ದ್ವಿತೀಯ ಪಿಯುಸಿ ಪೂರ್ಣಗೊಳಿಸಿದ ನಂತರ ಅನೇಕ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಹಾಗೂ ವೃತ್ತಿಜೀವನದ ಬಗ್ಗೆ ನಿಖರವಾದ ಮಾಹಿತಿಯನ್ನು ಹೊಂದಿರುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಮುಂದೆ ಯಾವುದನ್ನು ಮತ್ತು ಏನನ್ನು ಅಧ್ಯಯನ ಮಾಡಬೇಕು ಎಂದು ಗೊಂದಲಕ್ಕೊಳಗಾಗಿರುತ್ತಾರೆ. ಇನ್ನೂ ಕೆಲವು ವಿದ್ಯಾರ್ಥಿಗಳು ಮುಂದೆ ಹೆಚ್ಚಿನ ಆಯ್ಕೆಗಳಿಲ್ಲ ಎಂದು ಭಾವಿಸಿರುತ್ತಾರೆ.

ಪೂರ್ಣ ಸಮಯದ ಪದವಿ ಅಧ್ಯಯನ ಉತ್ತಮ ವೃತ್ತಿಜೀವನವನ್ನು ಖಾತ್ರಿಪಡಿಸುವ ಏಕೈಕ ಮಾರ್ಗವೆಂದು ಅನೇಕ ವಿದ್ಯಾರ್ಥಿಗಳು ನಂಬುತ್ತಾರೆ. ಆದಾಗ್ಯೂ ವಿವಿಧ ಡಿಪ್ಲೊಮಾಗಳು, ಸರ್ಟಿಫಿಕೇಟ್ ಕೋರ್ಸ್‌ಗಳು ಮತ್ತು ಆಫ್‌ಲೈನ್ ಹಾಗೂ ಆನ್‌ಲೈನ್ ಅಲ್ಪಾವಧಿ ಕೋರ್ಸ್‌ಗಳು ಉತ್ತಮ ಉದ್ಯೋಗ ಮತ್ತು ವೃತ್ತಿಜೀವನವನ್ನು ಖಚಿತಪಡಿಸಿಕೊಳ್ಳಲು ಸಹಾಯವಾಗಲಿದೆ. ಬಹುಪಾಲು ಅಲ್ಪಾವಧಿ ಕೋರ್ಸ್‌ಗಳು ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡುತ್ತವೆ ಮತ್ತು ಉದ್ಯೋಗ ಆಧಾರಿತವಾಗಿವೆ. 12 ನೇ ತರಗತಿಯ ನಂತರ ಅಧ್ಯಯನ ಮಾಡಬಹುದಾದ ಅತ್ಯುತ್ತಮ ಅಲ್ಪಾವಧಿ ಕೋರ್ಸ್‌ಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

ಡಿಪ್ಲೊಮಾ ಇನ್ ಜಾಹೀರಾತು ಮತ್ತು ಮಾರ್ಕೆಟಿಂಗ್ ಸಂವಹನ:
ಜಾಹೀರಾತು ಮತ್ತು ಮಾರ್ಕೆಟಿಂಗ್ ಸಂವಹನಗಳಲ್ಲಿ ಡಿಪ್ಲೊಮಾ ವಿದ್ಯಾರ್ಹತೆ ಹೊಂದುವ ವಿದ್ಯಾರ್ಥಿಗಳು ಮಾಧ್ಯಮ ಸಂವಹನ, ಸಿದ್ಧಾಂತಗಳು, ಮಾದರಿಗಳು ಮತ್ತು ಜಾಹೀರಾತು ಪ್ರಚಾರಗಳನ್ನು ಹೇಗೆ ರಚಿಸುವುದು ಎಂಬುದರ ಕುರಿತು ಕಲಿಯುತ್ತಾರೆ. ಈ ಕೋರ್ಸ್‌ನಲ್ಲಿ ಸಂಸ್ಥೆಗಳು ಮತ್ತು ಅವರ ಗ್ರಾಹಕರ ನಡುವೆ ಇರುವ ಪರಸ್ಪರ ಕ್ರಿಯೆಯ ಉತ್ತಮ ಜ್ಞಾನವನ್ನು ಪಡೆಯುವುದರ ಮೇಲೆ ಕೇಂದ್ರೀಕರಿಸಲಾಗಿದೆ. ಕಾರ್ಪೊರೇಟ್ ಸಂವಹನದಲ್ಲಿ ಕೆಲಸ ಮಾಡಲು ಮತ್ತು ಯಶಸ್ವಿ ವೃತ್ತಿಜೀವನವನ್ನು ಹೊಂದಲು ಬಯಸುವ ಅಭ್ಯರ್ಥಿಗಳಿಗೆ ಈ ಪದವಿ ಸೂಕ್ತ.

ಡಿಪ್ಲೊಮಾ ಇನ್ ವೆಬ್ ಡಿಸೈನಿಂಗ್:
ವೆಬ್ ಡಿಸೈನ್ ಮತ್ತು ವೆಬ್ ಡೆವಲಪ್‌ಮೆಂಟ್ ಬಹುತೇಕ ವಲಯಗಳಲ್ಲಿ ಅಗತ್ಯವಾಗಿದೆ. ಅಗತ್ಯವಾದ ಜ್ಞಾನ ಮತ್ತು ಅನುಭವ ಹೊಂದಿರುವ ವೃತ್ತಿಪರರನ್ನು ಪ್ರತಿ ವ್ಯಾಪಾರವು ನಿರಂತರವಾಗಿ ಹುಡುಕುತ್ತಿರುತ್ತದೆ. ಹಾಗಾಗಿ 12 ನೇ ತರಗತಿಯ ನಂತರ ಮಾಡಬಹುದಾದ ಅತ್ಯಂತ ಜನಪ್ರಿಯ ಅಲ್ಪಾವಧಿ ಕೋರ್ಸ್‌ಗಳಲ್ಲಿ ಇದೂ ಕೂಡ ಒಂದಾಗಿದೆ.

ಡಿಪ್ಲೊಮಾ ಇನ್ ಹೋಟೆಲ್ ಮ್ಯಾನೇಜ್‌ಮೆಂಟ್:
ಪ್ರಸ್ತುತ ದಿನಗಳಲ್ಲಿ ಹೋಟೆಲ್ ಮತ್ತು ಆತಿಥ್ಯ ವಲಯದಲ್ಲಿನ ಬೇಡಿಕೆಗಳು ಹೆಚ್ಚುತ್ತಿದೆ. ಹಾಗಾಗಿ ಈ ಕ್ಷೇತ್ರದಲ್ಲಿ ಹಲವಾರು ಉದ್ಯೋಗಾವಕಾಶಗಳು ಉಂಟಾಗುವ ಸಾಧ್ಯತೆಗಳಿವೆ. ಆಸಕ್ತ ಅಭ್ಯರ್ಥಿಗಳು ಅಲ್ಪಾವಧಿಯಲ್ಲಿ ಡಿಪ್ಲೋಮಾ ಇನ್ ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಮಾಡಿದಲ್ಲಿ ಉತ್ತಮ ಉದ್ಯೋಗಗಳನ್ನು ಪಡೆದುಕೊಳ್ಳಬಹುದು.

ಡಿಪ್ಲೊಮಾ ಇನ್ 3D ಅನಿಮೇಷನ್:
2017ರ KPMG ವಿಶ್ಲೇಷಣೆಯ ಪ್ರಕಾರ 3D ಅನಿಮೇಷನ್ ಮತ್ತು VFX ವಲಯವು ಬಹು ಎತ್ತರ ಮಟ್ಟಕ್ಕೆ ಬೆಳೆಯುತ್ತಿದೆ ಮತ್ತು ಅಭಿವೃದ್ಧಿ ಹೊಂದುತ್ತಿದೆ. ಟೆಲಿವಿಷನ್ ಮತ್ತು ಚಲನಚಿತ್ರಗಳಲ್ಲಿ ಅನಿಮೇಷನ್ ಗೆ ಹೆಚ್ಚಿನ ಬೇಡಿಕೆಯಿದೆ. 12ನೇ ತರಗತಿಯ ನಂತರ ಅಲ್ಪಾವಧಿಯ ಕೋರ್ಸ್‌ಗಳನ್ನು ಹುಡುಕುತ್ತಿರುವವರಿಗೆ 3D ಅನಿಮೇಷನ್‌ನಲ್ಲಿ ಡಿಪ್ಲೊಮಾ ಉತ್ತಮ ಆಯ್ಕೆಯಾಗಿದೆ.