ಗಮನಿಸಿ... ವಿದ್ಯಾರ್ಥಿಗಳು ಪರೀಕ್ಷೆ ವೇಳೆ ಮಾಡುವ ಕಾಮನ್ ೯ ತಪ್ಪುಗಳು

Written By: Nishmitha B

ಸೆಂಟ್ರಲ್ ಹಾಗೂ ಸ್ಟೇಟ್ ಲೆವೆಲ್‌ನಲ್ಲಿ ಇದೀಗ ಎಲ್ಲಾ ಕಡೆ ಬೋರ್ಡ್ ಎಕ್ಸಾಂಗಳು ನಡೆಯುತ್ತಿದೆ. ಪರೀಕ್ಷೆಗೆ ಓದುದರಲ್ಲಿ ಇದೀಗ ವಿದ್ಯಾರ್ಥಿಗಳು ಬ್ಯುಸಿಯಾಗಿದ್ದಾರೆ. ಪರೀಕ್ಷೆಗೆ ಓದುವ ಮುನ್ನ ಪರೀಕ್ಷೆ ಟೈಂ ನಲ್ಲಿ ನೀವು ಏನೆಲ್ಲಾ ತಪ್ಪುಗಳನ್ನ ಮಾಡುತ್ತೀರಿ ಎಂಬ ಮಾಹಿತಿ ಇಲ್ಲಿದೆ.

ಪರೀಕ್ಷೆ ವೇಳೆ ಕಠೀಣ ಪರಿಶ್ರಮ ಹಗೂ ಶೃದ್ಧೆಯಿಂದ ಓದಿದ್ದರೆ ನೀವು ಕಾಂಫಿಡೆಂಟ್ ಆಗಿ ಪರೀಕ್ಷೆ ಬರೆಯಬಹುದು.ಆದ್ರೆ ತಪ್ಪುಗಳಿಲ್ಲದೇ ಉತ್ತರಗಳನ್ನ ಬರೆಯುವುದು ಕೂಡಾ ಅಷ್ಟೇ ಮುಖ್ಯ. ಆದ್ರೆ ಕೆಲವೊಮ್ಮೆ ವಿದ್ಯಾರ್ಥಿಗಳು ಗೊತ್ತಿಲ್ಲದೇ ಮಾಡುವ ತಪ್ಪಿನಿಂದ ಹೆಚ್ಚಿನ ಮಾರ್ಕ್ ಸ್ಕೋರ್ ಮಾಡುವಲ್ಲಿ ವಿಫಲರಾಗುತ್ತಾರೆ.

ಆ 9 ಕಾಮನ್ ತಪ್ಪುಗಳು ಯಾವುವು ಎಂಬ ಮಾಹಿತಿ ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ. ಈ ಲಿಸ್ಟ್ ಒಮ್ಮೆ ಓದಿಕೊಂಡು, ಪರೀಕ್ಷೆಯಲ್ಲಿ ನಿಮಗೆ ಗೊತ್ತಿಲ್ಲದೇ ಮಾಡುವ ಈ ತಪ್ಪುಗಳನ್ನು ತಪ್ಪಿಸಿ.

1 ಒಂದೇ ಪ್ರಶ್ನೆಗೆ ಅತೀ ಹೆಚ್ಚು ಸಮಯ ವ್ಯಯ

ನೀವು ಎಷ್ಟು ಪ್ರಶ್ನೆಗೆ ಉತ್ತರಿಸಿದ್ದೀರಿ ಅನ್ನೋ ಆಧಾರದ ಮೇಲೆ ಬೋರ್ಡ್ ನಿಮಗೆ ಅಂಕ ನೀಡುತ್ತದೆ ವಿನಾಃ ನೀವು ಎಷ್ಟು ಟೈಂ ಬಳಸಿಕೊಂಡಿದ್ದಿರಿ ಎಂಬುವುದು ಯಾರೂ ಕೇಳುವುದಿಲ್ಲ. ಕೆಲವು ವಿದ್ಯಾರ್ಥಿಗಳು ಏನು ಮಾಡುತ್ತಾರೆ ಎಂದ್ರೆ ಒಂದು ಅಥವಾ ಎರಡು ಅಂಕದ ಪ್ರಶ್ನೆಗೆ ತುಂಬಾ ಟೈಂ ತೆಗೆದುಕೊಳ್ಳುತ್ತಾರೆ. ಅವರ ಈ ಮಿಸ್ಟೇಕ್ ನಿಂದ ದೊಡ್ಡ ಅಂಕದ ಪ್ರಶ್ನೆಗೆ ಉತ್ತರಿಸುವ ವೇಳೆ ಅವರ ಬಳಿ ಸಮಯವಿಲ್ಲದಂತಾಗುತ್ತದೆ.

 

 

2 ಬುಲ್ಸ್ ಐ ಹಿಟ್ ವಿಫಲ

ಬುಲ್ಸ್ ಐ ಹಿಟ್ ಮಾಡುವಲ್ಲಿ ವಿದ್ಯಾರ್ಥಿಗಳು ವಿಫಲರಾಗುತ್ತಾರೆ. ದೊಡ್ಡ ದೊಡ್ಡ ಉತ್ತರ ಬರೆಯುದರಲ್ಲೇ ಸಮಯ ಕಳೆಯುತ್ತಾರೆ. ಇದರಿಂದ ಹೆಚ್ಚು ಮಾರ್ಕ್ ಸಿಗುವುದಿಲ್ಲ ಬದಲಿಗೆ ಸಮಯ ವೇಸ್ಟ್ ಆಗುತ್ತದೆ. ಹಾಗಾಗಿ ಯಾವಾಗಲೂ ಸರಿಯಾದ ಉತ್ತರ ಮಾತ್ರ ಬರೆಯಿರಿ. ಇದರಿಂದ ನಿಮ್ಮ ಸಮಯ ಕೂಡಾ ಉಳಿಯುತ್ತದೆ

3 ಸರಿಯಾದ ಡಾಟಾ ಬರೆದುಕೊಳ್ಳುವುದಿಲ್ಲ

ಪರೀಕ್ಷೆಯಲ್ಲಿ ಅವಸರವಸರವಾಗಿ ಪ್ರಶ್ನೆಗಳನ್ನ ಓದಿಕೊಳ್ಳುತ್ತಾರೆ. ಲೆಕ್ಕಕ್ಕೆ ಸಂಬಂಧಪಟ್ಟ ಪ್ರಶ್ನೆಗೆ ಉತ್ತರ ಬರೆಯುವಾಗ ಸರಿಯಾದ ಅಂಕಿಅಂಶವನ್ನ ಬರೆದುಕೊಳ್ಳುವುದಿಲ್ಲ. ಇದರಿಂದ ಅವರು ಎಷ್ಟೇ ಬಾರಿ ಕೂಡಿಸಿ, ಕಳೆದ್ರು ಅವರ ಉತ್ತರ ತಪ್ಪಾಗಿಯೇ ಬರುತ್ತದೆ. ಅಷ್ಟೇ ಅಲ್ಲ ಇದರಿಂದ ಅಂಕದ ಜತೆ ಸಮಯವನ್ನು ಕೂಡಾ ವೇಸ್ಟ್ ಮಾಡಿಕೊಳ್ಳುತ್ತಾರೆ. ಹಾಗಾಗಿ ಪ್ರಶ್ನಾಪತ್ರಿಕೆಯಲ್ಲಿರುವ ಅಂಕಿಅಂಶಗಳನ್ನ ಜಾಗ್ರತೆಯಿಂದ ಓದಿ ಉತ್ತರಿಸಿ.

4 ತಪ್ಪಾಗಿ ಪ್ರಶ್ನೆಯನ್ನ ಅರ್ಥೈಸಿಕೊಳ್ಳುವುದು

ಈ ತಪ್ಪನ್ನು ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆ ಹಾಲ್‌ನಲ್ಲಿ ಮಾಡುತ್ತಾರೆ. ಪರೀಕ್ಷೆ ಓದಿಕೊಳ್ಳಲೆಂದೇ ಬೋರ್ಡ್ ಹೆಚ್ಚುವರಿ ಸಮಯ ನೀಡಿರುತ್ತದೆ. ಆದ್ರೆ ವಿದ್ಯಾರ್ಥಿಗಳು ಇದನ್ನ ಅರ್ಥ ಮಾಡಿಕೊಳ್ಳದೇ ಪ್ರಶ್ನಾಪತ್ರಿಕೆ ಕೈಗೆ ನೀಡಿದ ಕೂಡಲೇ ಉತ್ತರಿಸಲು ಮುಂದಾಗುತ್ತಾರೆ. ಹೀಗೆ ಅವಸರವಸರ ಮಾಡಿ ಓದುವುದರಿಂದ ಪ್ರಶ್ನೆಯನ್ನ ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ತಪ್ಪಾಗಿ ಅರ್ಥೈಸಿಕೊಂಡು ತಪ್ಪು ಉತ್ತರವನ್ನೇ ನೀಡುತ್ತಾರೆ.

