ನೀವು ವೈದ್ಯರಾಗಬೇಕೆ... ದೇಶದ ಟಾಪ್ ಮೆಡಿಕಲ್ ಎಂಟ್ರೇಂಸ್ ಎಕ್ಸಾಂಗಳು !

By Kavya

ಮೆಡಿಕಲ್ ಫೀಲ್ಡ್ ಎಂಬುವುದು ಲಾಭದಾಯಕ ಫೀಲ್ಡ್ ಮಾತ್ರವಲ್ಲ ಇದು ಸೇವೆ ಮಾಡುವ ಕ್ಷೇತ್ರ ಕೂಡಾ. ಈ ಕಾರಣಕ್ಕಾಗಿ ಪ್ರತಿವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಮೆಡಿಕಲ್ ಎಂಟ್ರೇಂಸ್ ಪರೀಕ್ಷೆ ಪಾಸ್ ಮಾಡಬೇಕೆಂದು ತುಂಬಾ ಬಯಸುತ್ತಾರೆ ಅಷ್ಟೇ ಅಲ್ಲ ತುಂಬಾ ಎಫರ್ಟ್ ಹಾಕಿ ಓದುತ್ತಾರೆ ಕೂಡಾ. ಇತ್ತೀಚೆಗಷ್ಟೇ ಮೆಡಿಕಲ್ ಪ್ರವೇಶಾತಿ ಪರೀಕ್ಷೆಯಲ್ಲಿ ತುಂಬಾ ಬದಲಾವಣೆ ಕೂಡಾ ಆಗಿದೆ. ದೇಶದಲ್ಲಿ ಇರುವ ಟಾಪ್ ಮೆಡಿಕಲ್ ಪ್ರವೇಶಾತಿ ಪರೀಕ್ಷೆಯ ಟಿಪ್ಸ್ ಇಲ್ಲಿದೆ.

ನ್ಯಾಷನಲ್ ಎಲಿಜಿಬಿಲಿಟಿ ಕಂ ಎಂಟ್ರೇಸ್ ಟೆಸ್ಟ್ (NEET)

ನ್ಯಾಷನಲ್ ಎಲಿಜಿಬಿಲಿಟಿ ಕಂ ಎಂಟ್ರೇಸ್ ಟೆಸ್ಟ್ (NEET)

ದೇಶದಾದ್ಯಂತ ಇರುವ ಪ್ರತಿಷ್ಟಿತ ಮೆಡಿಕಲ್ ಕಾಲೇಜುಗಳಲ್ಲಿ ಎಂಬಿಬಿಎಸ್ ಹಾಗೂ ಬಿಡಿಎಸ್ ಕೋರ್ಸ್ ಗೆ ಮೆರಿಟ್ ಸೀಟು ಹಂಚಿಕೆ ಮಾಡಲು, ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜ್ಯುಕೇಶನ್, NEET -ಯುಜಿ ಪರೀಕ್ಷೆಯನ್ನ ಆಯೋಜಿಸುತ್ತದೆ. ಈ NEET -ಯುಜಿ ಪರೀಕ್ಷೆಯ ಸಿಲೇಬಸ್ ಸಿಬಿಎಸ್ ಇ 11, ಹಾಗೂ 12 ನೇ ತರಗತಿಯ ಪಠ್ಯವನ್ನ ಒಳಗೊಂಡಿದೆ.

ಆಲ್ ಇಂಡಿಯಾ ಇನ್ಸಿಟ್ಯುಟ್ಸ್ ಆಫ್ ಮೆಡಿಕಲ್ ಸೈನ್ಸಸ್ (AIIMS)

ಆಲ್ ಇಂಡಿಯಾ ಇನ್ಸಿಟ್ಯುಟ್ಸ್ ಆಫ್ ಮೆಡಿಕಲ್ ಸೈನ್ಸಸ್ (AIIMS)

ಆಟೋನಮಸ್ ಪಬ್ಲಿಕ್ ಮೆಡಿಕಲ್ ಕಾಲೇಜುಗಳು ಆಫರ್ ಮಾಡುವ ಉನ್ನತ ಶಿಕ್ಷಣವೇ AIIMS. ಈ ಪ್ರವೇಶಾತಿ ಪರೀಕ್ಷೆಗಳಿಂದ ಎಂಬಿಬಿಎಸ್ ಕೋರ್ಸ್ ಜತೆ ವಿದ್ಯಾರ್ಥಿಗಳಿಗೆ ದೇಶದಾದ್ಯಂತ ಇರುವ AIIMS ಕಾಲೇಜುಗಳಲ್ಲಿ ಸೀಟು ಪಡೆಯಬಹುದಾಗಿದೆ. ಈ ಪರೀಕ್ಷೆ ಬರೆಯಬೇಕಾದ್ರೆ ವಿದ್ಯಾರ್ಥಿಗಳಿಗೆ 12ನೇ ತರಗತಿಯಲ್ಲಿ ಫಿಸಿಕ್ಸ್, ಬಯಾಲಾಜಿ ಹಾಗೂ ಕೆಮೆಸ್ಟ್ರಿ ವಿಷಯದಲ್ಲಿ ಕಡಿಮೆ ಅಂದ್ರೂ 60% ಅಂಕ ಬಂದಿರಬೇಕು.

ಜವಹರ್ ಲಾಲ್ ಇನ್ಸಿಟ್ಯೂಟ್ ಆಫ್ ಪೋಸ್ಟ್ ಗ್ರಾಜ್ಯುಯೆಟ್ ಮೆಡಿಕಲ್ ಎಜ್ಯುಕೇಶನ್ ಆಂಡ್ ರಿಸರ್ಚ್
 

ಜವಹರ್ ಲಾಲ್ ಇನ್ಸಿಟ್ಯೂಟ್ ಆಫ್ ಪೋಸ್ಟ್ ಗ್ರಾಜ್ಯುಯೆಟ್ ಮೆಡಿಕಲ್ ಎಜ್ಯುಕೇಶನ್ ಆಂಡ್ ರಿಸರ್ಚ್

ಸರ್ಕಾರದಿಂದ ಗುರುತಿಸಲ್ಪಟ್ಟ ದೇಶದ ಪ್ರತಿಷ್ಟಿತ ಮೆಡಿಕಲ್ ಕಾಲೇಜುಗಳಲ್ಲಿ JIPMER ಕೂಡಾ ಒಂದು. ಪುದುಚೇರಿಯಲ್ಲಿ ಈ ಶಿಕ್ಷಣ ಸಂಸ್ಥೆ ಸ್ಥಾಪನೆ ಗೊಂಡಿದೆ. ಇನ್ನು ಈ ಕಾಲೇಜಿನಲ್ಲಿ ಯೂರೋಪಿಯನ್ ಮೆಡಿಸನ್ ಕೋರ್ಸ್ ಗೆ ತನ್ನದೇ ಆದ ಪ್ರವೇಶಾತಿ ಪರೀಕ್ಷೆಯನ್ನ ಒಳಗೊಂಡಿದೆ. ಇಲ್ಲಿ ಪದವಿ ಹಾಗೂ
ಸ್ನಾತಕೋತ್ತರ ಪದವಿಯ ಕೋರ್ಸ್ ಕೂಡಾ ಇದೆ.

NEET -ಪಿಜಿ

NEET -ಪಿಜಿ

NEET ಪಿಜಿ (ಸ್ನಾತಕೋತ್ತರ) ಪ್ರವೇಶಾತಿ ಪರೀಕ್ಷೆಯು ಎಂಡಿ, ಎಂಎಸ್ ಹಾಗೂ ಪಿಜಿ ಡಿಪ್ಲೋಮಾ ಕೋರ್ಸ್ ಗಳಿಗೆ ನಡೆಯುತ್ತದೆ. ದಿ ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಶನ್ ಈ ಪರೀಕ್ಷೆಯನ್ನ ಆಯೋಜಿಸುತ್ತದೆ. ಇನ್ನು ಯಾರು ಎಂಬಿಬಿಎಸ್ ಪಾಸ್‌ ಸರ್ಟಿಫಿಕೇಟ್ ಹೊಂದಿದ್ದಾರೋ ಅಂತಹ ವಿದ್ಯಾರ್ಥಿಗಳು ಮಾತ್ರ ಈ ಪರೀಕ್ಷೆ ಬರೆಯಲು ಸಮರ್ಥರು. ಇನ್ನೂ ಈ ಪರೀಕ್ಷೆಯಲ್ಲೂ ರಿಸರ್ವೇಶನ್ ಇರುತ್ತದೆ

ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ - ಪಿಜಿ AIIMS

ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ - ಪಿಜಿ AIIMS

ಎಂಡಿ, ಎಂಎಸ್, ಹಾಗೂ ಎಂಡಿಎಸ್ ಮುಂತಾದ ಸ್ನಾತಕೋತ್ತರ ಕೋರ್ಸ್ ಗಳಿಗೆ ನಡೆಯುವ ಪ್ರವೇಶಾತಿ ಪರೀಕ್ಷೆ AIIMS - ಪಿಜಿ. ಎಂಬಿಬಿಎಸ್ ಡಿಗ್ರಿ ಮಾಡಿದವರು ಮಾತ್ರ ಈ ಪರೀಕ್ಷೆಗೆ ಕುಳಿತುಕೊಳ್ಳಬಹುದಾಗಿದೆ.

ಆರ್ಮ್ಡ್  ಫೋರ್ಸಸ್ ಆಫ್ ಮೆಡಿಕಲ್ ಕಾಲೇಜು

ಆರ್ಮ್ಡ್ ಫೋರ್ಸಸ್ ಆಫ್ ಮೆಡಿಕಲ್ ಕಾಲೇಜು

ಪುಣೆಯಲ್ಲಿ ಇರುವ ಆರ್ಮ್ಡ್ ಫೋರ್ಸಸ್ ಆಫ್ ಮೆಡಿಕಲ್ ಕಾಲೇಜು ದೇಶದ ಪ್ರತಿಷ್ಟಿತ ಮೆಡಿಕಲ್ ಕಾಲೇಜುಗಳಲ್ಲಿ ಒಂದಾಗಿದೆ. ಈ ಸಂಸ್ಥೆ ಕೂಡಾ ತನ್ನದೇ ಆದ ಪ್ರವೇಶಾತಿ ಪರೀಕ್ಷೆಯನ್ನ ಹೊಂದಿದೆ. ವಿದ್ಯಾರ್ಥಿಗಳಿಗೆ ಮೆಡಿಸನ್ ವಿಷಯದಲ್ಲಿ ಈ ಸಂಸ್ಥೆ ಟ್ರೈನಿಂಗ್ ನೀಡುತ್ತದೆ. ಆರ್ಮ್ಡ್ ಫೋರ್ಸಸ್ ಆಫ್ ಮೆಡಿಕಲ್ ಕಾಲೇಜಿನಲ್ಲಿ ಸೀಟು ಪಡೆಯಬೇಕಾದ್ರೆ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯನ್ನ ಪಾಸ್ ಮಾಡಿರಬೇಕು. ನೀಟ್ ಸಕ್ಸಸ್ ಫುಲ್ ಆಗಿ ಪಾಸ್ ಮಾಡಿದ ಮೇಲೆ ವಿದ್ಯಾರ್ಥಿಗಳು ಕೌನ್ಸಿಲಿಂಗ್ ಸೆಶನ್ ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಬೇಕು. ಶಾರ್ಟ್ ಲಿಸ್ಟ್ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.

For Quick Alerts
ALLOW NOTIFICATIONS  
For Daily Alerts

English summary
The medical field is not only rewarding, but also adds a service tag. For this reason, every year, lakhs of students across the country put their best efforts for the medical entrance examinations after their 10+2. A lot of changes have occurred in the medical entrance examinations in the recent past.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X