ಟೆಲ್ ಮಿ ಎಬೌಟ್ ಯುವರ್ಸೆಲ್ಫ್: ಸಂದರ್ಶನದ ವೇಳೆ 'ನಿಮ್ಮ ಬಗ್ಗೆ ನೀವು' ಹೇಳಲು ಹೊರಟಾಗ

ಉದ್ಯೋಗ ಪಡೆಯುವಲ್ಲಿ ಸಂದರ್ಶನ ಪ್ರಮುಖ ಪಾತ್ರ ವಹಿಸುತ್ತದೆ. ನೀವು ಸಂದರ್ಶನದಲ್ಲಿ ಯಾವ ರೀತಿ ಉತ್ತರಿಸುತ್ತೀರಿ ಎನ್ನುವುದರ ಮೇಲೆ ನಿಮ್ಮ ಭವಿಷ್ಯ ನಿಂತಿರುತ್ತದೆ.

By Kavya

ಇಂದು ಒಂದು ಕಂಪನಿಯಲ್ಲಿ ಉದ್ಯೋಗ ಪಡೆಯಬೇಕೆಂದರೆ ಹಲವು ಹಂತಗಳನ್ನು ದಾಟಬೇಕು. ಅದರಲ್ಲೂ ಎಂಎನ್‌ಸಿ ಕಂಪನಿಗಳ ಕೇಲಸ ಗಿಟ್ಟಿಸಲು ಮಾನಸಿಕವಾಗಿ ಸಾಕಷ್ಟು ತಯಾರಿ ಬೇಕಾಗುತ್ತದೆ.

ಲಿಖಿತ ಪರೀಕ್ಷೆ, ಗುಂಪು ಚರ್ಚೆ, ಸಂದರ್ಶನ ಹೀಗೆ ಹಲವು ಮೆಟ್ಟಿಲುಗಳನ್ನು ಹತ್ತಿದ ನಂತರ ಉದ್ಯೋಗಕ್ಕೆ ಅವಕಾಶ.

2018ರ ಗಣರಾಜ್ಯೋತ್ಸವಕ್ಕೆ ಭಾಷಣದ ಸಿದ್ಧತೆ ಹೀಗಿರಲಿ 2018ರ ಗಣರಾಜ್ಯೋತ್ಸವಕ್ಕೆ ಭಾಷಣದ ಸಿದ್ಧತೆ ಹೀಗಿರಲಿ

ಉದ್ಯೋಗ ಪಡೆಯುವಲ್ಲಿ ಸಂದರ್ಶನ ಪ್ರಮುಖ ಪಾತ್ರ ವಹಿಸುತ್ತದೆ. ನೀವು ಸಂದರ್ಶನದಲ್ಲಿ ಯಾವ ರೀತಿ ಉತ್ತರಿಸುತ್ತೀರಿ ಎನ್ನುವುದರ ಮೇಲೆ ನಿಮ್ಮ ಭವಿಷ್ಯ ನಿಂತಿರುತ್ತದೆ.

ಬೈಸೆಪ್: 2017-18ನೇ ಸಾಲಿನ ಪ್ರವೇಶಾತಿ ಪ್ರಾರಂಭ ಬೈಸೆಪ್: 2017-18ನೇ ಸಾಲಿನ ಪ್ರವೇಶಾತಿ ಪ್ರಾರಂಭ

ಟೆಲ್ ಮಿ ಎಬೌಟ್ ಯುವರ್ಸೆಲ್ಫ್ ?

ಸಂದರ್ಶನದ ವೇಳೆ ಕೇಳಲಾಗುವ ಕೆಲವು ಕಾಮನ್ ಪ್ರಶ್ನೆಗಳು ಮತ್ತು ಅದಕ್ಕೆ ಹೇಗೆ ಉತ್ತರಿಸಬೇಕು ಎಂಬುದರ ಬಗ್ಗೆ ಇಲ್ಲಿದೆ ಕೆಲವೊಂದು ಉಪಯುಕ್ತ ಮಾಹಿತಿ.

ನಿಮ್ಮ ಬಗ್ಗೆ ನೀವು ಹೇಳಿ (ಟೆಲ್ ಮಿ ಎಬೌಟ್ ಯುವರ್ಸೆಲ್ಫ್)

ಇದು ಪ್ರತಿ ಸಂದರ್ಶನದಲ್ಲಿ ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆ (ಮೊದಲ ಪ್ರಶ್ನೆ ಎಂದರು ಅಚ್ಚರಿ ಇಲ್ಲ). ಆಶ್ಚರ್ಯವೆಂದರೆ ಬಹುತೇಕ ಮಂದಿ ಈ ಪ್ರಶ್ನೆಯಲ್ಲಿಯೇ ಸೋಲುತ್ತಾರೆ. ಪ್ರಶ್ನೆ ಸರಳವಾದರು ಹೇಗೆ ಉತ್ತರಿಸಬೇಕು ಎನ್ನುವುದು ತಿಳಿಯದೆ ವಿಫಲರಾಗುತ್ತಾರೆ.

ತಮ್ಮ ಬಗ್ಗೆ ಏನು ಹೇಳುವುದು, ಹೇಗೆ ಹೇಳುವುದು ಎನ್ನುವುದು ತಿಳಿಯದೆ ಸೋಲಬೇಕಾಗುತ್ತದೆ. ಈ ಪ್ರಶ್ನೆ ಕೇಳುವ ಹಿಂದೆ ಹಲವು ಉದ್ದೇಶಗಳು ಇರುತ್ತವೆ. ಕೆಲವೊಮ್ಮೆ ಸಂದರ್ಶಕರು ಅಭ್ಯರ್ಥಿಯ ಮನದಲ್ಲಿರುವ ಭಯ ಹೋಗಲಾಡಿಸಲು ಈ ಪ್ರಶ್ನೆ ಕೇಳುತ್ತಾರೆ.

ನಿಮ್ಮ ಬಗ್ಗೆ ಹೇಳುವುದೂ ಒಂದು ಕಲೆ. ಆ ಕಲೆ ಕಲಿತುಕೊಂಡರೆ ನಿಮ್ಮ ಮುಂದಿರುವ ಸಂದರ್ಶಕರಿಗೆ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿಸಬಹುದು.

ಈ ರೀತಿಯ ಪ್ರಶ್ನೆಗಳಿಗೆ ಸಾಮಾನ್ಯವಾಗಿ ನಿಮ್ಮ ರೆಸ್ಯೂಮ್ ನಿಂದ ಆಚೆಗೆ ನೀವು ಯೋಚಿಸಬೇಕಾಗುತ್ತದೆ. ನಿಮ್ಮಲ್ಲಿರುವ ವಿಶೇಷತೆಗಳನ್ನು ವಿಶೇಷವಾಗಿ ಹೇಳಿದರಷ್ಟೇ ನೀವು ಗೆಲ್ಲುವುದು.

ತುಂಬಾ ಕ್ರಿಯಾತ್ಮಕವಾಗಿ ಹೇಳಿದಷ್ಟು ನೀವು ಸಂದರ್ಶಕರ ಮನಸ್ಸನ್ನು ಗೆಲ್ಲುತ್ತೀರಿ. ನಿಮಗೆ ಕತೆ ಹೇಳುವ ಹವ್ಯಾಸವಿದ್ದರೆ ನಿಮ್ಮ ಜೀವನವನ್ನೆ ನೀವು ಕತೆಯ ರೀತಿ ನಿರೂಪಣೆ ಮಾಡಬಹುದು. ಕೆಲವೇ ಕೆಲವು ವಾಕ್ಯಗಳಲ್ಲಿ ನಿಮ್ಮ ವ್ಯಕ್ತಿತ್ವವನ್ನು ತೆರೆದಿಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ನೀವು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವ ಕೆಲವು ಆದರ್ಶ ವಿಚಾರಗಳನ್ನು ಹೇಳುವ ಮೂಲಕ ನೀವು ಆರಂಭಿಸಬಹುದು. ನಿಮ್ಮ ಆಲೋಚನೆಗಳು ಮತ್ತು ಆಸಕ್ತಿಯ ಕ್ಷೇತ್ರಗಳ ಬಗ್ಗೆ ಹೇಳುತ್ತಲು ಆರಂಭಿಸಬಹುದು.

ಒಟ್ಟಿನಲ್ಲಿ ನೀವು ಯಾವ ರೀತಿ ನಿಮ್ಮನ್ನು ಬಣ್ಣಿಸುತ್ತೀರಾ ಎನ್ನುವುದರ ಮೇಲೆ ಸಂದರ್ಶಕರು ನಿಮ್ಮನ್ನು ಅಳೆಯುತ್ತಾರೆ.

ನೆನಪಿರಲಿ ನಿಮ್ಮ ಸಂದರ್ಶನದ ವೇಳೆ ನೀವು ಎಲ್ಲಿಯೂ ಆತಂಕಕ್ಕೊಳಗಾಗಬಾರದು ಹಾಗೂ ಸಂದರ್ಶಕರಿಗೆ ನೀವು ಬಾಯಿ ಪಾಠ ಮಾಡಿ ಒಪ್ಪಿಸುತ್ತಿದ್ದೀರ ಎಂಬ ಭಾವನೆ ಮೂಡಬಾರದು.

ಅಭ್ಯಾಸ ಹೇಗೆ

ಇಲ್ಲಿಯವರೆಗೆ ನೀವು ಇದು ಸರಳ ಪ್ರಶ್ನೆ ಎಂದುಕೊಂಡಿರಬಹುದು. ಒಮ್ಮೆ ಕನ್ನಡಿ ಮುಂದೆ ನಿಂತುಕೊಂಡು ನಿಮ್ಮ ಬಗ್ಗೆ ಹೇಳಲು ಪ್ರಯತ್ನಿಸಿ. ಎಷ್ಟು ಕ್ರಿಯಾತ್ಮಕವಾಗಿ ಹೇಳಬಹುದು ಎನ್ನುವುದನ್ನು ಯೋಚಿಸಿ.

ನಿಮ್ಮ ಬಗ್ಗೆ ಆಪ್ಯಾಯಮಾನವಾಗಿ ಹೇಳಲು ಕಲಿಯಿರಿ. ಏನು ಹೇಳಬೇಕು ಮತ್ತು ಏನು ಹೇಳಬಾರದು ಎನ್ನುವುದನ್ನು ಮೊದಲೇ ಪಟ್ಟಿಮಾಡಿಟ್ಟುಕೊಳ್ಳಿ.

ಇಲ್ಲಿಯವರೆಗೆ ಈ ಪ್ರಶ್ನೆಯ ಬಗ್ಗೆ ನೀವು ಗಂಭೀರವಾಗಿ ಯೋಚಿಸದೆ ಇದ್ದರೆ ಈಗಿನಿಂದಲೇ ಈ ಕುರಿತು ಯೋಚಿಸಲು ಆರಂಭಿಸಿ.

For Quick Alerts
ALLOW NOTIFICATIONS  
For Daily Alerts

English summary
Interviewers will sometimes start an interview with an open-ended question like "Tell me about yourself." It's a way to break the ice and make you feel more comfortable during the interview process.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X