ದ್ವಿತೀಯ ಪಿಯುಸಿ ವಿದ್ಯಾರ್ಥಿಗಳೇ ಆತಂಕ ಬೇಡ!

Posted By:

ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಗಳು ದಿನಾಂಕ 09 -03 -2017 ರಿಂದ ಪ್ರಾರಂಭವಾಗಲಿವೆ. ಪರೀಕ್ಷೆಗೆ ಇನ್ನು ಕೆಲವೇ ಕೆಲವು ಗಂಟೆಗಳು ಉಳಿದಿದ್ದು ಪರೀಕ್ಷೆ ಎದರುರಿಸಲು ಲಕ್ಷಾಂತರ ವಿದ್ಯಾರ್ಥಿಗಳು ತಯಾರಾಗುತ್ತಿದ್ದಾರೆ.

ಇಷ್ಟು ದಿನ ಓದಿರುವುದನ್ನೆಲ್ಲ ಮೂರು ಗಂಟೆಗಳಲ್ಲಿ ಉತ್ತರಿಸಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಿದ್ಧವಾಗಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ನಿರಾಯಾಸವಾಗಿ ಬರೆಯಲು ಇಲ್ಲಿವೆ ಕೆಲವು ಸೂಕ್ತ ಸಲಹೆಗಳು.

ಆತಂಕ ಬೇಡ

ಸಾಮಾನ್ಯವಾಗಿ ಪರೀಕ್ಷೆ ಎಂದ ಕೂಡಲೇ ವಿದ್ಯಾರ್ಥಿಗಳು ಆತಂಕ ಪಡುತ್ತಾರೆ. ಅದಕ್ಕೆ ಕಾರಣ ಹಲವು. ಕೆಲವೊಮ್ಮೆ ಶಾಲೆಯಲ್ಲಿ ಶಿಕ್ಷಕರ ಒತ್ತಡ, ಮನೆಯಲ್ಲಿ ಪೋಷಕರ ಒತ್ತಡದಿಂದ ಹೀಗಾಗುವುದು ಸಹಜ. ನೀವು ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲು ಅವರು ನಿಮ್ಮ ಮೇಲೆ ಒತ್ತಡ ಹೇರಿರುತ್ತಾರೆ ವಿನಃ ನಿಮ್ಮಲ್ಲಿ ಆತಂಕ ಸೃಷ್ಟಿಸಲು ಅಲ್ಲ. ನೀವು ಸರಿಯಾಗಿ ಪೂರ್ವ ಸಿದ್ದತೆ ಮಾಡಿಕೊಂಡಿದ್ದಾರೆ, ಪರೀಕ್ಷಾ ಪಠ್ಯಕ್ರಮವನ್ನು ಚೆನ್ನಾಗಿ ಅಭ್ಯಾಸ ಮಾಡಿದ್ದರೆ ನಿಮಗೆ ಪರೀಕ್ಷೆ ಸುಲಭ.

ಮಾನಸಿಕ ಸಿದ್ಧತೆ

ಪರೀಕ್ಷೆಗೆ ಓದು ಎಷ್ಟು ಮುಖ್ಯವೋ ಮಾನಸಿಕ ಸಿದ್ಧತೆ ಅಷ್ಟೇ ಮುಖ್ಯ. ಒಮ್ಮೆ ನೀವು ಮನಸ್ಸಿನಲ್ಲಿ ನಾನು ಪರೀಕ್ಷೆಯನ್ನು ಚೆನ್ನಾಗಿ ಬರೆಯಬಲ್ಲೆ ಎಂಬ ನಿರ್ಧಾರಕ್ಕೆ ಬಂದರೆ ಖಂಡಿತ ನೀವು ಉತ್ತಮ ಫಲಿತಾಂಶ ಪಡೆಯುತ್ತೀರಿ. ಮಾನಸಿಕವಾಗಿ ಸಿದ್ದವಾಗುವುದು ಎಂದರೆ ನಿಮ್ಮ ಅತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವುದು. ಸದಾ ಹಸನ್ಮುಖಿಯಾಗಿ ಸಕಾರಾತ್ಮಕ ಚಿಂತನೆ ಮಾಡುವುದು. ಪರೀಕ್ಷೆ ವೇಳೆಯಲ್ಲಿ ಗೊಂದಲ ಸೃಷ್ಟಿಸಿಕೊಳ್ಳದೇ ಶಾಂತಚಿತ್ತರಾಗಿರುವುದು.

ಪರೀಕ್ಷಾ ಸಲಹೆ

ನಕಾರಾತ್ಮಕ ಯೋಚನೆ ಬೇಡ

ಪರೀಕ್ಷೆ ಬಂದೇ ಬಿಟ್ಟಿತ್ತು, ಇನ್ನು ಏನು ಓದಿಲ್ಲ ಎಂಬ ನಕಾರಾತ್ಮಕ ಯೋಚನೆಗಳು ವಿದ್ಯಾರ್ಥಿಗಳನ್ನು ಹೆಚ್ಚು ಗೊಂದಲಕ್ಕೀಡುಮಾಡುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಅಂತಹಾ ಆಲೋಚನೆಗಳನ್ನು ಮಾಡುವುದು ಒಳಿತಲ್ಲ. ಈ ರೀತಿ ಯೋಚಿಸುವುದರಿಂದ ಒಮ್ಮೊಮ್ಮೆ ಓದಿರುವುದು ಕೂಡ ಮರೆತು ಹೋಗಬಹುದಾದ ಸಾಧ್ಯತೆ ಇರುತ್ತದೆ. ಅದರ ಬದಲು ನಾನು ಸರಿಯಾಗಿ ಅಭ್ಯಾಸ ಮಾಡಿದ್ದೇನೆ ಎಂಬ ಸಕಾರಾತ್ಮಕ ಯೋಚನೆ ಮಾಡಿದರೆ ಒಳಿತು.

ಗಮನ ಬೇರೆಡೆ ಹೋಗದಿರಲಿ

ಪರೀಕ್ಷಾ ಸಮಯದಲ್ಲಿ ಓದಿನ ಕಡೆ ಗಮನ ನೀಡುವುದರ ಬದಲು ಬೇರೆ ವಿಚಾರಗಳಲ್ಲಿ ತೊಡಗಿಸಿಕೊಳ್ಳವುದು ಕೆಲ ವಿದ್ಯಾರ್ಥಿಗಳ ಅಭ್ಯಾಸ. ಇದು ಕೆಲವೊಮ್ಮೆ ಪೂರಕವು ಹೌದು ಮಾರಕವು ಹೌದು. ಏಕೆಂದರೆ ಕೆಲವರು ರಿಲ್ಯಾಕ್ಸ್ ಮಾಡಲು ಕೆಲ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಇನ್ನು ಕೆಲವರು ಇದನ್ನೇ ಅತಿಯಾಗಿ ಮಾಡಿ ಸಮಯ ವ್ಯರ್ಥ ಮಾಡುತ್ತಾರೆ. ಇದರಿಂದ ಓದಿನ ಮೇಲೆ ಗಮನ ಕಡಿಮೆಯಾಗಿ ಓದಲು ಮನಸ್ಸು ಆಗದೇ ಇರಬಹುದು. ಆದ್ದರಿಂದ ಪರೀಕ್ಷೆ ಸಮಯದಲ್ಲಿ ಓದಿನ ವಿಚಾರ ಬಿಟ್ಟು ಬೇರೆಡೆ ಗಮನ ಹರಿಸದಿರುವುದೇ ಉತ್ತಮ.

ಪರೀಕ್ಷಾ ಕೇಂದ್ರದ ಮಾಹಿತಿ ಪಡೆದುಕೊಳ್ಳಿ

ಪರೀಕ್ಷಾ ಕೇಂದ್ರಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ. ಈ ಬಾರಿ ಅನ್ಯ ಕೇಂದ್ರಗಳಲ್ಲಿ ಪರೀಕ್ಷೆಗಳನ್ನು ಬರೆಯಬೇಕಿರುವುದರಿಂದ ವಿದ್ಯಾರ್ಥಿಗಳು ಪರೀಕ್ಷೆಯ ಹಿಂದಿನ ದಿನವೇ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡುವುದು ಉತ್ತಮ, ಮನೆಯಿಂದ ಪರೀಕ್ಷಾ ಕೇಂದ್ರ ತಲುಪಲು ಬೇಕಾಗುವ ಸಮಯ, ಪರೀಕ್ಷಾ ಕೇಂದ್ರಕ್ಕೆ ಹೋಗಲು ಸಾರಿಗೆ ವ್ಯವಸ್ಥೆ ಇವೆಲ್ಲದರ ಮಾಹಿತಿ ತಿಳಿಯುತ್ತದೆ.

ಪರೀಕ್ಷಾ ಸಾಮಗ್ರಿಗಳನ್ನು ಜೋಡಿಸಿಕೊಳ್ಳಿ

ಪರೀಕ್ಷಾ ಕೇಂದ್ರಕ್ಕೆ ತೆಗೆದುಕೊಂಡು ಹೋಗುವ ಅಗತ್ಯ ಸಾಮಗ್ರಿಗಳನ್ನು ಹಿಂದಿನ ದಿನವೇ ಅಚ್ಚುಕಟ್ಟಾಗಿ ಜೋಡಿಸಿಟ್ಟುಕೊಳ್ಳಿ. ಪ್ರವೇಶ ಪತ್ರ , ಕಾಲೇಜು ಐಡಿ, ಪೆನ್ನುಗಳು, ಇತ್ಯಾದಿಗಳ ಬಗ್ಗೆ ಗಮನವಿರಲಿ.

ಇದನ್ನು ಗಮನಿಸಿ: ವಿದ್ಯಾರ್ಥಿಗಳಿಗೆ ಕಾಲೇಜು ಸಿಬ್ಬಂದಿಗಳ ಸಹಾಯ

English summary
few useful tips to puc students before the examination

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia