Children's Day Essay : ಮಕ್ಕಳ ದಿನಾಚರಣೆಗೆ ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ

ಭಾರತದ ಮೊದಲ ಪ್ರಧಾನ ಮಂತ್ರಿ ಪಂಡಿತ್ ಜವಾಹರ್ ಲಾಲ್ ರವರ ಜನ್ಮ ದಿನದ ಪ್ರಯುಕ್ತ ನವೆಂಬರ್ 14 ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ದಿನ ಮಕ್ಕಳ ಶಿಕ್ಷಣ ಮತ್ತು ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಆಚರಣೆಯನ್ನು ಮಾಡಲಾಗುತ್ತದೆ.

ಮಕ್ಕಳ ದಿನಾಚರಣೆ ಕುರಿತು ಪ್ರಬಂಧ ಬರೆಯುವುದು ಹೇಗೆ ?

ದೇಶದೆಲ್ಲೆಡೆ ಮಕ್ಕಳ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಶಾಲೆ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಅದರಲ್ಲೂ ಸಾಮಾನ್ಯವಾಗಿ ಪ್ರಬಂಧ ಬರೆಯುವ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತದೆ.

ಮಕ್ಕಳ ದಿನಾಚರಣೆ ಇತಿಹಾಸ:

ಮಕ್ಕಳ ದಿನಾಚರಣೆ ಇತಿಹಾಸ:

ಮಕ್ಕಳ ದಿನಾಚರಣೆ ಕುರಿತು ಮಾತನಾಡುವ ಅಥವಾ ಪ್ರಬಂಧ ಬರೆಯುವ ಮುನ್ನ ಈ ದಿನದ ಬಗ್ಗೆ ನಮಗೆ ಅರಿವಿರಬೇಕು. ಈ ದಿನದ ಇತಿಹಾಸವನ್ನು ತಿಳಿದಿರಬೇಕು. ಹಾಗೆ ಪ್ರಬಂಧದ ಆರಂಭದಲ್ಲಿ ಈ ವಿಷಯದಿಂದಲೇ ಪ್ರಾರಂಭಿಸಬೇಕು.

ನವೆಂಬರ್ 14 ರಂದು ದೇಶದೆಲ್ಲೆಡೆ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ದಿನವನ್ನು ಪ್ರಧಾನಿ ಜವಾಹರ್ ಲಾಲ್ ಪಂಡಿತ್ ರವರ ಜನ್ಮದಿನದ ಸವಿನೆನಪಿಗಾಗಿ ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತದೆ. 1964ರಲ್ಲಿ ಪ್ರಧಾನ ಮಂತ್ರಿ ಪಂಡಿತ್ ಜವಾಹರ್ ಲಾಲ್ ನಿಧನ ಹೊಂದಿದ ಬಳಿಕ ಈ ದಿನವನ್ನು ಮಕ್ಕಳ ದಿನಾಚರಣೆಯಾಗಿ ಜಾರಿಗೆ ಬಂದಿತು.

ಮಕ್ಕಳ ದಿನಾಚರಣೆಯ ಪ್ರಾಮುಖ್ಯತೆ:

ಮಕ್ಕಳ ದಿನಾಚರಣೆಯ ಪ್ರಾಮುಖ್ಯತೆ:

ದೇಶದಲ್ಲಿ ಮಕ್ಕಳ ದಿನಾಚರಣೆಯನ್ನು ಈ ದಿನ ಏತಕ್ಕಾಗಿ ಆಚರಿಸಲಾಗುತ್ತದೆ. ಈ ದಿನದ ಪ್ರಾಮುಖ್ಯತೆ ಏನು ಮತ್ತು ಇದನ್ನು ಯಾವ ಉದ್ದೇಶಕ್ಕಾಗಿ ಆಚರಣೆ ಮಾಡಲಾಗುತ್ತಿದೆ. ಈ ಮೂಲಕ ಮಕ್ಕಳ ಹಕ್ಕು ಮತ್ತು ಕರ್ತವ್ಯಗಳನ್ನು ಪ್ರಬಂಧದಲ್ಲಿ ನಮೂದಿಸಬಹುದು.

