ಕಾಲೇಜು ಮೆಟ್ಟಿಲು ಹತ್ತಲಿರುವ ಬಣ್ಣದ ಚಿಟ್ಟೆಗಳಿಗೆ ಉಪಯುಕ್ತ ಮಾಹಿತಿ

ಹಾಗಾಗಿ ಸರಿಯಾದ ಕಾಲೇಜಿನ ಆಯ್ಕೆ ಮಾಡುವುದು ಹೇಗೆ ಎಂದು ನಾವು ನಿಮಗೆ ಟಿಪ್ಸ್ ನೀಡುತ್ತೇವೆ ಮುಂದಕ್ಕೆ ಓದಿ.

10ನೇ ತರಗತಿ ಮುಗಿಯಿತು ಎಂದ ಕೂಡಲೇ ಕಾಲೇಜು ಮೆಟ್ಟಿಲು ಹತ್ತುವ ಕನಸು ಮೂಡುತ್ತದೆ. ಶಾಲೆಯ ಜೀವನ ಹಾಗೂ ಕಾಲೇಜು ಜೀವನ ಕಂಪ್ಲೀಟ್ ಡಿಫರೆಂಟ್. ಹಾಗಾಗಿ ಇದೇ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಕಾಲೇಜು ಸೇರಲು ಉತ್ಸುಕದಿಂದ ಕಾಯುತ್ತಿರುತ್ತಾರೆ.

ಕಾಲೇಜು ಮೆಟ್ಟಿಲು ಹತ್ತಲಿರುವ ಬಣ್ಣದ ಚಿಟ್ಟೆಗಳಿಗೆ ಉಪಯುಕ್ತ ಮಾಹಿತಿ

ಆದ್ರೆ ಒಂದು ವಿಷಯ ತಿಳಿದುಕೊಳ್ಳಿ, ಕಾಲೇಜಿಗೆ ಹೋಗುವುದು ಬರೀ ಮೋಜು ಮಸ್ತಿ ಮಾಡಲು ಮಾತ್ರವಲ್ಲ, ಬದಲಿಗೆ ನಮ್ಮ ಕೆರಿಯರ್ ಲೈಫ್ ರೂಪಿಸಿಕೊಳ್ಳಲು ಕೂಡಾ. ನಿಮ್ಮ ಕೆರಿಯರ್ ಲೈಫ್ ನೀವು ಆಯ್ಕೆ ಮಾಡುವ ಕಾಲೇಜು ಮೇಲಿರುತ್ತದೆ. ಹಾಗಾಗಿ ನೀವು ಸರಿಯಾಗಿ ಆಯ್ಕೆ ಮಾಡಿ ಕಾಲೇಜು ಸೇರ ಬೇಕಾಗುತ್ತದೆ.

ಇದೀಗ ನೀವು ಕಾಲೇಜು ಸೇರುವ ಹಂತದಲ್ಲಿದ್ದರೆ, ಕಾಲೇಜು ಆಯ್ಕೆ ಮಾಡುವುದು ತುಂಬಾ ಕಷ್ಟದ ಕೆಲಸ ಎಂಬುವುದು ನಮಗೂ ಕೂಡಾ ತಿಳಿದಿದೆ. ಈಗಂತೂ ಹಣದ ಆಸೆಗಾಗಿ ಅದೆಷ್ಟೋ ಶಿಕ್ಷಣ ಸಂಸ್ಥೆಗಳು ನಾಯಿಕೊಡೆಗಳಂತೆ ತಲೆ ಎತ್ತಿ ನಿಂತಿವೆ. ಹಾಗಾಗಿ ಸರಿಯಾದ ಕಾಲೇಜಿನ ಆಯ್ಕೆ ಮಾಡುವುದು ಹೇಗೆ ಎಂದು ನಾವು ನಿಮಗೆ ಟಿಪ್ಸ್ ನೀಡುತ್ತೇವೆ ಮುಂದಕ್ಕೆ ಓದಿ.

ಕಾಲೇಜಿನ ಮಾನ್ಯತೆ ಚೆಕ್ ಮಾಡಿ:

ನೀವು ಯಾವುದೇ ಕಾಲೇಜು ಇಲ್ಲ ಶಿಕ್ಷಣ ಸಂಸ್ಥೆ ಸೇರ್ಪಡೆಯಾಗುವ ಮುನ್ನ ಆ ಕಾಲೇಜು ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಪಡೆದಿದೆಯೇ ಇಲ್ಲವೆ ಎಂದು ಚೆಕ್ ಮಾಡಿಕೊಳ್ಳಿ. ಕೆಲವೊಂದು ಶಿಕ್ಷಣ ಸಂಸ್ಥೆಗಳು ಬರೀ ಲಾಭದ ಉದ್ದೇಶದಿಂದ ಕಾರ್ಯ ನಿರ್ವಹಿಸುತ್ತದೆ. ಅಲ್ಲಿ ಯಾವುದೇ ಪ್ಲೇಸ್ ಮೆಂಟ್ ಇರದೇ ಅಷ್ಟೇ ಅಲ್ಲ ಯಾವುದೇ ಸೌಲಭ್ಯ ಕೂಡಾ ಇರುವುದಿಲ್ಲ. ಹಾಗಾಗಿ ಮಾನ್ಯತೆ ಇಲ್ಲದ ಕಾಲೇಜಿನಲ್ಲಿ ನೀವು ಶಿಕ್ಷಣಾಭ್ಯಸ ಮುಂದುವರೆಸುವುದು ಕಂಪ್ಲೀಟ್ ವೇಸ್ಟ್

ಕೋರ್ಸ್ ನ ರೆಪ್ಯುಟೇಶನ್ ಏನು:

ಕಾಲೇಜು ಸೆಲೆಕ್ಟ್ ಮಾಡುವ ವೇಳೆ , ನೀವು ಆಯ್ಕೆ ಮಾಡಿಕೊಂಡಿರುವ ಕೋರ್ಸ್ ನ ರೆಪ್ಯುಟೇಶನ್ ಬಗ್ಗೆಯೂ ತಿಳಿದುಕೊಳ್ಳುವುದು ಉತ್ತಮ. ನಿಮ್ಮ ಕೋರ್ಸ್ ನ ಮಾರ್ಕೆಟ್ ವ್ಯಾಲ್ಯೂ ಹೇಗಿದೆ, ಮುಂದೆ ಕೆರಿಯರ್ ಲೈಫ್ ನಲ್ಲಿ ನೀವು ಇದೀಗ ಆಯ್ಕೆ ಮಾಡಿಕೊಂಡಿರುವಂತಹ ಕೋರ್ಸ್ ಸಹಾಯಕ್ಕೆ ಬರುವುದೇ ಅಥವಾ ಇಲ್ಲವೇ, ಎಂಬುವುದು ತಿಳಿದುಕೊಳ್ಳಿ. ಅಷ್ಟೇ ಅಲ್ಲ ಇತರ ಎಕ್ಸ್ ಪರ್ಟ್ ಗಳು ಇಲ್ಲವೇ ಹಳೆಯ ವಿದ್ಯಾರ್ಥಿಗಳ ಬಳಿ ಆ ಕೋರ್ಸ್ ನ ಮಹತ್ವದ ಬಗ್ಗೆ ತಿಳಿದುಕೊಂಡು, ಮುಂದಕ್ಕೆ ಹೆಜ್ಜೆ ಇಡುವುದು ಉತ್ತಮ.

ಫ್ಯಾಕಲ್ಟಿ ಎಜ್ಯುಕೇಶನ್:

ಬರೀ ಮಜಾ ಮಾಡಲು ಮಾತ್ರ ಕಾಲೇಜಿಗೆ ಹೋಗುವುದಲ್ಲ, ಬದಲಿಗೆ ಉತ್ತಮ ಶಿಕ್ಷಣ ಕೂಡಾ ಪಡೆಯಲು ಎಂಬುವುದು ತಿಳಿದುಕೊಳ್ಳಿ. ಇನ್ನು ನಿಮಗೆ ಶಿಕ್ಷಣ ನೀಡಲು ಆ ಕಾಲೇಜಿನ ಫ್ಯಾಕಲ್ಟಿ ಕೂಡಾ ಉತ್ತಮ ಜ್ಞಾನವುಳ್ಳವರಾಗಿರಬೇಕು. ಹಾಗಾಗಿ ಕಾಲೇಜು ಆಯ್ಕೆ ಮಾಡುವ ಸಮಯದಲ್ಲಿ ಈ ಮಾತನ್ನು ಕೂಡಾ ಗಮನದಲ್ಲಿಟ್ಟು ಕೊಳ್ಳಿ. ಕಾಲೇಜಿನ ಶಿಕ್ಷಕರ ಇಮೇಜ್ ಬಗ್ಗೆಯೂ ತಿಳಿದುಕೊಳ್ಳುವುದು ಉತ್ತಮ. ಇದಕ್ಕಾಗಿ ಆ ಕಾಲೇಜಿನಲ್ಲಿ ಮೊದಲೇ ಕಲಯುತ್ತಿರುವಂತಹ ವಿದ್ಯಾರ್ಥಿಗಳನ್ನ ಭೇಟಿಯಾಗಿ ಅಲ್ಲಿನ ಶಿಕ್ಷಕ ವೃಂದದ ಬಗ್ಗೆ ತಿಳಿದುಕೊಳ್ಳಬಹುದು.

ಉದ್ಯೋಗ ಸಿಗುತ್ತದೆಯೇ:

ಪ್ರತಿಯೊಂದು ಶಿಕ್ಷಣ ಸಂಸ್ಥೆಯು ಅಡ್ಮಿಶನ್ ವೇಳೆ ನಿಮಗೆ ಉದ್ಯೋಗದ ಗ್ಯಾರಂಟಿ ನೀಡುತ್ತಾರೆ. ಆದ್ರೆ ಅಸಲಿಗೆ ಅವರು ನಿಮಗೆ ಸುಳ್ಳು ಭರವಸೆ ನೀಡಿರುವುದು. ಒಂದು ವೇಳೆ ನೀವು ಪ್ರೊಫೆಶನಲ್ ಕೋರ್ಸ್ ಆಯ್ಕೆ ಮಾಡಿಕೊಳ್ಳುವುದಾದ್ರೆ, ನೀವು ಕಾಲೇಜು ನಿಮಗೆ ಉದ್ಯೋಗ ಕೂಡಾ ನೀಡುತ್ತದೆಯೇ ಎಂಬುವುದು ಪಕ್ಕಾ ಮಾಡಿಕೊಳ್ಳಿ. ಇನ್ನು ಆ ಕಾಲೇಜು ಈ ಮೊದಲು ಎಷ್ಟು ಮಂದಿಗೆ ಉದ್ಯೋಗ ನೀಡುವಲ್ಲಿ ಸಫಲತೆ ಹೊಂದಿದೆ ಎಂಬುವುದು ಕೂಡಾ ಚೆಕ್ ಮಾಡಿ ಕೊಳ್ಳಬಹುದು. ಇನ್ನೂ ಕ್ಯಾಂಪಸ್ ಸೆಲೆಕ್ಷನ್ ಬಗ್ಗೆನೂ ತಿಳಿದುಕೊಳ್ಳಿ. ಇದರ ಬಗ್ಗೆ ನಿಮಗೆ ಅಲ್ಲಿನ ಶಿಕ್ಷಕರು ಮಾಹಿತಿ ನೀಡಬಲ್ಲರು

ಲೊಕೇಶನ್ ಚೆಕ್ ಮಾಡಿಕೊಳ್ಳಿ:

ಕಾಲೇಜು ಆಯ್ಕೆ ವೇಳೆ ಲೊಕೇಶನ್ ಕೂಡಾ ಚೆಕ್ ಮಾಡಿಕೊಳ್ಳುವುದು ತುಂಬಾ ಅಗತ್ಯ. ಕಾಲೇಜು ಮನೆಗೆ ತುಂಬಾ ಸಮೀಪವಿದ್ರೆ ತುಂಬಾ ಒಳ್ಳೆಯದು, ನೀವು ಆದಷ್ಟು ಬೇಗ ಮನೆಗೆ ತಲುಪಿ ಸ್ಟಡಿ ಮಾಡಲು ಕೂಡಾ ನಿಮಗೆ ಸಮಯ ಸಿಗುವುದು. ಅಥವಾ ಮನೆಯಿಂದ ದೂರವಿರುವ ಕಾಲೇಜಿನಲ್ಲಿ ಶಿಕ್ಷಣಭ್ಯಾಸ ಮಾಡಲು ನಿರ್ಧರಿಸಿದರೆ, ಅಲ್ಲೇ ಪಕ್ಕದಲ್ಲಿ ರೂಂ ಇಲ್ಲ ಕಾಲೇಜು ಹಾಸ್ಟೆಲ್ ಗಳಲ್ಲಿ ನೆಲೆಸುವುದು ಬೆಸ್ಟ್

ಕಾಲೇಜು ಆಯ್ಕೆಯ ಟೈಂನಲ್ಲಿ ಈ ಟಿಪ್ಸ್ ಫಾಲೋ ಮಾಡಿದ್ರೆ ಉತ್ತಮ. ನೀವು ಸರಿಯಾದ ಕಾಲೇಜು ಆಯ್ಕೆ ಮಾಡಿಕೊಂಡ್ರೆ ದೇಶದ ಉನ್ನತ ಸ್ಥಾನ ಅಲಂಕರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ, ಅದೇ ರೀತಿ ತಪ್ಪು ಕಾಲೇಜು ಆಯ್ಕೆ ಮಾಡಿಕೊಂಡರೆ ಮುಂದೆ ಪಶ್ಚತ್ತಾಪ ಪಡಬೇಕಾಗುತ್ತದೆ.

For Quick Alerts
ALLOW NOTIFICATIONS  
For Daily Alerts

English summary
Although finding a college can be intimidating, being a savvy consumer will ease your stress. Students and parents need to consider the individual educational record, abilities and personal interests to help pick out a college. the wrong decision at this step in the career planning process will waste.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X