ಆಫೀಸ್‌ನಲ್ಲಿ ಪ್ರಮೋಶನ್ ಗಾಗಿ ದುಡಿಯುವವರು ಹೀಗಿರುತ್ತಾರೆ!

ಕೇವಲ ಪ್ರಮೋಶನ್ ಗಾಗಿ ದುಡಿಯುವವರ ವರ್ತನೆ ಆಫೀಸ್‌ನಲ್ಲಿ ಹೀಗಿರುತ್ತೆ

ಆಫೀಸ್‌ನಲ್ಲಿ ಎರಡು ರೀತಿಯ ಜನರು ಇರುತ್ತಾರೆ. ಒಂದು ವರ್ಷವಿಡೀ ಪ್ರಾಮಾಣಿಕವಾಗಿ ದುಡಿಯುವ ವರ್ಗ ಮತ್ತೊಂದು ಕೇವಲ ಬಾಸನ್ನ ಇಂಪ್ರೇಸ್ ಮಾಡಲು ಮಾತ್ರ ದುಡಿಯುವ ವರ್ಗ. ಎರಡನೇ ವರ್ಗದ ಜನರು ಆಫೀಸ್‌ನಲ್ಲಿ ಮೋಜು ಮಸ್ತಿ ಜತೆ ಪ್ರಮೋಶನ್ ಗಾಗಿ ಕೆಲಸ ಮಾಡುವವರಾಗಿದ್ದಾರೆ. ಇವರು ಪ್ರಮೋಶನ್ ಗಾಗಿ ಕೆಲಸ ಮಾಡುವುದರಿಂದ ಇವರ ಈ ವರ್ತನೆ ಪ್ರಾಮಾಣಿಕವಾಗಿ ದುಡಿಯುವವರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಆಫೀಸ್‌ನಲ್ಲಿ ಪ್ರಮೋಶನ್ ಗಾಗಿ ದುಡಿಯುವವರು ಹೀಗಿರುತ್ತಾರೆ!

ಕೇವಲ ಪ್ರಮೋಶನ್ ಗಾಗಿ ದುಡಿಯುವವರ ವರ್ತನೆ ಆಫೀಸ್‌ನಲ್ಲಿ ಹೀಗಿರುತ್ತೆ:

ಬಾಸ್‌ಗೆ ಹೆಚ್ಚು ಪ್ರಾಮುಖ್ಯತೆ :

ಅಪ್ರೇಜಲ್ ಟೈಂ ಹತ್ತಿರ ಬಂದಂತೆ ನೌಕರರು ಬಾಸ್‌ಗೂ ಹತ್ತಿರವಾಗುತ್ತಾರೆ. ಬಾಸ್ ಏನೇ ಹೇಳಿದ್ರು ಅದಕ್ಕೆ ವಿರುದ್ಧ ಮಾತನಾಡದೇ ಹಾ ಎಂದೇ ಉತ್ತರಿಸುತ್ತಾರೆ. ಅಷ್ಟೇ ಅಲ್ಲ ಬಾಸ್ ಗೆ ಇಂಪ್ರೇಸ್ ಮಾಡಲು ಗುಡ್ ಮಾರ್ನಿಂಗ್, ಹಾಯ್, ಬಾಯ್ ಎಂದೆಲ್ಲಾ ವಿಶ್ ಮಾಡಲು ಪ್ರಾರಂಭಿಸುತ್ತಾರೆ. ಅಷ್ಟೇ ಅಲ್ಲ ಬಾಸ್ ಮನ ಮೆಚ್ಚಿಸಲು ಇತರ ನೌಕರರ ದೂರುಗಳನ್ನ ಕೂಡಾ ಎತ್ತಿ ಹಿಡಿಯುತ್ತಾರೆ. ಈ ಮೂಲಕ ಬಾಸ್ ಗೆ ಹತ್ತಿರವಾಗಲು ಯತ್ನಿಸುತ್ತಾರೆ.

ಟೀಂ ವರ್ಕ್ ಸ್ಟಾರ್ಟ್:

ವರ್ಷ ಪೂರ್ತಿ ಉದ್ಯೋಗಿಗಳು ತಾವಾಯಿತು ತಮ್ಮ ಕೆಲಸವಾಯಿತು ಎಂದು ಬ್ಯುಸಿ ಇರುತ್ತಾರೆ. ಆದರೆ ಪ್ರಮೋಶನ್ ಟೈಂ ಬಂದಾಗ ಟೀಂ ವರ್ಕ್ ಎಂದೆಲ್ಲಾ ಓಡಾಡಲು ಪ್ರಾರಂಭಿಸುತ್ತಾರೆ. ಸಹೋದ್ಯೋಗಿಗಳಿಗೆ ಅವರ ಕೆಲಸದಲ್ಲಿ ತುಂಬಾ ನೆರವಾಗುವುದು ನೀವು ನೋಡಬಹುದು. ಅಷ್ಟೇ ಅಲ್ಲ ಅವರು ಬಾಸ್ ಮುಂದೆ ನಿಮ್ಮ ಹೆಸರು ಹೇಳಬೇಕೆಂದು ಕೂಡಾ ಈ ಟೈಂನಲ್ಲಿ ಅವರು ಬಯಸುತ್ತಾರೆ.

ಸ್ಮಾರ್ಟ್ ಕೆಲಸ:

ಹೇಳಿದ ಕೆಲಸವನ್ನ ಡೆಡ್ ಲೈನ್ ಮುಗಿಯೋದರೊಳಗೆ ಮುಗಿಸಿ ಬಿಡುತ್ತಾರೆ. ಬರೀ ಹಾರ್ಡ್ ವರ್ಕ್ ಮಾತ್ರವಲ್ಲ, ಸ್ಮಾರ್ಟ್ ಆಗಿ ಕೂಡಾ ವರ್ಕ್ ಮಾಡುತ್ತಾರೆ. ತಾವೆಷ್ಟು ಕೆಲಸ ಮಾಡುತ್ತಿದ್ದೆವೋ ಅಷ್ಟನ್ನ ಬಾಸ್ ಗೆ ಕಾಣುವಂತೆ ಮಾಡುತ್ತಾರೆ. ಬಾಸ್ ಮುಂದೆ ಇದ್ದಾಗಲೆಲ್ಲಾ ಡೆಸ್ಕ್ ಅಲ್ಲಿಯೇ ಕುಲಿತು ಟೆನ್ಸನ್ ತೆಗೆದುಕೊಂಡು ಕೆಲಸ ಮಾಡೋ ತರಹ ಸ್ಮಾರ್ಟ್ ಆಗಿ ವರ್ತಿಸುತ್ತಾರೆ.

ರಜಾದಿನಗಳಲ್ಲಿಯೂ ಕೆಲಸ:

ಪ್ರತೀ ರಜೆಗೂ ಏನಾದ್ರೂ ಪ್ಲ್ಯಾನ್ ಮಾಡುವ ಉದ್ಯೋಗಿಗಳು ಪ್ರಮೋಶನ್ ಟೈಂ ಹತ್ತಿರ ಬಂದಾಗ, ರಜಾ ದಿನಗಳಲ್ಲೂ ಕೆಲಸ ಮಾಡುವುದು ನೀವು ನೋಡಬಹುದು. ಇದು ಬಾಸನ್ನ ಇಂಪ್ರೇಸ್ ಮಾಡುವ ಬೆಸ್ಟ್ ವಿಧಾನ. ವೀಕ್ ಆಫ್ ದಿನಗಳಲ್ಲೂ ಆಫೀಸ್ ಗೆ ಬಂದು ಕೆಲಸ ಮಾಡುವುದು ನೀವು ನೋಡಬಹುದು. ಇದರಿಂದ ಪ್ರಮೋಶನ್ ಟೈಂನಲ್ಲಿ ಇವರ ಬಗ್ಗೆ ಒಳ್ಳೆಯ ರೀತಿಯ ಅಪ್ರೇಜಲ್ ಸಬ್ ಮಿಟ್ ಆಗುವುದು.

ಮೀಟಿಂಗ್ ವೇಳೆ ಐಡಿಯಾಗಳ ಮಹಾಪೂರ:

ಇನ್ನು ಇಂತಹ ಉದ್ಯೋಗಿಗಳು ತಮ್ಮ ಟ್ಯಾಲೆಂಟ್ ತೋರಿಸಲು ಇರುವ ಪ್ರತಿಯೊಂದು ಕ್ಷಣವನ್ನ ಕೂಡಾ ಮಿಸ್ ಮಾಡುವುದಿಲ್ಲ. ಇವರು ಪ್ರತೀ ಮೀಟಿಂಗ್ ಹಾಜರಾಗುತ್ತಾರೆ. ಅಷ್ಟೇ ಅಲ್ಲ ಮೀಟಿಂಗ್ ವೇಳೆ ತಯಾರಾಗಿ ಹೋಗುವುದು ಮಾತ್ರವಲ್ಲದೇ ಐಡಿಯಾಗಳ ಮೇಲೆ ಐಡಿಯಾ ನೀಡುತ್ತಾರೆ. ಇದರಿಂದ ಬಾಸ್ ಒಂಪ್ರೇಸ್ ಆಗುವುದು ಮಾತ್ರವಲ್ಲದೇ ಕೂಡಲೇ ಅಪ್ರೇಜಲ್ ಲಿಸ್ಟ್ ನಲ್ಲಿ ಇವರ ಹೆಸರು ಸೇರಿಸಿಕೊಳ್ಳುತ್ತಾರೆ

For Quick Alerts
ALLOW NOTIFICATIONS  
For Daily Alerts

English summary
A Promotion won't just fall into your lap. If you want to climb up the career ladder, you need to be proactive. There are methods and techniques used by the most successful people to get promoted faster
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X