ಮಕ್ಕಳ ದಿನಾಚರಣೆಯ ಉಲ್ಲೇಖಗಳು:

ಮಕ್ಕಳ ದಿನಾಚರಣೆಯ ಉಲ್ಲೇಖಗಳು:

ಮಕ್ಕಳ ದಿನಾಚರಣೆ ಕುರಿತು ಪ್ರಬಂಧ ಬರೆಯುವಾಗ ಇತಿಹಾಸ ಮತ್ತು ಪ್ರಾಮುಖ್ಯತೆಗಳ ಜೊತೆಗೆ ಕೆಲವು ಪ್ರಮುಖ ಉಲ್ಲೇಖಗಳನ್ನು ನಮೂದಿಸಬೇಕಿರುತ್ತದೆ. ಉದಾಹರಣೆಗೆ ನೆಹರೂರವರೆ ಹೇಳಿರುವಂತೆ "The children of today will make the India of tomorrow. The way we bring them up will determine the future of the country,".
ಈ ರೀತಿಯ ಸ್ಫೂರ್ತಿದಾಯಕ ಉಲ್ಲೇಖಗಳನ್ನು ಪ್ರಬಂಧದಲ್ಲಿ ಸೇರಿಸಿದರೆ ಬರಹ ಸಂಪೂರ್ಣ ಅರ್ಥವಾಗಿರುತ್ತದೆ.

ಮಕ್ಕಳ ದಿನಾಚರಣೆಯ ಸಂಭ್ರಮಾಚರಣೆ:

ಮಕ್ಕಳ ದಿನಾಚರಣೆಯ ಸಂಭ್ರಮಾಚರಣೆ:

ಈ ದಿನ ಶಾಲೆ, ಶಿಕ್ಷಣ ಸಂಸ್ಥೆಗಳು ಮತ್ತು ಕಾಲೇಜುಗಳಲ್ಲಿಯೂ ಕೂಡ ರಸಪ್ರಶ್ನೆ, ನೃತ್ಯ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಬಗ್ಗೆ ಕೂಡ ಪ್ರಬಂಧದಲ್ಲಿ ಬರೆಯಬಹುದು.

ಜವಾಹರ್ ಲಾಲ್ ನೆಹರು ಜೀವನಚರಿತ್ರೆ:

ಜವಾಹರ್ ಲಾಲ್ ನೆಹರು ಜೀವನಚರಿತ್ರೆ:

ಪಂಡಿತ್ ಜವಾಹರ್ ಲಾಲ್ ನೆಹರು ಜನ್ಮದಿನದ ಪ್ರಯುಕ್ತ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಹಾಗಾಗಿ ಚಾಚಾ ನೆಹರು ರವರ ಜೀವನ ಚರಿತ್ರೆಯನ್ನು ಪ್ರಬಂಧದಲ್ಲಿ ಸೇರಿಸಬಹುದು. ಅವರ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ಹೋರಾಟದ ಬಗ್ಗೆಯೂ ಪ್ರಬಂಧದಲ್ಲಿ ಬರೆಯಬಹುದು.

ಪ್ರಬಂಧ ಬರೆಯುವ ಮುನ್ನ ಈ ವಿಷಯಗಳು ನೆನಪಿರಲಿ:

ಪ್ರಬಂಧ ಬರೆಯುವ ಮುನ್ನ ಈ ವಿಷಯಗಳು ನೆನಪಿರಲಿ:

* ವಿದ್ಯಾರ್ಥಿಗಳು ಮಕ್ಕಳ ದಿನಾಚರಣೆಯ ಇತಿಹಾಸ, ಉದ್ದೇಶ ಮತ್ತು ಆಚರಣೆಯ ಸಂಪೂರ್ಣ ಮಾಹಿತಿಯನ್ನು ಪ್ರಬಂಧ ಬರೆಯುವ ಮುನ್ನ ತಿಳಿದುಕೊಳ್ಳಬೇಕು.
* ಪ್ರಬಂಧವನ್ನು ಹೇಗೆ ಪ್ರಾರಂಭಿಸಿ? ಹೇಗೆ ಕೊನೆಗೊಳಿಸಬೇಕು ಎಂಬುದನ್ನು ಮುಂಚೆಯೇ ಪ್ಲಾನ್ ಮಾಡಿಕೊಳ್ಳಿ.
* ಪ್ರಬಂಧ ಬರೆಯುವ ಮುನ್ನ ಭಾರತದಲ್ಲಿ ಮಕ್ಕಳ ದಿನಾಚರಣೆಯ ಆಚರಣೆ ಮತ್ತು ವಿಶ್ವ ಮಕ್ಕಳ ದಿನಾಚರಣೆಯ ನಡುವಿನ ವ್ಯತ್ಯಾಸವನ್ನು ತಿಳಿಯಬೇಕು.
* ನೀವು ಪ್ರಬಂಧ ಬರೆಯುವಾಗ ಯಾವುದೇ ತಪ್ಪುಗಳನ್ನು ಮಾಡಬೇಡಿ. ಆದಷ್ಟು ತಪ್ಪು ಮಾಡುವುದನ್ನು ನಿಯಂತ್ರಿಸಿ.

For Quick Alerts
ALLOW NOTIFICATIONS  
For Daily Alerts

English summary
November 14 is celebrated as children's day. So here we are giving tips to write essay on children's day.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X