10 ನೇ ತರಗತಿ ನಂತರ ಉತ್ತಮ ಡಿಪ್ಲೊಮಾ ಕೋರ್ಸ್‌ಗಳು ಯಾವುವು? ನಿಮಗೆ ಗೊತ್ತಾ ?

ಎಸ್‌ಎಸ್‌ಎಲ್‌ಸಿ ಮುಂದೇನು ಮಾಡುವುದು ಎನ್ನುವ ಕುರಿತು ನಾವೀಗಾಗಲೇ ಹಲವಾರು ಮಾಹಿತಿಗಳನ್ನು ನಿಮ್ಮ ಮುಂದಿಟ್ಟಿದ್ದೇವೆ. ಹಾಗೆಯೇ ಎಸ್‌ಎಸ್‌ಎಲ್‌ಸಿ ನಂತರ ಡಿಪ್ಲೋಮ ಕೋರ್ಸ್‌ಗಳನ್ನು ಮಾಡುವುದು ಒಳಿತು ಇದರಿಂದ ಬಹು ಬೇಗ ಉದ್ಯೋಗ ಪಡೆಯಬಹುದು ಅಂತ ಯೋಚಿಸುತ್ತಿರುವ ವಿದ್ಯಾರ್ಥಿಗಳಿಗಾಗಿ ಯಾವೆಲ್ಲಾ ಡಿಪ್ಲೋಮ ಕೋರ್ಸ್‌ಗಳು ಬೆಸ್ಟ್‌ ಅನ್ನುವ ಮಾಹಿತಿಯನ್ನು ನಾವಿಲ್ಲಿ ನೀಡಲಿದ್ದೇವೆ.

ಬೆಸ್ಟ್ ಡಿಪ್ಲೋಮ ಕೋರ್ಸ್‌ಗಳ ಮಾಹಿತಿ

 

1. ಡಿಪ್ಲೋಮ ಇನ್ ಇಂಜಿನಿಯರಿಂಗ್:

ಡಿಪ್ಲೋಮ ಇನ್ ಇಂಜಿನಿಯರಿಂಗ್ 3 ವರ್ಷ ಅವಧಿಯ ಕೋರ್ಸ್‌ ಇದಾಗಿದೆ ಮತ್ತು ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ಕ್ಷೇತ್ರದ ಬೇಸಿಕ್ ಜ್ಞಾನವನ್ನು ನೀಡುವ ಕೋರ್ಸ್‌ ಕೂಡ. ಇಂಜಿನಿಯರಿಂಗ್‌ನಲ್ಲಿನ ಡಿಪ್ಲೋಮ ಕೋರ್ಸ್‌ಗಳು ವಿದ್ಯಾರ್ಥಿಗಳಿಗೆ ವಿಷಯದ ಬಗೆಗಿನ ಪ್ರಾಕ್ಟಿಕಲ್ ಮಾಹಿತಿಯನ್ನು ಒದಗಿಸುತ್ತವೆ. ಇಂಜಿನಿಯರ್ ಆಗಬೇಕೆಂದು ಹಂಬಲವುಳ್ಳ ಅಭ್ಯರ್ಥಿಗಳಿಗೆ ಈ ಕೋರ್ಸ್‌ ಒಂದು ಭದ್ರ ಬುನಾದಿ ಎಂದೇ ಹೇಳಬಹುದು.ಈ ಡಿಪ್ಲೋಮ ಕೋರ್ಸ್ ಮಾಡಿ ನಂತರ ಇಂಜಿನಿಯರಿಂಗ್ ಅಧ್ಯಯನ ಕೈಗೊಂಡಲ್ಲಿ ಬಹಳ ಸುಲಭವಾಗುತ್ತದೆ ಅಥವಾ ಡಿಪ್ಲೋಮ ಮುಗಿದ ನಂತರವೂ ಅಭ್ಯರ್ಥಿಗಳು ಬಹುಬೇಗ ಕೆಲಸವನ್ನು ಪಡೆಯಬಹುದು. ಇಂಜಿನಿಯರಿಂಗ್ ಡಿಪ್ಲೋಮದಲ್ಲಿ ಯಾವೆಲ್ಲಾ ಬ್ರಾಂಚ್‌ಗಳನ್ನು ನೀವು ಮಾಡಬಹುದು ಎನ್ನುವುದನ್ನು ಇಲ್ಲಿ ನೀಡಲಾಗಿದೆ.

1. ಆಟೋಮೊಬೈಲ್ ಇಂಜಿನಿಯರಿಂಗ್ (ಎಇ)

2. ಸಿವಿಲ್ ಇಂಜಿನಿಯರಿಂಗ್ (ಸಿಇ)

3. ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ (ಸಿಎಸ್‌ಇ)

4. ಇಲೆಕ್ಟ್ರಿಕಲ್ ಇಂಜಿನಿಯರಿಂಗ್ (ಇಇ)

5. ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ (ಇಸಿಇ)

6. ಮೆಕ್ಯಾನಿಕಲ್ ಇಂಜಿನಿಯರಿಂಗ್ (ಎಂಇ)

2. ಡಿಪ್ಲೋಮ ಇನ್ ಮೆಡಿಕಲ್ ಲ್ಯಾಬ್ ಟೆಕ್ನಾಲಜಿ:

ಡಿಪ್ಲೋಮ ಇನ್ ಮೆಡಿಕಲ್ ಟೆಕ್ನಾಲಜಿಯಲ್ಲಿ ವಿದ್ಯಾರ್ಥಿಗಳಿಗೆ ಡಯಾಗ್ನೋಸಿಂಗ್ ಮಾಡೋದ್ಹೇಗೆ? ಮತ್ತು ರೋಗಿಗಳಲ್ಲಿ

ಕಾಣಿಸಿಕೊಳ್ಳುವ ಅನಾರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವುದು ಹೇಗೆ ಎನ್ನುವುದನ್ನು ಕ್ಲಿನಿಕಲ್ ಲ್ಯಾಬೋರೇಟರಿ ಪರೀಕ್ಷೆಯ ಮೂಲಕ ಕಂಡುಕೊಳ್ಳುವ ತರಬೇತಿಯನ್ನು ಪಡೆಯುತ್ತಾರೆ. ಇಂದಿನ ದಿನಗಳಲ್ಲಿ ಮಾನವ ದೇಹದ X-ray , ಸಿಟಿ -ಸ್ಕ್ಯಾನ್ ,ಸೋನೋಗ್ರಫಿ ಇತ್ಯಾದಿ ಪರೀಕ್ಷೆಗಳನ್ನು ಮಾಡಲು ಬಲ್ಲ ಮತ್ತು ಕೌಶಲ್ಯಯುತ ಪ್ರೊಫೆಷನಲ್ಸ್‌ಗಳಿಗೆ ಭಾರೀ ಬೇಡಿಕೆ ಇದೆ. ಹಾಗಾಗಿ ಈ ಕ್ಷೇತ್ರಕ್ಕೆ ಬರಲು ಸಿದ್ಧರಿರುವ ಅಭ್ಯರ್ಥಿಗಳು ಡಿಪ್ಲೋಮ ಇನ್ ಮೆಡಿಕಲ್ ಲ್ಯಾಬ್ ಟೆಕ್ನಾಲಜಿ (ಡಿಎಂಎಲ್‌ಟಿ) ಕೋರ್ಸ್‌ ಅನ್ನು ಮಾನ್ಯತೆ ಪಡೆದ ಸಂಸ್ಥೆಯಿಂದ ಮಾಡಿದರೆ ಸಾಕು ಉತ್ತಮ ಉದ್ಯೋಗಗಳನ್ನು ಪಡೆಯಬಹುದು.

 

3. ಡಿಪ್ಲೋಮ ಇನ್ ಆರ್ಕಿಟೆಕ್ಚರ್ :

