CET Exam 2020 Preparation Tips: ಪರೀಕ್ಷೆಗೆ ಇನ್ನೆರಡು ದಿನ ಬಾಕಿ ಇರುವಾಗ ಸಿದ್ದತೆ ಹೇಗಿರಬೇಕು ?

ಸಿಇಟಿ ಪರೀಕ್ಷೆಗೆ ಅಂತಿಮ ಕ್ಷಣದಲ್ಲಿ ತಯಾರಿ ಹೇಗಿರಬೇಕು?

CET Exam 2020: ದೇಶದೆಲ್ಲೆಡೆ ಕೊರೊನಾ ಸಮಸ್ಯೆ ಹೆಚ್ಚಾಗುತ್ತಿದ್ದು, ಒಂದೆಡೆ ವಿದ್ಯಾರ್ಥಿಗಳ ಭವಿಷ್ಯಕ್ಕೂ ಪರಿಣಾಮ ಬೀರಿದೆ. ಈ ನಡುವೆಯೇ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಇತ್ತೀಚೆಗೆ ಪ್ರಕಟಗೊಂಡಿದೆ. ಅಲ್ಲದೆಯೇ ಜುಲೈ 30 ಮತ್ತು 31ರಂದು ಸಿಇಟಿ ಪರೀಕ್ಷೆ ನಡೆಯಲಿದ್ದು, ಇನ್ನೇನು ಪರೀಕ್ಷೆಗೆ ಎರಡೇ ದಿನ ಬಾಕಿ ಇದ್ದು ಪರೀಕ್ಷೆಗೆ ಅಂತಿಮ ಕ್ಷಣಗಳಲ್ಲಿ ಯಾವ ರೀತಿ ತಯಾರಿ ನಡೆಸಬೇಕು ಎನ್ನವುದಕ್ಕೆ ಕರಿಯರ್ ಇಂಡಿಯಾ ಸಲಹೆ ನೀಡುತ್ತಿದೆ.

ಪರೀಕ್ಷಾ ವಿವರ ತಿಳಿಯಿರಿ:

ಪರೀಕ್ಷಾ ವಿವರ ತಿಳಿಯಿರಿ:

ವಿದ್ಯಾರ್ಥಿಗಳು ಏನೇ ಅಧ್ಯಯನ ನಡೆಸಿದರೂ ಸಹ ಪರೀಕ್ಷಾ ವಿವರ ತಿಳಿಯುವುದು ಪ್ರಮುಖವಾದುದು. ಹಾಗಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಯು ಕೇವಲ ಒಂದು ಗಂಟೆ 20 ನಿಮಿಷಗಳನ್ನು ಪ್ರತಿ ಪೇಪರ್‌ಗೆ ನೀಡಲಾಗಿರುತ್ತದೆ.ಒಟ್ಟಾರೆ ಪರೀಕ್ಷೆಯು 180 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಪೇಪರ್ 1 ಗಣಿತ ವಿಷಯವು 60 ಪ್ರಶ್ನೆಗಳನ್ನು ಒಳಗೊಂಡಿದ್ದು ಒಂದು ಪ್ರಶ್ನೆಗೆ ಸರಾಸರಿ 1 ನಿಮಿಷಗಳ ಕಾಲಾವಧಿಯೊಳಗೆ ಉತ್ತಿರಿಸಬೇಕಿರುತ್ತದೆ ಮತ್ತು ಪೇಪರ್ 2- ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದ ವಿಷಯಗಳು 120 ಪ್ರಶ್ನೆಗಳನ್ನು ಒಳಗೊಂಡಿದ್ದು ಪ್ರತಿ ಪ್ರಶ್ನೆಗೆ ಅರ್ಧ ನಿಮಿಷಗಳೊಳಗೆ ಉತ್ತಿರಿಸಬೇಕಿರುತ್ತದೆ.ಹಾಗಾಗಿ ಬಹಳ ಎಚ್ಚರದಿಂದ ಉತ್ತರಿಸುವುದು ಅಗತ್ಯ. ಇಲ್ಲಿ ಯಾವುದೇ ನೆಗೆಟಿವ್ ಮಾರ್ಕಿಂಗ್ ಇರುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.

ಸಮಯ ನಿರ್ವಹಣೆಯ ಬಗ್ಗೆ ಪ್ಲಾನ್ ಮಾಡಿ:

ಸಮಯ ನಿರ್ವಹಣೆಯ ಬಗ್ಗೆ ಪ್ಲಾನ್ ಮಾಡಿ:

ಈ ರೀತಿಯ ಪರೀಕ್ಷೆಗಳಲ್ಲಿ ಸಮಯಕ್ಕೆ ತುಂಬಾನೆ ಪ್ರಾಮುಖ್ಯತೆ ಇದೆ. ವರ್ಷವೆಲ್ಲಾ ಓದಿದ್ದು ಈ ಪರೀಕ್ಷಾ ಅವಧಿಯಲ್ಲಿ ವ್ಯರ್ಥಗೊಂಡರೆ ಓದಿಯೂ ವ್ಯರ್ಥ ಆಗಿಬಿಡುತ್ತದೆ. ಹಾಗಾಗಿ ಪರೀಕ್ಷೆಗೆ ಇರುವ ಎರಡೇ ದಿನಗಳಲ್ಲಿ ಪರೀಕ್ಷಾ ಸಂದರ್ಭದಲ್ಲಿ ಸಮಯ ನಿರ್ವಹಣೆ ಮಾಡುವುದು ಹೇಗೆ ಎನ್ನುವುದನ್ನು ಪೋಷಕರೊಡನೆ ಚರ್ಚಿಸಿ ಅದಕ್ಕೆ ಬೇಕಾದ ಸಿದ್ದತೆ ಮಾಡಿಕೊಳ್ಳಿ.

ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಹೆಚ್ಚು ಗಮನಿಸಿ:

ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಹೆಚ್ಚು ಗಮನಿಸಿ:

ವರ್ಷವೆಲ್ಲಾ ಓದಿದ್ದಾಗಿದೆ ಹಾಗಾಗಿ ಈಗ ಪುನರ್ ಮನನ ಮಾಡುವುದು ಒಳಿತು. ಹೌದು ಈಗಿನ ದಿನಗಳಲ್ಲಿ ಎಲ್ಲಾ ಮಾಹಿತಿಗಳು ಅಂತರ್ಜಾಲ ತಾಣದಲ್ಲಿ ಲಭ್ಯವಿದ್ದು ಪ್ರವೇಶ ಪರೀಕ್ಷೆಯ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಪಡೆದುಕೊಂಡು ಉತ್ತರಿಸಲು ಪ್ರಾರಂಭಿಸಿ. ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡುವಾಗ ಅಲ್ಲಿ ಯಾವ ರೀತಿ ಪ್ರಶ್ನೆಗಳು ಮತ್ತು ಆಯ್ಕೆಗಳನ್ನು ರೂಪಿಸಿದ್ದಾರೆ ಎಂಬುದನ್ನು ಗಮನಿಸಿ ಒಂದೇ ರೀತಿಯ ಪ್ರಶ್ನೆಗಳನ್ನು ಎಷ್ಟು ವಿಧವಾಗಿ ಕೇಳಬಹುದು ಎಂಬುದನ್ನು ನೀವೆ ಊಹಿಸಿಕೊಳ್ಳಿ ಆಗ ಉತ್ತರಿಸುವುದು ಸುಲಭ. ಇದರಿಂದ ಕಲಿಕೆ ಇನ್ನಷ್ಟು ಸುಲಭವಾಗುತ್ತದೆ ಮತ್ತು ನಿಮ್ಮ ಬುದ್ದಿ ಇನ್ನಷ್ಟು ಚುರುಕಾಗುತ್ತದೆ. ಪರೀಕ್ಷೆಗೆ ಇರುವ ಕೆಲವೇ ಕ್ಷಣಗಳಲ್ಲಿ ಹೀಗೆ ಮಾಡುವುದರಿಂದ ನಿಮ್ಮ ಆತ್ಮವಿಶ್ವಾಸ ಕೂಡ ಹೆಚ್ಚುತ್ತದೆ.

ಪರೀಕ್ಷಾ ಹಿಂದಿನ ದಿನ ಚೆನ್ನಾಗಿ ನಿದ್ದೆ ಮಾಡಿ:

ಪರೀಕ್ಷಾ ಹಿಂದಿನ ದಿನ ಚೆನ್ನಾಗಿ ನಿದ್ದೆ ಮಾಡಿ:

ಈ ವರ್ಷ ಕೊರೋನಾ ಸಮಸ್ಯೆಯಿಂದಾಗಿ ನಿಗದಿತ ವೇಳಾಪಟ್ಟಿಯಂತೆ ಸಿಇಟಿ ಪರೀಕ್ಷೆ ನಡೆಯದ ಕಾರಣ ಚಿಂತೆಗೀಡಾಗದೆ ಈಗಿರುವ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಿ. ವಿದ್ಯಾರ್ಥಿಗಳು ಪರೀಕ್ಷೆಯ ಹಿಂದಿನ ದಿನ ಚೆನ್ನಾಗಿ ನಿದ್ದೆ ಮಾಡುವುದು ಒಳಿತು. ಇದರಿಂದ ಮೆದುಳು ಇನ್ನಷ್ಟು ಚುರುಕುಗೊಳ್ಳುತ್ತದೆ ಮತ್ತು ಪರೀಕ್ಷೆಯನ್ನು ಉತ್ತಮವಾಗಿ ಎದುರಿಸಲು ಸಹಾಯ ಮಾಡುತ್ತದೆ. ಪರೀಕ್ಷಾ ಹಾಲ್‌ನಲ್ಲಿ ಇನ್ನಷ್ಟು ಚುರುಕಿನಿಂದ ಎಲ್ಲ ಪ್ರಶ್ನೆಗಳಿಗೂ ಯಾವುದೇ ಗೊಂದಲವಿಲ್ಲದೆ ಸರಿಯಾಗಿ ಉತ್ತರಿಸಬಹುದು.

ಆರೋಗ್ಯ ಮತ್ತು ಆಹಾರದ ಬಗೆಗೆ ಕಾಳಜಿ ವಹಿಸಿ:

ಆರೋಗ್ಯ ಮತ್ತು ಆಹಾರದ ಬಗೆಗೆ ಕಾಳಜಿ ವಹಿಸಿ:

ವಿದ್ಯಾರ್ಥಿಗಳು ಪರೀಕ್ಷಾ ಟೆನ್ಷನ್‌ನಲ್ಲಿ ಆರೋಗ್ಯ ಮತ್ತು ಆಹಾರದ ಬಗೆಗೆ ಹೆಚ್ಚು ನಿರ್ಲಕ್ಷ್ಯ ವಹಿಸುವುದು ಹೆಚ್ಚು ಅಪಾಯಕಾರಿ. ಏಕೆಂದರೆ ಅನೇಕ ವಿದ್ಯಾರ್ಥಿಗಳು ಪರೀಕ್ಷಾ ಸಂದರ್ಭದಲ್ಲಿ ಆರೋಗ್ಯ ಸರಿಯಿಲ್ಲ ಹಾಗಾಗಿ ಪರೀಕ್ಷೆಯನ್ನು ಚೆನ್ನಾಗಿ ಬರೆಯೋಕೆ ಆಗಲಿಲ್ಲ ಎಂದು ಹೇಳುವುದನ್ನು ಕೇಳಿರುತ್ತೇವೆ. ಹೌದು ಇದು ನಿಜಕ್ಕೂ ಅಪಾಯಕಾರಿ ಆರೋಗ್ಯ ಹದಗೆಟ್ಟರೆ ಪರೀಕ್ಷೆಯಲ್ಲಿ ಆಕ್ಟಿವ್ ಆಗಿರಲು ಸಾಧ್ಯವಾಗದೇ ನೀವು ನಿಮ್ಮ ಕೈಯಾರೆ ಅಂಕಗಳನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಪ್ರತಿನಿತ್ಯ ನಿದ್ದೆ ಚೆನ್ನಾಗಿ ಮಾಡುವುದರ ಜೊತೆಗೆ ಆಹಾರ ಚೆನ್ನಾಗಿ ಸೇವಿಸಿ ಆರೋಗ್ಯದ ಬಗೆಗೆ ಕೂಡ ಕಾಳಜಿ ವಹಿಸಿ.

For Quick Alerts
ALLOW NOTIFICATIONS  
For Daily Alerts

English summary
Here we are giving tips about how to prepare for cet exam 2020 during last minute.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X