ಮನೆಯಲ್ಲೇ ಕುಳಿತು ಮಾಡಿ ಈ ಕೆಲಸ... ತಿಂಗಳ ಕೊನೆಯಲ್ಲಿ ಕೈ ತುಂಬಾ ಸಂಬಳ

ಇದೀಗ ಮನೆಯಿಂದ ವರ್ಕ್ ಮಾಡುವ ಹೊಸ ಟ್ರೆಂಡ್ ಪ್ರಾರಂಭವಾಗಿದೆ. ಹೀಗೆ ಮಾಡುವುದರಿಂದ ಲಾಭಗಳ ಜತೆ ನಷ್ಟವೂ ಇದೆ. ಬೆಳಗ್ಗೆ ಈ ಟ್ರಾಫಿಕ್ ಜಂಜಾಟದಲ್ಲಿ ಸಿಲುಕಿ ಆಪೀಸ್ ಹೋಗಿ ಕೆಲಸ ಮುಗಿಸಿ ಮತ್ತೆ ಸಂಜೆ ಅದೇ ಟ್ರಾಫಿಕ್ ಜಂಜಾಟ

By Kavya

ಇದೀಗ ಮನೆಯಿಂದ ವರ್ಕ್ ಮಾಡುವ ಹೊಸ ಟ್ರೆಂಡ್ ಪ್ರಾರಂಭವಾಗಿದೆ. ಹೀಗೆ ಮಾಡುವುದರಿಂದ ಲಾಭಗಳ ಜತೆ ನಷ್ಟವೂ ಇದೆ. ಬೆಳಗ್ಗೆ ಈ ಟ್ರಾಫಿಕ್ ಜಂಜಾಟದಲ್ಲಿ ಸಿಲುಕಿ ಆಪೀಸ್ ಹೋಗಿ ಕೆಲಸ ಮುಗಿಸಿ ಮತ್ತೆ ಸಂಜೆ ಅದೇ ಟ್ರಾಫಿಕ್ ಜಂಜಾಟದಲ್ಲಿ ಹೋರಾಡಿ ಮನೆಗೆ ಬರೋವಷ್ಟರಲ್ಲಿ ಸಾಕಾಗಿ ಹೋಗುತ್ತದೆ. ಹಾಗಾಗಿ ಈ ಬೆಂಗಳೂರು ನಂತಹ ದೊಡ್ಡ ದೊಡ್ಡ ನಗರಗಳಲ್ಲಿ ಜನರು ಹೆಚ್ಚಾಗಿ ಮನೆಯಿಂದ ಕೆಲಸ ಮಾಡುವ ಆಯ್ಕೆಗೆ ಹೆಚ್ಚು ಪ್ರಾಮುಖ್ಯತೆ ನಿಡುತ್ತಾರೆ.

ಮನೆಯಲ್ಲೇ ಕುಳಿತು ಈ ಕೆಲಸ ಮಾಡಿದ್ರೆ ಕೈ ತುಂಬಾ ಸಂಪಾದಿಸಬಹುದು ಗೊತ್ತಾ ?

ಇನ್ನು ಮನೆಯಲ್ಲಿ ಕುಳಿತು ಅತೀ ಹೆಚ್ಚು ಸಂಪಾದನೆ ಮಾಡುವಂತಹ ಜಾಬ್ ಗಳು ಯಾವುವು ಎಂಬ ಮಾಹಿತಿ ನಿಮಗೆ ಕೆರಿಯರ್ ಇಂಡಿಯಾ ನೀಡುತ್ತಿದೆ.

ಭಾಷಾಂತರ:

ಭಾಷೆಗಳ ಮೇಲೆ ನಿಮಗೆ ಹಿಡಿತವಿದ್ದರೆ ನೀವು ಈ ಜಾಬ್ ನ್ನ ಆರಿಸಿಕೊಳ್ಳಬಹುದು. ಅಷ್ಟೇ ಅಲ್ಲ ಯಾವ ಟೈಂ ಬೇಕಾದ್ರೂ ಈ ಜಾಬ್ ನಿಮ್ಮದಾಗಿಸಿಕೊಳ್ಳಬಹುದು. ನಿಮಗೆ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಭಾಷಾಂತರ ಮಾಡುವ ಜ್ಞಾನವಿರಬೇಕು ಅಷ್ಟೇ. ಈ ಟ್ಯಾಲೆಂಟ್ ನಿಮಗೆ ಇದ್ದರೆ ಈಗಲೇ ಹಲವಾರು ಎಂಎನ್ ಸಿ ಕಂಪನಿಗಳಿಗೆ ಅರ್ಜಿ ಸಲ್ಲಿಸಿ, ಮನೆಯಿಂದ ಕೆಲಸ ಮಾಡಿ

ವೆಬ್ ಡೆವಲಪರ್:

ಇದು ಕೂಡಾ ಮನೆಯಲ್ಲೆ ಕುಳಿತು ಮಾಡುವಂತಹ ಕೆಲಸ. ಈ ಕೆಲಸ ಮಾಡಲು ನಿಮಗೆ ಪ್ರಾಪರ್ ಡೆಸ್ಕ್ ಹಾಗೂ ಆಫೀಸ್ ವಾತಾವರಣದ ಅವಶ್ಯಕತೆ ಇಲ್ಲ. ಇದಕ್ಕೆ ಬೇಕಾಗಿರುವುದು ಕೇವಲ ಕಂಪ್ಯೂಟರ್ ಹಾಗೂ ಡೆವಲಪ್ ಮೆಂಟ್ ಸ್ಕಿಲ್ ಅಷ್ಟೆ. ಶೇ ೨೫ ರಷ್ಟು ಮಂದಿ ಸೆಲ್ಫ್ ಆಗಿ ದುಡಿಯುತ್ತಿದ್ದಾರೆ ಶೇ.೧೦ ರಷ್ಟು ಮಂದಿ ಫ್ರೀಲಾಂಸರ್ ಆಗಿ ಈ ಪೀಲ್ಡ್ ನಲ್ಲಿ ದುಡಿಯುತ್ತಿದ್ದಾರೆ.

ಸೋಶಲ್ ಮೀಡಿಯಾ ಮ್ಯಾನೇಜರ್:

ಕಂಪನಿ ಚಿಕ್ಕದೇ ಇರಲಿ ಇಲ್ಲ ದೊಡ್ಡದೇ ಇರಲಿ ಆದ್ರೆ ಪ್ರತಿಯೊಂದು ಕಂಪನಿಗೂ ಸೋಶಲ್ ಮಿಡಿಯಾ ಮ್ಯಾನೇಜರ್ ಅವರ ಅವಶ್ಯಕತೆ ಇದೆ. ಆನ್‌ಲೈನ್ ರೆಪ್ಯುಟೇಶನ್ ಮ್ಯಾನೇಜ್ ಮಾಡುವುದೇ ಸೋಶಲ್ ಮೀಡಿಯಾ ಮ್ಯಾನೇಜರ್ ಪ್ರಮುಖ ಕೆಲಸ. ಈ ಕೆಲಸವನ್ನ ಆಪೀಸ್‌ಗೆ ಹೋಗದೇ ನೀವು ಮನೆಯಲ್ಲೇ ಕುಳಿತುಕೊಂಡು ಮಾಡಬಹುದಾಗಿದೆ.

ಫ್ರೀಲ್ಯಾನ್ಸ್ ಬರಹಗಾರರು:

ಫ್ರೀಲೇನ್ಸ್ ಬರಹಗಾರರ ಕೆಲಸವನ್ನ ಯಾವತ್ತೂ ಚಿಕ್ಕದಾಗಿ ನೋಡಬೇಡಿ. ಪ್ರತಿಯೊಂದು ಫೀಲ್ಡ್‌ನಲ್ಲೂ ಅವರ ಅಗತ್ಯವಿದೆ. ಇತ್ತಿಚೆಗಂತೂ ಪ್ರತಿಯೊಂದು ಕಂಪನಿಯೂ ಫ್ರೀಲೆನ್ಸ್ ಬರಹಗಾರರನ್ನ ನೇಮಿಸಿಕೊಂಡಿರುತ್ತದೆ. ನಿಮಗೂ ಬರವಣಿಗೆ ಆಸಕ್ತಿ ಇದ್ದರೆ ನೀವು ಕೂಡಾ ಈ ಜಾಬ್ ಟ್ರೈ ಮಾಡಬಹುದು.

For Quick Alerts
ALLOW NOTIFICATIONS  
For Daily Alerts

English summary
Today' era , the trend of work from home has grown tremendously which also promises to re consider the skill and qualities of an employee. If you also dream to work with leisure at home, below we have listed few jobs you can pick uo sitting at home.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X