ಆರ್ಕಿಟೆಕ್ಚರ್‌ನಲ್ಲಿ ನಿಮ್ಮ ಕೆರಿಯರ್ ಅನ್ನು ಪ್ರಾರಂಭಿಸೋದಾದ್ರೆ ಡಿಪ್ಲೋಮ ಇನ್ ಆರ್ಕಿಟೆಕ್ಚರಲ್ ಅಸಿಸ್ಟೆಂಟ್‌ಶಿಪ್ ಕೋರ್ಸ್‌ ಅನ್ನು ಮಾಡಬಹುದು. ಈ ಕೋರ್ಸ್‌ ಅಲ್ಲಿ ಆರ್ಕಿಟೆಕ್ಚರ್‌ನಲ್ಲಿ ಬೇಕಾಗುವ ಪ್ರಾಕ್ಟಿಕಲ್ ಸ್ಕಿಲ್ಸ್‌ಗಳ ಬಗೆಗೆ ಅಧ್ಯಯನ ಮಾಡುತ್ತೀರಿ.ಅಭ್ಯರ್ಥಿಗಳು ಡಿಪ್ಲೋಮ ನಂತರ ಬಿ.ಆರ್ಕ್‌ ಮತ್ತು ಎಂ.ಆರ್ಕ್‌ ಮಾಡಬಹುದು ಅಥವಾ ಬ್ಯುಲ್ಡಿಂಗ್ ಡಿಸೈನ್, ಆರ್ಕಿಟೆಕ್ಚರಲ್ ಅಸಿಸ್ಟೆಂಟ್, ಆನ್‌-ಸೈಟ್ ಜಾಬ್ಸ್ ಮುಂತಾದವುಗಳಲ್ಲಿ ಉದ್ಯೋಗವನ್ನು ಪ್ರಾರಂಭ ಮಾಡಬಹುದು.

4. ಡಿಪ್ಲೋಮ ಇನ್ ಹೋಟೆಲ್ ಮ್ಯಾನೇಜ್ಮೆಂಟ್:

ತಿಂಡಿ ತಿನಿಸುಗಳ ಬಗೆಗೆ ತುಂಬಾನೆ ಆಸಕ್ತಿ ಇರುವವರು ಹಾಗೂ ಹೋಟೆಲ್ ಮ್ಯಾನೇಜ್ಮೆಂಟ್ ನಲ್ಲಿ ತೊಡಗಿಕೊಳ್ಳಬೇಕೆಂದಿರುವವರು ಡಿಪ್ಲೋಮ ಇನ್ ಬೇಕರಿ ಮತ್ತು ಕನ್ಫೆಕ್ಷನರಿ ಅಥವಾ ಡಿಪ್ಲೋಮ ಇನ್ ಫುಡ್ ಪ್ರೊಡಕ್ಷನ್‌ ಕೋರ್ಸ್‌ ಅನ್ನು ಮಾಡಬಹುದು.

ಡಿಪ್ಲೋಮ ಇನ್ ಬೇಕರಿ ಮತ್ತು ಕನ್ಫೆಕ್ಷನರಿ: ಬೇಕರಿ ಮತ್ತು ಕನ್ಫೆಕ್ಷನರಿ ಯಲ್ಲಿ ಮಾಡಬಹುದಾದ ಈ ಡಿಪ್ಲೋಮ ಕೋರ್ಸ್‌ 1 ವರ್ಷ ಅಧ್ಯಯನವನ್ನು ಒಳಗೊಂಡಿರುತ್ತದೆ. ಇಲ್ಲಿ ಅಭ್ಯರ್ಥಿಗಳು ಬೇಸಿಕ್ ಮತ್ತು ಅಡ್ವಾನ್ಸ್ ಬೇಕಿಂಗ್ ಜೊತೆಗೆ ಫುಡ್ ಮತ್ತು ನ್ಯೂಟ್ರಿಶನ್ ಬಗೆಗೆ ತಿಳಿದುಕೊಳ್ಳುತ್ತಾರೆ.

ಡಿಪ್ಲೋಮ ಇನ್ ಫುಡ್ ಪ್ರೊಡಕ್ಷನ್: ಒಂದು ವರ್ಷದ ಅಧ್ಯಯನವನ್ನು ಒಳಗೊಂಡ ಕೋರ್ಸ್‌ ಇದಾಗಿದ್ದು ಇಲ್ಲಿ ವಿದ್ಯಾರ್ಥಿಗಳು ಅಡುಗೆಯ ಕಲೆಯ ಬಗೆಗೆ ಹೆಚ್ಚು ತಿಳಿಯುತ್ತಾರೆ. ಅಷ್ಟೇ ಅಲ್ಲದೇ ಬೇಸಿಕ್ ಫುಡ್ ಪ್ರೊಡಕ್ಷನ್ ಲ್ಯಾಬೋರೇಟರಿ ಮತ್ತು ಇಂಡಿಯನ್ ಕುಕಿಂಗ್‌ಗಳನ್ನೂ ಕಲಿಯುತ್ತಾರೆ.

5. ಡಿಪ್ಲೋಮ ಇನ್ ಫ್ಯಾಷನ್ ಡಿಸೈನ್

ಫ್ಯಾಷನ್ ಡಿಸೈನ್‌ ನಲ್ಲಿನ ಡಿಪ್ಲೋಮ ಕೋರ್ಸ್‌ ಇದಾಗಿದ್ದು 3 ವರ್ಷದ ಅಧ್ಯಯನವನ್ನು ಒಳಗೊಂಡಿರುತ್ತದೆ. ವಿದ್ಯಾರ್ಥಿಗಳನ್ನು ಫ್ಯಾಷನ್ ಡಿಸೈನ್ ಲೋಕಕ್ಕೆ ಕರೆತರಲು ಈ ಕೋರ್ಸ್‌ ಸಹಾಯ ಮಾಡುತ್ತದೆ. ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಿಂದಲೂ ಫ್ಯಾಷನ್ ಬಗೆಗೆ ತಿಳಿಸಿಕೊಡಲಾಗುವುದು. ವಿದ್ಯಾರ್ಥಿಗಳು ಇಲ್ಲಿ ಪ್ರಾಯೋಗಿಕ ಅಧ್ಯಯನವನ್ನು ಹೆಚ್ಚಾಗಿ ಮಾಡುವುದರ ಜೊತೆಗೆ ಉತ್ತಮ ಫಲಿತಾಂಶದೊಂದಿಗೆ ಕೋರ್ಸ್‌ ಮುಗಿಸಿ ಉದ್ಯೋಗವನ್ನು ಪಡೆಯಬಹುದು.

6. ಡಿಪ್ಲೋಮ ಇನ್ ಬ್ಯುಸಿನೆಸ್

ಬ್ಯುಸಿನೆಸ್‌ ಅಲ್ಲಿ ಏನಾದರು ಮಾಡಬೇಕು, ಬ್ಯುಸಿನೆಸ್‌ನಲ್ಲೇ ಜೀವನ ನಡೆಸುತ್ತೇನೆ ಎನ್ನುವವರು ಮೂರು ವರ್ಷದ ಅಧ್ಯಯನವನ್ನು ಒಳಗೊಂಡ ಡಿಪ್ಲೋಮ ಇನ್ ಬ್ಯುಸಿನೆಸ್‌ ಕೋರ್ಸ್‌ ಅನ್ನು ಮಾಡಬಹುದು. ಈ ಕೋರ್ಸ್‌ನಲ್ಲಿ ವಿದ್ಯಾರ್ಥಿಗಳು ಬೇಸಿಕ್ ಕಲಿಕೆಗಳಾದ ಮ್ಯಾನೇಜ್ಮೆಂಟ್ ಸ್ಕಿಲ್ಸ್ ಗಳನ್ನು ಕಲಿಯುತ್ತಾರೆ ಹಾಗೆಯೇ ಪ್ರಮುಖವಾಗಿ ವಿದ್ಯಾರ್ಥಿಗಳು ಬ್ಯುಸಿನೆಸ್ ಎಥಿಕ್ಸ್ , ಹ್ಯೂಮನ್ ರಿಸೋರ್ಸ್‌ ಮ್ಯಾನೇಜ್ಮೆಂಟ್, ಫನ್ಷನಲ್ ಮ್ಯಾನೇಜ್ಮೆಂಟ್, ಇ-ಕಾಮರ್ಸ್ ,ಎಕನಾಮಿ ಮತ್ತು ಎಂಟ್ರ್ಯುಪ್ರಿನರ್‌ಶಿಪ್ ಬಗೆಗೆ ಅಧ್ಯಯನ ನಡೆಸುತ್ತಾರೆ. ಬ್ಯುಸಿನೆಸ್‌ ನಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಈ ಕೋರ್ಸ್‌ ಅನ್ನು ಮಾಡಿ ಉದ್ಯೋಗವನ್ನು ಪಡೆಯಬಹುದು.

For Quick Alerts
ALLOW NOTIFICATIONS  
For Daily Alerts

English summary
Diploma courses after 10th are becoming increasingly popular because of their practical nature and short duration. Take a look
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X