ಸಂಗೀತ ಕ್ಷೇತ್ರಕ್ಕೆ ಎಂಟ್ರಿ ಆದ್ರೆ ನಿಮಗಾಗಿ ಯಾವೆಲ್ಲಾ ಉದ್ಯೋಗಗಳಿವೆ ಅಂತ ಗೊತ್ತಾ?

ಸಂಗೀತ ಕ್ಷೇತ್ರ ಅಂದರೆ ಹಲವರಿಗೆ ತುಂಬಾನೆ ಪ್ರೀತಿ ಕಾರಣ ಸಂಗೀತ ಅಂದ್ರೆ ಹಾಗೆ ಮನಸ್ಸಿಗೆ ಮುದ ನೀಡುವಂತದ್ದು, ಆದರೆ ಅದರಲ್ಲಿ ಕೆಲವರಿಗೆ ಮಾತ್ರ ಸಾಧನೆ ಮಾಡಿದರೆ ಸಂಗೀತ ಕ್ಷೇತ್ರದಲ್ಲೇ ಸಾಧಿಸಬೇಕು ಎಂಬ ಆಸೆಗಳಿರತ್ತೆ. ಆದರೆ ಪೋಷಕರು ಇದಕ್ಕೆ ಪ್ರೋತ್ಸಾಹಿಸಲ್ಲ ಕಾರಣ ಅದರಿಂದ ಹೊಟ್ಟೆ ತುಂಬಲ್ಲ ಅನ್ನುವುದು ಅವರ ಯೋಚನೆ ಆದರೆ ನಿಜವಾದ ಸಂಗತಿಯೆಂದರೆ ಸಂಗೀತ ಕ್ಷೇತ್ರದಲ್ಲಿ ಕೂಡ ಹಲವಾರು ಉದ್ಯೋಗಾವಕಾಶಗಳಿವೆ.

ನೀವು ಕೂಡ ಸಂಗೀತದ ಬಗೆಗೆ ಒಲವು ಹೊಂದಿದ್ದು ಅದರಲ್ಲಿ ಏನಾದರು ಸಾಧನೆ ಮಾಡಬೇಕು ಮತ್ತು ಆ ಕ್ಷೇತ್ರದಲ್ಲಿಯೇ ಉದ್ಯೋಗ ಮಾಡಬೇಕು ಅನ್ನುವ ಆಸೆಗಳಿದ್ದರೆ ಖಂಡಿತಾ ಆಸೆಗಳನ್ನು ಬದಿಗಿಡಬೇಡಿ. ಏಕೆಂದರೆ ನಾವಿವತ್ತು ನಿಮಗೆ ಸಂಗೀತ ಕ್ಷೇತ್ರದಲ್ಲಿ ಏನೆಲ್ಲಾ ಉದ್ಯೋಗಗಳಿವೆ? ಅನ್ನುವುದನ್ನ ತಿಳಿಸ್ತಿದ್ದೇವೆ. ಅದರ ಮೇಲೆ ನಿಮ್ಮ ಆಸಕ್ತಿಗನುಗುಣವಾಗಿ ಉದ್ಯೋಗಕ್ಕೆ ಸೇರಿ ಕೈತುಂಬಾ ಸಂಪಾದನೆಯನ್ನು ಮಾಡಬಹುದು.

ಸಂಗೀತ ಕ್ಷೇತ್ರದಲ್ಲಿ ಮಾಡಬಹುದಾದ ಹಲವು ಉದ್ಯೋಗಗಳ ಮಾಹಿತಿ

ನೀವೂ ಸಂಗೀತ ಕ್ಷೇತ್ರಕ್ಕೆ ಎಂಟ್ರಿ ಆಗಬೇಕಾ? ಹಾಗಿದ್ರೆ ಸಂಗೀತ ಕ್ಷೇತ್ರದಲ್ಲಿ ಯಾವೆಲ್ಲಾ ಉದ್ಯೋಗಗಳನ್ನು ಮಾಡಬಹುದು ಮತ್ತು ಆ ಉದ್ಯೋಗಗಳನ್ನು ಮಾಡಿದರೆ ಎಷ್ಟು ಆದಾಯ ಪಡೆಯಬಹುದು ಎನ್ನುವ ಮಾಹಿತಿ ನಿಮಗಾಗಿ ಇಲ್ಲಿದೆ.

