ಸಂದರ್ಶನದ ವೇಳೆ ಕೇಳಲಾಗುವ ಸಾಮಾನ್ಯ ಪ್ರಶ್ನೆಗಳು

ನೀವು ಎಷ್ಟು ಆತ್ಮವಿಶ್ವಾಸದಿಂದ ಪ್ರಶ್ನೆಗೆ ಉತ್ತರಿಸುತ್ತಿರೋ ಅಷ್ಟೇ ಬೇಗ ಸಂದರ್ಶಕರು ನಿಮ್ಮ ಬಗ್ಗೆ ಸಕಾರಾತ್ಮಕ ಭಾವನೆ ಹೊಂದುತ್ತಾರೆ. ನೀವು ನಿಮ್ಮ ವ್ಯಕ್ತಿತ್ವನ್ನು ಕ್ರಿಯಾತ್ಮಕವಾಗಿ ಹೇಳಲು ಪ್ರಯತ್ನಿಸಿದಷ್ಟೂ ಗೆಲುವು ನಿಮ್ಮದಾಗುತ್ತದೆ.

By Kavya

ಇಂದು ಬಹುತೇಕ ನೇಮಕಾತಿಗಳು ಸಂದರ್ಶನದ ಮೂಲಕವೇ ನಡೆಯುತ್ತವೆ. ಸರ್ಕಾರಿ ನೌಕರಿಯಾಗಲಿ, ಖಾಸಗಿ ಕೆಲಸವಾಗಲಿ ಸಂದರ್ಶನ ಸುತ್ತಿನ ಮೂಲಕವೇ ಉದ್ಯೋಗದ ಮುಂದಿನ ಹೆಜ್ಜೆ.

ಸಂದರ್ಶನ ಗೆದ್ದರೆ ಕೆಲಸ ಪಡೆದಂತೆ. ನಿಮ್ಮ ಭವಿಷ್ಯವನ್ನು ನಿರ್ಧರಿಸುವ ಸಂದರ್ಶನದಲ್ಲಿ ಯಾವೆಲ್ಲ ಸಾಮಾನ್ಯ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎನ್ನಲು ಇಲ್ಲೊಂದಿಷ್ಟು ಉದಾಹರಣೆಗಳಿವೆ.

ಟೆಲ್ ಮಿ ಎಬೌಟ್ ಯುವರ್ಸೆಲ್ಫ್: ಸಂದರ್ಶನದ ವೇಳೆ 'ನಿಮ್ಮ ಬಗ್ಗೆ ನೀವು' ಹೇಳಲು ಹೊರಟಾಗಟೆಲ್ ಮಿ ಎಬೌಟ್ ಯುವರ್ಸೆಲ್ಫ್: ಸಂದರ್ಶನದ ವೇಳೆ 'ನಿಮ್ಮ ಬಗ್ಗೆ ನೀವು' ಹೇಳಲು ಹೊರಟಾಗ

ಸಂದರ್ಶನದ ಪ್ರಶ್ನೆಗಳು

ನಿಮ್ಮ ಬಗ್ಗೆ ಸ್ವಲ್ಪ ತಿಳಿಸುವಿರಾ?

ಇದು ಸಾಮಾನ್ಯ ಮತ್ತು ಸರಳ ಪ್ರಶ್ನೆ. ಆದರೆ ಉತ್ತರಿಸುವುದು ಮಾತ್ರ ಅಷ್ಟು ಸುಲಭವಲ್ಲ. ಈ ಪ್ರಶ್ನೆಯ ಉತ್ತರದ ಮೂಲಕವೇ ನಿಮ್ಮ ಸಾಮರ್ಥ್ಯವನ್ನು ಅಳೆಯಲಾಗುತ್ತದೆ. ನೀವು ಎಷ್ಟು ಆತ್ಮವಿಶ್ವಾಸದಿಂದ ಈ ಪ್ರಶ್ನೆಗೆ ಉತ್ತರಿಸುತ್ತಿರೋ ಅಷ್ಟೇ ಬೇಗ ಸಂದರ್ಶಕರು ನಿಮ್ಮ ಬಗ್ಗೆ ಸಕಾರಾತ್ಮಕ ಭಾವನೆ ಹೊಂದುತ್ತಾರೆ. ಇಲ್ಲಿ ನೀವು ನಿಮ್ಮ ವ್ಯಕ್ತಿತ್ವನ್ನು ಕ್ರಿಯಾತ್ಮಕವಾಗಿ ಹೇಳಲು ಪ್ರಯತ್ನಿಸಿದಷ್ಟೂ ಗೆಲುವು ನಿಮ್ಮದಾಗುತ್ತದೆ.

ಈ ಕಂಪನಿಯ ಬಗ್ಗೆ ನಿಮಗೇನು ಗೊತ್ತು?

ಯಾವುದೇ ಸಂದರ್ಶನಕ್ಕೆ ಹೋಗಬೇಕಾದರೂ ನೀವು ಆ ಸಂಸ್ಥೆಯ ಪೂರ್ವಾಪರವನ್ನು ಅರಿಯುವುದು ಉತ್ತಮ. ನೀವು ಕಾರ್ಯ ನಿರ್ವಹಿಸುವ ಜಾಗದ ಬಗ್ಗೆ ನಿಮಗೆಷ್ಟು ತಿಳಿದಿದೆ ಮತ್ತು ನಿಮ್ಮ ಸಾಮಾನ್ಯ ಜ್ಞಾನ ಎಷ್ಟಿದೆ ಎನ್ನುವುದನ್ನು ಇದು ತೋರಿಸುತ್ತದೆ. ಆ ಸಂಸ್ಥೆಯ ಬಗ್ಗೆ ನೀವು ಇತರರೊಂದಿಗೆ ಮಾತಾಡುವಾಗ ಅದರ ಹಿನ್ನೆಲೆ ಮತ್ತು ಹಿರಿಮೆಯನ್ನು ನೀವು ಹೇಳುವುದರಿಂದ ಸಮಾಜದಲ್ಲಿ ಸಂಸ್ಥೆ ಮತ್ತಷ್ಟು ಉತ್ತಮ ಸ್ಥಾನಕ್ಕೆ ಹೋಗಬಹುದು ಎನ್ನುವ ಅಂಶವು ಈ ಪ್ರಶ್ನೆಯ ಹಿಂದಿರುತ್ತದೆ.

ನೀವೇಕೆ ಈ ಕೆಲಸವನ್ನು ಬಯಸುತ್ತೀರಿ?

ಕೆಲಸದ ಅವಶ್ಯಕತೆ ನಿಮಗೆ ಇದೆಯಾದರೂ ಇದೆ ಸಂಸ್ಥೆಯನ್ನು ನೀವೇಕೆ ಆಯ್ಕೆ ಮಾಡಿದ್ದೀರಿ ಎನ್ನುವುದು ಇಲ್ಲಿ ಮುಖ್ಯ. ಇದಕ್ಕೆ ಸೂಕ್ತ ಮತ್ತು ಜಾಣತರಾದ ಉತ್ತರವನ್ನು ನೀಡಬೇಕಾಗುತ್ತದೆ. ಸಂಸ್ಥೆಯ ಉತ್ತಮ ವಾತಾವರಣ ಮತ್ತು ಸಮಾಜದಲ್ಲಿ ಈ ಸಂಸ್ಥೆಯ ಸ್ಥಾನಮಾನದ ಬಗ್ಗೆ ಹೇಳಬೇಕಾಗುತ್ತದೆ. ಈ ಸಂಸ್ಥೆಯ ಭಾಗವಾಗಲು ಸಂತೋಷ ಪಡುತ್ತೇನೆ ಎನ್ನುವುದನ್ನು ತಿಳಿಸಬೇಕಾಗುತ್ತದೆ.

ನಿಮ್ಮ ಸಾಮರ್ಥ್ಯದ ಬಗ್ಗೆ ಹೇಳಿ?

ಈ ಪ್ರಶ್ನೆಗೆ ಉತ್ತರಿಸುವ ಸಂದರ್ಭದಲ್ಲಿ ನಿಮ್ಮಲ್ಲಿರುವ ಉತ್ತಮ ಗುಣಗಳ ಜೊತೆಗೆ ಸಮಯ ಪ್ರಜ್ಞೆ ಮತ್ತು ಕಾರ್ಯ ದಕ್ಷತೆ ಬಗ್ಗೆ ಹೇಳುವುದು ಸೂಕ್ತ .

ನಿಮ್ಮ ದೌರ್ಬಲ್ಯಗಳೇನು?

ಈ ಪ್ರಶ್ನೆಗೆ ನೀವು ಅತ್ಯಂತ ಎಚ್ಚರಿಕೆಯಿಂದ ಉತ್ತರಿಸಬೇಕು. ಇಲ್ಲಿ ಸಾಮಾನ್ಯವಾಗಿ ನೀವು ಕೆಲಸಕ್ಕೆ ಹೇಗೆ ಲಭ್ಯರಿರುತ್ತೀರಿ ಎನ್ನುವುದನ್ನು ತಿಳಿಯಲು ಈ ರೀತಿಯ ಪ್ರಶ್ನೆಗಳನ್ನು ಕೇಳಲಾಗುತ್ತದೆ. ನಿಮ್ಮ ಸಾಮರ್ತ್ಯಕ್ಕೂ ಮೀರಿದ ಕೆಲಸ ಅಥವಾ ನಿಮಗೆ ಒತ್ತಡ ನೀಡುವ ಸಂದರ್ಭದ ಬಗ್ಗೆ ಹೇಳುವುದು ಸೂಕ್ತ. ನಿಮ್ಮ ವಯಕ್ತಿಕ ದೌರ್ಬಲ್ಯಗಳನ್ನು ಹೇಳದಿರುವುದು ಉತ್ತಮ.

ಮುಂದಿನ ಐದು ವರ್ಷಗಳಲ್ಲಿ ನೀವು ಹೇಗಿರಲು ಬಯಸುತ್ತೀರಿ?

ಇದು ನಿಮ್ಮ ದೂರದೃಷ್ಠಿ ಮತ್ತು ಭವಿಷ್ಯದ ಬಗ್ಗೆ ನಿಮ್ಮ ನಿರ್ಧಾರಗಳನ್ನು ತಿಳಿದುಕೊಳ್ಳಲು ಕೇಳುವ ಪ್ರಶ್ನೆ. ನೀವು ಸಂಸ್ಥೆಯೊಂದಿಗೆ ಹೇಗೆ ಮುಂದುವರೆಯುತ್ತೀರಿ ಎನ್ನುವುದನ್ನು ಕೂಡ ಸಂದರ್ಶಕರು ನಿಮ್ಮಿದ ನಿರೀಕ್ಷಿಸುತ್ತಾರೆ.

ಇತರರಿಗಿಂತ ನೀವು ಹೇಗೆ ಭಿನ್ನ?

ಉದ್ಯೋಗ ನೀಡುವ ಸಂಸ್ಥೆಗಳು ಸದಾ ಕ್ರಿಯಾತ್ಮಕವಾಗಿ ಯೋಚಿಸುವವರನ್ನು ಎದುರು ನೋಡುತ್ತಿರುತ್ತವೆ. ಹಲವು ಮಂದಿಯನ್ನು ಬಿಟ್ಟು ನಿಮ್ಮನ್ನೇ ಆಯ್ಕೆ ಮಾಡಿಕೊಳ್ಳುವುದರಿಂದ ಸಂಸ್ಥೆಗೆ ಏನು ಉಪಯೋಗವಾಗುತ್ತದೆ ಎನ್ನುವುದು ಈ ಪ್ರಶ್ನೆಯ ಮೂಲ ಉದ್ದೇಶ. ಇಲ್ಲಿ ನೀವು ನಿಮ್ಮ ಸಾಮರ್ಥ್ಯದ ಬಗ್ಗೆ ವಿಶೇಷವಾಗಿ ಹೇಳಬೇಕಾಗುತ್ತದೆ.

ಹಿಂದಿನ ಕೆಲಸ ಬಿಡಲು ಕಾರಣವೇನು?

ಹೊಸಬರಿಗೆ ಈ ಪ್ರಶ್ನೆ ಅನ್ವಯಿಸುವುದಿಲ್ಲ. ಬೇರೊಂದು ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿ ಬಂದಂತ ಅನುಭವಿಗಳಿಗೆ ಇದು ಅನ್ವಯಿಸುತ್ತದೆ. ಇಲ್ಲಿ ನೀವು ಎಷ್ಟು ನೇರವಾಗಿ ಉತ್ತರಿಸುತ್ತಿರೋ ಅಷ್ಟೇ ಒಳ್ಳೆಯದು. ಸಂಬಳದ ವಿಚಾರ, ಆರೋಗ್ಯ ಸಮಸ್ಯೆ, ಕೆಲಸಕ್ಕೆ ಪೂರಕ ವಾತಾವರಣ ವಿಲ್ಲದಿರುವುದು, ನಿಮ್ಮ ಆಸಕ್ತಿ ವಿರೋಧವಾದದು ಹೀಗೆ ಒಂದು ಸೂಕ್ತ ಕಾರಣ ಹೇಳುವುದು ಉತ್ತಮ. ನೆನಪಿರಲಿ ಯಾವುದೇ ಕಾರಣಕ್ಕೂ ನೀವು ಸುಳ್ಳು ಹೇಳಬಾರದು ಮತ್ತು ಹಿಂದಿನ ಸಂಸ್ಥೆಯ ಬಗ್ಗೆ ನಕಾರಾತ್ಮಕ ಅಂಶಗಳನ್ನು ಸಹ ಹೇಳಬಾರದು.

ಸಂಸ್ಥೆಯಿಂದ ನೀವು ಏನನ್ನು ಬಯಸುತ್ತೀರಾ?

ಉದ್ಯೋಗಕ್ಕೆ ತಕ್ಕ ಉತ್ತಮ ಸಹಕಾರ ಮತ್ತು ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವಂತಹ ವಾತಾವರಣವನ್ನು ಬಯಸುವುದಾಗಿ ಹೇಳುವುದು ಉತ್ತಮ. ಕೆಲವೊಮ್ಮೆ ಸಂಬಳದ ವಿಚಾರವನ್ನು ಕೂಡ ಹೇಳಬಹುದು. ನಿಮ್ಮ ಅಗತ್ಯತೆಗಳೇನು ಎನ್ನುವುದನ್ನು ಇಲ್ಲಿ ಹೇಳಿಕೊಳ್ಳುವುದು ಒಳಿತು.

For Quick Alerts
ALLOW NOTIFICATIONS  
For Daily Alerts

English summary
It's important to be prepared to respond effectively to the interview questions that employers typically ask at job interviews. Since these questions are so common, hiring managers will expect you to be able to answer them smoothly and without hesitation.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X