ಸಕ್ಸಸ್ ನಿಂದ ದೂರವುಳಿದಿರುವ ವಿದ್ಯಾರ್ಥಿಗಳು... ಚಾಣಕ್ಯನ ಸಲಹೆ ಏನು?

By Kavya

ಅರ್ಥ ಶಾಸ್ತ್ರದ ಪಿತಾಮಹ ಕೌಟಿಲ್ಯ ಎಂದೇ ಪ್ರಸಿದ್ಧರಾದ ಚಾಣಕ್ಯನ ಬಗ್ಗೆ ಹೊಸತಾಗಿ ಏನು ಹೇಳಬೇಕಾಗಿ ಇಲ್ಲ. ಭಾರತ ಕಂಡ ಬುದ್ದಿವಂತ ಅರ್ಥ ಶಾಸ್ತ್ರಜ್ಞ ಮತ್ತು ರಾಜ ನೀತಿಜ್ಞರಲ್ಲಿ ಚಾಣಕ್ಯ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಇವರು ಚಕ್ರವರ್ತಿ ಚಂದ್ರ ಗುಪ್ತನಿಗೆ ಸಲಹೆಗಾರರಾಗಿದ್ದರು. ಚಂದ್ರಗುಪ್ತ ಇವರ ನೀತಿಗಳನ್ನ ಫಾಲೋ ಮಾಡಿ ಸಕ್ಸಸ್ ಆಗುತ್ತಿದ್ದರಂತೆ. ಅಷ್ಟೇ ಅಲ್ಲ ಚಾಣಕ್ಯರನ್ನ "ಭಾರತದ ಮೆಕ್ಯಾವೆಲಿ" ಎಂದು ಕರೆಯುವುದೂ ಉಂಟು. ಆತನ ನೀತಿಗಳನ್ನು ಜೀವನದಲ್ಲಿ ಅಳವಡಿಸಿದರೆ ಜೀವನದಲ್ಲಿ ಯಶಸ್ಸು ಸಾಧಿಸುವುದು ಖಂಡಿತಾ

ಚಾಣಕ್ಯ ವಿದ್ಯಾರ್ಥಿಗಳಿಗಾಗಿ ಅನೇಕ ಫಿಲೋಸಫಿಗಳನ್ನ ಬರೆದಿದ್ದಾರೆ. ಅವುಗಳನ್ನ ಜೀವನದಲ್ಲಿ ಅಳವಡಿಸಿಕೊಂಡ್ರೆ ಯಶಸ್ಸು ಖಂಡಿತ ನಿಮ್ಮದಾಗುವುದು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಏನೆಲ್ಲಾ ಮಾಡಬಾರದು ಎಂದು ಇಲ್ಲಿ ತಿಳಿಸಲಾಗಿದೆ.

ಹೆಚ್ಚು ನಿದ್ದೆ ಮಾಡುವುದು:
 

ಹೆಚ್ಚು ನಿದ್ದೆ ಮಾಡುವುದು:

ಹೆಚ್ಚು ನಿದ್ದೆ ಮಾಡುವುದು ಆಲಸಿತನದ ಲಕ್ಷಣ. ಇದರಿಂದ ಆಲಸಿ ಮನುಷ್ಯ ಜೀವನದಲ್ಲಿ ಹಲವಾರು ಅವಕಾಶಗಳನ್ನ ಮಿಸ್ ಮಾಡಿಕೊಳ್ಳುತ್ತಾನೆ

 ಕೋಪ:

ಕೋಪ:

ತಾಳ್ಮೆ ಇಲ್ಲದ ವ್ಯಕ್ತಿ ಕೂಡಲೇ ಕೋಪ ಗೊಳ್ಳುತ್ತಾನೆ. ಕೋಪ ಮನಸ್ಥತಿಯು ಯಾವತ್ತೂ ಶಾಂತಿಯಿಂದಿರುವುದಿಲ್ಲ. ಕೋಪವು ಕೆಟ್ಟ ಕಾರ್ಯಕ್ಕೆ ಕೈ ಹಾಕುವಂತೆ ಪ್ರಚೋದನೆ ನೀಡುತ್ತದೆ

ದುರಾಶೆ:

ದುರಾಶೆ:

