Deepavali Speech : ದೀಪಾವಳಿ ಹಬ್ಬದ ಕುರಿತು ಭಾಷಣ ಮಾಡಲು ಇಲ್ಲಿದೆ ಮಾಹಿತಿ

ದೀಪಾವಳಿ ಹಬ್ಬದ ಕುರಿತು ಭಾಷಣ ಮಾಡಲು ಇಲ್ಲಿದೆ ಮಾಹಿತಿ

ಎಲ್ಲರಿಗೂ ಶುಭೋದಯ

ನಾನು ಕೀರ್ತಿ

ಇಂದು ನಾನು ಭಾರತದ ಅತಿದೊಡ್ಡ ಮತ್ತು ಪ್ರಮುಖ ಹಬ್ಬಗಳಲ್ಲಿ ಒಂದಾದ ದೀಪಾವಳಿ ಹಬ್ಬದ ಕುರಿತು ಮಾತನಾಡುತ್ತಿದ್ದೇನೆ. ದೀಪಾವಳಿಯ ಅರ್ಥ ಬೆಳಕಿನ ಹಬ್ಬ, ಬದುಕಿನಲ್ಲಿರುವ ಕತ್ತಲನ್ನು ಓಡಿಸಿ ಬೆಳಕು ಮೂಡಿಸಲೆಂಬ ಆಶಯದೊಂದಿಗೆ ದೀಪ ಬೆಳಗಿಸುವ ಹಬ್ಬ. ಹಿಂದೂಗಳು ಈ ಹಬ್ಬವನ್ನು ಬಹಳ ಸಂತೋಷದಿಂದ ಆಚರಿಸುತ್ತಾರೆ. ಹಬ್ಬದಂದು ಜನರು ತಮ್ಮ ಮನೆಗಳಲ್ಲಿ ದೀಪಾಲಂಕಾರ ಮಾಡುತ್ತಾರೆ ಮತ್ತು ಮನೆಗೆ ಸಂಪತ್ತು ಹಾಗೂ ಆರೋಗ್ಯ ನೀಡೆಂದು ಗಣೇಶ ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೆ.

 

ದೀಪಾವಳಿ ವಿಶ್ವದ ಅತ್ಯಂತ ಪ್ರಕಾಶಮಾನವಾದ ಹಬ್ಬವಾಗಿದೆ. ವಿವಿಧ ಧರ್ಮದ ಜನರು ದೀಪಾವಳಿಯನ್ನು ಆಚರಿಸುವುದು ಗಮನಾರ್ಹ ಸಂಗತಿ. ಬೆಳಕಿನ ಹಬ್ಬ ದೀಪಾವಳಿಯ ಕುರಿತ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ನಾನಿಂದು ಭಾಷಣದಲ್ಲಿ ಹೇಳಲಿದ್ದೇನೆ.

ದೀಪಾವಳಿಯ ಧಾರ್ಮಿಕ ಮೌಲ್ಯಗಳು :

ಈ ಹಬ್ಬದ ಧಾರ್ಮಿಕ ಮಹತ್ವವು ವಿಭಿನ್ನವಾಗಿದೆ. ಭಾರತದಲ್ಲಿ ದೀಪಾವಳಿ ಆಚರಣೆಯು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಿಭಿನ್ನವಾಗಿರುತ್ತದೆ. ದೀಪಾವಳಿಯಲ್ಲಿ ಅನೇಕ ದೇವತೆಗಳನ್ನು ವಿಭಿನ್ನ ಸಂಸ್ಕೃತಿ ಮತ್ತು ಸಂಪ್ರದಾಯಗಳ ಮೂಲಕ ಪೂಜಿಸಲಾಗುತ್ತದೆ. ಈ ವ್ಯತ್ಯಾಸಗಳಿಗೆ ಕಾರಣ ಪ್ರಾಯಶಃ ಸ್ಥಳೀಯ ಸುಗ್ಗಿಯ ಹಬ್ಬಗಳು.

ದೀಪಾವಳಿಯನ್ನು ಆಚರಿಸಲು ಮುಖ್ಯ ಕಾರಣ ರಾಮನು ಲಂಕಾದ ಅಸುರ ರಾಜ ರಾವಣನನ್ನು ಸೋಲಿಸಿದ ನಂತರ ಅಯೋಧ್ಯೆಗೆ ಮರಳುವುದು. ಪ್ರತಿ ವರ್ಷ ಈ ದಿನದಂದು ನಾವು ಅದನ್ನು ಒಳ್ಳೆಯತನದ ಸಂಕೇತವಾಗಿ ಆಚರಿಸುತ್ತೇವೆ. ಶ್ರೀರಾಮನು ತನ್ನ ಹೆಂಡತಿ ಸೀತೆ ಮತ್ತು ಕಿರಿಯ ಸಹೋದರ ಲಕ್ಷ್ಮಣನೊಂದಿಗೆ 14 ವರ್ಷಗಳ ವನವಾಸವನ್ನು ಕಾಡಿನಲ್ಲಿ ಕಳೆದರು ತದನಂತರ ಅಯೋಧ್ಯೆಗೆ ಹಿಂತಿರುಗಿದನು.

ಅಯೋಧ್ಯೆಯ ಜನರು ತಮ್ಮ ರಾಜನಿಗೆ ಪ್ರೀತಿ ಮತ್ತು ಬಾಂಧವ್ಯದಿಂದ ಹೃತ್ಪೂರ್ವಕವಾಗಿ ಸ್ವಾಗತಿಸುತ್ತಾರೆ. ಜನರು ತಮ್ಮ ಮನೆಗಳನ್ನು ಮತ್ತು ಇಡೀ ರಾಜ್ಯವನ್ನು ಬೆಳಕಿನಿಂದ ಬೆಳಗಿಸಿದರು. ಈ ರೀತಿಯಾಗಿ ಅಂದು ಅವರು ರಾಮನನ್ನು ಸ್ವಾಗತಿಸಿದರು.

ನರಕಾಸುರ ಒಬ್ಬ ನರರಾಕ್ಷಸ ಹಾಗಾಗಿ ವಿಷ್ಣು ದೇವ ಕೃಷ್ಣನ ಅವತಾರವಾಗಿ ನರರಾಕ್ಷಸ ನರಕಾಸುರನನ್ನು ಕೊಂದನು. ಈ ವಿಜಯದಿಂದಾಗಿ 16000 ಬಂಧಿತ ಹುಡುಗಿಯರ ಬಿಡುಗಡೆಯನ್ನು ಮಾಡಲಾಯಿತು. ಹೀಗಾಗಿ ಈ ವಿಜಯವನ್ನು ಕೆಟ್ಟದ್ದರ ವಿರುದ್ಧ ಒಳ್ಳೆಯದು ಗೆದ್ದಿದೆ ಎಂಬ ಸಂಕೇತದೊಂದಿಗೆ ಆಚರಿಸಲಾಗುತ್ತಿದೆ.

ಅನೇಕರು ಈ ದೀಪಾವಳಿಯಂದು ಸಂಪತ್ತು ಮತ್ತು ಸಮೃದ್ಧಿಯ ಅಧಿದೇವತೆ ಲಕ್ಷ್ಮಿಯನ್ನು ಪೂಜಿಸುತ್ತಾರೆ. ದಂತಕಥೆಯ ಪ್ರಕಾರ ದೀಪಾವಳಿಯು ಲಕ್ಷ್ಮಿಯ ವಿವಾಹದ ರಾತ್ರಿಯಾಗಿದೆ. ಪೂರ್ವ ಭಾರತದಲ್ಲಿ ಹಿಂದೂಗಳು ದೀಪಾವಳಿಯನ್ನು ದುರ್ಗಾ ಅಥವಾ ಕಾಳಿ ದೇವಿಯ ಜೊತೆ ಸಂಬಂಧಿಸುತ್ತಾರೆ. ಕೆಲವು ಹಿಂದೂಗಳು ದೀಪಾವಳಿಯನ್ನು ಹೊಸ ವರ್ಷದ ಆರಂಭ ಎಂದು ನಂಬುತ್ತಾರೆ.

ದೀಪಾವಳಿಯ ಆಧ್ಯಾತ್ಮಿಕ ಮೌಲ್ಯಗಳು:

ಸಾಮಾನ್ಯವಾಗಿ ಹಬ್ಬದ ಆಚರಣೆಗಳಲ್ಲಿ ಕುಟುಂಬದವರೆಲ್ಲರೂ ಕೂಡಿ ಪಾಲ್ಗೊಳ್ಳುತ್ತಾರೆ. ದೀಪಾವಳಿ ಸಮಯದಲ್ಲಿ ಸ್ನೇಹ ಮತ್ತು ಸಂಬಂಧಗಳು ಬಲಗೊಳ್ಳುತ್ತವೆ. ಜನರು ತಮ್ಮ ಹೃದಯದಿಂದ ದ್ವೇಷದ ಎಲ್ಲಾ ಭಾವನೆಗಳನ್ನು ಹೊರಹಾಕುತ್ತಾರೆ.

ಈ ಸುಂದರ ಹಬ್ಬವು ಸಮೃದ್ಧಿಯನ್ನು ಹೊಂದಿದೆ. ಹಿಂದೂ ಉದ್ಯಮಿಗಳು ದೀಪಾವಳಿಯಂದು ಹೊಸ ಖಾತೆ ಪುಸ್ತಕಗಳನ್ನು ತೆರೆಯುತ್ತಾರೆ. ಇದಲ್ಲದೆ ಅವರು ಯಶಸ್ಸು ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸುತ್ತಾರೆ. ಜನರು ತಮಗಾಗಿ ಮತ್ತು ಇತರರಿಗಾಗಿ ಹೊಸ ಬಟ್ಟೆ ಮತ್ತು ಉಡುಗೊರೆಗಳನ್ನು ಸಹ ಖರೀದಿಸುತ್ತಾರೆ.

 

ಈ ಬೆಳಕಿನ ಹಬ್ಬವು ಜನರಿಗೆ ಶಾಂತಿಯನ್ನು ಹರಡಿ, ಎಲ್ಲರಲ್ಲಿಯೂ ಶಾಂತಿಯ ಬೆಳಕನ್ನು ತುಂಬುತ್ತದೆ. ದೀಪಾವಳಿಯು ಖಂಡಿತವಾಗಿಯೂ ಜನರಿಗೆ ಆಧ್ಯಾತ್ಮಿಕ ಶಾಂತಿಯನ್ನು ತರುತ್ತದೆ. ಈ ಬೆಳಕಿನ ಹಬ್ಬದಲ್ಲಿ ವ್ಯಕ್ತಿಗಳು ಪರಸ್ಪರರ ಮನೆಗಳಿಗೆ ಭೇಟಿ ನೀಡುತ್ತಾರೆ ಮತ್ತು ಸಂತೋಷದ ಸಂವಹನವನ್ನು ಆನಂದಿಸುತ್ತಾರೆ. ಹಬ್ಬದಂದು ಒಳ್ಳೆಯ ಊಟವನ್ನು ತಿನ್ನುತ್ತಾರೆ ಮತ್ತು ಪಟಾಕಿಗಳನ್ನು ಹಚ್ಚಿ ಸಂಭ್ರಮಿಸುತ್ತಾರೆ.

ಅಂತಿಮವಾಗಿ ಸಂಕ್ಷಿಪ್ತವಾಗಿ ಹೇಳುವುದಾದರೆ ದೀಪಾವಳಿಯು ಭಾರತದಲ್ಲಿ ಒಂದು ದೊಡ್ಡ ಸಂತೋಷದಾಯಕ ಘಟನೆಯಾಗಿದೆ. ಈ ಅದ್ಭುತ ಹಬ್ಬದ ಸಂತೋಷಕರ ಕೊಡುಗೆಯನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ದೀಪಾವಳಿ ಖಂಡಿತವಾಗಿಯೂ ವಿಶ್ವದ ಶ್ರೇಷ್ಠ ಹಬ್ಬಗಳಲ್ಲಿ ಒಂದಾಗಿದೆ.

ದೀಪಾವಳಿಯ ಹಬ್ಬದ ಕುರಿತು ಮಾಹಿತಿ ಹಂಚಿಕೊಳ್ಳಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು.

For Quick Alerts
ALLOW NOTIFICATIONS  
For Daily Alerts

English summary
Here is the speech ideas for students and children in kannada for deepavali festival.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X