ಬಾಸ್‌ನ್ನು ಇಂಪ್ರೆಸ್ ಮಾಡೋದು ಹೇಗೆ ಅಂತಾ ಗೊತ್ತಾ?

Written By: Rajatha

ಯಾವುದೇ ಒಂದು ಆಫೀಸ್‌ನಲ್ಲಿ ನೌಕರರು ನೆಮ್ಮದಿಯಿಂದ ಕೆಲಸ ಮಾಡಬೇಕಾದರೆ ಅಲ್ಲಿನ ಬಾಸ್ ಚೆನ್ನಾಗಿರಬೇಕು. ಆಫೀಸ್‌ನಲ್ಲಿ ಸಮಯಕ್ಕೆ ಸರಿಯಾಗಿ ಸಂಬಳ ಹೆಚ್ಚಳವಾಗಬೇಕಾದರೆ, ಪ್ರಮೋಷನ್ ಆಗಬೇಕಾದರೆ ಎಲ್ಲದಕ್ಕೂ ಕಂಪನಿಯ ಬಾಸ್‌ನ್ನು ಇಂಪ್ರೆಸ್ ಮಾಡಬೇಕಾಗುತ್ತದೆ. ಬಾಸ್‌ಗೆ ಯಾರು ಹತ್ತಿರವಾಗಿರುತ್ತಾರೋ, ಬಾಸ್‌ನ್ನು ಇಂಪ್ರೆಸ್ ಮಾಡುವುದರಲ್ಲಿ ಯಾರು ಎತ್ತಿದ ಕೈ ಆಗಿರುತ್ತಾರೋ ಅವರಿಗೆ ಪ್ರಮೋಷನ್ ಬೇಗ ಸಿಗುತ್ತದೆ. ಅದೇ ಉಳಿದವರ ಪ್ರಮೋಷನ್ ಹಾಗೆಯೇ ಪೆಂಡಿಂಗ್ ಉಳಿದಿರುತ್ತದೆ. ನೀವು ನಿಮ್ಮ ಆಫೀಸ್‌ನಲ್ಲೂ ಈ ರೀತಿಯ ತಾರತಮ್ಯವನ್ನು ಗಮನಿಸಿರುವಿರಿ. ಬಾಸ್‌ಗೆ ನಿಮ್ಮ ಮೇಲೆ ಇಂಪ್ರೆಸ್ ಆಗಬೇಕಾದರೆ ಏನು ಮಾಡಬೇಕು. ಹೇಗೆ ಬಾಸ್‌ನ್ನು ಪಟಾಯಿಸಬಹುದು ಎನ್ನುವುದು ನಿಮಗೆ ಗೊತ್ತಾ? ಅದಕ್ಕಾಗಿ ಇಲ್ಲಿದೆ ಕೆಲವು ಟಿಪ್ಸ್ ...

1. ಸಮಯಕ್ಕೆ ಸರಿಯಾಗಿರಿ ಆಫೀಸ್‌ಗೆ ಹೋಗಿ

ಯಾವಾಗಲೂ ಆಫೀಸ್‌ಗೆ ಚಕ್ಕರ್ ಹೊಡೆಯುವುದು. ಸಮಯಕ್ಕೆ ಸರಿಯಾಗಿ ಬರದೇ ಇರುವುದು ಇವೆಲ್ಲಾ ಒಬ್ಬ ಉತ್ತಮ ಕೆಲಸಗಾರರ ಲಕ್ಷಣವಲ್ಲ. ಬಾಸ್‌ಗಳು ಯಾವುದೇ ಜವಾಬ್ದಾರಿಯನ್ನು ಓರ್ವ ನೌಕರನಿಗೆ ವಹಿಸುವಾಗ ಆತನಲ್ಲಿ ಸಮಯಪ್ರಜ್ಞೆ ಇದೆಯೋ ಇಲ್ಲವೋ ಅನ್ನುವುದನ್ನು ತಿಳಿದು ನಂತರ ಆತನಿಗೆ ಜವಾಬ್ದಾರಿಯನ್ನು ವಹಿಸುತ್ತಾರೆ. ಹಾಗಾಗಿ ಆವಾಗಾವಾಗ ಆಫೀಸ್‌ಗೆ ಚಕ್ಕರ್ ಹೊಡೆಯುವುದನ್ನು ನಿಲ್ಲಿಸಿ.

2. ಕೇವಲ ನಿಮ್ಮ ಕೆಲಸಗಳಿಗೆ ಮಾತ್ರ ಸೀಮಿತವಾಗಬೇಡಿ

ನಿಮ್ಮ ಬಾಸ್‌ನ್ನು ಇಂಪ್ರೆಸ್ ಮಾಡೋ ಅತ್ಯಂತ ಸುಲಭ ಮಾರ್ಗವೆಂದರೆ, ನಿಮಗೆ ಕೊಟ್ಟಿರುವ ಕೆಲಸಗಳಿಗೆ ಮಾತ್ರ ನೀವು ಸೀಮಿತವಾಗಬೇಡಿ. ನಿಮ್ಮ ಕೆಲಸದ ಜೊತೆಗೆ ನಿಮ್ಮದಲ್ಲದ ಕೆಲಸಗಳನ್ನೂ ಮಾಡಿ. ಈ ರೀತಿ ಮಾಡುವುದರಿಂದ ಬಾಸ್‌ನ ದೃಷ್ಠಿಯಲ್ಲಿ ನಿಮ್ಮ ಕೆಲಸದ ಬಗ್ಗೆ ಹೆಮ್ಮೆ ಎನಿಸುತ್ತದೆ. ನಿಮ್ಮ ಕೆಲಸದಿಂದ ಖುಷಿಯಾಗುತ್ತಾರೆ.

3. ನಿಮ್ಮ ಟೇಬಲ್‌ನ್ನು ಶುಚಿಯಾಗಿಟ್ಟಿರಿ

ನಿಮ್ಮ ಬಾಸ್ ಯಾವುದೇ ಸಂದರ್ಭದಲ್ಲಿ ನಿಮ್ಮ ಟೇಬಲ್‌ಗೆ ಬರಬಹುದು. ಆ ಸಂದರ್ಭದಲ್ಲಿ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿಯಾಗಿ ಹರಡಿಡಬೇಡಿ. ಅದನ್ನು ಸರಿಯಾಗಿ ಆಯಾಯ ಸ್ಥಳದಲ್ಲಿ ಜೋಡಿಸಿಟ್ಟುಕೊಳ್ಳಿ. ಇದರಿಂದ ನೀವು ಕೆಲಸವನ್ನು ಎಷ್ಟು ನಿಷ್ಠೆಯಿಂದ, ನೀಟ್‌ಆಗಿ ಮಾಡುತ್ತೀರಿ ಎನ್ನುವುದು ತಿಳಿಯುತ್ತದೆ.

4. ಡೆಡ್‌ಲೈನ್‌ ಒಳಗಡೆ ಕೆಲಸ ಮುಗಿಸಿ

ಯಾವುದೇ ಕೆಲಸವಾಗಿರಲಿ ಅದನ್ನು ಡೆಡ್‌ಲೈನ್ ಒಳಗಡೆ ಮುಗಿಸಿ. ಕೊಟ್ಟಿರುವ ಕೆಲಸವನ್ನು ಹಾಗೆಯೇ ಬಾಕಿ ಇಡಬೇಡಿ. ಬಾಸ್‌ ನಿಮ್ಮಲ್ಲಿ ಮತ್ತೊಮ್ಮೆ ಆ ಕೆಲಸ ಆಗಿದೆಯೋ ಇಲ್ಲವೋ ಎನ್ನು ವುದನ್ನು ಇದರಿಂದ ನಿಮ್ಮ ಕೆಲಸ ಬಗ್ಗೆ ಬಾಸ್‌ಗೆ ಖುಷಿಯಾಗುತ್ತದೆ. ಇದರಿಂದ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗುತ್ತದೆ.

5. ನಿಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಿ

ನಿಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದೆಂದರೆ ನೀವು ಸೋಲನ್ನೊಪ್ಪಿಕೊಂಡಂತೆ ಅಲ್ಲ. ಇದು ನಿಮ್ಮ ಪ್ರಾಮಾಣಿಕತೆಯನ್ನು ತೋರಿಸುತ್ತದೆ. ಜೊತೆಗೆ ನಿಮ್ಮಲ್ಲಿರುವ ಕಲಿಕಾ ಮನೋಭಾವನೆಯನ್ನು ಬಿಂಬಿಸುತ್ತದೆ. ಒಂದು ವೇಳೆ ನೀವು ನಿಮ್ಮ ತಪ್ಪನ್ನು ಒಪ್ಪಿಕೊಳ್ಳದೆ ಅದರಿಂದ ಪಲಾಯನ ಮಾಡುತ್ತಿದ್ದರೆ ಅದು ನಿಮ್ಮ ಹಾಗೂ ನಿಮ್ಮ ಬಾಸ್ ನಡುವಿನ ಸಂಬಂಧವನ್ನು ಹಾಳುಗೆಡವುತ್ತದೆ. ನೀವು ತಪ್ಪು ಮಾಡಿದ್ದರೆ ಕ್ಷಮೆ ಕೇಳಿ. ಮುಂದೆ ಇಂತಹ ತಪ್ಪು ಪುನಾರಾವರ್ತಿಸುವುದಿಲ್ಲ ಎಂಬ ಭರವಸೆಯನ್ನು ನೀಡಿ.

6. ಫೀಡ್‌ಬ್ಯಾಕ್ ಕೇಳಿ

ಪ್ರತಿದಿನ ನಿಮ್ಮ ಬಾಸ್‌ನಿಂದ ನಿಮ್ಮ ಕೆಲಸ ಬಗ್ಗೆ ಫೀಡ್‌ಬ್ಯಾಕ್ ಕೇಳಿ. ಅವರು ಹೇಳಿದ್ದನ್ನು ವಿಮರ್ಶೆಯಾಗಿ ತೆಗೆದುಕೊಳ್ಳಬೇಡಿ. ಪ್ರತಿ ದಿನ ನೀವು ಫೀಡ್‌ಬ್ಯಾಕ್ ಕೇಳುವುದರಿಂದ ಅದು ನಿಮ್ಮ ಕೆಲಸವನ್ನು ಇನ್ನಷ್ಟು ಉತ್ತಮಗೊಳಿಸಲು ಸಹಕಾರಿಯಾಗುತ್ತದೆ. ಇದರಿಂದ ನಿಮ್ಮ ಕೆಲಸದಲ್ಲಿನ ಪರ್ಫಾಮೆನ್ಸ್ ನಿಮ್ಮ ಬಾಸ್‌ಗೂ ತಿಳಿಯುತ್ತದೆ.

English summary
Reaching top level management to get your concerns would require much of your efforts, but you can surely attain growth in your organization if your boss is satisfied with your performance.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia