Cousins Day 2021 : ಈ ದಿನದ ಇತಿಹಾಸ ಮತ್ತು ಮಹತ್ವವೇನು ?

ಕಸಿನ್ಸ್ ದಿನದ ಇತಿಹಾಸ ಮತ್ತು ಮಹತ್ವ ಇಲ್ಲಿ ತಿಳಿಯಿರಿ

ಪ್ರತಿಯೊಂದು ಕುಟುಂಬದಲ್ಲೂ ಬಾಂಧವ್ಯವನ್ನು ಹೆಚ್ಚಿಸಲು ಮತ್ತು ತುಂಬಾ ದಿನಗಳ ಕಾಲ ಆ ಬಾಂಧವ್ಯ ಮತ್ತು ಸ್ನೇಹವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ
ಪ್ರತಿವರ್ಷ ಜುಲೈ 24 ರಂದು ರಾಷ್ಟ್ರೀಯ ಸೋದರಸಂಬಂಧಿ (ಕಸಿನ್ಸ್) ದಿನವನ್ನು ಆಚರಿಸಲಾಗುತ್ತದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಕುಟುಂಬಗಳು ಸಾಮಾನ್ಯವಾಗಿ ದೊಡ್ಡದಾಗಿರುತ್ತವೆ, ಹಾಗಾಗಿ ನೀವು ಹೆಚ್ಚು ಸೋದರಸಂಬಂಧಿಗಳನ್ನು ಹೊಂದಿರುತ್ತೀರಿ.

ಆಂಗ್ಲ ಭಾಷೆಯಲ್ಲಿ ಈ ದಿನವನ್ನು ಕಸಿನ್ಸ್ ದಿನವೆಂದು ಕರೆಯಲಾಗುತ್ತದೆ. ಕನ್ನಡದಲ್ಲಿ 'ಸೋದರಸಂಬಂಧಿ' ಎಂಬ ಪದದ ಬಗ್ಗೆ ಹೆಚ್ಚು ಸ್ಪಷ್ಟತೆ ಇಲ್ಲ ಆದರೆ ಸಾಮಾನ್ಯವಾಗಿ ದೊಡ್ಡ ಸಂಖ್ಯೆಯಲ್ಲಿ ಜನರುಳ್ಳ ಕುಟುಂಬಗಳಲ್ಲಿ ಹತ್ತಿರದ ಸಂಬಂಧಿಗೆ ಸೋದರ ಸಂಬಂಧಿ ಎಂದು ಕರೆಯಲಾಗುತ್ತದೆ. ಸೋದರಸಂಬಂಧಿಗಳು ಒಡಹುಟ್ಟಿದವರಿಗಿಂತ ಕಡಿಮೆಯಿಲ್ಲ, ಅವರು ನಮ್ಮ ಜೀವನದಲ್ಲಿ ನಮ್ಮ ಆಳವಾದ ರಹಸ್ಯಗಳನ್ನು ಮತ್ತು ನಮ್ಮ ಕನಸುಗಳನ್ನು ಹಂಚಿಕೊಳ್ಳಲು ಸೂಕ್ತ ವ್ಯಕ್ತಿಗಳಾಗಿರುತ್ತಾರೆ.

ಕಸಿನ್ಸ್ ದಿನದ ಇತಿಹಾಸ:

ಕಸಿನ್ಸ್ ದಿನದ ಮೂಲ ಇದುವರೆಗೂ ಯಾರಿಗೂ ತಿಳಿದಿಲ್ಲ. ಕಸಿನ್ಸ್ ದಿನವನ್ನು ಹೇಗೆ ಪ್ರಾರಂಭಿಸಲಾಯಿತು ಎಂಬುದರ ಹಿಂದೆ ಅನೇಕ ಸಿದ್ಧಾಂತಗಳಿದ್ದರೂ ಕೂಡ ಕಸಿನ್ಸ್ ಗಳು ತಮ್ಮ ಬಂಧ ಮತ್ತು ಸ್ನೇಹವನ್ನು ಇನ್ನಷ್ಟು ಗಟ್ಟಿಗೊಳಿಸಲು ಈ ದಿನವನ್ನು ಪ್ರಾರಂಭಿದರು ಎಂದು ಕೆಲವರು ನಂಬುತ್ತಾರೆ. ಹೆಚ್ಚಿನವರು ಹೇಳುವಂತೆ ಶುಭಾಶಯ ಪತ್ರವನ್ನು ಹೆಚ್ಚು ಮಾರಾಟ ಮಾಡುವಲ್ಲಿ ಮಾರ್ಕೆಟಿಂಗ್ ಕಂಪೆನಿಯ ತಂತ್ರದಿಂದ ಈ ದಿನ ಜಾರಿಗೆ ಬಂದಿತು ಎನ್ನಲಾಗಿದೆ.

ಕಸಿನ್ಸ್ ದಿನದ ಆಚರಣೆ :

ಕಸಿನ್ಸ್ ದಿನವನ್ನು ಯಾವುದೇ ರೀತಿಯಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವುದಿಲ್ಲ. ಈ ದಿನದಂದು ಸಾಮಾನ್ಯವಾಗಿ ಕಾರ್ಡ್ ಕಳುಹಿಸುವ ಮೂಲಕ, ದೂರವಾಣಿಯಲ್ಲಿ ಕರೆ ಮಾಡುವ ಮೂಲಕ ಅಥವಾ ಅವರನ್ನು ಊಟಕ್ಕೆ ಅಥವಾ ಭೋಜನಕ್ಕೆ ಆಹ್ವಾನಿಸುವ ಮೂಲಕ ಆಚರಿಸಲಾಗುತ್ತದೆ. ಈ ರೀತಿಯಾಗಿ ಆಚರಣೆ ಮಾಡುವ ಮೂಲಕ ನಾವು ಅವರನ್ನು ಎಷ್ಟು ಪ್ರೀತಿಸುತ್ತೇವೆ ಮತ್ತು ಕಾಳಜಿ ವಹಿಸುತ್ತೇವೆ ಎಂದು ತೋರಿಸಬಹುದು. ಈ ದಿನದಂದು ನೀವು ಸೆಲ್ಫಿ ತೆಗೆದುಕೊಳ್ಳುವ ಮೂಲಕ ನೆನಪಿನಲ್ಲಿಡಬಹುದು.

For Quick Alerts
ALLOW NOTIFICATIONS  
For Daily Alerts

English summary
cousins day is celebrated on july 24. Here is the history, meaning and significance of the day.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X