10 ನೇ ತರಗತಿ ನಂತರ ನೀವು ಆಯ್ಕೆ ಮಾಡಿಕೊಳ್ಳಬಹುದಾದ ಡಿಪ್ಲೋಮಾ ಕೋರ್ಸ್ ಗಳು

Written By: Nishmitha B

10ನೇ ತರಗತಿ ನಂತ್ರ ನೀನೇನು ಮಾಡುತ್ತಿ ಎಂದು ಪ್ರಶ್ನಿಸಿದ್ರೆ ಡಾಕ್ಟರ್ ಇಲ್ಲ ಇಂಜಿನಿಯರ್ ಎಂಬುದು ವಿದ್ಯಾರ್ಥಿಗಳಿಂದ ಹೆಚ್ಚಾಗಿ ಬರುವ ಉತ್ತರ. ಆದ್ರೆ ಅದೆರಡಕ್ಕಿಂತಲೂ ಇನ್ನು ಹಲವಾರು ಬೆಸ್ಟ್ ಕೆರಿಯರ್ ಆಯ್ಕೆ ಗಳಿವೆ. ಆದ್ರೆ ಅದರ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಇರುವುದಿಲ್ಲ ಅಷ್ಟೇ

10ನೇ ತರಗತಿ ಒಂದು ಕೆರಿಯರ್ ಲೈಫ್ ನಿರ್ಧರಿಸುವ ಪ್ರಮುಖ ಘಟ್ಟ ಎಂದು ಹೇಳಬಹುದು. ನಾವು ಮುಂದೆ ಏನು ಆಗಬೇಕು ಎಂದು 10ನೇ ತರಗತಿಯಲ್ಲೇ ಡಿಸೈಡ್ ಮಾಡಿಕೊಳ್ಳುತ್ತೇವೆ ಆದ್ರೆ ನಾವು ಅಂದುಕೊಂಡಂತೆ ಆಗಿಲ್ಲವೆಂದಾದ್ರೆ ನಿರಾಶೆ ಭಾವನೆ ನಮ್ಮಲ್ಲಿ ಮೂಡುತ್ತದೆ. ಅದಕ್ಕೆ ಕಾರಣ ಬರೀ ಇಂಜಿಯರ್, ಡಾಕ್ಟರ್ ಪೋಸ್ಟ್ ಮಾತ್ರ ಬೆಸ್ಟ್ ಎಂದು ಅಂದುಕೊಳ್ಳುವ ನಮ್ಮ ಮನೋಭಾವ. ಅಂತಹ ಮನೋಭಾವ ಇಂದೇ ಬಿಟ್ಟು ಬಿಡಿ

ಇಂಜಿನಿಯರ್, ಡಾಕ್ಟರ್ ಮಾತ್ರವಲ್ಲದೇ ಈ ಕೆರಿಯರ್ ಲೈಫ್ ನ್ನು ಕೂಡಾ ಆಯ್ಕೆ ಮಾಡಿ ನೆಮ್ಮದಿಯ ಜೀವನ ನಿಮ್ಮದಾಗಿಸಿಕೊಳ್ಳಬಹುದು. ಅಂತಹ ಫೀಲ್ಡ್‌ ಯಾವುದು ಎಂಬ ಮಾಹಿತಿ ಲಿಸ್ಟ್‌ ನಿಮ್ಮ ಮುಂದೆ

ಫೋಟೋಗ್ರಾಫರ್ :

Image Source

ಇದೀಗ ಜಗತ್ತಿನಾದ್ಯಂತ ಇದು ಹಾಟ್ ಕೆರಿಯರ್ ಆಗಿದೆ. ಹವ್ಯಾಸವಾಗಿ ಪ್ರಾರಂಭವಾಗುವ ಫೋಟೋಗ್ರಾಫಿಯನ್ನ ನಿಮ್ಮ ವೃತ್ತಪರ ಉದ್ಯೋಗವನ್ನಾಗಿ ಆಯ್ಕೆ ಮಾಡಿಕೊಳ್ಳಬಹುದು. ಫೋಟೋಗ್ರಾಫಿಯಲ್ಲಿ ಕೆರಿಯರ್ ಹೇಗೆ ಅನ್ನೋ ಕುತೂಹಲ ನಿಮಗಿದೆಯೇ. ಅದಕ್ಕೆ ಉತ್ತರ ಇಲ್ಲಿದೆ. ಹೌದು ಫೋಟೋಗ್ರಾಫಿಯಲ್ಲಿ ಉತ್ತಮ ಕೆರಿಯರ್ ಲೈಫ್ ನಿಮ್ಮದಾಗಿಸಿಕೊಳ್ಳಬಹುದು. ಹೇಗೆ ಅಂದ್ರೆ ಈ ಫೀಲ್ಡ್‌ ನಲ್ಲಿ ಫೋಟೋಜರ್ನಲಿಸಂ, ವೈಲ್ಡ್‌ಲೈಫ್ ಫೋಟೋಗ್ರಾಫಿ, ಕಮರ್ಷಿಯಲ್ ಫೋಟೋಗ್ರಾಫಿ, ಪೋಟ್ರೈಟ್ ಫೋಟೋಗ್ರಾಫಿ, ಅಡ್ವರ್ಟೈಸಿಂಗ್ ಫೋಟೋಗ್ರಾಫಿ, ಫ್ಯಾಶನ್ ಫೋಟೋಗ್ರಾಫಿ, ಫುಡ್ ಡಿಸ್‌ ಪ್ಲೇ ಫೋಟೋಗ್ರಾಫಿ, ಟ್ರಾವೆಲ್ ಫೋಟೋಗ್ರಾಫಿ, ಸೈಂಟಿಫಿಕ್ ಫೋಟೋಗ್ರಾಫಿ ಮುಂತಾದ ಅವಕಾಶಗಳಿವೆ

ಇತ್ತೀಚಿನ ದಿನಗಳಲ್ಲಿ ಫೋಟೋಗ್ರಾಫಿ ಕೆರಿಯರ್ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆಯುತ್ತಿದೆ. ಈ ಫೋಟೋಗ್ರಾಫಿಗೆ ಅದರದ್ದೇ ಆದ ಕೌಶಲ್ಯವಿರಬೇಕು ಮುಖ್ಯವಾಗಿ ಆಸಕ್ತಿ ಇರಬೇಕು

 

ಪ್ರಸಾಧನ ಕಲೆ:

Image Source

ಇದು ಯಾವತ್ತೂ ಕೆಳಮುಖವಾಗದ ಕೆರಿಯರ್ ಲೈಫ್ ಆಗಿದೆ. ಇತ್ತೀಚಿಗಿನ ಮಾರ್ಡನ್ ಜಗತ್ತಿನಲ್ಲಿ ಈ ಹುದ್ದೆಗೆ ತುಂಬಾ ಬೇಡಿಕೆ ಇದೆ. ಹಲವಾರು ಶಿಕ್ಷಣ ಸಂಸ್ಥೆಗಳು ಈ ವಿಷ್ಯಕ್ಕೆ ಸಂಬಂಧಪಟ್ಟಂತೆ ಅನೇಕ ಕೋರ್ಸ್ ಗಳನ್ನ ಪರಿಚಯಿಸುತ್ತಿದೆ. ಇನ್ನು ಪ್ರಸಾಧನ ಕಲೆ ವಿಷಯದಲ್ಲಿ ಡಿಪ್ಲೋಮಾ ಕೋರ್ಸ್ ಗಳು ಕೂಡಾ ಲಭ್ಯವಿದೆ

ಹೇರ್‌ಸ್ಟೈಲ್ ನಿಂದ ಸ್ಕಿನ್ ಕೇರ್ ವರೆಗೂ ಈ ಕೋರ್ಸ್ ನಲ್ಲಿ ತಿಳಿಸಿಕೊಡಲಾಗುತ್ತದೆ. ಈ ಕೆರಿಯರ್ ಯಾವತ್ತೂ ಕೂಡಾ ಆಸಕ್ತಿಯುಕ್ತ ಕೆರಿಯರ್ ಆಗಿದ್ದು, ಮಾತ್ರವಲ್ಲದೇ ಯೂನಿಕ್ ಕೆರಿಯರ್ ಕೂಡಾ ಆಗಿದೆ. ಅಷ್ಟೇ ಅಲ್ಲ ಅತೀ ಹೆಚ್ಚು ಸಂಭಾವನೆ ಪಡೆಯುವ ಕೆರಿಯರ್ ಕೂಡಾ ಇದಾಗಿದೆ

 

ಕೇಕ್ ಡೆಕೋರೇಟಿಂಗ್ ಕೋರ್ಸ್:

Image Source

ಅಡುಗೆ ಮಾಡುವುದರಲ್ಲಿ ನಿಮಗೆ ಆಸಕ್ತಿ ಇದೆಯೇ... ಹಾಗಿದ್ರೆ ಈ ಕೋರ್ಸ್ ನಿಮಗೆ ಬೆಸ್ಟ್. ಕಪ್‌ಕೇಕ್, ಮ್ಯಾಕರೂನ್ಸ್, ಕುಕ್ಕೀಸ್, ಕೇಕ್ಸ್ ಡೆಕೋರೆಟ್ ಮಾಡಬಹುದು. ಇತ್ತೀಚಿಗಿನ ದಿನಗಳಲ್ಲಿ ಕೇಕ್ ಡೆಕೋರೇಟಿಂಗ್ ಫೀಲ್ಡ್‌ ಸದ್ದಿಲ್ಲದೇ ಫೇಮಸ್ ಆಗುತ್ತಿದೆ. ಅಷ್ಟೇ ಅಲ್ಲ ಈ ಕ್ಷೇತ್ರದಲ್ಲಿ ತುಂಬಾ ಸ್ಪರ್ಧೆಗಳು ಕೂಡಾ ಇದೆ. ಈ ಕ್ಷೇತ್ರದಲ್ಲಿ ನೀವು ದುಡಿಬೇಕು ಅಂದುಕೊಂಡಿದ್ದರೆ ನಿಮಗೆ ಕ್ರಿಯೇಟಿಂಗ್ ಕೌಶಲ್ಯ ಹೆಚ್ಚಿರಬೇಕು. ಗ್ರಾಹಕರ ಅಭಿರುಚಿಗೆ ತಕ್ಕಂತೆ ಸದಾ ಹೊಸತ್ತು ಏನಾದ್ರೂ ಆಲೋಚಿಸಬೇಕು.

ಈ ಇಂಡಸ್ಟ್ರಿಗೆ ನೀವು ಎಂಟ್ರಿ ಆಗಬೇಕು ಅಂದುಕೊಂಡಿದ್ದರೆ, ಪ್ರತಿದಿನ ಹೊಸ ಹೊಸತು ಏನಾದ್ರೂ ಆವಿಷ್ಕಾರ ಮಾಡಬೇಕು. ಅಷ್ಟೇ ಅಲ್ಲ ಲೇಟೆಸ್ಟ್ ವಿಚಾರಗಳಿಗೆ ನೀವು ಅಪ್‌ಡೇಟ್ ಆಗಿರಬೇಕು. ಅಷ್ಟೇ ಅಲ್ಲ ಈ ಫೀಲ್ಡ್‌ಗೆ ಹಾರ್ಡ್ ವರ್ಕ್ ಜತೆ ಗ್ಲಾಮರಸ್ ಐಡಿಯಾಗಳ ಅವಶ್ಯಕತೆ ಕೂಡಾ ಇದೆ

 

ಫೈನ್ ಆರ್ಟ್ಸ್:

Image Source

ಇತರ ಡಿಗ್ರಿ ಅಂತೆಯೇ ಫೈನ್ ಆರ್ಟ್ಸ್ ಕೂಡಾ ಒಂದು. ಇದು ಕೂಡಾ ಕ್ರಿಯೇಟಿವಿಟಿ ಮೇಲೆ ನಿಂತಿರುತ್ತದೆ. ಪೈಂಟಿಂಗ್, ನಾಟಕ, ಸಾಹಿತ್ಯ, ಸಂಗೀತ, ಶಿಲ್ಪಗಳು ಹಾಗೂ ಇನ್ನಿತ್ತರ ಕೆಲವೊಂದು ಕೋರ್ಸ್ ಗಳು ಈ ಸಬ್‌ಜೆಕ್ಟ್ ಅಡಿಯಲ್ಲಿಯೇ ಬರುತ್ತದೆ

ಬರವಣಿಗೆ, ಶಿಲ್ಪ, ಪೈಂಟಿಂಗ್, ಟೆಲಿವಿಶನ್ ಪ್ರೊಡಕ್ಷನ್, ಸ್ಟೇಜ್ ಮ್ಯಾನೇಜ್‌ಮೆಂಟ್, ಇವೆಲ್ಲಾ ಕ್ಷೇತ್ರದಲ್ಲಿ ಕೆರಿಯರ್ ರೂಪಿಸಿಕೊಳ್ಳಬಹುದು. ಈ ಸಬ್‌ಜೆಕ್ಟ್ಗೆ ಸಂಬಂಧಪಟ್ಟಂತೆ ಅನೇಕ ಕೋರ್ಸ್ ಗಳು ಲಭ್ಯವಿದೆ

 

English summary
Choosing a career/course after class 10 is a daunting task. The right choice of career is important as this choice may lead to a happy and satisfying career in life

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia