ಸಂದರ್ಶನಕ್ಕೆ ಹೋದಾಗ ನಿಮ್ಮ ಬಾಡಿ ಲಾಂಗ್ವೇಜ್ ಹೇಗಿರಬೇಕು? ಇಲ್ಲಿದೆ ಸಿಂಪಲ್ ಟಿಪ್ಸ್

ಈ ಕಾಂಪಿಟೇಟಿವ್ ಯುಗದಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು ಒಂದೇ ಸವಾಲೇ ಸರಿ. ಅನೇಕರು ತಮ್ಮ ವಿದ್ಯಾರ್ಹತೆಯ ಜೊತೆಗೆ ಅನೇಕ ಕೌಶಲ್ಯಗಳನ್ನು ಹೊಂದಿದ್ದರೂ ಕೂಡ ಸಂದರ್ಶನದಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇನ್ನು ಸಂದರ್ಶನದಲ್ಲಿ ಪ್ರಮುಖವಾಗಿ ನಿಮ್ಮ ಬಾಡಿ ಲಾಂಗ್ವೇಜ್ ಹೇಗಿದೆ ಎನ್ನುವುದರ ಮೇಲೆ ಕೂಡ ಆಯ್ಕೆಯು ನಿರ್ಧರಿಸಲಾಗುತ್ತದೆ.ಹಾಗಾಗಿ ನಿಮ್ಮ ಬಾಡಿ ಲಾಂಗ್ವೇಜ್ ಹೇಗಿದ್ದರೆ ಸಂದರ್ಶನದಲ್ಲಿ ಆಯ್ಕೆಯಾಗಲು ಸಹಾಯವಾಗಬಹುದು ಎನ್ನುವುದಕ್ಕೆ ನಾವಿಲ್ಲಿ ಕೆಲವು ಟಿಪ್ಸ್ ನೀಡಲಿದ್ದೇವೆ.

ಸಂದರ್ಶನದಲ್ಲಿ ನಿಮ್ಮ ಬಾಡಿ ಲಾಂಗ್ವೇಜ್ ಉತ್ತಮವಾಗಿದ್ದರೆ ಕೆಲಸ ಪಡೆಯೋದು ತುಂಬಾ ಸುಲಭ

ಸಂದರ್ಶಕರನ್ನು ಭೇಟಿ ಮಾಡಿದಾಟ ಪರ್ಫೆಕ್ಟ್ ಹ್ಯಾಂಡ್‌ಶೇಕ್ ಮಾಡಿ:

ಸಂದರ್ಶಕರನ್ನು ಭೇಟಿ ಮಾಡಿದಾಟ ಪರ್ಫೆಕ್ಟ್ ಹ್ಯಾಂಡ್‌ಶೇಕ್ ಮಾಡಿ:

ನೀವು ಎಲ್ಲೇ ಸಂದರ್ಶನಕ್ಕೆ ಹೋದಾಗ ಮೊದಲು ಸಂದರ್ಶಕರನ್ನು ಭೇಟಿ ಮಾಡಿದೊಡನೆಯೇ ಅವರ ಹ್ಯಾಂಡ್‌ಶೇಕ್ (ಕೈಕುಲುಕಿ) ಮಾಡಿ ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತೆ ಸಂದರ್ಶನವನ್ನು ಸುಲಭ ರೀತಿಯಲ್ಲಿ ಎದುರಿಸಲು ಸಾಧ್ಯವಾಗುವುದು. ಸಂದರ್ಶನದ ಕೊನೆಯ ಹಂತದ ವರೆಗೂ ಯಾವುದೇ ತೊಂದರೆ ಇಲ್ಲದೆ ಅದೇ ಆತ್ಮವಿಶ್ವಾಸದಿಂದ ಉತ್ತರಿಸುವ ಪ್ರಯತ್ನ ಮಾಡಿ.

ನಗು ಮುಖದಿಂದ ಸಂದರ್ಶನಕ್ಕೆ ಹೋಗಿ:

ನಗು ಮುಖದಿಂದ ಸಂದರ್ಶನಕ್ಕೆ ಹೋಗಿ:

ಸಂದರ್ಶನದಕ್ಕೆ ಹೋಗುವಾಗ ನಿಮ್ಮ ಮುಖ ಗಂಟು ಹಾಕಿಕೊಂಡು ಹೋದರೆ ಏನೂ ಪ್ರಯೋಜನವಿಲ್ಲ ಇದರಿಂದ ಸಂದರ್ಶಕರ ಗಮನ ಸೆಳೆಯಲು ಸಾಧ್ಯವಿಲ್ಲ. ಹಾಗಾಗಿ ನೀವು ಸಂದರ್ಶನಕ್ಕೆ ಹೋಗುವಾಗ ನಗುಮುಖದಿಂದ ಹೋಗಿ ಇದರಿಂದ ಸಂದರ್ಶಕರಿಗೆ ನಿಮ್ಮೆಡೆಗಿನ ಆಸಕ್ತಿ ಹೆಚ್ಚಾಗುತ್ತದೆ. ಅವರು ಪ್ರಶ್ನೆ ಕೇಳುವಾಗ ನೀವು ನಗುಮುಖದಿಂದ ಅವರ ಜೊತೆಗೆ ಇಂಟರಾಕ್ಟ್ ಮಾಡಿದಾಗ ಅವರನ್ನು ಸುಲಭವಾಗಿ ಇಂಪ್ರೆಸ್ ಮಾಡುವುದಕ್ಕೆ ಸಾಧ್ಯವಾಗುವುದು.

ಸಂದರ್ಶನದಲ್ಲಿ ನಿಮ್ಮ ಕಣ್ಣುಗಳೊಂದಿಗೆ ಸಂದರ್ಶಕರನ್ನು ಮಾತನಾಡಿಸಿ:
 

ಸಂದರ್ಶನದಲ್ಲಿ ನಿಮ್ಮ ಕಣ್ಣುಗಳೊಂದಿಗೆ ಸಂದರ್ಶಕರನ್ನು ಮಾತನಾಡಿಸಿ:

ನಮ್ಮ ದೇಹದ ಪ್ರಮುಖ ಮತ್ತು ಸುಂದರವಾಗ ಅಂಗವೆಂದರೆ ಈ ಕಣ್ಣುಗಳು ಯಾಕೆಂದರೆ ನಮ್ಮ ಕಣ್ಣುಗಳು ಏನನ್ನು ಹೇಳುತ್ತವೆಯೋ ಹಾಗೆಯೇ ನಮ್ಮ ವ್ಯಕ್ತಿತ್ವವು ಇರುತ್ತದೆ. ಕಣ್ಣುಗಳು ನಮ್ಮ ಭಾವನೆಗಳನ್ನು ನೇರವಾಗಿ ಎಕ್ಸ್‌ಪ್ರೆಸ್ ಮಾಡುತ್ತವೆ ಯಾವುದೇ ಭಾವನೆಗಳನ್ನು ಮುಚ್ಚಿಡಲು ಆಗುವುದಿಲ್ಲ. ಹಾಗಾಗಿ ನೀವು ಸಂದರ್ಶನಕ್ಕೆ ಹೋದಾಗ ಸಂದರ್ಶಕರ ಐ-ಕಾಂಟಾಕ್ಟ್ ಮಾಡುತ್ತಲೇ ಉತ್ತರ ನೀಡಿ ಇದರಿಂದ ನಿಮ್ಮಲ್ಲಿರುವ ಆತ್ಮವಿಶ್ವಾಸ ಮತ್ತು ನಿಮ್ಮ ಪ್ರಾಮಾಣಿಕತೆ ಹಾಗೂ ಕೆಲಸಕ್ಕೆ ಸೇರಬೇಕೆಂದಿರುವ ಉತ್ಸಾಹದ ಬಗೆಗೆ ಅವರಿಗೆ ಅರಿವಾಗುತ್ತದೆ. ಸಂದರ್ಶನದ ಕೊನೆಯವರೆಗೂ ಆತ್ಮವಿಶ್ವಾಸ ಕಳೆದುಕೊಳ್ಳದೆ ಕಣ್ಣಿನ ಎಕ್ಸ್‌ಪ್ರೆಷನ್‌ಗಳೊಂದಿಗೆ ಸಂದರ್ಶಕರೊಂದಿಗೆ ಮಾತನಾಡಿ.

ನಿಮ್ಮ ಕೈಬೆರಳುಗಳ ಮೇಲೆ ಜಾಗ್ರತೆ ಇರಲಿ:

ನಿಮ್ಮ ಕೈಬೆರಳುಗಳ ಮೇಲೆ ಜಾಗ್ರತೆ ಇರಲಿ:

ಅನೇಕ ಸಂದರ್ಭಗಳಲ್ಲಿ ಕೈಬೆರಳುಗಳನ್ನು ಬಳಸಿ ಮಾತನಾಡುವುದರಿಂದ ಅನೇಕ ತಪ್ಪು ಭಾವನೆಗಳನ್ನು ಹುಟ್ಟು ಹಾಕೋಕೆ ಕಾರಣವಾಗುತ್ತವೆ. ಇನ್ನೂ ಈ ಕಾರ್ಪೋರೇಟ್ ಕ್ಷೇತ್ರದಲ್ಲಿ ಕೈಬೆರಳುಗಳನ್ನು ಬಳಸಿ ಮಾತನಾಡುವುದು ಸುಸಂಸ್ಕೃತವಲ್ಲವೆಂದು ಎಂದು ಭಾವಿಸಲಾಗುತ್ತದೆ ಕಾರಣ ಕೈಬೆರಳುಗಳ ಆಕ್ಷನ್ ಮೂಲಕ ಮಾತನಾಡಿದಾಗ ಅದು ಒಂದು ವಾದ ಆಗುತ್ತದೆಯೇ ಹೊರತು ಯಾವುದೇ ಚರ್ಚೆಯಾಗುವುದಿಲ್ಲ. ಹಾಗಾಗಿ ಸಂದರ್ಶನಕ್ಕೆ ಹೋದಾಗ ನಿಮ್ಮ ಕೈ ಬೆರಳುಗಳ ಬಳಕೆ ಬಗೆಗೆ ಜಾಗ್ರತೆ ಇರಲಿ.

ಸಂದರ್ಶನದಲ್ಲಿ ನಿಮ್ಮ ಕಾಲುಗಳ ಮೇಲೆ ಹೆಚ್ಚು ಜಾಗ್ರತೆ ವಹಿಸಿ:

ಸಂದರ್ಶನದಲ್ಲಿ ನಿಮ್ಮ ಕಾಲುಗಳ ಮೇಲೆ ಹೆಚ್ಚು ಜಾಗ್ರತೆ ವಹಿಸಿ:

ಸಂದರ್ಶನದಲ್ಲಿ ನೀವು ನಿಮ್ಮ ಕಾಲುಗಳ ಬಗೆಗೆ ಹೆಚ್ಚು ಕಾಳಜಿ ವಹಿಸಿ .ಏಕೆಂದರೆ ನೀವು ಆತಂಕದಿಂದಿದ್ದರೆ ಅಥವಾ ಭಯಭೀತರಾಗಿದ್ದರೆ ನಿಮ್ಮ ಕಾಲುಗಳು ನಡುಗುತ್ತವೆ ಇದು ಸಂದರ್ಶಕರ ಗಮನಕ್ಕೆ ಬಂದಲ್ಲಿ ಅವರಿಗೆ ನಿಮ್ಮಲ್ಲಿರುವ ಆತ್ಮವಿಶ್ವಾಸದ ಕೊರತೆ ಎದ್ದು ಕಾಣುತ್ತದೆ. ಹಾಗಾಗಿ ನೀವು ಸಂದರ್ಶನಕ್ಕೆಂದು ಹೋದಾಗ ಕುರ್ಚಿಯ ಮೇಲೆ ನೇರವಾಗಿ ಕುಳಿತು ನಿಮ್ಮ ಕಾಲುಗಳನ್ನು ಯಾವುದೇ ನಡುಕವಿರದಂತೆ ಆರಾಮವಾಗಿ ಕುಳಿತುಕೊಳ್ಳಿ. ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚುವುದರ ಜೊತೆಗೆ ಸಂದರ್ಶನವನ್ನು ಆರಾಮವಾಗಿ ಯಾವುದೇ ಭಯವಿಲ್ಲದಂತೆ ಎದುರಿಸಬಹುದು.

ಸರಿಯಾಗಿ ಕುಳಿತುಕೊಳ್ಳುವುದು ಕೂಡ ಮುಖ್ಯ:

ಸರಿಯಾಗಿ ಕುಳಿತುಕೊಳ್ಳುವುದು ಕೂಡ ಮುಖ್ಯ:

ನೀವು ಸಂದರ್ಶನಕ್ಕೆಂದು ಹೋದಾಗ ಸಂದರ್ಶಕರ ಮುಂದೆ ಸರಿಯಾಗಿ ಕುಳಿತುಕೊಳ್ಳುವುದು ಕೂಡ ಮುಖ್ಯ. ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಅವನ ಬಾಡಿ ಪೋಸ್ಚರ್ ಮೇಲೆ ನಿರ್ಧರಿತವಾಗಿರುತ್ತದೆ. ಸಂದರ್ಶಕರು ನಿಮ್ಮಲ್ಲಿರುವ ಉತ್ಸಾಹ ಮತ್ತು ನೀವು ಈ ಕೆಲಸಕ್ಕೆ ಸೇರಲು ಎಷ್ಟು ಆಸಕ್ತಿಯನ್ನು ಹೊಂದಿದ್ದೀರಿ ಎನ್ನುವುದನ್ನು ಇಲ್ಲಿ ಗಮನಿಸುತ್ತಾರೆ. ನೀವು ಕುರ್ಚಿಗೆ ವಾಲಿಕೊಂಡು ಅಥವಾ ಕುರ್ಚಿಯ ಹಿಂದೆ ಆರಾಮಾಗಿ ಒರಗಿಕೊಂಡು ಕುಳಿತಲ್ಲಿ ಅವರು ನಿಮ್ಮಲ್ಲಿನ ಆಲಸ್ಯ ಮತ್ತು ಅಗೌರವದ ಬಗೆಗೆ ಹೆಚ್ಚು ಬೇಸರಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗೆ ಇನ್ನೊಂದು ವಿಷಯವೆಂದರೆ ನೇರವಾಗಿ ಕುಳಿತುಕೊಳ್ಳುವುದು ಮುಖ್ಯ ಆದರೆ ಪ್ರತಿಮೆ ರೀತಿ ಇರದೆ ಸಂದರ್ಶನದುದ್ದಕ್ಕೂ ಆಕ್ಟಿವ್ ಆಗಿ ಇರಿ.

ಅನ್‌ಪ್ರೊಫೆಷನಲ್ ನಡವಳಿಕೆಯನ್ನು ನಿಯಂತ್ರಿಸಿ:

ಅನ್‌ಪ್ರೊಫೆಷನಲ್ ನಡವಳಿಕೆಯನ್ನು ನಿಯಂತ್ರಿಸಿ:

ನೀವು ಸಂದರ್ಶನಕ್ಕೆ ಹೋದಾಗ ನಿಮ್ಮ ನಡವಳಿಕೆ ಹೇಗಿರುತ್ತದೆ ಎಂಬುದು ಪ್ರಮುಖವಾಗಿರುತ್ತದೆ. ಸಂದರ್ಶನಕ್ಕೆ ಎಂದೊಡನೆ ರಾತ್ರೋರಾತ್ರಿ ನಿಮ್ಮ ನಡುವಳಿಕೆಯನ್ನು ಬದಲಾಯಿಸಲು ಸಾಧ್ಯವಿರುವುದಿಲ್ಲ ಏಕೆಂದರೆ ಅದು ನಮ್ಮ ದಿನನಿತ್ಯದಲ್ಲಿ ಹೇಗಿರುತ್ತದೆಯೋ ಹಾಗೆಯೇ ವ್ಯಕ್ತವಾಗುತ್ತದೆ. ಆದರೆ ಸಂದರ್ಶನಕ್ಕೆ ಅಂತ ಹೋದಾಗ ಆದಷ್ಟು ಅನ್‌ಪ್ರೊಫೆಷನಲ್ ನಡವಳಿಕೆಗಳನ್ನು ನಿಯಂತ್ರಿಸಿ ಇದರಿಂದ ನಿಮ್ಮ ಸಂದರ್ಶನವು ಕೊನೆಯವರೆಗೂ ತುಂಬಾನೆ ಆಸಕ್ತಿದಾಯಕವಾದ ಚರ್ಚೆಯೊಂದಿಗೆ ತುಂಬಿರುತ್ತದೆ.

For Quick Alerts
ALLOW NOTIFICATIONS  
For Daily Alerts

English summary
Here we are giving tips about how your body language should be when you attending interview
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X