ಕಂಪೋಸರ್:

ಕಂಪೋಸರ್ ಅಂದರೆ ಒಂದು ಸಂಗೀತವನ್ನು ವಿಭಿನ್ನ ರೀತಿಯಲ್ಲಿ ಪ್ರಯೋಗ ಮಾಡಿ ತನ್ನದೇ ಆದ ವಿಭಿನ್ನ ಅನ್ವೇಷಣೆಯನ್ನು ನೀಡಿ ಕೇಳುಗರಿಗೆ ಮುದ ನೀಡುವಂತಹ ಸಂಗೀತವನ್ನು ರಚಿಸುವುದು. ಸಂಗೀತ ಮತ್ತು ವಾದ್ಯ ಶಬ್ದಗಳ ಬಗೆಗೆ ಜ್ಞಾನವುಳ್ಳ ಅಭ್ಯರ್ಥಿಗಳು ಈ ಕ್ಷೇತ್ರಕ್ಕೆ ಹೆಜ್ಜೆ ಇಡಬಹುದು.

ಕಂಪೋಸರ್ ಆಗ ಬಯಸುವ ಅಭ್ಯರ್ಥಿಗಳು ಮ್ಯೂಸಿಕ್ ಕಂಪೋಸಿಷನ್‌ನಲ್ಲಿ ಪದವಿ ವಿದ್ಯಾರ್ಹತೆಯನ್ನು ಹೊಂದಿದ್ದಲ್ಲಿ ಉತ್ತಮ ಪ್ರೊಫೆಷನಲ್ ಕಂಪೋಸರ್ ಆಗಬಹುದು. ನೀವು ಮ್ಯೂಸಿಕ್ ಕಂಪೋಸರ್ ಆದರೆ ವರ್ಷಕ್ಕೆ 7,00,000 ವೇತನವನ್ನು ಪಡೆಯಬಹುದು.

ಪ್ರೊಡ್ಯೂಸರ್:

ಸಾಮಾನ್ಯವಾಗಿ ಸಿನೆಮಾ ಕ್ಷೇತ್ರದಲ್ಲಿ ಪ್ರೊಡ್ಯೂಸರ್ ಅಂದರೆ ನಿರ್ಮಾಪಕ ಎಂದೇ ಕರೆಯಲಾಗುತ್ತದೆ ಅಲ್ಲಿ ನಿರ್ಮಾಪಕನ ಕೆಲಸ ಹಣಕಾಸು ಹೂಡಿಕೆ ಮತ್ತು ಚಿತ್ರೀಕರಣೆ ಬೇಕಿರುವ ಅಗತ್ಯತೆಗಳನ್ನು ಪೂರೈಸುವಂತೆಯೇ ಸಂಗೀತ ಕ್ಷೇತ್ರದಲ್ಲಿ ಪ್ರೊಡ್ಯೂಸರ್‌ ಆದವರು ಒಂದು ಮ್ಯೂಸಿಕ್ ರೆರ್ಕಾಡಿಂಗ್‌ಗೆ ಬೇಕಿರುವ ಎಲ್ಲಾ ಅಗತ್ಯತೆಗಳನ್ನು ಪೂರೈಸುವ ಜವಾಬ್ದಾರಿಯನ್ನು ಹೊತ್ತಿರುತ್ತಾನೆ.

ಮ್ಯೂಸಿಕ್ ಮತ್ತು ಮ್ಯೂಸಿಕ್ ಪ್ರೊಡಕ್ಷನ್ ಮತ್ತು ಇಂಜಿನಿಯರಿಂಗ್ ಅಥವಾ ಮ್ಯೂಸಿಕ್ ಬ್ಯುಸಿನೆಸ್‌ನಲ್ಲಿ ಪದವಿಯನ್ನು ಹೊಂದಿರುವ ಅಭ್ಯರ್ಥಿಗಳು ಪ್ರೊಡ್ಯೂಸರ್ ಆಗಿ ಕೆಲಸ ನಿರ್ವಹಿಸಬಹುದು. ಪ್ರೊಡ್ಯೂಸರ್ ಆಗಿ ಅನುಭವ ಪಡೆದ ಅಭ್ಯರ್ಥಿಗಳು ವರ್ಷಕ್ಕೆ 12,00,000 ವೇತನವನ್ನು ಪಡೆಯಬಹುದು.

