ಇದೀಗ ಜಾಬ್ ಇಂಡಸ್ಟ್ರಿಯಲ್ಲಿ ಸಿಜಿಎಲ್ 2018 ನೇಮಕಾತಿ ಸಂಚಲನ ಮೂಡಿಸಿದೆ. ಸ್ಟಾಫ್ ಸೆಲಕ್ಷನ್ ಕಮಿಷನ್ ಈ ಪರೀಕ್ಷೆಯನ್ನ ಆಯೋಜಿಸುತ್ತಿದೆ. ಇತ್ತೀಚೆಗಷ್ಟೇ ಈ ಪರೀಕ್ಷೆಯ ನೋಟಿಫಿಕೇಶನ್ ರಿಲೀಸ್ ಮಾಡಲಾಗಿತ್ತು. ಜೂನ್ 4 ರವರೆಗೆ ನೀವು ಅಪ್ಲೈ ಮಾಡಬಹುದು.
ಸರ್ಕಾರದ ಗ್ರೂಫ್ ಬಿ ಹಾಗೂ ಗ್ರೂಫ್ ಸಿ ಹುದ್ದೆಗೆ ಈಗಾಗಲೇ ಅದೆಷ್ಟೋ ವಿದ್ಯಾರ್ಥಿಗಳು ಅಪ್ಲೈ ಮಾಡಿದ್ದಾರೆ. ಈ ಪರೀಕ್ಷೆ ತಯಾರಿಗೆ ನಿಮ್ಮ ಹಾರ್ಡ್ ವರ್ಕ್ ಅಗತ್ಯ. ಈ ಪರೀಕ್ಷೆಗೆ ಹಾಜರಾಗುವವರು ಕೆಲವೊಂದು ಕಾಮನ್ ತಪ್ಪುಗಳನ್ನ ಆದಷ್ಟು ಅವಾಯ್ಡ್ ಮಾಡಿ.
ಒಂದೇ ಟೈಂ ಎರೆಡೆರಡು ಪರೀಕ್ಷೆ:
ಯಾರೆಲ್ಲಾ ಎಸ್ಎಸ್ ಸಿ ಸಿಜಿಎಲ್ ಪರೀಕ್ಷೆಗೆ ತಯಾರಾಗುತ್ತಿದ್ದಿರೋ, ಅವರಲ್ಲಿ ಹೆಚ್ಚಿನ ಮಂದಿ ಎಸ್ಬಿಐ ಪರೀಕ್ಷೆ ಕೂಡಾ ಎದುರಿಸಲಿದ್ದಾರೆ. ಆದ್ರೆ ನಿಮಗೆ ಒಂದು ವಿಚಾರ ಹೇಳ್ತೇವೆ ಕೇಳಿ, ಯಾವತ್ತೂ ಎರಡು ದೋಣಿಯಲ್ಲಿ ಕಾಲಿಡಲು ಸಾಧ್ಯವಿಲ್ಲ. ಹಾಗಾಗಿ ನಾವು ನಿಮಗೆ ಏನು ಸಲಹೆ ನೀಡುತ್ತಿದ್ದೇವೆ ಎಂದ್ರೆ ಒಂದೇ ಪರೀಕ್ಷೆಯತ್ತ ಹೆಚ್ಚು ಫೋಕಸ್ ಮಾಡಿ. ಗುರಿಯಿಟ್ಟುಕೊಂಡು, ಅದಕ್ಕಾಗಿ ಶ್ರಮವಹಿಸಿ.
ಹಲವಾರು ರೆಫರೆನ್ಸ್ ಪುಸ್ತಕ ಓದುವುದು:
ಪ್ರಿಪರೇಶನ್ ಗೆ ಯಾವುದೇ ಕೊನೆ ಎಂಬುವುದಿಲ್ಲ. ಜನರಲ್ ಅವರೆನೆಸ್ ಸೆಕ್ಷನ್ ಗೆ ಟೈರ್ -1 ಹಾಗೂ ಜೆನರಲ್ ಸ್ಟಡೀಸ್ ಸೆಕ್ಷನ್ ಟೈರ್ -2. ಒಂದೇ ಸಬ್‌ಜೆಕ್ಟ್ ಗೆ ಹಲವಾರು ಪುಸ್ತಕಗಳನ್ನ ಓದುವುದು ಒಳ್ಳೆಯ ಐಡಿಯಾ ಅಲ್ಲ. ಅದಕ್ಕಿಂತ ಒಂದು ಕ್ವಾಲಿಟಿ ಇರುವ ಪುಸ್ತಕ ಖರೀದಿಸಿ, ಓದಲು ಪ್ರಾರಂಭಿಸಿ.
ಆನ್‌ಲೈನ್ ಮಾಕ್ ಟೆಸ್ಟ್ ಮಾಡಿಕೊಳ್ಳದೇ ಇರುವುದು:
ಆಫ್‌ಲೈನ್ ಗಿಂತ ಆನ್‌ಲೈನ್ ಎಕ್ಸಾಂ ಕಂಪ್ಲೀಟ್ ಡಿಫರೆಂಟ್ ಆಗಿರುತ್ತದೆ. ಎಸ್ಎಸ್ ಸಿ ಸಿಜಿಎಲ್ ಪರೀಕ್ಷೆ ಇದೀಗ ಆನ್‌ಲೈನ್ ಪರೀಕ್ಷೆಯಾಗಿದೆ. ಆಫ್‌ಲೈನ್ ಪರೀಕ್ಷೆಯಲ್ಲಿ ಒಂದು ಪ್ರಶ್ನೆಗೆ ಉತ್ತರ ಗೊತ್ತಿಲ್ಲ ಅಂದ್ರೆ ಸ್ಕಿಪ್ ಮಾಡಿ ಮತ್ತೊಂದು ಪ್ರಶ್ನೆಗೆ ಉತ್ತರ ಬರೆಯಬಹುದು. ಮತ್ತೆ ಬೇಕಾದ್ರೆ ಮೊದಲು ಸ್ಕಿಪ್ ಮಾಡಿರುವ ಪ್ರಶ್ನೆಗೆ ಉತ್ತರ ಬರೆಯಬಹುದು. ಆದ್ರೆ ಆನ್‌ಲೈನ್ ಪರೀಕ್ಷೆಯಲ್ಲಿ ಅದು ಸಾಧ್ಯವಿಲ್ಲ. ಒಂದೊಂದು ಪ್ರಶ್ನೆಗೆ ಕೇವಲ ಸೆಕೆಂಡ್ಸ್ ಟೈಂ ಇರುತ್ತದೆ. ಬಳಿಕ ತನ್ನಂತಾನೆ ಕ್ಲೋಸ್ ಆಗುತ್ತದೆ. ಹಾಗಾಗಿ ಆನ್‌ಲೈನ್ ಪರೀಕ್ಷೆಗೆ ಆನ್‌ಲೈನ್ ಮೂಲಕ ಪ್ರ್ಯಾಕ್ಟೀಸ್ ಮಾಡಿಕೊಳ್ಳಿ.
ತಪ್ಪು ಉತ್ತರ ಬರೆಯುವುದು ತಪ್ಪಿಸಿಕೊಳ್ಳಿ:
ಎಸ್ಎಸ್ ಸಿ ಸಿಜಿಎಲ್ ಪರೀಕ್ಷೆಗೆ ಕೇಳಿರುವ ಎಲ್ಲಾ ಪ್ರಶ್ನೆಗೆ ಉತ್ತರ ಬರೆಯುವುದು ಒಳ್ಳೆಯ ವಿಚಾರ. ಆದ್ರೆ ನೆಗಟೀವ್ ಅಂಕಗಳು ಇರುತ್ತದೆ. ಪ್ರತಿ ತಪ್ಪು ಉತ್ತರಕ್ಕೆ ೦.೫೦ ಅಂಕಗಳನ್ನ ಕಳೆಯಲಾಗುತ್ತದೆ. ಹಾಗಾಗಿ ಸರಿಯಾಗಿ ಉತ್ತರ ಗೊತ್ತಿದ್ರೆ ಮಾತ್ರ ಯೋಚಿಸಿ ಬರೆಯಿರಿ.
ಕೊನೆಯಲ್ಲಿ ಪ್ರಮುಖ ಟಾಪಿಕ್ ಓದಿಕೊಳ್ಳುವುದು:
ಯಾವಾಗಲೂ ಸ್ಮಾರ್ಟ್ ಆಗಿ ಪ್ರಿಪರೇಶನ್ ಮಾಡಿಕೊಳ್ಳಿ. ಹಳೆಯ ಪ್ರಶ್ನಾಪತ್ರಿಕೆಯನ್ನ ರಿವಿಜನ್ ಮಾಡಿಕೊಳ್ಳಿ. ಪ್ರಮುಖ ಪ್ರಶ್ನೆಗಳನ್ನ ಕೊನೆಯಲ್ಲಿ ಓದುದಕ್ಕಿಂತ ಮೊದಲೇ ಓದಿ ಮುಗಿಸುವುದು ಬೆಸ್ಟ್