ಕಲಿಕೆ ಕೈ ಹಿಡಿಯಲಿಲ್ಲ ಎಂದಾದ್ರೆ ಈ ಫೀಲ್ಡ್‌ನಲ್ಲಿ ಕೆರಿಯರ್ ರೂಪಿಸಿಕೊಂಡು ಚೆನ್ನಾಗಿ ಸಂಪಾದಿಸಿ

ಕೆಲವೊಂದು ಕೋರ್ಸ್ ಮಾಡಿದ್ರೆ ನೀವು ಕೂಡಾ ಕೈ ತುಂಬಾ ಸಂಪಾದನೆ ಮಾಡಬಹುದು. ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳು ಕೆಲವೊಂದು ಸ್ಕಿಲ್ ಇದ್ದರೆ ಸಾಕು ಈ ಉದ್ಯಮಕ್ಕೆ ಕೈ ಹಾಕಿ ಹೆಚ್ಚು ಹಣ ಸಂಪಾದಿಸಬಹುದು.

By Kavya

ಚೆನ್ನಾಗಿ ಓದಿ, ಎಲ್ಲರಿಂದಲೂ ಮೆಚ್ಚುಗೆ ಗಳಿಸಿಕೊಂಡು, ಕೈ ತುಂಬಾ ಸಂಬಳ ನೀಡುವ ಕೆಲಸ ನಮ್ಮದಾಗಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಆದ್ರೆ ಏನೂ ಮಾಡುವುದು ಬೆಸ್ಟ್ ಜಾಬ್ ಸಿಗಬೇಕು ಎಂದು ಎಲ್ಲರೂ ಬಯಸುತ್ತಾರೆ ಆದ್ರೆ ಕಲಿಕೆಯಲ್ಲಿ ಮಾತ್ರ ಯಾರೂ ಮುಂದಿರುವುದಿಲ್ಲ. ಪ್ರತಿಯೊಬ್ಬರಿಗೂ ಓದು ಆಗಿ ಬರುವುದಿಲ್ಲ ಹಾಗೂ ಎಲ್ಲರಿಗೂ ಅತೀ ಹೆಚ್ಚು ಅಂಕ ಸ್ಕೋರ್ ಮಾಡುವುದು ಸಾಧ್ಯವಿರುವುದಿಲ್ಲ.

ಕಲಿಕೆ ಕೈ ಹಿಡಿಯಲಿಲ್ಲ ಎಂದಾದ್ರೆ ಈ ಫೀಲ್ಡ್‌ನಲ್ಲಿ ಕೆರಿಯರ್ ರೂಪಿಸಿಕೊಂಡು ಚೆನ್ನಾಗಿ ಸಂಪಾದಿಸಿ

ಹಾಗಿದ್ರೆ ಕಡಿಮೆ ಅಂಕ ಗಳಿಸಿದ್ರೆ ಅವರಿಗೆ ಲೈಫ್ ಇಲ್ಲ ಎಂದು ಅರ್ಥನಾ. ಅವರ ಕೆರಿಯರ್ ಲೈಫ್ ಗೋತಾ ಎಂದರ್ಥನ. ಎಲ್ಲರೂ ಡಾಕ್ಟರ್, ಇಂಜಿನೀಯರ್ ಆಗಲು ಸಾಧ್ಯವಿಲ್ಲ. ಹಾಗಾಗಿ ನೀವು ಕಲಿಕೆಯಲ್ಲಿ ಹಿಂದಿದ್ದರಾ ಎಂದಾದ್ರೆ ಕೆಲವೊಂದು ಕೋರ್ಸ್ ಮಾಡಿದ್ರೆ ನೀವು ಕೂಡಾ ಕೈ ತುಂಬಾ ಸಂಪಾದನೆ ಮಾಡಬಹುದು. ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳು ಕೆಲವೊಂದು ಸ್ಕಿಲ್ ಇದ್ದರೆ ಸಾಕು ಈ ಉದ್ಯಮಕ್ಕೆ ಕೈ ಹಾಕಿ ಹೆಚ್ಚು ಹಣ ಸಂಪಾದಿಸಬಹುದು.

<strong>More Read: ಫಸ್ಟ್ ಡೇ ಜಾಬ್ ತಯಾರಿ ಹೇಗಿರಬೇಕು ಗೊತ್ತಾ ?</strong>More Read: ಫಸ್ಟ್ ಡೇ ಜಾಬ್ ತಯಾರಿ ಹೇಗಿರಬೇಕು ಗೊತ್ತಾ ?

ಹೋಟೆಲ್ ಮ್ಯಾನೇಜ್‌ಮೆಂಟ್

ಹೋಟೆಲ್ ಮ್ಯಾನೇಜ್‌ಮೆಂಟ್

ಇಲ್ಲೂ ಪರೀಕ್ಷೆಗಳಿರುತ್ತದೆ ಹಾಗೂ ಈ ಉದ್ದಿಮೆಗೂ ನೀವು ಪದವಿ ಪಡೆಯಬೇಕಾಗುತ್ತದೆ. ಆದ್ರೆ ಈ ಸಬ್‌ಜೆಕ್ಟ್ ತುಂಬಾ ಇಂಟ್ರಸ್ಟಿಂಗ್ ಆಗಿರುತ್ತದೆ ವಿನಾಃ ನಿಮ್ಮ ತಲೆ ತಿನ್ನುವಂತಿರುವುದಿಲ್ಲ. ಇಲ್ಲಿ ಥಿಯರಿಗಿಂತ ಜಾಸ್ತಿಯಾಗಿ ಪ್ರಾಕ್ಟಿಕಲ್ ಸ್ಟಡಿ ಇರುತ್ತದೆ. ಹೋಟೆಲ್ ಮ್ಯಾನೇಜ್ ಮೆಂಟ್ ಸಬ್‌ಜೆಕ್ಟ್ ಬಗ್ಗೆ ಮೂಲ ಜ್ಞಾನ ಚೆನ್ನಾಗಿದ್ದರೆ ತಿಳಿದುಕೊಂಡಿದ್ದರೆ ಸಾಕು.

ಫೋಟೋಗ್ರಾಫಿ

ಫೋಟೋಗ್ರಾಫಿ

ಈ ಸಬ್‌ಜೆಕ್ಟ್ ಬಗ್ಗೆ ತುಂಬಾ ಹಗುರವಾಗಿ ನೀವು ತಿಳಿದುಕೊಳ್ಳಬೇಡಿ. ಹಾಗೂ ಇಲ್ಲಿ ನಿಮಗೆ ಓದಲು ಏನೂ ಅಷ್ಟೊಂದು ಇರುವುದಿಲ್ಲ. ಆದ್ರೆ ಬದಲಿಗೆ ಕ್ಯಾಮೆರಾ ಹೇಗೆ ಬಳಸಬೇಕು, ಕ್ಯಾಮೆರಾ ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿದುಕೊಂಡಿರುವುದರ ಜತೆಗೆ ಕ್ರಿಯೇಟಿವಿಟಿ ಮೈಂಡ್ ನಿಮ್ಮದಾಗಿರಬೇಕು.

ಡಿಜೆ
 

ಡಿಜೆ

ನಿಮಗೆ ಮ್ಯೂಸಿಕ್ ಅಂದ್ರೆ ತುಂಬಾ ಇಷ್ಟನಾ.. ಇಷ್ಟ ಮಾತ್ರವಲ್ಲದೇ ಮ್ಯೂಸಿಕ್ ಅಂದ್ರೆ ಅದೊಂದು ಹುಚ್ಚು ಅಂತೀರಾ. ಹಾಗಿದ್ರೆ ನೀವು ಡಿಜೆ ಆಗಿ ಕೆರಿಯರ್ ಪ್ರಾರಂಭಿಸಬಹುದು. ಒಮ್ಮೆ ಡಿಜೆ ಬಗ್ಗೆ ಚೆನ್ನಾಗಿ ತಿಳಿದುಕೊಂಡರೆ ಸಾಕು ಆಮೇಲೆ ಚೆನ್ನಾಗಿ ಹಣ ಸಂಪಾದನೆ ಮಾಡಬಹುದು. ಕ್ಲಬ್ ಹಾಗೂ ಪಬ್ ಗಳಲ್ಲಿ ಡಿಜೆ ಆಗುವುದರ ಮೂಲಕ ಕೈ ತುಂಬಾ ಹಣ ಸಂಪಾದಿಸಬಹುದು.

<strong>More Read: ಕಾಲೇಜು ಹುಡುಗೀರಿಗಾಗಿ 5 ಕ್ರೇಜಿ ಬ್ಯೂಟಿ ಟಿಪ್ಸ್</strong>More Read: ಕಾಲೇಜು ಹುಡುಗೀರಿಗಾಗಿ 5 ಕ್ರೇಜಿ ಬ್ಯೂಟಿ ಟಿಪ್ಸ್

 

 

ಎನ್‌ಜಿಓ ಸೇವಕರು

ಎನ್‌ಜಿಓ ಸೇವಕರು

ನಮ್ಮ ದೇಶದಲ್ಲಿ ಅದೆಷ್ಟೋ ಎನ್‌ಜಿಓ ಗಳು ನಡೆಯುತ್ತಿವೆ. ಅಂತಹ ಎನ್‌ಜಿಓ ಗಳಿಗೆ ನಿಮ್ಮಂತ ಯುವಕ-ಯುವತಿಯರು ಬೇಕಾಗಿರುತ್ತಾರೆ. ಅವರಿಗೆ ನಿಮ್ಮ ಸಹಾಯ ಮಾತ್ರ ಬೇಕಿರುವುದಿಲ್ಲ ಬದಲಿಗೆ ವಾಲಂಟೀಯರ್ ಆಗಲು ಏನೆಲ್ಲಾ ಅರ್ಹತೆಗಳು ನಿಮ್ಮಲ್ಲಿ ಇರಬೇಕೋ ಅವೆಲ್ಲವನ್ನ ಸಣ್ಣ ಸಣ್ಣ ಕೋರ್ಸ್ ಗಳ ಮೂಲಕ ನಿಮಗೆ ತಿಳಿಸಿಕೊಡುತ್ತಾರೆ. ಇದರಿಂದ ನೀವು ಸಮಾಜದ ಸೇವೆ ಕೂಡಾ ಮಾಡಿದಂತಾಗುತ್ತದೆ ಹಾಗೂ ಸಂಪಾದನೆ ಕೂಡಾ ಮಾಡಬಹುದು.

ಕ್ರೀಡಾಪಟು

ಕ್ರೀಡಾಪಟು

ನಿಮಗೆ ಕ್ರೀಡೆಯಲ್ಲಿ ಆಸಕ್ತಿ ಇದೆ ಎಂದಾದ್ರೆ ಈ ಕ್ಷೇತ್ರದಲ್ಲಿ ನೀವು ಕೆರಿಯರ್ ರೂಪಿಸಿಕೊಳ್ಳಬಹುದು. ನಿಮಗೆ ಆಸಕ್ತಿ ಇರುವ ಯಾವುದಾದ್ರೂ ಒಂದು ಕ್ರೀಡೆಯನ್ನ ಆಯ್ಕೆ ಮಾಡಿಕೊಳ್ಳಿ. ಹಾಗೂ ಅದರಲ್ಲಿ ಸಾಧನೆ ಮಾಡಲು ಮುನ್ನುಗ್ಗಿ. ಹಾ ಒಂದು ನೆನಪಿಟ್ಟುಕೊಳ್ಳಿ ಇಲ್ಲಿ ನೀವು ಓದುವ ಅವಶ್ಯಕತೆ ಇಲ್ಲದೆ ಇರಬಹುದು ಆದ್ರೆ ಹಾರ್ಡ್ ವರ್ಕ್ ಅಂತೂ ಖಂಡಿತ ಮಾಡಲೇ ಬೇಕು.

<strong>More Read: ಈ 8 ವಿಧಾನ ಮೂಲಕ ಸುಲಭವಾಗಿ ಹಣ ಸಂಪಾದನೆ ಮಾಡಬಹುದು!</strong>More Read: ಈ 8 ವಿಧಾನ ಮೂಲಕ ಸುಲಭವಾಗಿ ಹಣ ಸಂಪಾದನೆ ಮಾಡಬಹುದು!

 

 

For Quick Alerts
ALLOW NOTIFICATIONS  
For Daily Alerts

English summary
In This World Not everyone likes to study as same not everyone is able to study and score also. Well, it has nothing to do with your abilities. But if you suck at studies in school, it means not you won’t be able to have a good career
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X