ಮ್ಯುಸೀಶಿಯನ್ / ಸಿಂಗರ್:

ಸಾಮಾನ್ಯವಾಗಿ ಹಾಡುಗಾರರು ಹಾಡು ಹಾಡುತ್ತಲೇ ವಾದ್ಯಗಳನ್ನು ನುಡಿಸುವುದನ್ನು ಬಲ್ಲವರಾಗಿರುತ್ತಾರೆ. ಇನ್ನೂ ಕೆಲವರು ಹಾಡುಗಾರಿಕೆಯನ್ನು ಮಾತ್ರ ಬಲ್ಲವರಾಗಿರುತ್ತಾರೆ. ತನ್ನದೇ ಆದ ಉತ್ತಮ ಹಾಡುಗಾರಿಕೆ ಬಲ್ಲ ಅಭ್ಯರ್ಥಿಗಳಿಗೆ ಸಂಗೀತ ಕ್ಷೇತ್ರದಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುವುದು. ಹಾಗಾಗಿ ನೀವು ಮ್ಯುಸೀಶಿಯನ್ / ಸಿಂಗರ್ ಕೂಡ ಆಗಬಹುದು.

ಮ್ಯುಸೀಶಿಯನ್ / ಸಿಂಗರ್ ಆಗ ಬಯಸುವವರು ಮ್ಯೂಸಿಕ್ ಥಿಯರಿ ಅಥವಾ ಮ್ಯೂಸಿಕ್ ಪರ್ಮಾರ್ಮೆನ್ಸ್‌ನಲ್ಲಿ ಪದವಿ ವಿದ್ಯಾರ್ಹತೆಯನ್ನು ಹೊಂದಬಹುದು. ಸಿಂಗರ್ /ಮ್ಯುಸೀಶಿಯನ್ ಗಳಿಗೆ ಮಾರುಕಟ್ಟೆಯಲ್ಲಿ ಅವರಿಗಿರುವ ಬೇಡಿಕೆಯ ಮೇಲೆ ವೇತನವನ್ನು ನೀಡಲಾಗುವುದು.

ಸೌಂಡ್ ಡಿಸೈನರ್:

ಸಂಗೀತದ ಬಗೆಗೆ ಮತ್ತು ಶಬ್ಧಗಳ ಬಗೆಗೆ ಜ್ಞಾನವುಳ್ಳ ಅಭ್ಯರ್ಥಿಗಳು ಈ ಉದ್ಯೋಗವನ್ನು ಮಾಡಬಹುದು. ಒಂದು ಸಂಗೀತ ಕಂಪೋಸ್ ಆದಾಗ ಎಲ್ಲಿ ಏರು ತಗ್ಗುಗಳ ಅಗತ್ಯವಿದೆ ಮತ್ತು ಎಷ್ಟು ಪ್ರಮಾಣದ ಶಬ್ಧ ಎಲ್ಲಿ ಅಗತ್ಯವೆಂದು ತಿಳಿದು ಕೆಲಸ ನಿರ್ವಹಿಸಬೇಕು. ಸೌಂಡ್ ಡಿಸೈನರ್‌ಗಳಿಗೆ ಒಂದು ಉತ್ತಮ ಸಂಗೀತವನ್ನು ಹೊರಹೊಮ್ಮಿಸುವ ಕೌಶಲ್ಯವನ್ನು ಬಲ್ಲವರಾಗಿರಬೇಕು.

ಸೌಂಡ್ ಡಿನೈಸರ್ ಆಗ ಬಯಸುವ ಅಭ್ಯರ್ಥಿಗಳು ಸೌಂಡ್ ಡಿಸೈನ್‌ನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು. ಸೌಂಡ್ ಡಿಸೈನರ್ ಆಗಿ ಉದ್ಯೋಗವನ್ನು ಪಡೆದರೆ ವರ್ಷಕ್ಕೆ 6,00,000/-ರೂ ವೇತನವನ್ನು ಪಡೆಯಬಹುದು.

ಮ್ಯೂಸಿಕ್ ಡೈರೆಕ್ಟರ್:

ಮ್ಯೂಸಿಕ್ ಡೈರೆಕ್ಟರ್ ಆದವರು ಸಂಗೀತದ ಬಗೆಗೆ ಜ್ಞಾನವನ್ನು ಹೊಂದಿರುವುದಲ್ಲದೇ ಎಲ್ಲಿ ಆರ್ಕೆಷ್ಟ್ರಾಗಳು ಮತ್ತು ಸಂಗೀತ ಕಚೇರಿಗಳು ನಡೆಯುತ್ತವೆಯೋ ಅಲ್ಲಿ ಅವರ ಪಾತ್ರ ಹೆಚ್ಚಿರುತ್ತದೆ. ಬೇರೆ ಬೇರೆ ಆರ್ಕೆಸ್ಟ್ರಾ ಮತ್ತು ಸಂಗೀತ ಗಾರರೊಂದಿಗೆ ಉತ್ತಮ ಸಂವಹನವನ್ನು ಹೊಂದಿದ್ದಲ್ಲಿ ಅಗತ್ಯವಿದ್ದಾಗ ಉತ್ತಮ ಕಾರ್ಯಕ್ರಮಗಳನ್ನು ನೀಡುವುದು ಅಥವಾ ರೇಡಿಗೋ ಕಾರ್ಯಕ್ರಮಗಳಲ್ಲಿ ಉತ್ತಮ ಗೀತೆಗಳನ್ನು ಪ್ರಸ್ತುತ ಪಡಿಸುವ ಕೆಲಸ ನಿರ್ವಹಿಸುವುದು ಅವರ ಜವಾಬ್ದಾರಿಯಾಗಿರುತ್ತದೆ. ಕಾರ್ಯಕ್ರಮಗಳಿಗೆ ಬೇಕಿರುವ ತಯಾರಿಯನ್ನು ಅವರ ತಂಡಗಳು ನಡೆಸುವ ಬಗೆಗೆ ಡೈರೆಕ್ಟರ್ ಹೆಚ್ಚು ಕಾಳಜಿ ವಹಿಸುತ್ತಾನೆ.

ಮ್ಯೂಸಿಕ್ ಡೈರೆಕ್ಟರ್ ಅಗ ಬಯಸುವವರು ಮ್ಯೂಸಿಕ್ ಪ್ರೊಗ್ರಾಮ್‌ಗಳಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿಹೆಚ್‌.ಡಿ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು. ಮ್ಯೂಸಿಕ್ ಡೈರೆಕ್ಟರ್ ಆದರೆ 9,00,000/-ರೂ ವೇತನವನ್ನು ಪಡೆಯಬಹುದು.

ಮ್ಯೂಸಿಕ್ ಎಡಿಟರ್:

ಒಂದು ಸಿನೆಮಾ ಮತ್ತು ಕಂಪೋಸರ್ ನಡುವೆ ಪ್ರಮುಖ ಪಾತ್ರವಹಿಸುವವರು ಮ್ಯೂಸಿಕ್ ಎಡಿಟರ್. ಕಂಪೋಸರ್ ಒಂದು ಸಂಗೀತವನ್ನು ರಚಿಸುತ್ತಾನೆ ಆದರೆ ಅದನ್ನು ಸಿನೆಮಾದ ದೃಶ್ಯಗಳಿಗೆ ಹೇಗೆ ಜೋಡಣೆ ಮಾಡಬೇಕು ಮತ್ತು ಹೇಗೆ ಸೌಂಡ್ ಎಫೆಕ್ಟ್ಸ್ ನೀಡಬೇಕು ಮತ್ತು ಯಾವುದು ಅಗತ್ಯ ಹಾಗೂ ಯಾವುದು ಅಗತ್ಯವಿಲ್ಲದಿರುವುದು ಎಂದು ಕಂಪ್ಲೀಟ್ ಆಗಿ ಎಡಿಟ್ ಮಾಡಿ ಉತ್ತಮ ರೀತಿಯಲ್ಲಿ ಪ್ರಸ್ತುತ ಪಡಿಸುವ ಕೆಲಸವನ್ನು ಮ್ಯೂಸಿಕ್ ಎಡಿಟರ್ ಮಾಡುತ್ತಾನೆ.

ಮ್ಯೂಸಿಕ್ ಎಡಿಟರ್ ಆಗ ಬಯಸುವ ಅಭ್ಯರ್ಥಿಗಳು ಹುದ್ದೆಗೆ ಸಂಬಂಧಪಟ್ಟಂತೆ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು ಮತ್ತು ಮ್ಯೂಸಿಕ್ ಎಡಿಟರ್ ಆದರೆ ವರ್ಷಕ್ಕೆ 6,00,000/-ರೂ ವೇತನವನ್ನು ಪಡೆಯಬಹುದು.

ಮ್ಯೂಸಿಕ್ ಟೀಚರ್:

ನೀವು ಮ್ಯೂಸಿಕ್ ಟೀಚರ್ ಆದರೆ ಅನೇಕ ಮಕ್ಕಳಿಗೆ ಶಾಲೆ , ಕಾಲೇಜು ಮತ್ತು ಮನೆಗಳಲ್ಲಿ ಸಂಗೀತ ಪಾಠವನ್ನು ಹೇಳಿಕೊಡಬಹುದು. ಇದರಿಂದ ಕಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಿದಂತಾಗುವುದು ಹಾಗೆಯೇ ಸಂಗೀತ ಕ್ಷೇತ್ರದಲ್ಲಿ ಉದ್ಯೋಗ ಪಡೆದಂತೆ ಆಗುವುದು.

ಮ್ಯೂಸಿಕ್ ಟೀಚರ್ ಆಗಲು ಸಂಗೀತ ವಿಷಯದಲ್ಲಿ ಪದವಿಯನ್ನು ಹೊಂದಿರಬೇಕು. ನೀವು ಮ್ಯೂಸಿಕ್ ಟೀಚರ್ ಆದರೆ ವರ್ಷಕ್ಕೆ 4,50,000/-ರೂ ಆದಾಯವನ್ನು ಪಡೆಯಬಹುದು.

ರೆಕಾರ್ಡಿಂಗ್ ಇಂಜಿನಿಯರ್:

ರೆಕಾರ್ಡಿಂಗ್ ಇಂಜಿನಿಯರ್ ಆದವರು ಸಂಗೀತವನ್ನು ಕೇವಲ ರೆಕಾರ್ಡ್‌ ಮಾಡುವುದು ಮಾತ್ರವಲ್ಲದೇ ಅದನ್ನು ಮಿಕ್ಸ್ ಮಾಡಿ ಎಡಿಟ್ ಮಾಡುವ ಕೆಲಸವನ್ನು ಕೂಡ ಮಾಡುತ್ತಾನೆ. ರೆಕಾರ್ಡಿಂಗ್‌ಗೆ ಅಗತ್ಯವಿರುವ ಡಿಜಿಟಲ್ ರೆಕಾರ್ಡರ್ಸ್ ಮತ್ತು ಏನೆಲ್ಲಾ ಉಪಕರಣಗಳು ಅಗತ್ಯವಿದೆಯೋ ಅವೆಲ್ಲವನ್ನು ಬಲ್ಲವರಾಗಿರಬೇಕು. ಲೈವ್ ಕಾರ್ಯಕ್ರಮಗಳಲ್ಲಿ ಜನರಲ್ಲಿ ಉತ್ತಮ ರೀತಿಯಲ್ಲಿ ಕಾರ್ಯಕ್ರಮ ತಲುಪಲು ರೆಕಾರ್ಡಿಂಗ್ ಇಂಜಿನಿಯರ್‌ಗಳು ಪ್ರಮುಖ ಪಾತ್ರವಹಿಸುತ್ತಾರೆ.

ರೆಕಾರ್ಡಿಂಗ್ ಇಂಜಿನಿಯರ್ ಆಗಲು ಕಂಪ್ಯೂಟರ್, ಇಂಜಿನಿಯರಿಂಗ್ ಅಥವಾ ಮಾಹಿತಿ ವಿಜ್ಞಾನ ಅಥವಾ ಅದಕ್ಕೆ ಸಮನಾದ ವಿಷಯದಲ್ಲಿ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು.ಸೌಂಡ್ ಇಂಜಿನಿಯರ್ ಆಗಿ ಉದ್ಯೋಗವನ್ನು ಪಡೆದುಕೊಂಡರೆ ವರ್ಷಕ್ಕೆ 4,00,000/-ರೂ ಆದಾಯವನ್ನು ಪಡೆಯಬಹುದು.

ಮ್ಯೂಸಿಕ್ ಸ್ಟುಡಿಯೋ ಮ್ಯಾನೇಜರ್:

ಮ್ಯೂಸಿಕ್ ಸ್ಟುಡಿಯೋ ಮ್ಯಾನೇಜರ್ ಆದವರು ಸ್ಟುಡಿಯೋ ಅನ್ನು ಸಂಪೂರ್ಣವಾಗಿ ಉತ್ತಮ ರೀತಿಯಲ್ಲಿ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊಂದಿರುತ್ತಾನೆ. ಎಲ್ಲಾ ಉಪಕರಣಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವುದು ಹಾಗೆ ಸ್ಟುಡಿಯೋ ಅನ್ನು ಸ್ವಚ್ಛವಾಗಿ ನೋಡಿಕೊಳ್ಳುವುದು ಈ ಎಲ್ಲಾ ಕೆಲಸಗಳನ್ನು ಮ್ಯಾನೇಜರ್ ನಿಯಂತ್ರಿಸಬೇಕಿರುತ್ತದೆ.

ಸ್ಟುಡಿಯೋ ಬಗೆಗೆ ಜವಾಬ್ದಾರಿ ಮಾತ್ರವಲ್ಲದೇ ಜನರೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿರಬೇಕು. ಕ್ಲೈಂಟ್ಸ್‌ಗಳು ಸ್ಟುಡಿಯೋ ರೆಕಾರ್ಡಿಂಗ್‌ಗೆ ಕೇಳಿದಾಗ ಅದಕ್ಕೆ ತಗುಲುವ ವೆಚ್ಚ ಮತ್ತೆ ಇನ್ನಿತರೆ ವಿಚಾರಗಳನ್ನು ಮಾತನಾಡ ಬಲ್ಲ ಹಾಗೂ ಉತ್ತಮ ಸಂವಹನ ಬಲ್ಲವರಾಗಿರಬೇಕು ಹಾಗಿದ್ದಲ್ಲಿ ಮಾತ್ರ ಬ್ಯುಸಿನೆಸ್ ಉತ್ತಮವಾಗಿ ನಡೆಯಲು ಸಾಧ್ಯವಾಗುವುದು.ಸ್ಟುಡಿಯೋ ಮ್ಯಾನೇಜರ್‌ಗಳು ಆರಂಭಿಕ ಹಂತದಲ್ಲಿ ವರ್ಷಕ್ಕೆ 4,00,000/- ರೂ ಆದಾಯವನ್ನು ಪಡೆಯಬಹುದು.

ಇನ್‌ಸ್ಟ್ರುಮೆಂಟಲಿಸ್ಟ್:

ವಿವಿಧ ವಾದ್ಯಗಳನ್ನು ಬಲ್ಲವರು ಹಾಗೆ ಅದರಲ್ಲೆ ಹಲವಾರು ವರ್ಷಗಳಿಂದ ತರಬೇತಿಯನ್ನು ಪಡೆದುಕೊಂಡ ಅಭ್ಯರ್ಥಿಗಳು ಇನ್‌ಸ್ಟ್ರುಮೆಂಟಲಿಸ್ಟ್ ಆಗಬಹುದು. ಹಲವು ವಾದ್ಯಗಳನ್ನು ನುಡಿಸಲು ಬಲ್ಲ ಅಭ್ಯರ್ಥಿಗಳಿಗೆ ಈ ಕ್ಷೇತ್ರದಲ್ಲಿ ಹೆಚ್ಚು ಬೇಡಿಕೆ ಇದ್ದು, ಅಭ್ಯರ್ಥಿಗಳ ಅನುಭವಕ್ಕೆ ತಕ್ಕಂತೆ ವೇತನವನ್ನು ಪಡೆಯಬಹುದು.

For Quick Alerts
ALLOW NOTIFICATIONS  
For Daily Alerts

English summary
If you want to get into the music industry, there are dozens of jobs you may be want to consider. Here are the list.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X