Children's Day : ಚಾಚಾ ನೆಹರು ಅವರ ಜನ್ಮದಿನದಂದು ಮಕ್ಕಳ ದಿನವನ್ನು ಆಚರಣೆ ಮಾಡೋದ್ಯಾಕೆ ತಿಳಿದಿದೆಯಾ

ಜವಾಹರ್‌ಲಾಲ್ ನೆಹರು ಅವರ ಜನ್ಮದಿನದಂದು ಮಕ್ಕಳ ದಿನವನ್ನು ಆಚರಿಸುವುದೇಕೆ ?

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರತಿ ನವೆಂಬರ್ 14ರಂದು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮದಿನವನ್ನು ಆಚರಿಸಲಾಗುತ್ತದೆ. ಈ ದಿನದಂದೇ ಮಕ್ಕಳ ದಿನಾಚರಣೆಯನ್ನು ಕೂಡ ಮಾಡಲಾಗುತ್ತದೆ. ಆದರೆ ನೆಹರೂ ಅವರ ಜನ್ಮದಿನದಂದೇ ಮಕ್ಕಳ ದಿನವನ್ನು ಆಚರಿಸೋದ್ಯಾಕೆ ಎಂದು ಗೊತ್ತಿದೆಯಾ? ಇಲ್ಲವಾದಲ್ಲಿ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ತಿಳಿಯಿರಿ.

ಬಾಲ್ ದಿವಸ್ ಎಂದೂ ಕರೆಯಲ್ಪಡುವ ಮಕ್ಕಳ ದಿನವನ್ನು ಭಾರತದಲ್ಲಿ 1964 ರ ಮೊದಲು ನವೆಂಬರ್ 20 ರಂದು ಆಚರಿಸಲಾಯಿತು. ಆದರೆ ಮಕ್ಕಳಿಂದ ಪ್ರೀತಿಯ ಚಾಚಾ ಎಂಬ ಹೆಸರಾಂಕಿತರಾಗಿದ್ದ ನೆಹರೂ ಅವರ ಮರಣದ ನಂತರ 1964 ರಲ್ಲಿ ಅವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಯಿತು. ಅಂದಿನಿಂದ ಭಾರತದಲ್ಲಿ ನವೆಂಬರ್ 14 ಅನ್ನು ಮಕ್ಕಳ ದಿನವಾಗಿ ಆಚರಿಸಲಾಗುತ್ತದೆ.

ಪಂಡಿತ್ ನೆಹರು ಅವರು ಮಕ್ಕಳ ಶಿಕ್ಷಣದ ಪ್ರಬಲ ಪ್ರತಿಪಾದಕರಾಗಿದ್ದರು ಮತ್ತು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ಗಳಂತಹ ಪ್ರವರ್ತಕ ಸಂಸ್ಥೆಗಳ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ಯಾವಾಗಲೂ ದೇಶದ ಯುವ ಮನಸ್ಸುಗಳನ್ನು ನಂಬಿದ್ದರು ಮತ್ತು ಅವರ ಕಲ್ಯಾಣ ಹಾಗೂ ಬೆಳವಣಿಗೆಗೆ ಒತ್ತು ನೀಡಿದರು. ಅವರ ಪ್ರಕಾರ ಮಕ್ಕಳೇ ಸಮಾಜದ ನಿಜವಾದ ಆಸ್ತಿ ಮತ್ತು ಶಕ್ತಿ. "ಇಂದಿನ ಮಕ್ಕಳು ನಾಳಿನ ಭಾರತವನ್ನು ಸೃಷ್ಟಿಸುತ್ತಾರೆ, ನಾವು ಅವರನ್ನು ಬೆಳೆಸುವ ರೀತಿ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ" ಎಂದು ಅವರು ಹೇಳಿದ್ದರು.

ನಾವು ಮಕ್ಕಳ ದಿನವನ್ನು ಏಕೆ ಆಚರಿಸುತ್ತೇವೆ? :

ಪಂಡಿತ್ ಜವಾಹರಲಾಲ್ ನೆಹರೂ ಅವರು ಮಕ್ಕಳ ಮೇಲೆ ತೋರುತ್ತಿದ್ದ ಪ್ರೀತಿಯಿಂದಾಗಿ ಹೆಚ್ಚು ಹೆಸರುವಾಸಿಯಾಗಿದ್ದರು. ನೆಹರು ಅವರು ನವೆಂಬರ್ 14, 1889 ರಂದು ಜನಿಸಿದರು. ಅವರ ಜನ್ಮದಿನದ ಪ್ರಯುಕ್ತ ಅವರಿಗೆ ಗೌರವ ಸಲ್ಲಿಸಲು ಪ್ರತಿ ವರ್ಷ ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ತಮ್ಮ ಹಕ್ಕುಗಳಿಗಾಗಿ ಪ್ರತಿಪಾದಿಸುವ ಮಕ್ಕಳಿಗಾಗಿ ಅನೇಕ ಶೈಕ್ಷಣಿಕ ಮತ್ತು ಪ್ರೇರಕ ಕಾರ್ಯಕ್ರಮಗಳನ್ನು ಭಾರತದಾದ್ಯಂತ ನಡೆಸಲಾಗುತ್ತದೆ.

ಮಕ್ಕಳ ದಿನಾಚರಣೆಯು ರಜಾದಿನವೇ? :

ಮಕ್ಕಳ ದಿನಾಚರಣೆಯನ್ನು ಯಾವುದೇ ರಜಾದಿನವೆಂದು ಘೋಷಿಸಲಾಗಿಲ್ಲ. ಬದಲಾಗಿ ಈ ದಿನದಂದು ಶಾಲೆ ಕಾಲೇಜುಗಳಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಆಚರಣೆಯನ್ನು ಮಾಡಲಾಗುತ್ತದೆ.

For Quick Alerts
ALLOW NOTIFICATIONS  
For Daily Alerts

English summary
Children's day is celebrated on november 14. why we celebrate it on birth anniversary of jawaharlal nehru in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X