ಜನ್ಮ ದಿನಕ್ಕೆ ಅನುಗುಣವಾಗಿ ಯಾವ Job ನಿಮಗೆ ಬೆಸ್ಟ್... ಸುಮ್ನೆ ಟ್ರೈ ಮಾಡಿ ನೋಡಿ!?

By Kavya

ಜ್ಯೋತಿಷ್ಯವು ಕೇವಲ ಬರ್ತ್ ಡೇ ದಿನಾಂಕವನ್ನ ಮಾತ್ರ ಅವಲಂಭಿಸಿರುವುದಿಲ್ಲ. ಬದಲಿಗೆ ನೀವು ಹುಟ್ಟಿದ ದಿನ ಕೂಡಾ ಗಣನೆಗೆ ತೆಗೆದುಕೊಳ್ಳುತ್ತದೆ. ಜ್ಯೋತಿಷ್ಯರ ಪ್ರಕಾರ ಕೆರಿಯರ್ ಆಯ್ಕೆ ಯು ಅವರ ಹುಟ್ಟಿದ ದಿನವನ್ನ ಕೂಡಾ ಅವಲಂಭಿಸಿರುತ್ತದೆ. ಹಾಗಾಗಿ ಯಾವ ದಿನ ಜನಸಿದವರು ಯಾವ ಕೆರಿಯರ್ ಆಯ್ಕೆ ಮೇಲೆ ಆಸಕ್ತಿ ಹೊಂದಿದ್ದಾರೆ ಎಂಬುವುದು ನಾವು ತಿಳಿಸುತ್ತೇವೆ ಮುಂದಕ್ಕೆ ಓದಿ.

 

ಸೋಮವಾರ:

ಸೋಮವಾರ:

ಚಂದ್ರನ ಅಧಿಪತ್ಯವಿರುತ್ತದೆ. ಈ ದಿನ ಜನಿಸಿದವರು ತುಂಬಾ ಭಾವನಾತ್ಮಕ ವ್ಯಕ್ತಿತ್ವವುಳ್ಳವರಾಗಿರುತ್ತಾರೆ ಹಾಗೆಯೇ ಪೋಷಣೆ ಮಾಡುವ ಸ್ವಭಾವ ಇವರದಾಗಿರುತ್ತದೆ. ಸೋಮವಾರ ಹುಟ್ಟಿದವರು ಉತ್ತಮ ಶಿಕ್ಷಕರಾಗುತ್ತಾರೆ ಹಾಗೆಯೇ ಡಾಕ್ಟರ್ಸ್ ಮತ್ತು ನರ್ಸ್ ಕ್ಷೇತ್ರದಲ್ಲೂ ಕೆರಿಯರ್ ರೂಪಿಸಿ

ಮಂಗಳವಾರ:

ಮಂಗಳವಾರ:

ಈ ವಾರ ಮಂಗಳನ ಅಧಿಪತ್ಯವಿರುತ್ತದೆ. ವಾರದ ಎರಡನೇ ದಿನ ಮಂಗಳವಾರ ಜನಿಸಿದವರು ಎನರ್ಜಿಟಿಕ್ ಹಾಗೂ ಹಠಾತ್ ಪ್ರವೃತ್ತಿವುಳ್ಳವರಾಗಿರುತ್ತಾರೆ. ಈ ದಿನ ಹುಟ್ಟಿದವರು, ಪೊಲೀಸ್ ಅಧಿಕಾರಿ, ಆರ್ಮಿ, ಫಿಟ್ ನೆಸ್ ಟ್ರೈನರ್ ಕ್ಷೇತ್ರಗಳಲ್ಲಿ ತಮ್ಮ ಕೆರಿಯರ್ ರೂಪಿಸಿಕೊಳ್ಳುತ್ತಾರೆ. ಈ ದಿನ ಹುಟ್ಟಿದವರು ಕೇವಲ ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಸ್ಟ್ರಾಂಗ್ ಆಗಿರುತ್ತಾರೆ.

ಬುಧವಾರ:
 

ಬುಧವಾರ:

ಈ ವಾರ ಬುಧನ ಅಧಿಪತ್ಯವಿರುತ್ತದೆ. ಬುಧವಾರ ಜನಿಸಿದವರು ತುಂಬಾ ಮಾತುಗಾರರಾಗಿರುತ್ತಾರೆ ಹಾಗೆಯೇ ಚತುರರು ಆಗಿರುತ್ತಾರೆ. ಇವರಿಗೆ ಕ್ರಿಯೇಟಿವ್ ಮೈಂಡ್ ಚೆನ್ನಾಗಿರುತ್ತದೆ. ಇವರು ಬರವಣಿಗೆ, ನಟನೆ ಹಾಗೂ ಫಿಲ್ಮ ಮೇಕಿಂಗ್ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಬಹುದು.

ಗುರುವಾರ:

ಗುರುವಾರ:

ಗುರು ಅಧಿಪತ್ಯದ ವಾರ ಗುರುವಾರ. ಈ ದಿನ ಹುಟ್ಟಿದವರು ಕೆಲವೊಮ್ಮೆ ದುರಾಸೆ, ಅಹಂಕಾರ ಮತ್ತು ವಿಪರೀತ ಬುದ್ದಿಯನ್ನ ಪ್ರದರ್ಶಿಸಬಹುದು. ಯಾಕೆಂದ್ರೆ ಗುರು ಗ್ರಹವೂ ಕೂಡಾ ಅತೀ ದೊಡ್ಡ ಗ್ರಹವಾಗಿದ್ದು ಸಂಪತ್ತು ಹಾಗೂ ಬುದ್ಧಿವಂತಿಕೆಯನ್ನ ಹೋಲುತ್ತದೆ. ಈ ದಿನ ಜನಿಸಿದವರು, ತಮ್ಮದೇ ಸ್ವಂತ ಉದ್ಯಮ ನಡೆಸುವರು. ಒಂದೇ ಕೆಲಸಕ್ಕೆ ಸ್ಟಿಕ್ ಆಗಿರುವುದೆಂದ್ರೆ ಇವರಿಗೆ ತುಂಬಾ ಬೋರ್. ಹಾಗಾಗಿ ಇವರು ಹಲವಾರು ಕೆಲಸಗಳಲ್ಲಿ ಒಲವು ತೋರಿಸುತ್ತಾರೆ ಹಾಗೂ ಹಣಕಾಸು ವ್ಯವಹಾರ ಚೆನ್ನಾಗಿ ಹ್ಯಾಂಡಲ್ ಕೂಡಾ ಮಾಡುತ್ತಾರೆ.

ಶುಕ್ರವಾರ:

ಶುಕ್ರವಾರ:

ಈ ದಿನ ಶುಕ್ರ ಗ್ರಹದ ಅಧಿಪತ್ಯ.ಈ ದಿನ ಹುಟ್ಟಿದವರು ಬ್ಯೂಟಿ ಬಗ್ಗೆ ಹೆಚ್ಚು ಆಸಕ್ತಿವುಳ್ಳವರಾಗಿರುತ್ತಾರೆ. ಹಾಗಾಗಿ ಇವರು ಫ್ಯಾಶನ್ ಡಿಸೈನಿಂಗ್, ಫ್ಯಾಶನ್ ಇಂಡಸ್ಟರಿ, ಜ್ಯುವೆಲ್ಲರಿ ಡಿಸೈನ್ ಮುಂತಾದ ಕಲರ್‌ಫುಲ್ ಫೀಲ್ಡ್‌ನಲ್ಲಿ ತಮ್ಮ ಕೆರಿಯರ್ ರೂಪಿಸಿಕೊಳ್ಳುತ್ತಾರೆ.

ಶನಿವಾರ:

ಶನಿವಾರ:

ಶನಿ ಗ್ರಹನ ಅಧಿಪತ್ಯವಿರುತ್ತದೆ. ಇಂದು ಜನಿಸಿದವರು ಪುಸ್ತಕ ಪ್ರಿಯರಾಗಿರುತ್ತಾರೆ. ಇವರು ಸೇಫ್ ಜಾಬ್ ಗಳಾದ ಇಂಜಿನಿಯರ್ ಹಾಗೂ ಲಾಯರ್ ಹುದ್ದೆಗಳಲ್ಲಿ ಕೆರಿಯರ್ ರೂಪಿಸಿಕೊಳ್ಳಲು ಮುಂದಾಗುತ್ತಾರೆ. ಇವರು ಏನೇ ಆಯ್ಕೆ ಮಾಡಿಕೊಂಡ್ರು ಟೆನ್ಶನ್ ಆಗಬೇಕಾಗಿಲ್ಲ ಯಾಕೆಂದ್ರೆ ಇವರು ಒಳ್ಳೆಯ ಕೆಲಸಗಾರರಾಗಿರುತ್ತಾರೆ.

ಆದಿತ್ಯವಾರ:

ಆದಿತ್ಯವಾರ:

ಸೂರ್ಯನ ಅಧಿಪತ್ಯವಿರುವ ದಿನ. ಈ ದಿನ ಜನಿಸಿದವರು ತಮ್ಮ ಬಗ್ಗೆ ಸುಪ್ರೀಂ ಸೆನ್ಸ್ ಹೊಂದಿರುತ್ತಾರೆ. ಹಾಗಾಗಿ ಇವರು ಗ್ರೇಟ್ ಲೀಡರ್ಸ್ ಆಗಬಹುದು. ಅಷ್ಟೇ ಅಲ್ಲ ರಾಜಕೀಯ ಕ್ಷೇತ್ರದಲ್ಲಿ ಕೆರಿಯರ್ ಲೈಫ್ ರೂಪಿಸಕೊಳ್ಳಬಹುದು.

For Quick Alerts
ALLOW NOTIFICATIONS  
For Daily Alerts

English summary
Astrological Signs not only depend on birth dates also depend on certain days of week. here is the list of Ideal Profession of these days. just check it.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X