕೇಳಿ ನೋಡಿ ಅವರ ಸಮಸ್ಯೆಯೆಂದರೆ ಸಮಯ. ಸರಿಯಾದ ಸಮಯಕ್ಕೆ ಕಾಲೇಜ್‌ಗೆ ಹೋಗಲು ಆಗೋದಿಲ್ಲ. ತಡವಾಗಿ ಹೋದರೆ ಕ್ಲಾಸ್ ಆಗಲೇ ಮುಗಿದಿರುತ್ತದೆ. ಆದರೆ ಆನ್‌ಲೈನ್ ಶಿಕ್ಷಣದಲ್ಲಿ ಈ ರೀತಿ ಇಲ್ಲ, ಯಾವುದೇ ಸಮಯದ ಮಿತಿ ಇರೋದಿಲ್ಲ. ನಿಮಗಿಷ್ಟ ಬಂದ ಸಮಯದಲ್ಲಿ ನೀವು ಫ್ರೀ ಇದ್ದಾಗ ಕಲಿಯಬಹುದು.

4. ಲಭ್ಯತೆ

4. ಲಭ್ಯತೆ

ಗ್ರಾಮೀಣ ಪ್ರದೇಶ ಮಕ್ಕಳು ವಿದ್ಯಾಭ್ಯಾಸದಿಂದ ಹಿಂದುಳಿದಿರಲು ಇನ್ನೊಂದು ಕಾರಣವೆಂದರೆ ಹಣಕಾಸಿನ ಕೊರತೆ, ಕೋರ್ಸ್ ಶುಲ್ಕವಲ್ಲದೆ, ಕಾಲೇಜಿನ ಪುಸ್ತಕ, ಇತರ ಫೀಸ್‌, ಮನೆಯಿಂದ ಕಾಲೇಜಿಗೆ ಹೋಗಲು ಬಸ್‌ ಟಿಕೇಟ್‌ಗೆ ಹಣ ನೀಡಬೇಕಾಗುತ್ತದೆ. ಆದರೆ ಆನ್‌ಲೈನ್‌ ಶಿಕ್ಷಣಕ್ಕೆ ಬೇಕಾಗಿರುವು ಕೇವಲ ಇಂಟರ್ನೆಟ್ ಕನೆಕ್ಷನ್ ಹೊಂದಿರುವ ಒಂದು ಲ್ಯಾಪ್‌ಟಾಪ್ .

5. ಕಂಫರ್ಟ್ ಆಗಿರುತ್ತದೆ

5. ಕಂಫರ್ಟ್ ಆಗಿರುತ್ತದೆ

ಹೊಸ ಕಾಲೇಜಿಗೆ ಸೇರಿಕೊಂಡಾಗ ನಿಮಗೆ ಒಂದು ರೀತಿಯ ಕಂಫರ್ಟ್‌ನೆಸ್ ಇರೋದಿಲ್ಲ. ನಿಮಗಿರುವ ಸಂದೇಹವನ್ನು ಪ್ರೋಫೆಸರ್ ಜೊತೆ ಕೇಳಿಕೊಳ್ಳಲೂ ಮುಜುಗರವಾಗುತ್ತದೆ. ಆದರೆ ಆನ್‌ಲೈನ್‌ನಲ್ಲಿ ಒಂದು ವಿಷ್ಯವನ್ನು ಅರ್ಥಮಾಡಿಕೊಳ್ಳಲು ನೀವು ಎಷ್ಟು ಸಮಯವನ್ನಾದರೂ ತೆಗೆದುಕೊಳ್ಳಬಹುದು. ಆನ್‌ಲೈನ್ ಟೆಸ್ಟ್‌ ತೆಗೆದುಕೊಳ್ಳುವುದೂ ಕೂಡಾ ಬಹಳ ಸುಲಭ.

6. ಪರಿಣಿತರ ಸಹಾಯ

6. ಪರಿಣಿತರ ಸಹಾಯ

ಕೆಲವು ಆನ್‌ಲೈನ್ ಶಿಕ್ಷಣದ ಏಜೆನ್ಸಿಗಳು ಇಂಡಸ್ಟ್ರಿಯಲಿಸ್ಟ್ ಹಾಗೂ ಪ್ರೋಫೆಸರ್ ಜೊತೆ ಕೈಗೂಡಿಸಿಕೊಂಡಿರುತ್ತಾರೆ. ಇವರು ಯಾವುದೇ ಸಮಸಯದಲ್ಲಾದರೂ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಸದಾ ಲಭ್ಯವಿರುತ್ತಾರೆ. ಅಷ್ಟೇ ಅಲ್ಲದೆ ಒಬ್ಬರ ಕಲಿಕಾ ಸಾಮರ್ಥ್ಯದ ಪ್ರಯೋಝನವನ್ನು ಪಡೆಯಲು ಸ್ನೇಹಿತರ ನೆಟ್‌ವರ್ಕ್‌ನ್ನು ಬೆಳೆಸಲು ಸಹಕರಿಸುತ್ತದೆ.

7. ವೈಯಕ್ತಿಕ ಕಲಿಕೆ

7. ವೈಯಕ್ತಿಕ ಕಲಿಕೆ

ಕಾಲೇಜು ವಿದ್ಯಾರ್ಥಿಗಳಿಗೆ ಸರಿಯಾದ ಕೋರ್ಸ್‌ನ್ನು ಆಯ್ಕೆ ಮಾಡಲು ಸಹಕಾರಿಯಾಗಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ವಿಡಿಯೋ ಕ್ಲಾಸ್ ಅಥವಾ ಪಠ್ಯಪುಸ್ತಕ ಕ್ಲಾಸ್‌ನ್ನು ಆಯ್ಕೆ ಮಾಡುವ ಅವಕಾಶವಿದೆ. ಆನ್ಲೈನ್ನಲ್ಲಿ ಲಭ್ಯವಿರುವ ಹೆಚ್ಚಿನ ಆನ್ಲೈನ್ ​​ಶೈಕ್ಷಣಿಕ ಕಾರ್ಯಕ್ರಮಗಳು ಅನೇಕ ಸಂಸ್ಥೆಗಳಿಂದ ಮಾನ್ಯತೆಯನ್ನು ಪಡೆದುಕೊಳ್ಳುತ್ತವೆ.

For Quick Alerts
ALLOW NOTIFICATIONS  
For Daily Alerts

English summary
large number of college students have opened up to the concept of online learning in order to enhance their skills and build a strong resume to succeed in the competitive job markets of today.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X