ನಿಮಗೆ ಪ್ರಾಣಿ-ಪಕ್ಷಿಗಳೆಂದ್ರೆ ಸಿಕ್ಕಾಪಟ್ಟೆ ಇಷ್ಟನಾ.. ಅದೆಷ್ಟೋ ಮಂದಿ ನಿಮಗೆ ಪಶು ವೈದ್ಯರಾಗುವಂತೆ ಸಲಹೆ ನೀಡಿದ್ದಾರಾ. ಡೋಂಟ್ ವರಿ ನೀವು ಪ್ರಾಣಿ ಪ್ರಿಯರಾಗಿದ್ದಲ್ಲಿ, ನಿಮಗೆ ಬರೀ ಪಶು ವೈದ್ಯ ಮಾತ್ರವಲ್ಲ ಈ ಫೀಲ್ಡ್‌ನಲ್ಲಿ ಹಲವಾರು ಕೆರಿಯರ್ ಆಯ್ಕೆಗಳಿವೆ. ನಿಮಗಾಗಿ ಇಲ್ಲಿ ಕೆರಿಯರ್ ಲಿಸ್ಟ್ ನೀಡಲಾಗಿದ್ದು, ನಿಮಗೆ ಯಾವುದು ಬೆಸ್ಟ್ ಎಂದು ನೀವೇ ಆಯ್ಕೆ ಮಾಡಿಕೊಳ್ಳಿ. ಹಾಗೂ ಪಿಯುಸಿ ನಂತ್ರ ಯಾವ ಕೋರ್ಸ್ ಮಾಡಿದ್ರೆ ಈ ಫೀಲ್ಡ್‌ಗೆ ಎಂಟ್ರಿಯಾಗಬಹುದು ಎಂದು ಕೂಡಾ ಇಲ್ಲಿದೆ ಮಾಹಿತಿ.

ಪಶು ವೈದ್ಯ:
ಪಶು ವೈದ್ಯ ವೃತ್ತಿ ಎಲ್ಲರ ಮನಸ್ಸಿನಲ್ಲಿ ಮೊದಲು ಬರುವ ಜಾಬ್ ಆಗಿದೆ. ಪಶು ವೈದ್ಯರು ಪ್ರಾಣಿಗಳ ಆರೋಗ್ಯ ನೋಡಿಕೊಳ್ಳುವವರಾಗಿದ್ದಾರೆ. ನೀವು ಪ್ರಾಣಿ ಪ್ರಿಯರಾಗಿದ್ದರೆ ಈ ವೃತ್ತಿಯನ್ನ ನಿಮ್ಮ ಕೆರಿಯರ್ ಆಯ್ಕೆಯಾಗಿ ರೂಪಿಸಿಕೊಳ್ಳಿ. ವೆಟರಿನರಿ ಸೈನ್ಸ್ ವಿಷಯದಲ್ಲಿ ಪದವಿ ಪಡೆದಿದದ್ರೆ ಇಲ್ಲ, ಬಯಾಲಾಜಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರೆ ನೀವು ಈ ಫೀಲ್ಡ್‌ಗೆ ಎಂಟ್ರಿ ಆಗಬಹುದು.

ಪೆಟ್ ಫುಡ್ ಟೆಸ್ಟರ್:
ಇತ್ತೀಚಿಗಿನ ದಿನಗಳಲ್ಲಿ ಪ್ರಾಣಿಗಳ ಆಹಾರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ. ಜತೆಗೆ ಅವುಗಳ ಕಾಳಜಿ ಬಗ್ಗೆ ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ. ಪ್ರಾಣಿಗಳ ಫುಡ್ ನ ನ್ಯೂಟ್ರಿಶನ್ ಹಾಗೂ ಟೇಸ್ಟ್ ಗಳನ್ನ ಇವರು ಟೆಸ್ಟ್ ಮಾಡುತ್ತಾರೆ.
ಪ್ರಾಣಿಗಳ ಆಹಾರವನ್ನ ಇವರು ಟೆಸ್ಟ್ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ. ನೀವು ಪೆಟ್ ಫುಡ್ ಟೆಸ್ಟರ್ ಆಗಬೇಕು ಎಂದುಕೊಂಡಿದ್ದರೆ, ಫುಡ್ ಸೈನ್ಸ್ ವಿಷಯದಲ್ಲಿ ನೀವು ಬಿಎಸ್ ಸಿ ಪಡೆದಿರಬೇಕು. ಜೂಲಾಜಿ ವಿಷಯದಲ್ಲಿ ಟೆಕ್ನಾಲಾಜಿ ಹಾಗೂ ಎಂಎಸ್‌ಸಿ ಪಡೆದಿರಬೇಕು. ಪದವಿ ಪಡೆದ ಕೂಡಲೇ ನೀವು ಈ ಫೀಲ್ಡ್‌ಗೆ ಎಂಟ್ರಿಯಾಗಬಹುದು. ಆದ್ರೆ ನಿಮ್ಮನ್ನ ನೀವು ಫುಲ್ ಕ್ವಾಲಿಫೈಡ್ ಮಾಡಿಕೊಳ್ಳುವುದು ಉತ್ತಮ ಹಾಗಾಗಿ ಡಬಲ್ ಡಿಗ್ರಿ ಮಾಡಿಕೊಳ್ಳಿ.

ಜೂ ಕೀಪರ್:
ಸಾರ್ವಜನಿಕ ಹಾಗೂ ಪ್ರಾಣಿಗಳ ವಿಷಯದಲ್ಲಿ ಜೂ ಕೀಪರ್ ಪ್ರಮುಖ ಪಾತ್ರವಹಿಸುತ್ತಾರೆ. ಇವರು ಪ್ರಾಣಿಗಳ ನಿರ್ವಹಣೆಯನ್ನ ಚೆನ್ನಾಗಿ ಮಾಡುತ್ತಾರೆ ಜತೆಗೆ ಅವುಗಳಿಗೆ ಸರಿಯಾದ ಟ್ರೈನಿಂಗ್ ಕೂಡಾ ನೀಡುತ್ತಾರೆ. ಇವರು ವನ್ಯ ಜೀವಿಗಳ ಜತೆ ಆಪ್ತರಾಗಿರುತ್ತಾರೆ. ಜೂ ಕೀಪರ್ ಆಗಬೇಕಾದ್ರೆ ಅದಕ್ಕಾಗಿ ಪ್ರತ್ಯೇಕ ಕೋರ್ಸ್ ನ ಅಗತ್ಯವಿಲ್ಲ. ಬದಲಿಗೆ ಯಾರೆಲ್ಲಾ ಶಾಲೆಯನ್ನ ಅರ್ಧಕ್ಕೆ ಬಿಟ್ಟಿದ್ದೀರೋ ಅವರೆಲ್ಲಾ ಈ ಹುದ್ದೆಗೆ ಟ್ರೈ ಮಾಡಬಹುದು. ನಿಮಗೆ ಪ್ರಾಣಿಗಳ ಮೇಲೆ ಪ್ರೀತಿ ಇದ್ದು, ಅವುಗಳ ಜತೆ ಕೆಲಸ ಮಾಡಬಲ್ಲೀರಿ ಎನ್ನುವ ಕಾಂಫಿಡೆನ್ಸ್ ಇದ್ದರೆ ನೀವು ಈ ಫೀಲ್ಡ್ ಗೆ ಎಂಟ್ರಿ ಆಗಬಹುದು.

ಜೂಲಾಜಿಸ್ಟ್:
ಪ್ರಾಣಿಗಳ ಬಗ್ಗೆ ಅಧ್ಯಯನ ಮಾಡುವ ತಜ್ಞರೇ ಜೂಲಾಜಿಸ್ಟ್. ಅರಣ್ಯ ಹಾಗೂ ಜೂ ಗಳಲ್ಲಿ ಇವರು ಕಾರ್ಯ ನಿರ್ವಹಿಸುತ್ತಾರೆ. ಪ್ರಾಣಿಗಳ ಬೇಕು, ಬೇಡಗಳ ಬಗ್ಗೆ ಇವರು ಅಧ್ಯಯನ ಮಾಡುತ್ತಾರೆ. ನೀವು ಜೂಲಾಜಿಸ್ಟ್ ಆಗಬೇಕು ಅಂದುಕೊಂಡಿದ್ದರೆ ಜೂಲಾಜಿ ವಿಷಯದಲ್ಲಿ ಎಂಎಸ್‌ಸಿ ಪದವಿ ಮಾಡಿರಬೇಕು. ಅಷ್ಟೇ ಅಲ್ಲ ಡಾಕ್ಟರ್ ಪದವಿ ಕೂಡಾ ಆ ಸಬ್‌ಜೆಕ್ಟ್ ನಲ್ಲಿ ಪಡೆದಿರಬೇಕು.

ಅನಿಮಲ್ ಶೆಲ್ಟರ್ ವರ್ಕರ್:
ಮನೆ ಮಠ ಇಲ್ಲದ ಪ್ರಾಣಿ ಪಕ್ಷಿಗಳಿಗೆ ಶಾಶ್ವತವಾಗಿ ಇಲ್ಲ ತಾತ್ಕಲಿಕವಾಗಿ ವಸತಿ ಕಲ್ಪಿಸುವುದೇ ಇವರ ಕೆಲಸವಾಗಿದೆ. ಇವರು ಪ್ರಾಣಿಗಳ ಕೇರ್ ಟೇಕರ್ ಆಗಿರುತ್ತಾರೆ. ಅಂದ್ರೆ ಪ್ರಾಣಿಗಳನ್ನ ಸ್ವಚ್ಛಗೊಳಿಸುವುದು, ಅವುಗಳಿಗೆ ಸರಿಯಾದ ಆಹಾರ ನೀಡುವುದು, ಹಾಗೂ ಅವುಗಳಿಗೆ ವಸತಿ ಕಲ್ಪಿಸಿಕೊಡುವುದು ಇವೆಲ್ಲ ಇವರ ಕರ್ತವ್ಯ. ಇನ್ನು ನೀವು ಈ ಫೀಲ್ಡ್‌ಗೆ ಎಂಟ್ರಿ ಆಗಬೇಕು ಎಂದಿದ್ರೆ ಇದಕ್ಕೆ ಯಾವ ಶಿಕ್ಷಣದ ಅಗತ್ಯವಿಲ್ಲ ಬದಲಿಗೆ ಪ್ರಾಣಿಗಳ ಮೇಲೆ ಪ್ರೀತಿ ಇರಬೇಕು.

ಅನಿಮಲ್ ಕೇರ್‌ಟೇಕರ್:
ಅನಿಮಲ್ ಕೇರ್‌ಟೇಕರ್ ಹಾಗೂ ಅನಿಮಲ್ ಶೆಲ್ಟರ್ ವರ್ಕರ್ ಮಧ್ಯೆ ತುಂಬಾ ವ್ಯತ್ಯಾಸವಿದೆ. ಕೇರ್ ಟೇಕರ್ ಗೆ ಪ್ರಾಣಿಗಳ ಕೇರಿಂಗ್ ಹೇಗೆ ತೆಎಗದುಕೊಳ್ಳುವುದು, ಹಾಗೂ ಹೇಗೆ ಸ್ವಚ್ಚತೆ ಮಾಡುವುದು ಎನ್ನುವುದರ ಬಗ್ಗೆ ಟ್ರೈನಿಂಗ್ ನೀಡಲಾಗುತ್ತದೆ. ಅನಿಮಲ್ ಕೇರ್‌ಟೇಕರ್ ಹೆಚ್ಚು ಟೈಂ ಪ್ರಾಣಿಗಳ ಜತೆಯೇ ಕಳೆಯಬೇಕು. ಪ್ರಾಣಿಗಳ ವರ್ತನೆ ಗ್ರಹಿಸುವುದು, ಅವುಗಳಿಗೆ ಟ್ರೈನಿಂಗ್ ನೀಡುವುದು ಇವೆಲ್ಲ ಇವರ ಕೆಲಸವಾಗಿದೆ. ಇವರು ಪ್ರಾಣಿಗಳಿಗೆ ಸ್ನೇಹಿತರಾಗಿರುತ್ತಾರೆ. ಅನಿಮೇಲ್ ಟೇಕ್‌ಕೇರ್ ಆಗಲು ಬೇಸಿಕ್ ಶಿಕ್ಷಣ ಪಡೆದಿದ್ದರೆ ಸಾಕು.

ಪೆಟ್ ಅಡಾಪ್ಷನ್ ಕೌನ್ಸಿಲರ್:
ಪ್ರಾಣಿಗಳನ್ನ ದತ್ತು ಪಡೆಯುವ ಕೇಂದ್ರ. ಇಲ್ಲಿ ಜನರಿಗೆ ಉತ್ತಮವಾದ ಪ್ರಾಣಿಗಳನ್ನ ದತ್ತು ನೀಡುವುದು ಈ ಕೇಂದ್ರದ ಕೆಲಸ. ಇಲ್ಲಿ ಪೆಟ್ ಅಡಾಪ್ಷನ್ ಕೌನ್ಸಿಲರ್ ಏನು ಮಾಡುತ್ತಾರೆ ಎಂದ್ರೆ ದತ್ತು ತೆಗೆದುಕೊಳ್ಳಲು ಬಂದಿರುವ ವ್ಯಕ್ತಿಯನ್ನ ಕೌನ್ಸಿಲ್ ಮಾಡಿ, ಅವರಿಗೆ ಯಾವ ರೀತಿಯ ಪ್ರಾಣಿ ಬೇಕು ಎಂದು ನಿರ್ಧರಿಸಿ ದತ್ತು ನೀಡುತ್ತಾರೆ. ಸೈಕಾಲಾಜಿ ವಿಷಯದಲ್ಲಿ ಪದವಿ ಪಡೆದಿರಬೇಕು.

ವೈಲ್ಡ್ ಲೈಫ್ ಫೋಟೋಗ್ರಾಫಿ:
ಮಾಧ್ಯಮಕ್ಕೆ ಇಲ್ಲ ರಿಸರ್ಚ್ ಮೂಲಗಳಿಗಾಗಿ ವೈಲ್ಡ್ ಲೈಫ್ ಫೋಟೋಗ್ರಾಫರ್ ಕೆಲಸ ಮಾಡುತ್ತಾರೆ. ಇವರು ಅರಣ್ಯಗಳಲ್ಲಿ ಹಾಗೂ ಇನ್ನಿತ್ತರ ಸಂದಿಗ್ಧ ಪರಿಸ್ಥಿತಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಡೇಂಜರಸ್ ಪ್ರದೇಶಗಳಿಗೆ ತೆರಳಿ ವನ್ಯಜೀವಿಗಳ ಫೋಟೋ ಕ್ಲಿಕ್ಕಿಸ ಬೇಕು. ಈ ಫೀಲ್ಡ್‌ಗೆ ನೀವು ಎಂಟ್ರಿಯಾಗ ಬೇಕು ಎಂದಾದ್ರೆ ನೀವು ಜರ್ನಲಿಸಂ ಪದವಿ ಪಡೆದಿರಬೇಕು ಇಲ್ಲ ಫೋಟೋಜರ್ನಲಿಸಂ ಕೋರ್ಸ್ ಮಾಡಿರಬೇಕು.