Children's Day Speech : ಮಕ್ಕಳ ದಿನಾಚರಣೆಯಂದು ಭಾಷಣ ಹೇಗೆ ಮಾಡಬೇಕು ?

ನವೆಂಬರ್ 14ರಂದು ಎಲ್ಲೆಡೆ ಮಕ್ಕಳ ದಿನಾಚರಣೆಯ ಸಂಭ್ರಮ. ಇನ್ನು ಶಾಲೆಗಳಲ್ಲಿ ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಆಚರಿಸಲಾಗುತ್ತದೆ. ಕಾರ್ಯಕ್ರಮಗಳಲ್ಲಿ ಭಾಷಣವೇ ಪ್ರಧಾನವಾಗಿರುತ್ತದೆ. ಹಾಗಾಗಿ ನಾವಿಲ್ಲಿ ಭಾಷಣ ಮಾಡುವುದು ಹೇಗೆ ಎನ್ನುವುದಕ್ಕೆ ಸಲಹೆಯನ್ನು ನೀಡಲಾಗುತ್ತಿದೆ.

 
ಮಕ್ಕಳ ದಿನಾಚರಣೆಯ ಭಾಷಣಕ್ಕೆ ಇಲ್ಲಿದೆ ಸಲಹೆ

ವೇದಿಕೆಯ ಮೇಲಿರುವ ಮುಖ್ಯಗುರುಗಳೇ ಶಿಕ್ಷಕರೇ, ಅತಿಥಿ ಗಣ್ಯರೇ ಹಾಗೂ ನನ್ನ ನೆಚ್ಚಿನ ಸ್ನೇಹಿತ ಸ್ನೇಹಿತೆಯರೇ ನಿಮಗೆಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು. ನಾವಿಂದು ಮಕ್ಕಳ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದ್ದೇವೆ, ನಮ್ಮ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಜನ್ಮದಿನವನ್ನು ಆಚರಿಸುತ್ತಿದ್ದೇವೆ ಎಂದು ಎಲ್ಲರಿಗೂ ತಿಳಿದಿದೆ.

ಪಂಡಿತ್ ಜವಾಹರ್‌ ಲಾಲ್ ಒಬ್ಬ ಸ್ವಾತಂತ್ರ್ಯ ಹೋರಾಟಗಾರರು, ಭಾರತದ ಮೊದಲ ಪ್ರಧಾನಿ ಮತ್ತು ಭಾರತದ ಸ್ವಾತಂತ್ರ್ಯ ಮೊದಲು ಮತ್ತು ನಂತರ ರಾಜಕೀಯದಲ್ಲಿ ಕೇಂದ್ರ ವ್ಯಕ್ತಿಯಾಗಿದ್ದರು. ಮಹಾತ್ಮ ಗಾಂಧಿಯವರ ಮಾರ್ಗದರ್ಶನದಡಿಯಲ್ಲಿ ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಒಬ್ಬ ಶ್ರೇಷ್ಟ ನಾಯಕನಾಗಿ ಹೊರಹೊಮ್ಮಿದವರು 1947ರಲ್ಲಿ ಭಾರತ ಸ್ವತಂತ್ರ ರಾಷ್ಟ್ರವಾಗಿ ಸ್ಥಾಪನೆಯಾದಂದಿನಿಂದ 1964ರಲ್ಲಿ ಅವರ ಮರಣದವರೆಗೂ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಭಾರತೀಯ ಮಕ್ಕಳಲ್ಲಿ ಅವರು ಚಾಚಾ ನೆಹರು ಎಂದು ಪ್ರಸಿದ್ಧರಾಗಿದ್ದರು.

ಜವಾಹರಲಾಲ್ ನೆಹರು ಬ್ರಿಟಿಷ್ ಭಾರತದ ಅಲಹಾಬಾದಿನಲ್ಲಿ ನವೆಂಬರ್ 14, 1889ರಂದು ಜನಿಸಿದರು. ನೆಹರು ಅವರ ತಂದೆ ಮೋತಿಲಾಲ್ ನೆಹರೂ, ತಾಯಿ ಸ್ವರೂಪ ರಾಣಿ. ನೆಹರೂ ಅವರಿಗೆ ವಿಜ್ಞಾನ ಮತ್ತು ತತ್ವಶಾಸ್ತ್ರದಲ್ಲ ಆಸಕ್ತಿ ಹೊಂದಿದ್ದರು. ಈ ಆಸಕ್ತಿಯು ಅವರನ್ನು ಬೌದ್ಧ ಮತ್ತು ಹಿಂದೂ ಧರ್ಮಗ್ರಂಥಗಳ ಅಧ್ಯಯನಕ್ಕೆ ಪ್ರೇರೇಪಿಸಿದವು. ಇದು ಅವರು ಬರೆದ "ದಿ ಡಿಸ್ಕವರಿ ಆಫ್ ಇಂಡಿಯಾ" ದಲ್ಲಿ ಪರಿಪಕ್ವವಾಗಿ ಹೊರಹೊಮ್ಮಿತು.

ನೆಹರೂ ಅವರು 18 ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿದ್ದರು. 1947 ಆಗಸ್ಟ್ 14ರ ಮಧ್ಯರಾತ್ರಿ ಸಂಸತ್ತನ್ನುದ್ದೇಶಿಸಿ ಮಾಡಿದ 'ಎ ಟ್ರಿಸ್ಟ್ ವಿಥ್ ಡೆಸ್ಟಿನಿ' ಭಾಷಣ ಪ್ರಸಿದ್ಧವಾಗಿದೆ. ಭಾರತದ ಮೊದಲ ಪ್ರಧಾನಮಂತ್ರಿಯಾಗಿ ಮತ್ತು ವಿದೇಶ ವ್ಯವಹಾರಗಳ ಸಚಿವರಾಗಿ ನೆಹರೂ ಆಧುನಿಕ ವಿದೇಶಾಂಗ ನೀತಿಯೊಂದಿಗೆ ಆಧುನಿಕ ಭಾರತ ಸರ್ಕಾರ ಮತ್ತು ರಾಜಕೀಯ ಸಂಸ್ಕೃತಿಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಗ್ರಾಮೀಣ ಭಾರತದ ದೂರದ ಮೂಲೆಗಳಲ್ಲಿ ಮಕ್ಕಳನ್ನು ತಲುಪುವ ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣವನ್ನು ಒದಗಿಸುವ ವ್ಯವಸ್ಥೆಯನ್ನು ರಚಿಸಿದ್ದಕ್ಕಾಗಿ ಅವರು ಪ್ರಶಂಸಿಸಲ್ಪಟ್ಟಿದ್ದಾರೆ. ಆಧುನಿಕ ಭಾರತದ ನಿರ್ಮಾಪಕ ಎಂದು ಗುರುತಿಸಲ್ಪಟ್ಟಿದ್ದಾರೆ.

 

ನೆಹರೂ ಅವರ "ಗ್ಲಿಂಪ್ಸಸ್ ಆಫ್ ವರ್ಲ್ಡ್ ಹಿಸ್ಟರಿ" ಮತ್ತು ಅವರ "ಆತ್ಮಚರಿತ್ರೆ" , "ಟುವರ್ಡ್ ಫ್ರೀಡಂ","ಲೆಟರ್ಸ್ ಫ್ರಮ್ ಎ ಫಾದರ್ ಟು ಹಿಸ್ ಡಾಟರ್" ಮೊದಲಾದ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. 1955 ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು ನೆಹರೂ ಅವರಿಗೆ ನೀಡಲಾಯಿತು.

1962ರ ನಂತರ ನೆಹರೂರವರ ಆರೋಗ್ಯವು ಕ್ರಮೇಣವಾಗಿ ಕುಸಿಯಿತು. 1963ರ ಹೊತ್ತಿಗೆ ಕಾಶ್ಮೀರದಲ್ಲಿ ಚೇತರಿಸಿಕೊಳ್ಳಲು ಕೆಲವು ತಿಂಗಳುಗಳು ಕಳೆದವು. ನೆಹರೂ ಒಬ್ಬ ವ್ಯಕ್ತಿಯಾಗಿ ಮತ್ತು ರಾಜಕಾರಣಿಯಾಗಿ ಭಾರತದ ಮೇಲೆ ಹೆಚ್ಚು ಪ್ರಭಾವ ಬೀರಿದ್ದರು.

For Quick Alerts
ALLOW NOTIFICATIONS  
For Daily Alerts

English summary
Here we are giving speech ideas for children's day in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X