ಸರಿ ತಪ್ಪು ಯೋಚಿಸದೇ ತಮ್ಮ ಒಳಿತಿಗಾಗಿ ದುರಾಶೆ ವ್ಯಕ್ತಿಗಳು ಇತರರಿಗೆ ಹಿಂದಿನಿಂದ ಕೆಟ್ಟದ್ದನ್ನು ಬಯಸುತ್ತಾರೆ. ಇಂತಹ ಜನರು ಯಾವಾಗಲೂ ಇತರರ ವಸ್ತುಗಳ ಮೇಲೆ ಕಣ್ಣು ಇಟ್ಟಿರುತ್ತಾರೆ ಹಾಗೂ ಅವುಗಳನ್ನ ಪಡೆಯಲು ಹೊಂಚುಹಾಕುತ್ತಿರುತ್ತಾರೆ. ಇಂತಹ ಗುಣಗಳಿಂದ ದೂರವಿರುವುದು ಒಳಿತು

ಕಾಮ:

ಕಾಮ:

ಕಾಮ ಎಂಬುವುದು ಎಲ್ಲರ ಜೀವನದಲ್ಲೂ ಇರುತ್ತದೆ. ಆದ್ರೆ ಅದು ಜಾಸ್ತಿಯಾದ್ರೆ ನಿಮ್ಮನ್ನ ನಿಮ್ಮ ಗುರಿಯತ್ತ ತಲುಪದಂತೆ ಮಾಡುತ್ತದೆ. ವಿದ್ಯಾರ್ಥಿಗಳು ಇದರಿಂದ ದೂರ ಇರುವುದು ಒಳಿತು. ಇಂತಹ ಭಾವನೆಗಳಿಗೆ ಸಿಲುಕದೇ ಇರುವುದು ಬೆಸ್ಟ್

ಇತರರನ್ನು ಅಪಹಾಸ್ಯ ಮಾಡುವುದು:
 

ಇತರರನ್ನು ಅಪಹಾಸ್ಯ ಮಾಡುವುದು:

ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಹೆಚ್ಚು ಗಮನ ಕೊಡಬೇಕು ಬದಲಿಗೆ ಇತರರನ್ನ ಅಪಹಾಸ್ಯ ಮಾಡಿ ಎಂಜಾಯ್ ಮಾಡಬಾರದು. ವಿದ್ಯಾರ್ಥಿ ಜೀವನದಲ್ಲಿ ಇತರರನ್ನು ಅಪಹಾಸ್ಯ ಮಾಡುವುದು ಹೆಚ್ಚು. ಆದ್ರೆ ನೀವು ಸಕ್ಸಸ್ ವಿದ್ಯಾರ್ಥಿಯಾಗಬೇಕಾದ್ರೆ ಈ ಗುಣದಿಂದ ದೂರವಿರಿ

ಹೊಟ್ಟೆ ಬಾಕತನ:

ಹೊಟ್ಟೆ ಬಾಕತನ:

ಆಹಾರ ಸೇವನೆಯಲ್ಲಿ ಯಾರಿಗೆ ಕಂಟ್ರೋಲ್ ಇರುತ್ತದೋ ಅವರು ಆರೋಗ್ಯ ಸಮಸ್ಯೆಯಿಂದ ಪಾರಾಗುತ್ತಾರೆ. ಶಾರ್ಪ್ ಮೈಂಡ್ ಹಾಗೂ ಉತ್ತಮ ಆರೋಗ್ಯಕ್ಕೆ ಪ್ರತಿಯೊಬ್ಬರು ಉತ್ತಮ ಹಾಗೂ ಹೆಲ್ತಿ ಆಹಾರ ಸೇವನೆ ಮಾಡಬೇಕು

ಹಣ ಹಾಗೂ ಸಂಪನ್ಮೂಲ ಪೋಲು:

ಹಣ ಹಾಗೂ ಸಂಪನ್ಮೂಲ ಪೋಲು:

ಇಂದಿನ ಆಧುನಿಕ ಜಗತ್ತಿನಲ್ಲಿ ಲೇಟ್ ನೈಟ್ ಪಾರ್ಟಿ, ಡ್ರಿಂಕ್ಸ್ ಎಲ್ಲಾ ಕಾಮನ್ ಆಗಿದೆ. ವಿದ್ಯಾರ್ಥಿಗಳಂತೂ ಇಂತಹ ಭೋಗದ ಜೀವನಕ್ಕೆ ಮೊದಲ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಹಾಗಾಗಿ ವಿದ್ಯೆಯತ್ತ ಗಮನಕೊಡದೇ ಇಂತಹ ಚಟುವಟಿಕೆಗಳಿಗೆ ಹೆಚ್ಚು ಆಕರ್ಷಿತರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ

For Quick Alerts
ALLOW NOTIFICATIONS  
For Daily Alerts

English summary
The Acharya Chanakya Advisor of Emperor Chandragupta Maurya. chandragupta Followed his advice. chanakya wrote several philosophies for students. if students follow these tips, they can easily achieve success in their career life
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X