5 ಪ್ಲ್ಯಾನ್ ಮಾಡದೇ ಉತ್ತರ ನೀಡುತ್ತಾರೆ

ಪ್ರಶ್ನೆ ಓದಿದ ಬಳಿಕ ಮೊದಲಿಗೆ ಉತ್ತರ ಹೇಗೆ ಬರೆಯುವುದು ಎಂದು ಯೋಜನೆ ಹಾಕಿಕೊಳ್ಳಿ. ಹೆಚ್ಚಿನ ವಿದ್ಯಾರ್ಥಿಗಳು ಪ್ರಶ್ನೆ ಓದಿದ ಕೂಡಲೇ ಉತ್ತರ ಬರೆಯುತ್ತಾ ಹೋಗುತ್ತಾರೆ. ಹೀಗೆ ಮಾಡುವುದರಿಂದ ಕೆಲವೊಂದು ಪ್ರಮುಖ ಅಂಶ ಕೊನೆಯಲ್ಲಿ ನೆನಪಾಗಬಹುದು. ಆಗ ನೀವು ಮತ್ತೊಂದು ಪ್ರಶ್ನೆಗೆ ಉತ್ತರ ಬರೆಯಲು ಪ್ರಾರಂಭಿಸಿರುತ್ತೀರಿ. ಹಾಗಾಗಿ ಆ ಟೈಂನಲ್ಲಿ ಆ ಅಂಶವನ್ನ ಮತ್ತೆ ಮೊದಲಿನ ಉತ್ತರದ ಮಧ್ಯದಲ್ಲಿ ತುರುಕಿಸಲು ಯತ್ನಿಸುತ್ತಾರೆ. ಇದರಿಂದ ನಿಮ್ಮ ಸಮಯ ಕೂಡಾ ವೇಸ್ಟ್ ಆಗುತ್ತದೆ ಅಷ್ಟೇ ಅಲ್ಲ ನಿಮ್ಮ ಪತ್ರಿಕೆ ಕೂಡಾ ನೋಡಲು ಅಸಹ್ಯಕರವಾಗುತ್ತದೆ .

6 ಟೈಂ ಹೊಂದಾಣಿಕೆ ಗೊತ್ತಿರುವುದಿಲ್ಲ

ಯಶಸ್ವೀ ಕೆರಿಯರ್ ಲೈಫ್ ನಿಮ್ಮದಾಗಬೇಕಾದ್ರೆ ಟೈಂ ಮ್ಯಾನೇಜ್‌ಮೆಂಟ್ ಚೆನ್ನಾಗಿ ತಿಳಿದಿರಬೇಕು. ಇನ್ನು ಟೈಂ ಮ್ಯಾನೇಜ್‌ಮೆಂಟ್‌ ಸ್ಕಿಲ್‌ ಕೇವಲ ಕೆರಿಯರ್ ಲೈಫ್ ನಲ್ಲಿ ಮಾತ್ರವಲ್ಲ, ಪರೀಕ್ಷೆ ವೇಳೆಯೂ ಮುಖ್ಯ. ಪರೀಕ್ಷೆ ವೇಳೆ ಸಮಯ ಹೊಂದಾಣಿಕೆ ಮಾಡುವ ಕೌಶಲ್ಯ ನಿಮಗೆ ತಿಳಿದಿರಬೇಕು. ವಿದ್ಯಾರ್ಥಿಗಳು ಪ್ರಶ್ನಾಪತ್ರಿಕೆ ಸಿಕ್ಕಾ ಕೂಡಲೇ ಟೈಂ ಮ್ಯಾನೇಜ್ ಮಾಡಿಕೊಳ್ಳಬೇಕು. ಇಲ್ಲವಾದರೆ ಒಂದೇ ಪ್ರಶ್ನೆಯಲ್ಲಿ ಸಿಕ್ಕಿಹಾಕಿಕೊಂಡು ಟೈಂ ವೇಸ್ಟ್ ಆಗಿ ಎಲ್ಲಾ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದೇ ಇರಬಹುದು.

7 ತುಂಬಾ ಸಮಯ ಬ್ರೇಕ್ ತೆಗೆದುಕೊಳ್ಳುವುದು

ಹೌದು ಎಕ್ಸಾಂ ತುಂಬಾ ಹೊತ್ತು ನಡೆಯುತ್ತದೆ. ಈ ವೇಳೆ ವಿದ್ಯಾರ್ಥಿಗಳು ಹೆಚ್ಚಿನ ಸ್ಟ್ರೆಸ್ ಗೆ ಒಳಗಾಗುತ್ತಾರೆ ಅಷ್ಟೇ ಅಲ್ಲ ತುಂಬಾ ಎನರ್ಜಿ ಕೂಡಾ ಕಳೆದುಕೊಳ್ಳುತ್ತಾರೆ. ಹಾಗಾಗಿ ಪರೀಕ್ಷೆ ಬರೆಯುತ್ತಿರುವಾಗ ಮಧ್ಯಂತರದಲ್ಲಿ ಮೂರು ನಿಮಿಷ ಬ್ರೇಕ್ ತೆಗೆದುಕೊಳ್ಳಿ. ಮೂರು ನಿಮಿಷದ ನಂತರ ಮತ್ತೆ ಪರೀಕ್ಷೆ ಮುಂದುವರೆಸಿ. ಅದ್ರೆ ಹೆಚ್ಚಿನ ವಿದ್ಯಾರ್ಥಿಗಳು ತುಂಬಾ ಟೈಂ ಬ್ರೆಕ್ ತೆಗೆದುಕೊಳ್ಳುತ್ತಾರೆ. ಇದರಿಂದ ಅವರು ಕೊನೆಯಲ್ಲಿ ಸಮಯದ ಅಭಾವ ಎದುರಿಸುತ್ತಾರೆ.

8 ಉತ್ತರ ಪತ್ರಿಕೆ ನೀಟ್ ಆಗಿ ಇಟ್ಟುಕೊಳ್ಳಲ್ಲ

ಎಕ್ಸಾಂ ವೇಳೆ ಅವಸರವಸರ ಮೂಡ್ ನಲ್ಲಿ ವಿದ್ಯಾರ್ಥಿಗಳು ಇರುವುದರಿಂದ ಅವರು ಅಕ್ಷರದ ಕಡೆ ಗಮನ ಕೊಡುವುದಿಲ್ಲ. ಇದರಿಂದ ಉತ್ತರ ಪತ್ರಿಕೆ ವೇಳೆ ಕಾಗೆ, ಗುಬ್ಬಚ್ಚಿ ಕಾಲುಗಳು ಮೂಡುತ್ತವೆ. ಅಷ್ಟೇ ಅಲ್ಲ ಟೆನ್ಶನ್ ನಿಂದ ಉತ್ತರವನ್ನ ಬರೆದು ಪದೇ ಪದೇ ಕಟ್ ಮಾಡುತ್ತಾ ಇರುತ್ತಾರೆ. ಇದರಿಂದ ಉತ್ತರ ಹಾಳೆ ನೋಡಲು ಅಸಹ್ಯಕರವಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಅಂಕ ಕಳೆದುಕೊಳ್ಲುತ್ತಾರೆ. ಹಾಗಾಗಿ ಆದಷ್ಟು ಉತ್ತರ ಹಾಳೆಯನ್ನ ನೀಟ್ ಆಗಿಟ್ಟು ಕೊಳ್ಳಲು ಪ್ರಯತ್ನಿಸಿ. ಇದರಿಂದ ನಿಮ್ಮ ಉತ್ತರ ಹಾಳೆ ನೋಡಲು ಕೂಡಾ ಆಕರ್ಷವಾಗಿರುತ್ತದೆ.

9 ಹರಿಬರಿಯಾಗಿಯೇ ಉತ್ತರ ಹಾಳೆ ನೀಡುತ್ತಾರೆ

ವಿದ್ಯಾರ್ಥಿಗಳು ಯಾವತ್ತೂ ಸರಿಯಾದ ಸಮಯಕ್ಕೆ ಉತ್ತರ ಪತ್ರಿಕೆ ನೀಡುವುದಿಲ್ಲ. ಕೊನೆಯ ಗಳಿಗೆ ವರೆಗೂ ಬರೆಯುತ್ತಲೇ ಇರುತ್ತಾರೆ. ಇದು ಕೂಡಾ ವಿದ್ಯಾರ್ಥಿಗಳು ಎಕ್ಸಾಂ ಹಾಲ್‌ನಲ್ಲಿ ಮಾಡುವ ಒಂದು ತಪ್ಪಾಗಿದೆ. ವಾರ್ನಿಂಗ್ ಬೆಲ್ ಮಾಡಿದ ನಂತರ ನಿಮ್ಮ ಪತ್ರಿಕೆಯಲ್ಲಿನ ರೋಲ್ ನಂಬರ್, ಉತ್ತರಗಳ ಸಂಖ್ಯೆ ಸರಿಯಾಗಿದೆಯೇ ಎಂದು ಚೆಕ್ ಮಾಡಿಕೊಳ್ಳಬೇಕು. ಆದ್ರೆ ವಿದ್ಯಾರ್ಥಿಗಳು ಇದ್ಯಾವುದನ್ನೂ ಚೆಕ್ ಮಾಡದೇ ಕೊನೆಯ ಕ್ಷಣದವರೆಗೂ ಏನಾದ್ರೂ ಉತ್ತರ ಬರೆಯುತ್ತಲೇ ಇರುತ್ತಾರೆ.

English summary
While hard work and dedication are required to excel in any examination, attempting the question paper confidently and writing the exam without committing mistakes are equally important. Unfortunately, many students commit some mistakes unknowingly

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia