
ಭಾರತದ ಸಂವಿಧಾನವನ್ನು ಅಂಗೀಕರಿಸಿದ ನೆನಪಿಗಾಗಿ ಪ್ರತಿ ವರ್ಷ ನವೆಂಬರ್ 26 ರಂದು ಭಾರತದಲ್ಲಿ ಸಂವಿಧಾನ ದಿನವನ್ನು ಆಚರಿಸಲಾಗುತ್ತದೆ. ಸಂವಿಧಾನ ದಿನವನ್ನು 'ಸಂವಿಧಾನ ದಿವಸ್' ಎಂದೂ ಕರೆಯಲಾಗುತ್ತದೆ. ಸಂವಿಧಾನ ದಿನದ ಪ್ರಯುಕ್ತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗಾಗಿ ಕೆಲವು ಪ್ರಶ್ನೆ ಮತ್ತು ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಈ ಮಾಹಿತಿಯನ್ನು ಓದಿಕೊಳ್ಳುವ ಮೂಲಕ ಸಿದ್ಧತೆಯನ್ನು ನಡೆಸಬಹುದು.
1) ಸಂವಿಧಾನವು ಯಾರ ಹಕ್ಕುಗಳನ್ನು ರಕ್ಷಿಸುತ್ತದೆ?
ಉತ್ತರ: ಪ್ರಜೆಗಳ
2) "ಸಂವಿಧಾನ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ?
ಉತ್ತರ: ನವೆಂಬರ್ 26
3)ಭಾರತ ಸಂವಿಧಾನದ ರಚನಾ ಸಮಿತಿಯನ್ನು ಯಾವ ಸಮಿತಿಯ ಶಿಫಾರಸ್ಸಿನ ಮೇಲೆ ಸ್ಥಾಪಿಸಲಾಯಿತು?
ಉತ್ತರ: ಕ್ಯಾಬಿನೆಟ್ ಆಯೋಗ
4)ಸಂವಿಧಾನ ರಚನಾ ಸಭೆಯ ಪ್ರಥಮ ಅಧಿವೇಶನ ನಡೆದದ್ದು ಯಾವಾಗ?
ಉತ್ತರ: 1946 ರಲ್ಲಿ
5)ಭಾರತ ಸಂವಿಧಾನದ ರಚನಾ ಸಮಿತಿಯ ಅಧ್ಯಕ್ಷರು ಯಾರು?
ಉತ್ತರ: ಡಾ.ಬಾಬು ರಾಜೇಂದ್ರ ಪ್ರಸಾದ್
6)ಸಂವಿಧಾನ ರಚನಾ ಸಭೆಯ ಮೊದಲ ಸಭೆ ನಡೆದದ್ದು ಯಾವಾಗ?
ಉತ್ತರ: ಡಿಸೆಂಬರ್ 9, 1946
7) ಸಂವಿಧಾನ ರಚನಾ ಸಭೆಯ ಮೊದಲ ಸಭೆಯ ಅಧ್ಯಕ್ಷತೆ ವಹಿಸಿದವರು ಯಾರು?
ಉತ್ತರ: ಡಾ.ಸಚ್ಚಿದಾನಂದ ಸಿನ್ಹಾ
8) ಭಾರತದ ಸಂವಿಧಾನದ ರಚನಾ ಸಭೆಯ ಸಲಹೆಗಾರರು ಯಾರು?
ಉತ್ತರ: ಬಿ.ಎನ್.ರಾಯ್
9) ಸಂವಿಧಾನ ರಚನಾ ಸಮಿತಿಯ ಕಾನೂನು ಸಲಹೆಗಾರರಾದ ಬಿ.ಎನ್.ರಾವ್ ಅವರ ಪೂರ್ಣ ಹೆಸರೇನು?
ಉತ್ತರ: ಬೆನಗಲ್ ನರಸಿಂಹರಾವ್
10) ಭಾರತದ ಸಂವಿಧಾನದ ರಚನಾ ಸಭೆಯ ಉಪಾಧ್ಯಕ್ಷರು ಯಾರು?
ಉತ್ತರ: ಪ್ರೊ.ಎಚ್.ಸಿ. ಮುಖರ್ಜಿ
11) ಭಾರತದ ಸಂವಿಧಾನ ರಚನಾ ಸಭೆಯು ಒಟ್ಟು ಎಷ್ಟು ಸಮಿತಿಗಳನ್ನು ಒಳಗೊಂಡಿತ್ತು?
ಉತ್ತರ: 22
12)ಯಾರನ್ನು ಸಂವಿಧಾನದ ಪಿತಾಮಹ ಎಂದು ಕರೆಯುತ್ತಾರೆ?
ಉತ್ತರ: ಡಾ.ಬಿ.ಆರ್.ಅಂಬೇಡ್ಕರ್
13)ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು ಯಾರು?
ಉತ್ತರ: ಡಾ.ಬಿ.ಆರ್.ಅಂಬೇಡ್ಕರ್
14) ಸಂಂವಿಧಾನದ ಪ್ರಿಯಾಂಬಲ್ (ಪೀಠಿಕೆ) ಎಂದರೇನು?
ಉತ್ತರ: ಸಂವಿಧಾನದ ಗುರಿ ಏನು ಎಂದು ಸೂಚಿಸುವ ಪರಿಚಯಾತ್ಮಕ ಮುನ್ನುಡಿಯೇ ಪ್ರಿಯಾಂಬಲ್
15) ಭಾರತದ ಸಂವಿಧಾನ ರಚನೆಗೆ ತೆಗೆದುಕೊಂಡ ಕಾಲವೆಷ್ಟು?
ಉತ್ತರ: 2 ವರ್ಷ 11 ತಿಂಗಳು 18 ದಿನ
16) ಸಂವಿಧಾನ ದಿನವನ್ನು ಯಾವಾಗ ಮೊದಲ ಬಾರಿಗೆ ಆಚರಿಸಲಾಯಿತು?
ಉತ್ತರ: 26 ನವೆಂಬರ್ 2015
17) ಭಾರತದ ಸಂವಿಧಾನವು
ಉತ್ತರ: ದೀರ್ಘ ಕಾಲದ ಸಂವಿಧಾನ
18) ಭಾರತ ಸಂವಿಧಾನದ ಸ್ವರೂಪವು
ಉತ್ತರ: ಸಂಸದೀಯ ಪದ್ದತಿ
19) ಭಾರತದ ಸಂವಿಧಾನವು ಒಂದು
ಉತ್ತರ: ಭಾಗಶಃ ಕಠಿಣ.ಭಾಗಶಃ ಸರಳವಾದ ಸಂವಿಧಾನ
20) ಭಾರತ ಸಂವಿಧಾನದ ಯಾವ ಭಾಗದಲ್ಲಿ ಮೂಲಭೂತ ಹಕ್ಕುಗಳನ್ನು ಒಳಗೊಂಡಿದೆ?
ಉತ್ತರ: ಭಾಗ-3
21) ರಾಜ್ಯ ನಿರ್ದೇಶಕ ತತ್ವಗಳನ್ನು ಯಾವ ಸಂವಿಧಾನದಿಂದ ತೆಗೆದುಕೊಳ್ಳಲಾಗಿದೆ?
ಉತ್ತರ: ಐರಿಷ್ ಸಂವಿಧಾನದಿಂದ
22) ಭಾರತದ ಸಂವಿಧಾನ ರಚನೆಯ ಕರಡು ಸಮಿತಿ ರಚನೆಯಾಗಿದ್ದು ಯಾವಾಗ?
ಉತ್ತರ: ಆಗಸ್ಟ್ 29,1947
23) ಸಂವಿಧಾನದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಪ್ರಸ್ತಾವನೆಯನ್ನು ತಿದ್ದುಪಡಿ ಮಾಡಬಹುದು ಎಂದು ಯಾವ ಪ್ರಕರಣದಲ್ಲಿ ತೀರ್ಪು ನೀಡಲಾಯಿತು?
ಉತ್ತರ: ಕೇಶವಾನಂದ ಭಾರತಿ ಪ್ರಕರಣ ೧೯೭೩
24) ಮೊದಲ ತಿದ್ದುಪಡಿ ಕಾಯಿದೆಯನ್ನು ಯಾವಾಗ ಜಾರಿಗೆ ತರಲಾಯಿತು?
ಉತ್ತರ: 1951
25) ಭಾರತೀಯ ಸಂವಿಧಾನದಲ್ಲಿ ಯಾವ ಸಂವಿಧಾನ ನೀತಿಯ ನಿರ್ದೇಶನ ತತ್ವವನ್ನು ಅಳವಡಿಸಲಾಗಿದೆ
ಉತ್ತರ : ಐರ್ಲೆಂಡ್ ಸಂವಿಧಾನ
26) 'ಸಂವಿಧಾನ ಕರಡು ಸಮಿತಿ' ಮುಂದೆ ಮುನ್ನುಡಿಯನ್ನು ಪ್ರಸ್ತಾಪಿಸಿದವರು ಯಾರು?
ಉತ್ತರ: ಜವಾಹರಲಾಲ್ ನೆಹರು
27) ಸಂವಿಧಾನದ ಯಾವ ವಿಧಿಯು 'ಅಪಾಯಕಾರಿ ಕೈಗಾರಿಕೆಗಳು ಮತ್ತು ಕಾರ್ಖಾನೆ'ಗಳಲ್ಲಿ 14 ವರ್ಷದ ಕೆಳಗಿನ ಮಕ್ಕಳ ನೇಮಕಕ್ಕೆ ನಿಷೇಧಿಸುತ್ತದೆ ?
ಉತ್ತರ: 24ನೇ ವಿಧಿ
28) ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಒದಗಿಸುವ ಸಂವಿಧಾನದ ವಿಧಿ ಯಾವುದು ?
ಉತ್ತರ: 370 ನೇ ವಿಧಿ
29) ಭಾರತ ಸಂವಿಧಾನದ ಯಾವ ವಿಧಿಯ ಅಡಿಯಲ್ಲಿ ನಾಗರಿಕರಿಗೆ 'ಸಮಾನತೆಯ ಹಕ್ಕು'ನ್ನು ಒದಗಿಸಲಾಗಿದೆ ?
ಉತ್ತರ: 14ನೇ ವಿಧಿ
30) ಮತದಾನ ವಯಸ್ಸನ್ನು 18 ರಿಂದ 21 ವರ್ಷಕ್ಕೆ ಇಳಿಕೆ ಮಾಡಿದ ಸಂವಿಧಾನದ ತಿದ್ದುಪಡಿ ಯಾವುದು ?
ಉತ್ತರ: 61 ನೇ ತಿದ್ದುಪಡಿ (1989)
31) ಯಾವ ದೇಶದಿಂದ "ಸಂವಿಧಾನ ತಿದ್ದುಪಡಿ ವಿಧಾನ"ವನ್ನು ಎರವಲು ಪಡೆದು ಭಾರತದ ಸಂವಿಧಾನದಲ್ಲಿ ಅಳವಡಿಸಲಾಗಿದೆ ?
ಉತ್ತರ: ದಕ್ಷಿಣ ಆಫ್ರಿಕಾ
32) ಭಾರತ ಸಂವಿಧಾನವು ಯಾವ ದೇಶದಿಂದ "ಕೇಂದ್ರ-ರಾಜ್ಯ ಪಟ್ಟಿ" (Union-State List) ಪರಿಕಲ್ಪನೆಯನ್ನು ಎರವಲು ಪಡೆದುಕೊಂಡಿದೆ ?
ಉತ್ತರ: ಕೆನಡಾ
33). ಭಾರತದ ಸಂವಿಧಾನದಲ್ಲಿ ಅಳವಡಿಸಲಾದ "ಫೆಡರಲ್ ವ್ಯವಸ್ಥೆ" (Federal System) ಯಾವ ದೇಶದಿಂದ ಎರವಲು ಪಡೆಯಲಾಗಿದೆ ?
ಉತ್ತರ: ಕೆನಡಾ
34).ಭಾರತ ಸಂವಿಧಾನವು ಯಾವ ದೇಶದಿಂದ "ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳ ಅಮಾನತು' (Suspension of Fundamental Rights during the Emergency) ಪರಿಕಲ್ಪನೆಯನ್ನು ಎರವಲು ಪಡೆದುಕೊಂಡಿದೆ?
ಉತ್ತರ: ಜರ್ಮನಿ
35) ಭಾರತ ಸಂವಿಧಾನವು ಯಾವ ದೇಶದಿಂದ "ಚುನಾವಣಾ ಆಯೋಗ" (Election Commission) ದ ಪರಿಕಲ್ಪನೆಯನ್ನು ಎರವಲು ಪಡೆದುಕೊಂಡಿದೆ ?
ಉತ್ತರ: ಬ್ರಿಟನ್ (ಯುಕೆ)