ಕಂಪ್ಯೂಟರ್ ಹಾರ್ಡ್ವೇರ್ ಅಂಡ್ ನೆಟ್ವರ್ಕಿಂಗ್ ನಲ್ಲಿ ಹೆಚ್ಚಿನ ಉದ್ಯೋಗಾವಕಾಶ

Posted By:

ಇಂದಿನ ಡಿಜಿಟಲ್ ಯುಗದಲ್ಲಿ ಕಂಪ್ಯೂಟರ್ ಹಾರ್ಡ್ವೇರ್ ಅಂಡ್ ನೆಟ್ವರ್ಕಿಂಗ್ ಗೆ ಬೇಡಿಕೆ ಹೆಚ್ಚುತ್ತಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಕಂಪ್ಯೂಟರ್ ನ ಬಳಕೆಯಾಗುತ್ತಿರುವುದೇ ಇದಕ್ಕೆ ಮೂಲ ಕಾರಣ. ಅದರಲ್ಲೂ ನೆಟ್ವರ್ಕಿಂಗ್ ನಲ್ಲಿ ಪ್ರಾವಿಣ್ಯತೆ ಪಡೆದರೆ ಕೈತುಂಬ ಸಂಬಳ ಸಿಗುವುದು ಗ್ಯಾರಂಟಿ.

ಒಂದೇ ವಾರದಲ್ಲಿ ನೀವು ಡೇಟಾ ಸೈಟಿಂಸ್ಟ್ ಆಗಬಹುದು

ಹಾರ್ಡ್‌ವೇರ್ ಎಂಜಿನಿಯರ್, ನೆಟ್‌ವರ್ಕ್ ಸಿಸ್ಟಮ್ ಅಡ್ಮಿನಿಸ್ಟ್ರೇಟರ್ಸ್‌, ಸಿಸ್ಟಮ್ ಅನಾಲಿಸ್ಟ್, ನೆಟ್‌ವರ್ಕಿಂಗ್ ಟೆಕ್ನೀಶಿಯನ್ಸ್ ಮತ್ತು ಸೂಪರ್‌ವೈಸರ್ಸ್‌, ಲಿನುಕ್ಸ್ ಮತ್ತು ಯುನಿಕ್ಸ್ ಸಿಸ್ಟಮ್ ಅಡ್ಮಿನಿಸ್ಟ್ರೇಟರ್ಸ್, ಹೀಗೆ ಅನೇಕ ಉದ್ಯೋಗಾವಕಾಶಗಳು ಇಲ್ಲಿದೆ.

ನೆಟ್ವರ್ಕಿಂಗ್ ಕಲಿತವರಿಗೆ ಬೇಡಿಕೆ ಹೆಚ್ಚು

ಈ ಕೋರ್ಸ್‌ನ್ನು ಯಾರು ಬೇಕಾದರೂ ಮಾಡಬಹುದು. ಕಲೆ, ವಾಣಿಜ್ಯ, ವಿಜ್ಞಾನ ವಿಭಾಗದ ಪದವಿ ಪಡೆದವರಿಂದ ಹಿಡಿದು ಬಿ.ಟೆಕ್‌ ಮಾಡಿದವರು ಕೂಡ ಈ ವಿಷಯದ ಕೋರ್ಸ್‌ ಮಾಡಬಹುದು. ಅಲ್ಲದೇ ಪದವಿ ಪಡೆಯಲು ಸಾಧ್ಯವಾಗದೇ ಇರುವಂತವರು ಕೂಡ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ನಂತರವು ಈ ಕೋರ್ಸ್ ಮಾಡಬಹುದಾಗಿದೆ.

ಆಕರ್ಷಣೀಯ ಮತ್ತು ಭರವಸೆಯ ಹ್ಯಾಂಡ್ಲೂಮ್ ಅಂಡ್ ಟೆಕ್ಸ್ಟೈಲ್ ಡಿಸೈನಿಂಗ್ ಕೋರ್ಸ್

ಹಾರ್ಡ್ವೇರ್ ನೆಟ್ವರ್ಕಿಂಗ್ ನಂತರ ಗ್ಲೋಬಲ್ ಸರ್ಟಿಫಿಕೇಟ್‌ಗಳನ್ನು ಹೊಂದಿದಲ್ಲಿ ಈ ವಲಯದಲ್ಲಿ ಉನ್ನತ ಮಟ್ಟದ ಸಾಧನೆ ಮಾಡಬಹುದು.
ರೆಡ್ ಹ್ಯಾಟ್ ಲೈನಕ್ಸ್ , ಮೈಕ್ರೊಸಾಫ್ಟ್‌ನ ಎಂಸಿಐಟಿಪಿ, ಸಿಸಿಎನ್‌ಎ, ಸಿಸಿಎನ್‌ಪಿ, ಸಿಸ್ಕೋದ ಸಿಡಬ್ಲ್ಯುಎನ್‌ಎ ಕೋರ್ಸ್ ಮಾಡಿದವರಿಗೆ ಎಂಎನ್ಸಿ ಕಂಪನಿಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಇವೆ.

ಮಾನಿಟರಿಂಗ್ ಆಪರೇಟರ್, ವಿಂಡೋಸ್ ಸರ್ವರ್ ಅಡ್ಮಿನಿಸ್ಟ್ರೇಟರ್, ಸರ್ವರ್ ಸಿಸ್ಟಮ್ ಅಡ್ಮಿನಿಸ್ಟ್ರೇಟರ್, ಹೆಲ್ಪ್ ಡೆಸ್ಕ್ ಟೆಕ್ನೀಶಿಯನ್, ಕಸ್ಟಮರ್ ಸಪೋರ್ಟ್ ಟೆಕ್ನೀಶಿಯನ್, ಪಿಸಿ ಸಪೋರ್ಟ್ ಸ್ಪೆಶಲಿಸ್ಟ್, ಟೆಕ್ನಿಕಲ್ ಸಪೋರ್ಟ್ ಸ್ಪೆಶಲಿಸ್ಟ್ ವಲಯದಲ್ಲಿ ಕೆರಿಯರ್ ಅವಕಾಶಗಳು ಲಭ್ಯ.

ಡಿಜಿಟಲ್ ದುನಿಯಾದಲ್ಲಿ ವೆಬ್ ಡಿಸೈನಿಂಗ್ ದರ್ಬಾರ್

ಕಡಿಮೆ ಅವಧಿಯಲ್ಲಿ ಈ ಕೋರ್ಸುಗಳನ್ನು ಕಲಿಯಬಹುದಾಗಿದ್ದು, ಇತರೆ ವಿದ್ಯಾಭ್ಯಾಸದ ಜೊತೆಯಲ್ಲೆ ಇದನ್ನು ಕಲಿಯಬಹುದಾಗಿದೆ.

English summary
The benefits of enrolling in a computer hardware course. People are taking up computer hardware and networking courses because they offer a wide range of opportunities.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia