ಇತ್ತೀಚೆಗಿನ ಯುವಜನತೆಗೆ ಕೈ ತುಂಬಾ ಸಂಪಾದಿಸಲು ಯೂನಿಕ್ ಕೆರಿಯರ್ ಆಯ್ಕೆಗಳು!

By Nishmitha Bekal

ಎಲ್ಲರ ಜೀವನದಲ್ಲೂ ಈ ಪ್ರಶ್ನೆ ಬಂದೇ ಬಂದಿರುತ್ತದೆ. ಮುಂದೆ ನೀನು ಯಾವ ಕೆಲಸವನ್ನ ಆಯ್ಕೆ ಮಾಡಿಕೊಳ್ಳುತ್ತೀಯಾ ಎಂದು. ೧೫ ವರ್ಷದ ಮೊದಲು ಇದೇ ಪ್ರಶ್ನೆ ಕೇಳಿದಾಗ ಜನರು ಈ ಪ್ರಶ್ನೆಗೆ ಸಿಂಪಲ್ ಆಗಿ ಉತ್ತರ ನೀಡುತ್ತಿದ್ದರು. ಯಾಕೆಂದ್ರೆ ಆ ಟೈಂನಲ್ಲಿ ಕೆರಿಯರ್ ಆಪ್ಷನ್ ಕೂಡಾ ಅಷ್ಟೊಂದು ಇರಲಿಲ್ಲ. ಡಾಕ್ಟರ್, ಇಂಜಿನಿಯರ್, ಲಾಯರ್ ಬಿಟ್ರೆ ಹೆಚ್ಚಿನವರು ಸರ್ಕಾರಿ ನೌಕರಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದರು.

 

ಆದ್ರೆ ಇಂದಿನ ದಿನಗಳಲ್ಲಿ ಉದ್ಯೋಗವಕಾಶದಲ್ಲಿ ಹೆಚ್ಚಿನ ಬದಲಾವಣೆಯಾಗಿದೆ. ಟೆಕ್ನಾಲಾಜಿ ಅಭಿವೃದ್ಧಿಯಿಂದಾಗಿ ಅದೆಷ್ಟೋ ಉದ್ಯೋಗವಕಾಶಗಳು ತೆರೆದುಕೊಂಡಿದೆ. ಹೆಚ್ಚಿನ ವಿದ್ಯಾಭ್ಯಾಸದ ಅಗತ್ಯವಿಲ್ಲವಾದ್ರೂ ಕೂಡಾ ಕೆಲವೊಂದು ಕೆರಿಯರ್ ನಿಂದ ನೀವು ಹೆಚ್ಚಿನ ದುಡ್ಡು ಕೂಡಾ ಸಂಪಾದಿಸಬಹುದು. ಬನ್ನಿ ಯೂತ್ ಗಳಿಗೆ ಯಾವೆಲ್ಲಾ ಜಾಬ್ ಬೆಸ್ಟ್ ಎಂಬ ಮಾಹಿತಿ ಇಲ್ಲಿದೆ ಮುಂದಕ್ಕೆ ಓದಿ

ಮೊಬೈಲ್ ಅಪ್ಲಿಕೇಶನ್ ಡೆವಲಪರ್

ಇದೀಗ ಸ್ಮಾರ್ಟ್ ಫೋನ್‌ಗಳ ಕಾಲ, ವೆಬ್‌ಸೈಟ್‌ ಗಳ ಸ್ಥಾನವನ್ನ ಇದೀಗ ಮೊಬೈಲ್ ಫೋನ್‌ಗಳು ತಮ್ಮದಾಗಿಸಿಕೊಂಡಿವೆ. ಇತ್ತೀಚೆಗಿನ ದಿನಗಳಲ್ಲಿ ಮಾರ್ಕೆಟ್ ನಲ್ಲಿ ಮೊಬೈಲ್ ಅಪ್ಲಿಕೇಶನ್ಸ್ ಗೆ ಡಿಮ್ಯಾಂಡ್ ಹೆಚ್ಚಿರುವುದನ್ನ ನೀವು ನೋಡಬಹುದು.

More Read: ಗೃಹಿಣಿಯರು ಮನೆಯಲ್ಲಿ ಕುಳಿತು ಈ ಎಲ್ಲಾ ಕೆಲಸ ಮಾಡಿದ್ರೆ ಕೈ ತುಂಬಾ ಸಂಪಾದಿಸಬಹುದು

ಮನೋರಂಜನೆ ಹಾಗೂ ಮಾಹಿತಿ ಕಾರಣದಿಂದ ಮೊಬೈಲ್ ಅಪ್ಲಿಕೇಶನ್ ಗಳನ್ನ ಡೆವಲಪ್ ಮಾಡುವುದು ಮೊಬೈಲ್ ಅಪ್ಲಿಕೇಶನ್ ಡೆವಲಪರ್ ಕೆಲಸವಾಗಿದೆ. ಬೇಡಿಕೆಯ ಅನುಸಾರ ಈ ಕೆರಿಯರ್ ಇದೀಗ ಭಾರತದಲ್ಲಿ ಇರುವ ಟಾಪ್ ಕೆರಿಯರ್ ಗಳಲ್ಲಿ ಒಂದಾಗಿದೆ. 2020 ರಲ್ಲಿ ಮೊಬೈಲ್ ಆಪ್ ಡೆವಲಪರ್ಸ್ ಸಂಖ್ಯೆಯು ಶೇ32 ರಷ್ಟು ಹೆಚ್ಚಲಿದೆ ಎಂದು ಸರ್ವೇ ಪ್ರಕಾರ ತಿಳಿದುಬಂದಿದೆ.

ಇನ್ನು ಈ ಕೆರಿಯರ್ ನಿಮ್ಮದಾಗಿಸಿಕೊಳ್ಳಬೇಕಾದ್ರೆ ಗುಡ್ ಪ್ರೋಗ್ರಾಮಿಂಗ್ ಸ್ಕಿಲ್, ಮೊಬೈಲ್ ಆಪ್ ಡೆವಲಪ್ ಮೆಂಟ್ ಬಗ್ಗೆ ಮೂಲಭೂತ ಜ್ಞಾನ, ಅನಾಲಿಟಿಕಲ್ ಥಿಂಕಿಂಗ್, ಕಮ್ಯುನಿಕೇಟ್ ಐಡಿಯಾಗಳು, ಡಿಸೈನ್ಸ್ ಟ್ಯಾಲೆಂಟ್ ಮುಂತಾದ ಸ್ಕಿಲ್ ನಿಮ್ಮದಾಗಿರಬೇಕು.

ಡಾಟಾ ಸೈಂಟಿಸ್ಟ್

ಜಗತ್ತಿನ ಅಟ್ರಾಕ್ಟೀವ್ ಜಾಬ್ ಯಾವುದು ಎಂಬ ಪ್ರಶ್ನೆಗೆ ಇದೀಗ ಸರ್ವೇವೊಂದು ಉತ್ತರ ನೀಡಿದೆ. ಇತ್ತೀಚಿಗಿನ ದಿನಗಳಲ್ಲಿ ಭಾರತದ ಟೆಕ್ನಾಲಾಜಿ ಫೀಲ್ಡ್‌ನಲ್ಲಿ ಟಾಪ್ ರೇಟೆಡ್ ಕೆರಿಯರ್ ಲಿಸ್ಟ್ ನಲ್ಲಿ ಡಾಟಾ ಸೈಂಟಿಸ್ಟ್ ಜಾಬ್ ಟಾಪ್ ಸ್ಥಾನದಲ್ಲಿ ಇದೆ. ಇನ್ನು ಉತ್ತಮ ಡಾಟಾ ಸೈಂಟಿಸ್ಟ್ ನೀವಾಗಬೇಕಾದ್ರೆ ನಿಮಗೆ ಟೆಕ್ನಾಲಾಜಿ ಜ್ಞಾನ ಹೆಚ್ಚಿರಬೇಕು ಹಾಗಿದ್ರೆ ಮಾತ್ರ ನೀವು ಈ ಹುದ್ದೆಯಲ್ಲಿ ಟಾಪ್ ಸ್ಥಾನದಲ್ಲಿ ಇರಲು ಸಾಧ್ಯ.

ಪರಿಸರಶಾಸ್ತ್ರಜ್ಞ

ಭಾರತದ ಮತ್ತೊಂದು ವಿಶೇಷ ಹಾಗೂ ವಿಭಿನ್ನ ಕೆರಿಯರ್ ಅಂದ್ರೆ ಅದು ಪರಿಸರಶಾಸ್ತ್ರಜ್ಞ. ಗ್ಲೋಬಲ್ ವಾರ್ಮಿಂಗ್ ಇದೀಗ ಚರ್ಚೆಯ ಹಾಟೆಸ್ಟ್ ಟಾಪಿಕ್ ಆಗಿದ್ದು, ಗ್ರೀನರಿ ಸಮಸ್ಯೆ ಎರಡನೇ ಹಾಟ್ ಟಾಪಿಕ್ ಆಗಿದೆ.ಪರಿಸರದ ಬಗ್ಗೆ ಇದೀಗ ಕಾಳಜಿ ವಹಿಸುವ ಅಗತ್ಯವಿದೆ. ಹಾಗಾಗಿ ಪರಿಸರ ಶಾಸ್ತ್ರಜ್ಞರ ಬೇಡಿಕೆ ಇದೀಗ ಹೆಚ್ಚಿದ್ದು, ಮುಂದಿನ ಎರಡು ವರ್ಷದಲ್ಲಿ ಬೇಡಿಕೆ ಸಂಖ್ಯೆ ಶೇ11 ರಷ್ಟು ಹೆಚ್ಚಾಗಲಿದೆ.

More Read: ಟ್ರಾವೆಲ್ ಪ್ರಿಯರಿಗೆ ಯಾವುದು ಬೆಸ್ಟ್ ಜಾಬ್ ಗೊತ್ತಾ?

ಶೆಫ್

ಕಳೆದ ವರ್ಷದಿಂದ ಈ ಕುಕ್ಕಿಂಗ್ ಶೋ ಗಳು ಹೆಚ್ಚು ಪಾಪ್ಯುಲರ್ ಆಗಿವೆ ಹಾಗೂ ಈ ಶೋ ಗಳಿಗೆ ಬರೀ ಮಹಿಳೆಯರು ಮಾತ್ರವಲ್ಲದೇ ಪುರುಷರು ಕೂಡಾ ಅಭಿಮಾನಿಗಳೇ ಆಗಿದ್ದಾರೆ.

ಕುಕ್ಕಿಂಗ್ ಇದೀಗ ಅಟ್ರಾಕ್ಟೀವ್ ಕೆರಿಯರ್ ಆಗಿದ್ದು, ಮಾತ್ರವಲ್ಲದೆ ಇದು ಟ್ಯಾಲೆಂಟ್ ಶೆಫ್ ಗಳಿಗೆ ಹೆಸರಿನ ಜತೆ ಖ್ಯಾತಿಯೂ ತಂದುಕೊಟ್ಟಿದೆ. ಇನ್ನು ಈ ಕೆರಿಯರ್ ನಿಮ್ಮದಾಗಿಸಿಕೊಳ್ಳಬೇಕಾದ್ರೆ ನಿಮಗೆ 2 ಪ್ರಮುಖ ಅರ್ಹತೆ ಇರಲೇಬೇಕು ಒಂದು ಆಹಾರ ಪ್ರೀತಿ ಮತ್ತು ಪ್ಯಾಶನ್ ಕೂಡಾ ಇರಬೇಕು

ನೀವು ಫುಡ್ಡಿ ಯಾಗಿದ್ದು, ನಿಮಗೆ ಹೊಸ ಹೊಸ ಅಡುಗೆ ಮಾಡುವ ಆಸಕ್ತಿ ಇದ್ದರೆ, ಹಾಗೂ ರುಚಿಕರವಾದ ಅಡುಗೆ ಮಾಡುವುದಲ್ಲದೇ ಪ್ರೆಸಂಟೇಶನ್ ಕಲೆ ಕಲಿತಿದ್ದರೆ ಜತೆಗೆ ಕ್ರಿಯೇಟೀವ್ ಐಡಿಯಾಗಳು ನಿಮ್ಮಲ್ಲಿ ಇದ್ದರೆ ನೀವು ಈ ಫೀಲ್ಡ್ ಗೆ ಎಂಟ್ರಿಯಾಗಿ ಕೈ ತುಂಬಾ ಸಂಪಾದನೆ ಮಾಡಬಹುದು.

More Read: ಕೆಲಸದ ಮಧ್ಯೆ ಬಿಡುವಿನ ಸಮಯವನ್ನ ಮತ್ತಷ್ಟು ಯೂಸ್‌ಫುಲ್ ಆಗಿ ಹೇಗೆ ಕಳೆಯಲು ಇಲ್ಲಿದೆ ಟಿಪ್ಸ್

 

 

For Quick Alerts
ALLOW NOTIFICATIONS  
For Daily Alerts

  English summary
  Now a days career opportunities have totally changed. Fast progress in technology and ease of access to the general public of the Internet, a whole new world of potential careers has opened, many of which do not require formal qualifications, but still you can earn a lot, all you need is a little specialization in the field of New media.
  --Or--
  Select a Field of Study
  Select a Course
  Select UPSC Exam
  Select IBPS Exam
  Select Entrance Exam

  ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
  Kannada Careerindia

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more