ಒಂದೇ ವಾರದಲ್ಲಿ ನೀವು ಡೇಟಾ ಸೈಟಿಂಸ್ಟ್ ಆಗಬಹುದು

Posted By:

ಡಾಟಾ ಸೈನ್ಸ್ ಅಥವಾ ಡೇಟಾ ಸೈನ್ಸ್ ಎನ್ನುವ ಪದ ಈಗೀಗ ಅತಿ ಹೆಚ್ಚು ಚಾಲ್ತಿಯಲ್ಲಿದೆ. ಡಿಜಿಟಲ್ ದುನಿಯಾದಲ್ಲಿ ಪ್ರತಿಯೊಂದನ್ನು ಡೇಟಾ ಮೂಲಕವೇ ಅಳೆಯುತ್ತಿರುವಾಗ ಡೇಟಾ ಸೈನ್ಸ್ ಅಗತ್ಯ ಕೊಂಚ ಜಾಸ್ತಿಯೇ ಇದೆ ಎಂದರೆ ತಪ್ಪಗಲಾರದು.

ಇಂದು ಡೇಟಾ ಸೈನ್ಸ್ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿದ್ದು, ಡೇಟಾ ಸೈಂಟಿಸ್ಟ್ ಗಳಿಗೆ ಎಲ್ಲೆಡೆ ಬೇಡಿಕೆ ಹೆಚ್ಚುತ್ತಿದೆ. ಇಂದು ಎಲ್ಲಾ ವ್ಯವಹಾರಗಳು ಇಂಟರ್ನೆಟ್ ಮೂಲಕ ಸಾಗುತ್ತಿರುವುದರಿಂದ ಡೇಟಾ ಸೈಂಟಿಸ್ಟ್ಗಳ ಅವಶ್ಯಕತೆಯು ಹೆಚ್ಚುತ್ತಿದೆ. ಡೇಟಾ ಸೈನ್ಸ್ ಕೋರ್ಸ್ ಕಲಿತವರನ್ನು ದೊಡ್ಡ ದೊಡ್ಡ ಕಂಪನಿಗಳು ಕೈಬೀಸಿ ಕರೆಯುತ್ತಿವೆ.

ಡೇಟಾ ಸೈನ್ಸ್ ಕೋರ್ಸ್ ಗಳಿಗೆ ಬೇಡಿಕೆ ಹೆಚ್ಚಾದಂತೆ ಅದನ್ನು ಕಲಿಯುವ ಮತ್ತು ಕಲಿಸುವವರ ಸಂಖ್ಯೆಯು ಹೆಚ್ಚುತ್ತಿದೆ. ಮನೆಯಲ್ಲೇ ಕೂತು ಇಂಟರ್ನೆಟ್ ಮೂಲಕ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಈ ಕೋರ್ಸ್ ಅನ್ನು ನೀವು ಕಲಿಯಬಹುದಾಗಿದೆ. ಅನೇಕ ವೆಬ್ಸೈಟ್ ಗಳು ಡೇಟಾ ಸೈನ್ಸ್ ಕೋರ್ಸ್ ಉಚಿತವಾಗಿ ನೀಡುತ್ತಿವೆ.

ಡೇಟಾ ಸೈನ್ಸ್: ಹೆಚ್ಚುತ್ತಿರುವ ಬೇಡಿಕೆ

elitedatascience.com ಏಳು ದಿನಗಳ ಉಚಿತ ಡೇಟಾ ಸೈನ್ಸ್ ಕೋರ್ಸ್ ನೀಡುತ್ತಿದೆ. ನಿಮ್ಮ ಇ-ಮೇಲ್ ಮೂಲಕ ನೀವು elitedatascience.com ಗೆ ಲಾಗಿನ್ ಆದರೆ ನಿಮ್ಮ ಇ-ಮೇಲ್ ಗೆ ಪ್ರತಿದಿನವು ಒಂದೊಂದು ಪಾಠಗಳು ಬರುತ್ತವೆ ಅದರಿಂದ ನೀವು ಸುಲಭವಾಗಿ ಕಲಿಯಬಹುದಾಗಿದೆ.

ಡೇಟಾ ಸೈನ್ಸ್ ಎಂದರೇನು?

ಡೇಟಾ ಸೈನ್ಸ್ ಎಂದರೆ ಕಂಪ್ಯೂಟರ್ ನಲ್ಲಿ ಡಿಜಿಟಲ್ ರೂಪದಲ್ಲಿ ಸಂಗ್ರಹವಾದ ಮಾಹಿತಿಯನ್ನು ನಿರ್ವಹಿಸುವ ಒಂದು ಕಾರ್ಯ. ಸಂಗ್ರಹವಾಗಿರುವ ಮಾಹಿತಿಗಳ ಸಂಶೋಧನೆ ಮತ್ತು ವಿಶ್ಲೇಷಣೆಯನ್ನು ಇಲ್ಲಿ ಮಾಡಬೇಕಾಗುತ್ತದೆ. ಕಂಪ್ಯೂಟರ್ ಭಾಷೆ ಬಳಸಿ
ಅಲ್ಗಾರಿಥಂ, ಪ್ರೋಗ್ರಾಂಗಳ ಮೂಲಕ ಮಾಹಿತಿಗಳನ್ನು ನಿರ್ವಹಿಸಲಾಗುತ್ತದೆ.

ಉದಾಹರಣೆಗೆ: ಗೂಗಲ್ ನಲ್ಲಿ ನೀವು ಯಾವುದಾದರು ಒಂದು ವಿಷಯದ ಬಗ್ಗೆ ಹುಡುಕಲು ಪ್ರಯತ್ನಿಸುತ್ತೀರಿ, ಕ್ಷಣಾರ್ಧದಲ್ಲಿ ಆ ವಿಚಾರಕ್ಕೆ ಸಂಬಂಧಿಸಿದ ಅಥವಾ ಅದೇ ವಿಷಯಗಳ ಅನೇಕ ವಿಚಾರಗಳು ನಿಮ್ಮ ಮುಂದೆ ಘೋಚರಿಸುತ್ತವೆ. ಇದೆಲ್ಲ ಹೇಗಾಯಿತು? ಈ ಮಾಹಿತಿಗಳು ಎಲ್ಲಿಂದ ಬಂದವು ಎಂದು ತಿಳಿಯುವುದೇ ಡಾಟಾ ಸೈನ್ಸ್.

ಡೇಟಾ ಸೈನ್ಸ್ ಕೋರ್ಸ್ ಗೆ ಬೇಕಾದ ಅರ್ಹತೆ

ಡೇಟಾ ಸೈನ್ಸ್ ಕೋರ್ಸ್ ಕಲಿಯಲು ಕಂಪ್ಯೂಟರ್ ಬಗ್ಗೆ ಸ್ವಲ್ಪ ಜ್ಞಾನ ಮತ್ತು ಇಂಗ್ಲಿಷ್ ಭಾಷೆಯ ಪರಿಚಯವಿದ್ದರೆ ಸಾಕು. ನೀವು ಉತ್ತಮ ಡೇಟಾ ಸೈಂಟಿಸ್ಟ್ ಆಗಬೇಂಕೆಂದರೆ ಕಂಪ್ಯೂಟರ್ ಸಂಬಂಧಿತ ಭಾಷೆಗಳ (ಕಂಪ್ಯೂಟರ್ ಲ್ಯಾಂಗ್ವೇಜ್) ಅರಿವಿರಬೇಕು.

ಡಾಟಾ ಸೈನ್ಸ್ ಎಲ್ಲೆಲ್ಲಿ ಕಾರ್ಯ ನಿರ್ವಹಿಸುತ್ತದೆ?

ಇಂದು ಜಗತ್ತಿನ ಬಹುತೇಕ ವ್ಯವಹಾರಗಳು ಇಂಟರ್ನೆಟ್ ಮೂಲಕ ನಡೆಯುತ್ತಿವೆ. ಬ್ಯಾಂಕಿಂಗ್, ಮೆಡಿಕಲ್, ಕ್ರೀಡೆ, ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಸಾರ್ವಜನಿಕ ಸೇವೆಗಳು, ಸಾರಿಗೆ ಇಲಾಖೆ, ಇ-ಕಾಮರ್ಸ್ ಮತ್ತು ಇಂಟರ್ನೆಟ್ ಬಳಸುವ ಎಲ್ಲಾ ಕ್ಷೇತ್ರಗಳು ಇದಕ್ಕೆ ಒಳಪಡುತ್ತವೆ. ಈ ಎಲ್ಲಾ ಉದ್ಯಮಗಳಿಗೂ ಆ ಕ್ಷೇತ್ರದಲ್ಲಿ ಏನೆಲ್ಲಾ ಬದಲಾವಣೆಗಳು ಆಗಿವೆ, ಆಗುತ್ತಿವೆ ಎಂಬುದನ್ನು ಅರಿಯಲು ಮಾಹಿತಿಗಳಿಗಾಗಿ ಹುಡುಕುತ್ತಾರೆ. ಇದಕ್ಕೆಲ್ಲ ಪರಿಹಾರ ಡೇಟಾ ಸೈನ್ಸ್ ನಲ್ಲಿದೆ.

ಡೇಟಾ ಸೈನ್ಸ್ ಕಲಿತವರಿಗಾಗಿ ಇಂದು ಸಾಕಷ್ಟು ಉದ್ಯೋಗಾವಕಾಶಗಳಿವೆ. ಪ್ರತಿ ಕಂಪನಿಗಳು ಡೇಟಾ ಸೈಂಟಿಸ್ಟ್ ಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ. ಆರಂಭ ಹಂತದಲ್ಲೆ ಉತ್ತಮ ಸಂಬಳವೂ ಸಿಗುತ್ತದೆ. ಕಡೆಮೆ ಎಂದರು ತಿಂಗಳಿಗೆ ಐವತ್ತರಿಂದ ಅರವತ್ತು ಸಾವಿರ ರೂಗಳನ್ನು ಡೇಟಾ ಸೈಂಟಿಸ್ಟ್ ಗಳು ಗಳಿಸುತ್ತಾರೆ.

English summary
Elitedatascience.com is offering 7 days free crash course on data science. Interested candidates can login through e-mail and can learn within seven days to become a data scientist.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia