ದಿಟ್ಟ ನಿರೂಪಕ ಅರುಣಬ್ ಗೋಸ್ವಾಮಿಯ ವೃತ್ತಿಜೀವನದ ಕಥೆಗಳು

Posted By: Sushma

ಭಾರತದ ಎಲ್ಲಾ ನಿರೂಪಕರನ್ನು ಪಟ್ಟಿ ಮಾಡಿದ್ರೆ ಮೆಲ್ಮಟ್ಟದಲ್ಲಿ ನಿಲ್ಲುವ ಮೊದಲ ಕೆಲವೇ ಕೆಲವು ಹೆಸರುಗಳಲ್ಲಿ ಮೊದಲ ಸ್ಥಾನದಲ್ಲಿ ಬರುವುದು ಅರುಣಬ್ ಗೋಸ್ವಾಮಿ." ದಿ ನೇಷನ್ ವಾಂಟ್ಸ್ ಟು ನೋ" ಅಂದ್ರೆ ಈ ದೇಶ ನಿಮ್ಮ ಉತ್ತರವನ್ನು ಬಯಸುತ್ತಿದೆ ಅಂತ ಹೇಳಿ ಅವರು ಆರಂಭಿಸುವ ಚರ್ಚೆಗೆ ಫಿದಾ ಆಗದೇ ಇರುವವರೇ ಇಲ್ಲ. ಚರ್ಚೆಯಲ್ಲಿ ಪಾಲ್ಗೊಂಡ ವ್ಯಕ್ತಿ ನೀವು ನಮ್ಮ ಕಷ್ಟಕರ ಪ್ರಶ್ನೆಗಳಿಂದ ಎಸ್ಕೇಪ್ ಆಗಲು ಸಾಧ್ಯವಿಲ್ಲ ಎಂದು ಹೇಳಿ ಕಟ್ಟಿಹಾಕಿ ಚರ್ಚೆಯಲ್ಲಿ ಭಾಗವಹಿಸಿದವರನ್ನು ಹಣ್ಣುಗಾಯಿ ನೀರುಗಾಯಿ ಮಾಡುವ ಅರುಣಬ್ ಸ್ಟೈಲ್ ನಿಜಕ್ಕೂ ವಾರೆವ್ಹಾ ಅನ್ನುವಂತದ್ದು.

ನಿಜಕ್ಕೂ ಹೇಳಬೇಕೆಂದರೆ ಇದು ಅರುಣಬ್ ಅವರ ಪ್ರತಿಕೋದ್ಯಮ ಶೈಲಿ ಆಗಿರಲಿಲ್ಲ.. ಅವ್ರು ಚಿಕ್ಕವರಿದ್ದಾಗಿನಿಂದಲೂ ತುಂಬಾ ನಾಚಿಕೆ ಸ್ವಭಾವದವರಾಗಿದ್ದರು. ಆದರೆ 2008 ರ ಭಯೋತ್ಪಾದಕರ ದಾಳಿಯ ಸಂದರ್ಬದಲ್ಲಿ ಅವರು ಬದಲಾಗಿಬಿಟ್ಟರು ಮತ್ತು ಅವರ ಅಭಿಪ್ರಾಯ ಎಷ್ಟರ ಮಟ್ಟಿಗೆ ಬದಲಾವಣೆಗೆ ಕಾರಣವಾಗುತ್ತೆ ಅನ್ನುವುದನ್ನು ಅರ್ಥೈಸಿಕೊಂಡರು.

11 ನೇ ವರ್ಷದವರಿದ್ದಾಗಲೇ ಚರ್ಚಾಸ್ಪರ್ದೆಯಲ್ಲಿ ಭಾಗವಹಿಸುತ್ತಿದ್ದರು

ಸೈನ್ಯಾಧಿಕಾರಿಯ ಮಗನಾಗಿರುವ ಅರುಣಬ್ ಗೋಸ್ವಾಮಿ ದೇಶದ ಬೇರೆಬೇರೆ ಶಾಲೆಗಳಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿದ್ರು.ದೆಹಲಿಯ ಮೌಂಟ್ ಸೈಂಟ್ ಮೇರಿ ಶಾಲೆಯಲ್ಲಿ 10 ತರಗತಿ ಮುಗಿಸಿದ್ರು. ಜಬಲ್ಪುರದ ಕೇಂದ್ರೀಯ ವಿದ್ಯಾಲಯದಲ್ಲಿ ಅವರ ಪಿಯುಸಿ ಶಿಕ್ಷಣ ಮುಕ್ತಾಯವಾಯಿತು. ಗೋಸ್ವಾಮಿ ಅವರ ತಾತ ಕೂಡ ಸ್ವಾತಂತ್ರ್ಯ ಹೋರಾಟಗಾರರಾಗಿದ್ದವರು. ಅಷ್ಟೇ ಅಲ್ಲ ಲಾಯರ್ ಮತ್ತು ಕಾಂಗ್ರೆಸ್ ಲೀಡರ್ ಆಗಿ ಕೂಡ ಅವರು ಗುರುತಿಸಿಕೊಂಡಿದ್ದವರು. ಇನ್ನೊಬ್ಬರು ತಾತ ಕಮ್ಯುನಿಸ್ಟ್ ಆಗಿದ್ರು ಮತ್ತು ಅಸ್ಸಾಂನ ವಿರೋಧ ಪಕ್ಷದ ನಾಯಕರಾಗಿದ್ದವರು. ಅರುಣಬ್ ನಾಚಿಕೆ ಸ್ವಭಾವದವರಾಗಿದ್ದರೂ ಕೂಡ ಶಾಲಾ ದಿನಗಳಲ್ಲೇ ಗೋಸ್ವಾಮಿ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದರಂತೆ.

ಡಿಯು ಮತ್ತು ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಪದವಿ ಪಡೆದದ್ದು

ಹ್ಯೂಮನ್ ಸೋಸೈಟಿ ಬಗ್ಗೆ ಗೋಸ್ವಾಮಿಗೆ ಎಲ್ಲಿಲ್ಲದ ಆಸಕ್ತಿ. ಅರುಣಬ್ ಓದಿದ್ದು ಬಿಎ. ದೆಹಲಿಯ ಹಿಂದೂ ಕಾಲೇಜಿನಲ್ಲಿ ಗೋಸ್ವಾಮಿ ಸೋಷಿಯಾಲಜಿಯಲ್ಲಿ ಪದವಿ ಮುಗಿಸಿದ್ರು. ನಂತ್ರ ಮಾಸ್ಟರ್ ಡಿಗ್ರಿ ಪಡೆದದ್ದು ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಸೈಂಟ್ ಆಂಟನಿ ಕಾಲೇಜಿನಲ್ಲಿ.1994 ರಲ್ಲಿ ಭಾರತಕ್ಕೆ ವಾಪಾಸಾದ ಗೋಸ್ವಾಮಿ ಕೋಲ್ಕತ್ತಾದ ಟೆಲಿಗ್ರಾಫ್ ಆಫೀಸೊಂದರಲ್ಲಿ ಪತ್ರಕರ್ತರಾಗಿ ಸೇರಿಕೊಂಡ್ರು. ಪ್ರಿಂಟ್ ಜರ್ನಲಿಸಂ ಬಗ್ಗೆ ಗೋಸ್ವಾಮಿ ಅಷ್ಟೇನು ಆಸಕ್ತಿ ಇಲ್ಲದ ಕಾರಣ ದೂರದರ್ಶನದ ನ್ಯೂಸ್ ಚಾನಲ್ ನಲ್ಲಿ ಅವಕಾಶಕ್ಕಾಗಿ ಕಾದಿದ್ರು. ತಮ್ಮ ಮೊದಲ ಕೆಲಸವನ್ನು ಒಂದು ವರ್ಷದೊಳಗಾಗಿಯೇ ಗೋಸ್ವಾಮಿ ಬಿಟ್ಟಿದ್ರು.

1993 ರಲ್ಲಿ ಎನ್ ಡಿಟಿವಿ ಗೆ ಸೇರಿದ್ರು. 2003 ರಲ್ಲಿ ಏಷ್ಯಾದ ಅತ್ಯುತ್ತಮ ನಿರೂಪಕರೆನಿಸಿಕೊಂಡ್ರು

ಪತ್ರಿಕೆಯಲ್ಲಿ ಕೆಲಸ ತೊರೆದು ಬಿಡುವ ನಿರ್ಧಾರ ಮಾಡಿದಾಗ ಆಕ್ಸ್ ಫರ್ಡ್ ಯುನಿವರ್ಸಿಟಿಯ ಗೆಳೆಯ ರಾಜೀವ್ ಸರ್ದೇಸಾಯಿ ಅವರ ಬಳಿ ಸಲಹೆ ಪಡೆದಿದ್ದರಂತೆ ಗೋಸ್ವಾಮಿ. ಆಗ ರಾಜ್ದೀಪ್ ಗೋಸ್ವಾಮಿ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ನೀಡಿದ್ದರಂತೆ. 1993ರಲ್ಲಿ ಎನ್ ಡಿ ಟಿವಿಗೆ ಸುದ್ದಿ ಸಲಹೆಗಾರರಾಗಿ ಸೇರಿದ್ರು ಮತ್ತು ನ್ಯೂಸ್ ಟುನೈಟ್ ಮೆಟ್ರೋ ಕಾರ್ಯಕ್ರಮಕ್ಕೆ ವರದಿಗಾರರಾಗಿ ಕೂಡ ಕೆಲಸ ನಿರ್ವಹಿಸಿದ್ರು. 1998ರಲ್ಲಿ ನ್ಯೂಸ್ ಎಡಿಟರ್ ಆದ್ರು ಮತ್ತು ಬರ್ಕಾದತ್ ಮತ್ತು ರಾಜ್ದೀಪ್ ಸರ್ ದೇಸಾಯಿ ಅವ್ರ ಜೊತೆ ಸ್ಕ್ರೀನ್ ಹಂಚಿಕೊಂಡು ವಾರ್ತಾವಾಚಕರಾದ್ರು.ನ್ಯೂಸ್ ನೈಟ್ ಅನ್ನೋ ಕಾರ್ಯಕ್ರಮಕ್ಕೂ ಗೋಸ್ವಾಮಿ ಆಂಕರ್ ಆಗಿದ್ರು. 2003 ರಲ್ಲಿ ಏಷ್ಯನ್ ಟೆಲಿವಿಷನ್ ನೀಡುವ ದ ಬೆಸ್ಟ್ ನ್ಯೂಸ್ ಆಂಕರ್ ಪ್ರಶಸ್ತಿಯಲ್ಲಿ ರನ್ನರ್ ಅಪ್ ಆಗಿದ್ದರು.

ಪತ್ರಿಕೋದ್ಯಮ ತೊರೆಯುವ ನಿರ್ಧಾರ ಮಾಡಿದ್ರು

ತಮ್ಮ ವೃತ್ತಿಯನ್ನು ಕೇವಲ ಸಂಬಳಕ್ಕಾಗಿ ಮಾಡುತ್ತಿದ್ದ ವ್ಯಕ್ತಿ ಗೋಸ್ವಾಮಿ ಅಲ್ಲ. ಅವರಿಗೆ ಜರ್ನಲಿಸಂ ಬಗ್ಗೆ ಒಂದು ಪ್ಯಾಷನ್ ಇತ್ತು. 2002ರಲ್ಲಿ ವೃತ್ತಿಬದುಕನ್ನು ತೊರೆದು ಬಿಡುವಷ್ಟು ಬೇಸತ್ತಿದ್ದರಂತೆ ಅರುಣಬ್. ಪ್ರತಿಕೋದ್ಯಮದಲ್ಲಿರುವ ಕೆಟ್ಟ ಚಾಳಿಗಳು, ಭ್ರಷ್ಟಾಚಾರ ಇವುಗಳಿಂದ ಬೇಸರವಾಗಿತ್ತಂತೆ. ಪತ್ರಿಕೋದ್ಯಮಕ್ಕೆ ಇರಬೇಕಾದ ನಿಜವಾದ ಜವಾಬ್ದಾರಿಯನ್ನು ಭಾರತದ ಪತ್ರಿಕೋದ್ಯಮ ಮರೆತಿದೆ ಅಂತ ಅನ್ನಿಸಿ ದುಃಖಿತರಾಗಿದ್ರಂತೆ ಅದೇ ಸಂದರ್ಬದಲ್ಲಿ ಅವರು ಟೈಮ್ಸ್ ಗ್ರೂಪ್ ಗೆ ಸೇರಿಕೊಂಡಿದ್ದು.

2004 ರಲ್ಲಿ ಟೈಮ್ಸ್ ಆಫ್ ಇಂಡಿಯಾ ಸೇರಿದ್ರು. 2006ರಲ್ಲಿ ಚೀಫ್ ಎಡಿಟರ್ ಆಗಿದ್ರು

ಟೈಮ್ಸ್ ನೌ ಸಂಸ್ಥೆ ಗೋಸ್ವಾಮಿ ಅವರದ್ದೇ ಆದ ಒಂದು ಕಾರ್ಯಕ್ರಮವನ್ನು ಅವರದ್ದೇ ಆದ ಶೈಲಿಯಲ್ಲಿ ನಿರೂಪಿಸಲು ಅವಕಾಶ ಮಾಡಿಕೊಟ್ಟಿತ್ತು. ಸುದ್ದಿಯಲ್ಲಿ ಚರ್ಚೆಯನ್ನು ಆರಂಭಿಸಿದ್ರು. ದಿ ನ್ಯೂಸ್ ಅವರ ಕಾರ್ಯಕ್ರಮ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಅಷ್ಟೇ ಅಲ್ಲ ಫ್ರಾಂಕ್ಲಿ ಸ್ಪೀಕಿಂಗ್ ವಿತ್ ಅರುಣಬ್ ಕಾರ್ಯಕ್ರಮ ಕೂಡ ಬಹಳನೇ ಫೇಮಸ್ ಆಗಿದೆ. ಅದ್ರಲ್ಲಿ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ, ಯುಸ್ ಸೆಕ್ರಟರಿ ಹಿಲರಿ ಕ್ಲಿಂಟನ್, ಅಫಘಾನಿಸ್ತಾನದ ಪ್ರಸಿಡೆಂಟ್ ಹಮೀದ್ ಖರ್ಜಾಯಿ,14 ದಲಾಯಿ ಲಾಮ ಅವ್ರ ಇಂಟರ್ ವ್ಯೂ ಬಹಳ ಪ್ರಸಿದ್ಧಿಯಾಗಿದೆ.

ಭಾರತೀಯ ದೂರದರ್ಶನ ಕ್ಷೇತ್ರದಲ್ಲೇ ಅತೀ ಹೆಚ್ಚು ಜನ ನೋಡುವ ದಿ ನ್ಯೂಸ್ ಅವರ ಶೋ ನ ಆಂಕರ್

ನವಂಬರ್ 26 2008 ರ ಮುಂಬೈ ಅಟ್ಯಾಕ್ ಸಂದರ್ಬದಲ್ಲಿ ಗೋಸ್ವಾಮಿ ಅವರಿಗೆ ಪತ್ರಿಕೋದ್ಯಮದಲ್ಲಿ ಕೇವಲ ಪತ್ರಕರ್ತರ ಅಭಿಪ್ರಾಯಗಳನ್ನು ಹೇಳಿದ್ರೆ ಸಾಕಾಗೋದಿಲ್ಲ ಅಂತ ಅನ್ನಿಸಲು ಪ್ರಾರಂಭವಾಯ್ತು. ಹಾಗಾಗಿ ತಮ್ಮ ನ್ಯೂಸ್ ಹವರ್ ಕಾರ್ಯಕ್ರಮವನ್ನು ಹೆಚ್ಚು ಚರ್ಚಾಸ್ಪದವಾಗುವಂತೆ ಮಾಡಿದ್ರು.ಆದಷ್ಟು ಪಾರದರ್ಶಕ ಮಾತುಗಳಿಗೆ ಅವಕಾಶ ನೀಡಲಾಯ್ತು. ಭಿನ್ನವಿಭಿನ್ನ ಅಭಿಪ್ರಾಯಗಳಿಗೆ ವೇದಿಕೆ ಕಲ್ಪಿಸಲಾಯ್ತು. ಹಾಗಾಗಿ ದಿನದಿಂದ ದಿನಕ್ಕೆ ನ್ಯೂಸ್ ಹವರ್ ಕಾರ್ಯಕ್ರಮದ ಟಿಆರ್ ಪಿ ಹೆಚ್ಚುತ್ತಲೇ ಸಾಗಿತ್ತು. ಭಾರತೀಯ ದೂರದರ್ಶನ ಕ್ಷೇತ್ರದಲ್ಲಿ ಅತೀ ಹೆಚ್ಚು ಜನ ನೋಡುವ ಕಾರ್ಯಕ್ರಮ ಅಂತ ಅನ್ನಿಸಿಕೊಳ್ಳುವಲ್ಲಿ ಅರುಣಬ್ ಅವ್ರ ಡಿಸ್ಕಷನ್ ಯಶಸ್ವಿಯಾಯ್ತು. ಹಾಗಾಗಿ ಹತ್ತು ಹಲವು ಪ್ರಶಸ್ತಿ , ಸನ್ಮಾನಗಳು ಗೋಸ್ವಾಮಿ ಅವರನ್ನು ಅರಸಿ ಬಂದಿದೆ.

ಅರುಣಬ್ ಗೋಸ್ವಾಮಿ ಜೀವನದಿಂದ ನಾವು ಕಲಿಯಬೇಕಿರುವುದು ಏನು

ದಿಟ್ಟ ನಿರ್ಧಾರಗಳು, ಭಯವಿಲ್ಲದೆ ಮಾತನಾಡುವುದು, ಲೈಫಲ್ಲಿ ಗುರಿ ಇಟ್ಟುಕೊಳ್ಳುವುದು, ಯಾರನ್ನ ಬೇಕಿದ್ರೂ ಚಾಲೆಂಜಿಂಗ್ ಆಗಿ ಪ್ರಶ್ನೆ ಮಾಡುವುದು ಹೀಗೆ ಹೇಳುತ್ತಾ ಸಾಗಿದ್ರೆ ಹಲವು ವ್ಯಕ್ತಿತ್ವ ಅರಣಬ್ ರಲ್ಲಿದೆ. ಅದನ್ನು ಪ್ರತಿಯೊಬ್ಬರೂ ರೂಢಿಸಿಕೊಂಡಲ್ಲಿ ತಮ್ಮ ಕರಿಯರ್ ನಲ್ಲಿ ಉತ್ತುಂಗಕ್ಕೇರಲು ಸಾಧ್ಯವಿದೆ. ತಮ್ಮ ಸ್ವತಂತ್ರ್ಯ ಅಭಿಪ್ರಾಯಗಳೇ ಅವರನ್ನು ದಿನದಿಂದ ದಿನಕ್ಕೆ ತಮ್ಮ ಕರಿಯರ್ ನಲ್ಲಿ ಮೇಲಕ್ಕೇರಲು ಸಹಾಯ ಮಾಡಿದ್ದು. ಹೆಚ್ಚಿನವ್ರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು

English summary
If you list out all the news anchors in India that can be liked or disliked, but definitely not ignored, then topping that list would be Arnab Goswami. With strong one-liners such as ‘the nation wants to know’ and ‘you cannot escape these tough questions,’ Goswami can take his panelists out of their comfort zones, and even interfere with them while they speak. However, this wasn’t how Goswami approached journalism from the beginning, and was even shy as a child. What made him realize the importance of expressing his opinion to bring change was a terrorist attack in 2008. Soon, his show The Newshour on Times Now became the most-watched English news programme on Indian television.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia