Father's Day 2021 Date : ವಿಶ್ವ ಅಪ್ಪಂದಿರ ದಿನದ ಇತಿಹಾಸ ಮತ್ತು ಮಹತ್ವವೇನು ಎಂದು ಗೊತ್ತಾ ?

ವಿಶ್ವ ಅಪ್ಪಂದಿರ ದಿನವನ್ನು ಏಕೆ ಆಚರಿಸಲಾಗುತ್ತದೆ ಎಂದು ಗೊತ್ತಾ ?

Father's Day 2021: ಅಪ್ಪ ಅಂದರೆ ಎಲ್ಲರಿಗೂ ಪ್ರೀತಿ. ಮಗುವಿಗೆ ಅಪ್ಪನೇ ಪ್ರಪಂಚ, ಆತನೇ ಸರ್ವಸ್ವ. ಅದಲ್ಲದೇ ಕುಟುಂಬದ ಅತ್ಯಂತ ಅವಿಭಾಜ್ಯ ಅಂಗ ಅಂದ್ರೆ ಅಪ್ಪ. ಅಪ್ಪ ತನ್ನ ಮಕ್ಕಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಲು ಸಿದ್ಧ. ಅಂತಹ ಅಪ್ಪನಿಗೆ ಧನ್ಯವಾದ ತಿಳಿಸಲು ಇರುವ ದಿನ ಅಪ್ಪಂದಿರ ದಿನ. ಈ ದಿನದ ಇತಿಹಾಸ, ಆಚರಣೆ ಮತ್ತು ಮಹತ್ವನ್ನು ಇಲ್ಲಿ ತಿಳಿಯೋಣ.

ವಿಶ್ವ ಅಪ್ಪಂದಿರ ದಿನವನ್ನು ಏಕೆ ಆಚರಿಸಲಾಗುತ್ತದೆ ಎಂದು ಗೊತ್ತಾ ?

ತಂದೆಯ ದಿನ 2021 ಯಾವಾಗ?:

ತಂದೆಯ ದಿನವನ್ನು ವಿಶ್ವದ ವಿವಿಧ ಭಾಗಗಳಲ್ಲಿ ವರ್ಷದ ವಿವಿಧ ದಿನಗಳಲ್ಲಿ ಆಚರಿಸಲಾಗುತ್ತದೆ. ಆದರೆ ಹೆಚ್ಚಾಗಿ ಮಾರ್ಚ್, ಮೇ ಮತ್ತು ಜೂನ್‌ನಲ್ಲಿ ಆಚರಿಸಲಾಗುತ್ತದೆ.

ಭಾರತದಲ್ಲಿ ತಂದೆಯ ದಿನವನ್ನು ಜೂನ್ ಮೂರನೇ ಭಾನುವಾರದಂದು ಆಚರಿಸಲಾಗುವುದು. ಈ ವರ್ಷ 2021ರ ಜೂನ್ 20ರ ಭಾನುವಾರ ಆಚರಿಸಲಾಗುತ್ತಿದೆ.

ವಿಶ್ವ ಅಪ್ಪಂದಿರ ದಿನವನ್ನು ಏಕೆ ಆಚರಿಸಲಾಗುತ್ತದೆ ಎಂದು ಗೊತ್ತಾ ?

ಅಪ್ಪಂದಿರ ದಿನದ ಇತಿಹಾಸ:

1908 ಜುಲೈ 5ರಂದು ಪಶ್ಚಿಮ ವರ್ಜೀನಿಯಾದಲ್ಲಿ ನಡೆದ ಅಪಘಾತದಲ್ಲಿ ನೂರಾರು ಪುರುಷರು ಸಾವಿಗೀಡಾದರು. ಇಲ್ಲೋರ್ವರ ಮಗಳು ಗ್ರೇಸ್​ ಗೋಲ್ಡನ್​ ಕ್ಲೇಟನ್​, ಅಪಘಾತದಲ್ಲಿ ಮರಣಹೊಂದಿದವರ ನೆನಪಿಗಾಗಿ ಭಾನುವಾರ ಗೌರವ ಸೂಚಿಸಿದರು. ಕೆಲವು ವರ್ಷಗಳ ನಂತರ ಸೋನೋರ ಸ್ಮಾರ್ಟ್​ ಡಾಡ್​ ಎಂಬ ಮಹಿಳೆ ತನ್ನ ತಂದೆಯ ಗೌರವಾರ್ಥವಾಗಿ ತಂದೆಯ ದಿನಾಚರಣೆಯನ್ನು ಪ್ರಾರಂಭಿಸಿದರು. 1972ರಲ್ಲಿ ಅಧ್ಯಕ್ಷ ರಿಚರ್ಡ್​ ನಿಕ್ಸನ್​ ತಂದೆಯ ದಿನಾಚರಣೆ ಆಚರಿಸುವ ಘೋಷಣೆ ಹೊರಡಿಸಿದ ಬಳಿಕ ಅಮೇರಿಕದಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತು.

ವಿಶ್ವ ಅಪ್ಪಂದಿರ ದಿನವನ್ನು ಏಕೆ ಆಚರಿಸಲಾಗುತ್ತದೆ ಎಂದು ಗೊತ್ತಾ ?

ಅಪ್ಪಂದಿರ ದಿನದ ಮಹತ್ವ:

ಕುಟುಂಬದಲ್ಲಿ ತಂದೆಯ ಕೊಡುಗೆಯನ್ನು ಅರಿತುಕೊಳ್ಳುವ ಮತ್ತು ಗೌರವಿಸುವ ಉದ್ದೇಶದಿಂದ ತಂದೆಯ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಇದು ಪಿತೃತ್ವ, ಪಿತೃ ಬಂಧಗಳು ಮತ್ತು ಪುರುಷ ಪೋಷಕರು ತಮ್ಮ ಕುಟುಂಬ ಮತ್ತು ಅವರ ಮಕ್ಕಳ ಕಡೆಗೆ ಮಾಡಿದ ಪ್ರಯತ್ನಗಳನ್ನು ಸ್ಮರಿಸುವ ದಿನ.

ವಿಶ್ವ ಅಪ್ಪಂದಿರ ದಿನವನ್ನು ಏಕೆ ಆಚರಿಸಲಾಗುತ್ತದೆ ಎಂದು ಗೊತ್ತಾ ?

ತಂದೆಯ ದಿನವನ್ನು ಹೇಗೆ ಆಚರಿಸಲಾಗುತ್ತದೆ:

ತಂದೆಯ ದಿನವನ್ನು ಭಾರತದಲ್ಲಿ ಬಹಳ ಪ್ರೀತಿಯಿಂದ ಆಚರಿಸಲಾಗುತ್ತದೆ. ಆದಾಗ್ಯೂ, ಈ ದಿನ ಮಕ್ಕಳು ತಮ್ಮ ತಂದೆಯ ಪ್ರಯತ್ನಗಳನ್ನು ಮತ್ತು ಕುಟುಂಬಕ್ಕೆ ನೀಡಿದ ಕೊಡುಗೆಯನ್ನು ಅಂಗೀಕರಿಸುತ್ತಾರೆ. ತಮ್ಮ ತಂದೆಗೆ ವಿಶೇಷ ಭಾವನೆ ಮೂಡಿಸಲು ಅವರು ಉಡುಗೊರೆಗಳು, ಹೃದಯಸ್ಪರ್ಶಿ ಕಾರ್ಡ್‌ಗಳು, ವಿಹಾರ ಮತ್ತು ಭೋಜನ ಮಾಡುವ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. ಮಕ್ಕಳು ತಮ್ಮ ತಂದೆಯೊಂದಿಗೆ ಸಾಧ್ಯವಾದಷ್ಟು ಸಮಯವನ್ನು ಕಳೆಯಲು ಪ್ರಯತ್ನಿಸುತ್ತಾರೆ. ಈ ವರ್ಷ ಸಾಂಕ್ರಾಮಿಕ ರೋಗದಿಂದಾಗಿ ಅನೇಕ ನಿರ್ಬಂಧಗಳಿವೆ, ಹಾಗಾಗಿ ಆಚರಣೆಯನ್ನು ಮನೆಯಲ್ಲೇ ಸರಳವಾಗಿ ಮತ್ತು ಸುಂದರವಾಗಿ ಮಾಡುವುದು ಉತ್ತಮ.

ತಂದೆಯ ದಿನಾಚರಣೆಯನ್ನು ಏಕೆ ಆಚರಿಸಲಾಗುತ್ತದೆ:

ನಮ್ಮ ತಂದೆ ನಮಗಾಗಿ ತೋರುವ ಪ್ರೀತಿ, ಕಾಳಜಿ ಮತ್ತು ಶ್ರಮಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ತಂದೆಯ ದಿನವನ್ನು ಆಚರಿಸಲಾಗುತ್ತದೆ. ಕುಟುಂಬದ ಆಧಾರ ಸ್ತಂಭವಾಗಿರುವ ತಂದೆಗೆ ಸಂತೋಷದಿಂದ ಸಂಭ್ರಮಿಸಲು ಅವಕಾಶ ನೀಡುವ ದಿನವೇ ಅಪ್ಪಂದಿರ ದಿನ.

For Quick Alerts
ALLOW NOTIFICATIONS  
For Daily Alerts

English summary
Father's day is on june 20. Here we are giving information about history, significance and why we celebrate this day.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X