ಸೋಶಲ್ ಮೀಡಿಯಾದಿಂದ ಕೂಡಾ ಸೆಲಬ್ರಿಟಿಗಳು ಹಣ ಸಂಪಾದಿಸುತ್ತಾರೆ. ಹೌದು ಇನ್ಸ್ಟಾಗ್ರಾಂ, ಫೇಸ್‌ಬುಕ್, ಟ್ವಿಟರ್ ಮುಂತಾದ ಸೋಶಲ್ ಮೀಡಿಯಾಗಳಲ್ಲಿ ನಿಮ್ಮ ಫೋಟೋ ಅಪ್‌ಲೋಡ್ ಮಾಡುವುದರಿಂದ ಮಾತ್ರವಲ್ಲದೇ ನಿಮ್ಮ ಟ್ಯಾಲೆಂಟ್ ಪ್ರದರ್ಶಿಸುವುದರಿಂದ ನೀವು ಹಣ ಸಂಪಾದಿಸಬಹುದು ಎಂಬುವುದು ನಿಮಗೆ ಗೊತ್ತಿದೆ ತಾನೇ.
ಆದ್ರೆ ನೀವು ಸಂಪಾದಿಸುವ ಹಣ ಇದು ನಿಮ್ಮ ಪ್ರೊಫೈಲ್ ಗೆ ಬರುವ ಲೈಕ್ಸ್ ಹಾಗೂ ಫಾಲೋವರ್ಸ್ ಸಂಖ್ಯೆ ಮೇಲೆ ಅವಲಂಬನೆಯಾಗಿರುತ್ತದೆ.
ಫೇಸ್‌ಬುಕ್, ಟ್ವಿಟರ್ ಹಾಗೂ ಇನ್ಸ್ಟಾಗ್ರಾಂ ಮೂಲಕ ಜನರು ಸುಲಭವಾಗಿ ಹಣಗಳಿಸಬಹುದು. ಪ್ರಿಯಾಂಕ ಚೋಪ್ರಾ, ದೀಪಿಕಾ ಪಡುಕೋಣೆ ಸೇರಿದಂತೆ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಹಾಗೂ ಕಿಮ್ ಕರ್ದಾಶಿಯಾ, ಗಿಗಿ ಹದೀದ್ ಸೇರಿದಂತೆ ಹಲವಾರು ಹಾಲಿವುಡ್ ಸೆಲಬ್ರಿಟಿಗಳು ಸುಲಭವಾಗಿ ಸೋಶಲ್ ಮೀಡಿಯಾ ಮೂಲಕ ಹಣ ಸಂಪಾದಿಸುತ್ತಾರೆ.
ಸೋಶಲ್ ಮೀಡಿಯಾದಿಂದ ಕೂಡಾ ಸೆಲಬ್ರಿಟಿಗಳು ಹಣ ಸಂಪಾದಿಸುತ್ತಾರೆ ಎಂದರೆ ನೀವು ನಂಬ್ತೀರಾ? ಆದ್ರೆ ಈಗ ನಿಮ್ಮ ತಲೆಯಲ್ಲಿ ಮೂಡುವ ಪ್ರಶ್ನೆಯೆಂದರೆ ಹೇಗೆ... ಸೋಶಲ್ ಮೀಡಿಯಾದಿಂದ ಸೆಲಬ್ರಿಟಿಗಳು ಹೇಗೆ ಹಣ ಸಂಪಾದಿಸುತ್ತಾರೆ ಎಂದು ನೀವು ಯೋಚಿಸುತ್ತಿದ್ದೀರಾ ನಾವು ಹೇಳ್ತೇವೆ ಮುಂದಕ್ಕೆ ಓದಿ
ಸೋಶಲ್ ಮೀಡಿಯಾದಿಂದ ಸೆಲಬ್ರಿಟಿಗಳು ಹೇಗೆ ಹಣ ಗಳಿಸುತ್ತಾರೆ ಎಂದು ನಾವು ನಿಮಗೆ ಹೇಳುತ್ತೇವೆ ನೋಡಿ. ಬಾಲಿವುಡ್ ಹಾಗೂ ಹಾಲಿವುಡ್ ತಾರೆಯರು, ಯಾವುದಾದ್ರೂ ಬ್ರಾಂಡ್ ಜತೆ ತಮ್ಮ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವುದು ನೀವು ನೋಡಿರುತ್ತೀರಿ. ಆದ್ರೆ ಅವರು ಫ್ರೀಯಾಗಿ ಅದನ್ನ ಮಾಡಿರುತ್ತಾರೆ ಅಂದು ಕೋಂಡಿದ್ದೀರಾ. ಹಾಗೆ ಅಂದುಕೊಂಡಿದ್ರೆ ನಿಮ್ಮ ಗೆಸ್ಸಿಂಗ್ ತಪ್ಪು. ಇಲ್ಲಿ ಅವರು ಫ್ರೀಯಾಗಿ ಮಾಡಿರುವುದಿಲ್ಲ ಬದಲಿಗೆ ಅವರು ಹಾಕುವ ಫೋಟೋದಿಂದ ಅವರ ಅಕೌಂಟ್ ಗೆ ಹಣ ಬಂದು ಬೀಳುತ್ತೆ. ಈ ರೀತಿ ಯಾವುದಾದ್ರೂ ಉತ್ಪನ್ನ ವನ್ನ ಸೆಲಬ್ರಿಟಿಗಳು ತಮ್ಮ ಖಾತೆಯಿಂದ ಪ್ರಮೋಟ್ ಮಾಡುತ್ತಾರೆ. ಟಿವಿ ಹಾಗೂ ಪತ್ರಿಕೆಯಲ್ಲಿ ಬರುವ ಜಾಹೀರಾತಿನಂತೆ ಯಾವುದಾದರೂ ಒಂದು ಪ್ರೊಡಕ್ಟ ಬಗ್ಗೆ ಒಂದು ಲೈನ್ ಬರೆದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ರೆ ಆಯಿತು.
ಕಂಪನಿಗಳ ಉತ್ಪನ್ನವನ್ನ ಪ್ರಮೋಟ್ ಮಾಡಲು ಇದು ಬೆಸ್ಟ್ ವಿಧಾನ. ಯಾಕೆಂದ್ರೆ ಸೆಲಬ್ರಿಟಗಳಿಗೆ ಮಿಲಿಯನ್ ಗಟ್ಟಲೆ ಫಾಲೋವರ್ಸ ಇರುತ್ತಾರೆ. ಅವರ ಖಾತೆಗೆ ಸಾವಿರಾರು ಕಮೆಂಟ್ಸ್ ಹಾಗೂ ಲೈಕ್‌ಗಳು ಹರಿದುಬರುತ್ತಿರುತ್ತವೆ. ಹಾಗಾಗಿ ಅವರು ಯಾವುದಾದರೂ ಪ್ರೊಡಕ್ಟ್ ಬಗ್ಗೆ ಎರಡು ಲೈನ್ ಬರೆದು ತಮ್ಮ ಖಾತೆಯಲ್ಲಿ ಶೇರ್ ಮಾಡಿಕೊಂಡ್ರೆ ಮುಗಿತು. ಉದಾಹರಣೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವಿವಿಧ ಬ್ರ್ಯಾಂಡ್ ನ ಉಡುಗೆ ಧರಿಸಿ ಫೋಟೋ ಪೋಸ್ಟ್ ಮಾಡುತ್ತಾರೆ
ಇದನ್ನೆಲ್ಲಾ ಅವರು ಫ್ರೀಗೆ ಮಾಡಲ್ಲ ಎಂದು ನಿಮಗೆ ಆಶ್ಚರ್ಯ ಆಗುತ್ತಿದೆಯಾ?
ಹೌದು ಅವರು ಫ್ರೀಗೆ ಮಾಡಲ್ಲ. ತಮ್ಮ ಸೋಶಲ್ ಮೀಡಿಯಾ ಅಕೌಂಟ್ ಮೂಲಕ ಅವರು ಮೇಕಪ್ ಬ್ರ್ಯಾಂಡ್, ಬ್ಯಾಗ್, ಚಪ್ಪಲು ಹಾಗೂ ಉಡುಗೆಗಳ ಪ್ರಮೋಟ್ ಮಾಡುತ್ತಾರೆ. ಇದರಿಂದ ಸಖತ್ ಹಣ ಕೂಡಾ ಗಳಿಸುತ್ತಾರೆ. ಸೆಲಬ್ರಿಟಿಗಳನ್ನ ಫಾಲೋ ಮಾಡುವ ಅಭಿಮಾನಿಗಳು ಅವರು ಪ್ರಮೋಟ್ ಮಾಡುವ ಉತ್ಪನ್ನಗಳನ್ನ ಖರೀದಿಸಲು ಮುಂದಾಗುತ್ತಾರೆ. ಇದರಿಂದ ಕಂಪನಿಗೂ ಲಾಭವಾಗುತ್ತದೆ. ಈಗ ಹೇಳಿ ಇದು ಸ್ಮಾರ್ಟ್ ಐಡಿಯಾ ತಾನೆ. ಆದ್ರೆ ಸೆಲಬ್ರಟಿಗಳು ಕೆಲವೊಂದು ರೂಲ್ಸ್ ಕೂಡಾ ಈ ವೇಳೆ ಫಾಲೋ ಮಾಡಬೇಕಾಗುತ್ತದೆ. ಫೋಟೋ ಪೋಸ್ಟ್ ಮಾಡುವ ವೇಳೆ ಅವರು ಸರಿಯಾದ ಹ್ಯಾಶ್ ಟ್ಯಾಗ್ ನೀಡಬೇಕು. ಹಾಗೂ ಅವರ ಫೋಟೋ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನ ರೀಚ್ ಆಗುವಂತಿರಬೇಕು.
ಇನ್ನು ಯಾವತ್ತಾದ್ರೂ ಪ್ರೊಡಕ್ಟ್ ಜತೆ ಸೆಲಬ್ರಿಟಿ ಫೋಟೋ ನೊಡಿದ್ರೆ ಕೂಡಲೇ ನೀವು ಗೆಸ್ ಮಾಡಬಹುದು ಹೌದು ಇದು ಪೇಡ್ ಪೋಸ್ಟ್ ಎಂದು.