ಬಾಸ್ ಮುಂದೆ ಈ ಮಾತು ಹೇಳಿದ್ರೆ ಕೆಲಸ ಕಳೆದುಕೊಳ್ಳುತ್ತೀರಿ ಗ್ಯಾರಂಟಿ !

ಎಲ್ಲರೂ ಮನಸ್ಸು ಬಿಚ್ಚಿ ಮಾತನಾಡಲು ಬಯಸುತ್ತಾರೆ. ಆದ್ರೆ ಕೆಲವೊಮ್ಮೆ ನೀವು ಆಡಿದ ಮಾತುಗಳೇ ನಿಮಗೆ ಸಮಸ್ಯೆ ಹುಟ್ಟು ಹಾಕಬಹುದು. ಹಾಗಾಗಿ ಮಾತನ್ನಾಡುವ ಮುನ್ನ ಯೋಚಿಸಿ ಮಾತನಾಡುವುದು ಬೆಸ್ಟ್. ವಿಶೇಷವಾಗಿ ಬಾಸ್ ಜತೆ ಮಾತನಾಡುವಾಗ ಆದಷ್ಟು ಕೇರ್‌ಫುಲ್ ಆಗಿ ಮಾತನಾಡುವುದು ಬೆಸ್ಟ್.

ಆಫೀಸ್‌ನಲ್ಲಿ ಎಷ್ಟೇ ಫ್ರೆಂಡ್ಲಿ ವಾತಾವರಣ ಇರಬಹುದು. ಬಾಸ್ ನಿಮ್ಮ ಜತೆ ಫ್ರೆಂಡ್ ಕೂಡಾ ಆಗಿರಬಹುದು. ಆದ್ರೆ ನೀವು ಆಡುವ ಕೆಲವು ಮಾತುಗಳು ನಿಮ್ಮನ್ನ ಕೆಲಸದಿಂದ ತೆಗೆದುಹಾಕುವಂತೆ ಮಾಡಬಹುದು. ಅಂತಹ ಮಾತುಗಳು ಯಾವುವು ಎಂದು ತಿಳಿದು ಜಾಗರೂಕರಾಗಿರಿ

ಬಾಸ್ ಜತೆ ಯಾವತ್ತೂ ಈ ರೀತಿಯಾಗಿ ಮಾತನಾಡಬೇಡಿ

ನನ್ನಿಂದ ಸಾಧ್ಯವಿಲ್ಲ:

ನೀವು ನಿಮ್ಮ ಬಾಸ್ ಜತೆ ಏನಾದ್ರೂ ಚರ್ಚಿಸುವಾಗ ಯಾವುದೇ ಕಾರಣಕ್ಕೂ ನನ್ನಿಂದ ಸಾಧ್ಯವಿಲ್ಲ ಅನ್ನೋ ಮಾತು ಹೇಳಬೇಡಿ. ನಿಮ್ಮ ಈ ಮಾತು ನಿಮ್ಮ ಕಾಂಫಿಡೆನ್ಸ್ ಲೆವೆಲನ್ನ ಅವರ ಮುಂದೆ ತೋರಿಸಿಕೊಡಬಹುದು

 

ಇಲ್ಲ ಅಥವಾ ನೋ:

ನೀವು ಆಫೀಸಿನಲ್ಲಿ ಯಾವಾಗಲೂ ಶಾಂತಿ ವಾತಾವರಣ ಕ್ರಿಯೇಟ್ ಮಾಡಬೇಕು. ಬದಲಿಗೆ ಗದ್ದಲ ಸೃಷ್ಟಿಸಬಾರದು. ಒಂದು ವೇಳೆ ನಿಮ್ಮಿಂದ ಯಾವುದಾದ್ರೂ ಕೆಲಸ ಮಾಡಲು ಸಾಧ್ಯವಿಲ್ಲ ವೆಂದಾದ್ರೆ ನೀವು ಡೈರೆಕ್ಟ್ ಆಗಿ ನೋ ಹೇಳಬೇಡಿ. ಬದಲಿಗೆ ರಿಕ್ಷೇಸ್ಟ್ ಮಾಡಿಕೊಂಡು ಒಳ್ಳೆಯ ರೀತಿಯಲ್ಲಿ ಮೃದುವಾಗ ಆಗಲ್ಲ ಎಂದು ಹೇಳಿ. ನಿಮ್ಮ ಉತ್ತರ ರೂಡ್ ಆಗಿರಬಾದರು

ನನಗೆ ಸಾಧ್ಯವಾದಷ್ಟು ನಾನು ಮಾಡಿದೆ:

ಯಾರಾದ್ರೂ ನಿಮ್ಮ ಮಿಸ್ಟೇಕ್ ಪಾಯಿಂಟ್ ಮಾಡಿ ಮಾತನಾಡುವಾಗ, ನನಗೆ ಸಾಧ್ಯವಾದಷ್ಟು ನಾನು ಮಾಡಿದ್ದೇನೆ ಎಂದು ಹೇಳ ಬೇಡಿ. ಆದಷ್ಟು ಹೀಗೆ ಹೇಳುವುದನ್ನ ತಪ್ಪಿಸಿ ಬದಲಿಗೆ ಮುಂದೆ ಹೀಗೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿ.

ನಾನು ಜಾಬ್ ಬಿಟ್ಟುಬಿಡುತ್ತೇನೆ:

ಯಾವುದೇ ಸಂದರ್ಭದಲ್ಲೂ ಬಾಸ್ ಮುಂದೆ ಈ ಮಾತು ಹೇಳಬೇಡಿ. ಪ್ರತಿಯೊಂದಕ್ಕೂ ತಾಳ್ಮೆಯಿಂದಿರಿ. ಒಂದು ವೇಳೆ ನೀವು ಕೋಪದಿಂದ ಈ ಮಾತು ಹೇಳಿದ್ರೆ ನೀವು ನಿಜವಾಗಲೂ ಜಾಬ್ ಬಿಡುವ ಪ್ರಸಂಗ ಉಂಟಾಗಬಹುದು. ಎಷ್ಟೋ ಮಂದಿ ನಿರುದ್ಯೋಗಿಗಳು ಕೆಲಸಕ್ಕಾಗಿ ಅಲೆದಾಡುತ್ತಿದ್ದಾರೆ. ಒಂದು ವೇಳೆ ನೀವು ಹಾಗೆ ಮಾಡಿದ್ರೆ ನಿಮ್ಮ ಪೋಸ್ಟ್ ಬೇರೆಯವರ ಪಾಲಾಗಬಹುದು.

ನನಗೆ ಸಾಕಾಯಿತು:

ಯಾವಾಗಲೂ ತನ್ನ ಉದ್ಯೋಗಿಗಳು ಶಾರ್ಪ್ ಹಾಗೂ ಆಕ್ಟೀವ್ ಆಗಿರಬೇಕೆಂದು ಬಾಸ್ ಬಯಸುತ್ತಾರೆ. ನೀವು ಪದೇ ಪದೇ ಅವರ ಮುಂದೆ ನನಗೆ ಸಾಕಾಯಿತು ಎಂದು ಹೇಳುತ್ತಿದ್ದರೆ ಅವರು ನಿಮ್ಮನ್ನ ಆಲಿಸಿ ಎಂದು ಅಂದುಕೊಳ್ಳುವ ಸಂಭವವಿರುತ್ತದೆ. ಹಾಗಾಗಿ ನಿಮ್ಮ ಜಾಬ್ ಗೆ ಕುತ್ತು ಬರುವ ಸಂಭವವಿರುತ್ತದೆ.

ಸಲಹೆಗಳಿಲ್ಲ:

ನಿಮ್ಮ ಬಾಸ್ ಏನಾದ್ರೂ ಸಮಸ್ಯೆ ಎಂದು ಚರ್ಚೆ ಪ್ರಾರಂಭಿಸಿದಾಗ ಅವರ ಜತೆಗೂಡಿ ಸೊಲ್ಯುಶನ್ ಹುಡುಕಲು ಟ್ರೈ ಮಾಡಿ, ಬದಲಿಗೆ ಯಾವುದೇ ಸೊಲ್ಯುಶನ್ ಇಲ್ಲ ಎಂದು ನುಣಿಚಿಕೊಳ್ಳಬೇಡಿ. ಒಂದು ವೇಳೆ ನಿಮ್ಮ ಬಳಿ ನೀಡಲು ಯಾವುದೇ ಸಲಹೆ ಇಲ್ಲವೆಂದಾದ್ರೂ ಅವರ ಜತೆ ಚರ್ಚೆಯಲ್ಲಿ ಪಾಲ್ಗೊಳ್ಳಿ.

For Quick Alerts
ALLOW NOTIFICATIONS  
For Daily Alerts

English summary
In Office every one wants to speak what they want. But Front of Boss you can't talk what you want. If you say Some things to your boss you may lose your job also. here is the list of what we don't talk with Boss
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X