ಸಕ್ಸಸ್ ಜನರು ಎಲ್ಲದರಲ್ಲೂ ಸಕ್ಸಸ್ ಕಾಣುತ್ತಾರೆ ಯಾಕೆ ಗೊತ್ತಾ?

ಹೆಚ್ಚಿನ ಜನರು ಜೀವನದಲ್ಲಿ ಗುರಿ ಇಟ್ಟುಕೊಂಡಿರುವುದಿಲ್ಲ. ಅಷ್ಟೇ ಅಲ್ಲ ಪ್ರತಿದಿನ ಏನೆಲ್ಲಾ ಮಾಡಬೇಕು ಎಂಬ ಲಿಸ್ಟ್ ಕೂಡಾ ಅವರು ಅನುಸರಿಸುವುದಿಲ್ಲ.

By Kavya

ನಮಗೆ ಯಾವಾಗಲೂ ಆಶ್ಚರ್ಯವಾಗಬಹುದು ಶ್ರೀಮಂತ ಜನರು ಶ್ರೀಮಂತರಾಗಿ ಹೇಗೆ ಇರುತ್ತಾರೆ ಎಂದು. ಅವರು ಯಾವುದಾದ್ರೂ ಉದ್ಯಮದಲ್ಲಿ ಸಕ್ಸಸ್ ಆಗಲು ಏನೆಲ್ಲಾ ಮಾಡಿರುತ್ತಾರೆ ಎಂದು ಯೋಚಿಸುತ್ತಿರಬಹುದು. ಅವರು ಏನು ಮಾಡುವುದರಿಂದ ಸಕ್ಸಸ್ ಫುಲ್ ಉದ್ಯಮಿ ಆಗಿರುತ್ತಾರೆ ಎಂದು ನಾವು ನಿಮಗೆ ಮಾಹಿತಿ ನೀಡುತ್ತೇವೆ ಮುಂದಕ್ಕೆ ಓದಿ.

ಸಕ್ಸಸ್ ಜನರು ಎಲ್ಲದರಲ್ಲೂ ಸಕ್ಸಸ್ ಕಾಣುತ್ತಾರೆ ಯಾಕೆ ಗೊತ್ತಾ?

ಗುರಿ ಇಟ್ಟುಕೊಂಡು ಶ್ರಮವಹಿಸುತ್ತಾರೆ:

ನೀವು ಒಂದು ವೇಳೆ ಪ್ಲ್ಯಾನ್ ಮಾಡುವಲ್ಲಿ ಫೈಲ್ ಆಗಬಹುದು ಆದ್ರೆ ಶ್ರೀಮಂತರು ಹಾಗಲ್ಲ, ಅವರು ತಮ್ಮ ಗುರಿ ವಿಚಾರದಲ್ಲಿ ತುಂಬಾ ಸೀರಿಯಸ್ ಆಗಿರುತ್ತಾರೆ. ಅವರು ತುಂಬಾ ದಿನದ ಗುರಿಯಾಗಿದ್ದರೂ ಕೂಡಾ ಅದರ ಬಗ್ಗೆ ಶಾರ್ಟ್ ಆಗಿ ನೋಟ್ ಮಾಡಿಕೊಂಡಿರುತ್ತಾರೆ. ಹೆಚ್ಚಿನ ಜನರು ಗುರಿ ಸಾಧಿಸಬೇಕೆಂದು ಬಯಸುತ್ತಾರೆ. ಆದ್ರೆ ಶ್ರೀಮಂತ ಜನರು ಗುರಿ ಸಾಧಿಸದೇ ಬಿಡುವುದಿಲ್ಲ.

ಪ್ರತಿದಿನ ಲಿಸ್ಟ್ ಪ್ರಕಾರ ಕೆಲಸ ಮಾಡುತ್ತಾರೆ:

ಹೆಚ್ಚಿನ ಜನರು ಜೀವನದಲ್ಲಿ ಗುರಿ ಇಟ್ಟುಕೊಂಡಿರುವುದಿಲ್ಲ. ಅಷ್ಟೇ ಅಲ್ಲ ಪ್ರತಿದಿನ ಏನೆಲ್ಲಾ ಮಾಡಬೇಕು ಎಂಬ ಲಿಸ್ಟ್ ಕೂಡಾ ಅವರು ಅನುಸರಿಸುವುದಿಲ್ಲ. ಆದ್ರೆ ಶ್ರೀಮಂತ ಜನರು ಪ್ರತಿದಿನ ಏನು ಮಾಡಬೇಕೆಂದು ಲಿಸ್ಟ್ ಮಾಡಿಕೊಳ್ಳುತ್ತಾರೆ. ಆ ಲಿಸ್ಟ್ ನಲ್ಲಿ ಕಡಿಮೆ ಅಂದ್ರೂ ೭೦% ಕಂಪ್ಲೀಟ್ ಮಾಡಲು ಟ್ರೈ ಮಾಡುತ್ತಾರೆ.

ತಮ್ಮ ಬಗ್ಗೆ ಹೆಚ್ಚು ಕೇರ್ ತೆಗೆದುಕೊಳ್ಳುತ್ತಾರೆ:

ರಿಸರ್ಚ್ ವೊಂದರ ಪ್ರಕಾರ, ಶ್ರೀಮಂತ ಜನರು ಮಿತವಾಗಿ ಹಾಗೂ ಒಳ್ಳೆಯ ಗುಣಮಟ್ಟದ ಆಹಾರ ಸೇವಿಸುತ್ತಾರೆ. ಮುಂಜಾನೆ ಬೇಗ ಎದ್ದೇಳುತ್ತಾರೆ, ವ್ಯಾಯಾಮ ಹಾಗೂ ಇನ್ನಿತ್ತರ ವರ್ಕೌಟ್ ಕೂಡಾ ಮಾಡುತ್ತಾರೆ. ಹಾಗೂ ತಮ್ಮ ದೈಹಿಕ ಹಾಗೂ ಮಾನಸಿಕ ಸ್ಥಿತಿ ಬಗ್ಗೆ ಹೆಚ್ಚು ಕೇರ್ ತೆಗೆದುಕೊಳ್ಳುತ್ತಾರೆ.

ಕಡಿಮೆ ಖರ್ಚು ಹಾಗೂ ಹೆಚ್ಚು ಉಳಿತಾಯ:

ಹೌದು ಯಾರೆಲ್ಲಾ ರಿಚ್ ಜನರು ಇರುತ್ತಾರೋ ಅವರೆಲ್ಲರೂ ಬ್ಯುಸಿನೆಸ್ ಮೈಂಡ್‌ನಿಂದ ಯೋಚಿಸುತ್ತಾರೆ. ಅಷ್ಟೇ ಅಲ್ಲ ಅವರ ಖರ್ಚು ಏನೇ ಇದ್ರೂ ಕಡಿಮೆ ಇರುತ್ತದೆ ಹಾಗೂ ಅವರು ಹೆಚ್ಚು ಉಳಿತಾಯ ಮಾಡುವವರಾಗಿರುತ್ತಾರೆ.

ಗಾಸಿಪ್ ಹಾಗೂ ಟಿವಿ ನೋಡುವುದರಲ್ಲಿ ಟೈಂ ಕಳೆಯಲ್ಲ:

ಹೌದು ಹೆಚ್ಚಿನ ಶ್ರೀಮಂತರು ಮೂರ್ಖ ಪೆಟ್ಟಿಗೆ ಮುಂದೆ ಕುಳಿತು ಟೈಂ ವೇಸ್ಟ್ ಮಾಡುವುದಿಲ್ಲ, ಅಷ್ಟೇ ಅಲ್ಲ ನೆರೆಹೊರೆಯವರ ಜತೆ ಕೂಡಿಯೂ ಕೂಡ ಗಾಸಿಪ್ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ತಾವಾಯಿತು, ತಮ್ಮ ಕೆಲಸವಾಯಿತು ಎಂದು ಸಮ್ಮನಿರುತ್ತಾರೆ.

ರಿಸ್ಕ್ ತೆಗೊಂಡ್ರೂ ಫೈಲ್ ಆದ್ರೂ... ಬಿಟ್ಟುಕೊಡಲ್ಲ:

ಪ್ರತಿಯೊಬ್ಬ ಬಿಲಿಯನರ್ ಒಂದೇ ಸ್ಟೆಪ್ ನಿಂದ ಶ್ರೀಮಂತರಾಗಿರುವುದಿಲ್ಲ. ಅವರು ತುಂಬಾ ಹಾರ್ಡ್ ವರ್ಕ್ ಮಾಡಿರುತ್ತಾರೆ. ಅದರಲ್ಲಿ ಸಕ್ಸಸ್ ಸಿಗದೇ ಫೈಲ್ ಕೂಡಾ ಆಗಿರುತ್ತಾರೆ. ಅವರಿಗೆ ಇದೊಂದು ಕಲಿಯಲು ಅನುಭವ ಇದ್ದಂತೆ. ಆದ್ರೆ ನಮ್ಮಲ್ಲಿ ಹೆಚ್ಚಿನ ಜನರು ಏನಾದ್ರೂ ಉದ್ಯಮಕ್ಕೆ ಕೈ ಹಾಕಿದ್ರೆ ಅದು ಕೈ ಕೊಟ್ಟಾಗ ಬ್ಯಾಡ್ ಲಕ್ ಎಂದು ಸುಮ್ಮನೆ ಇದ್ದು ಬಿಡುತ್ತಾರೆ.

ಕಮ್ಮಿ ಮಾತು ಹೆಚ್ಚು ಆಲಿಸುತ್ತಾರೆ:

ಸಕ್ಸಸ್ ಜನರು ಒಳ್ಳೆಯ ಮಾತುಗಾರರು ಆದ್ರೆ ಮಾತನಾಡುವ ಮುನ್ನ ಅವರು ಒಳ್ಳೆಯ ಆಲಿಸುವವರು ಕೂಡಾ ಆಗಿರುತ್ತಾರೆ. ಇವರು ಇತರರಿಂದ ಕಲಿಯುದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ.

For Quick Alerts
ALLOW NOTIFICATIONS  
For Daily Alerts

English summary
All are Still Wondering what make wealthy people wealthier then scroll down below to know some factors which make them stand out from the rest of the world.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X