ನೀವು ಮನೆಯಿಂದಲೇ ಕಲಿಯಬಹುದಾದ ಉಚಿತ ಆನ್ಲೈನ್ ಕೋರ್ಸ್ ಗಳು

ಕಲಿಕೆಗೆ ಕೊನೆಯೇ ಇಲ್ಲ ಹೌದು ನಮ್ಮ ಕಲಿಕೆ ಕೇವಲ ಕಲಿಕೆಯಾಗಿದ್ದರೆ ಸಾಲದು ಅದಕ್ಕೆ ನಮ್ಮದೇ ಆದ ಒಂದು ಕ್ರಿಯಾಶೀಲ ಹಚ್ಚೆ ಇದ್ದರೆ ಮಾತ್ರ ಆ ಕಲಿಕೆ ಅರ್ಥಪೂರ್ಣ. ನನಗೆ ಆ ಕಲಿಕೆ ಇಷ್ಟ, ನಂಗೆ ಈ ಕಲಿಕೆ ಇಷ್ಟ ಎನ್ನುವ ಅನೇಕ ಮಂದಿಯನ್ನು ನೋಡಿದಾಗ ಮತ್ತೆ ನಾವೇಕೆ ಕಲಿಕೆಯನ್ನು ಪ್ರಾರಂಭಿಸಬಾರದು ಎನ್ನುವುದು ಕಾಡುತ್ತೆ. ಇನ್ನೂ ಕೆಲವರಿಗೆ ಸಮಯ ಮೀರಿದೆ ಈಗ ಆ ಕಲಿಕೆಯನ್ನು ಮಾಡಲು ಸಾಧ್ಯವಿಲ್ಲ ಮತ್ತು ಆ ಕೋರ್ಸ್‌ ಮಾಡಲು ಆರ್ಥಿಕವಾಗಿಯೂ ಸಬಲರಾಗಿಲ್ಲ ಎನ್ನುವ ಮಾತುಗಳು. ಯಾಕಿಷ್ಟೆಲ್ಲಾ ಹೇಳ್ತಿದ್ದೀನಿ ಎಂದರೆ ನಾವು ನಮ್ಮಿಷ್ಟದ ಕಲಿಕೆಯನ್ನು ಮಾಡಿದಾಗ ಮಾತ್ರ ನಮ್ಮ ಇಷ್ಟದ ಗುರಿಯನ್ನು ತಲುಪಲು ಸಾಧ್ಯ ಅದಕ್ಕಾಗಿ ಅನೇಕ ಸಬೂಬುಗಳನ್ನು ಕೊಡುವ ಅಗತ್ಯವಿಲ್ಲ. ಹಾಗಾಗಿ ಇಂದಿನ ಲೇಖನದಲ್ಲಿ ನೀವು ನಿಮ್ಮ ಇಷ್ಟದ ಕರಿಯರ್ ಅನ್ನು ಸೃಷ್ಟಿಸಿಕೊಳ್ಳಲು ನಾವು ಮಾರ್ಗದರ್ಶನ ತೋರುತ್ತಿದ್ದೇವೆ.

ಉಚಿತ ಆನ್‌ಲೈನ್ ಕೋರ್ಸ್‌ಗಳು  ನಿಮಗಾಗಿ ಇಲ್ಲಿವೆ

 

ಈಗೆಲ್ಲಾ ಯಾವ ಕಲಿಕೆಯೂ ಅಸಾಧ್ಯವಲ್ಲ ಜೊತೆಗೆ ನಿಮ್ಮ ಶ್ರಮವೊಂದಿದ್ದರೆ ಸಾಕು ಏನನ್ನು ಬೇಕಾದರೂ ಸಾಧಿಸಬಹುದು. ಇದಕ್ಕೆ ಪೂರಕವಾಗಿ ನೀವು ನಿಮ್ಮ ಆಸಕ್ತಿಗೆ ಅನುಗುಣವಾಗಿರುವಂತೆ ಕೆಲವು ಉಚಿತ ಆನ್‌ಲೈನ್‌ ಕೋರ್ಸ್‌ಗಳನ್ನು ಮನೆಯಲ್ಲೇ ಕುಳಿತು ಮಾಡಬಹುದು. ಯಾವೆಲ್ಲಾ ಕೋರ್ಸ್‌ಗಳನ್ನು ಮನೆಯಲ್ಲೇ ಕುಳಿತು ಕಲಿಯಬಹುದು ಅಂತೀರಾ? ಮುಂದೆ ಓದಿ.

1. ಗ್ರಾಫಿಕ್ ಡಿಸೈನಿಂಗ್:

1. ಗ್ರಾಫಿಕ್ ಡಿಸೈನಿಂಗ್:

ಖಾಲಿ ಹಾಳೆ ಕಂಡಾಕ್ಷಣ ಅದರ ಮೇಲೆ ಏನಾದರು ಗೀಚುವುದು ಅದಕ್ಕೆ ಕ್ರಿಯಾಶೀಲತೆಯ ಮೆರಗನ್ನು ನೀಡುವ ಕಲೆ ನಿಮಗಿದೆಯೇ ಹಾಗಿದ್ರೆ ಈ ಬಗ್ಗೆ ನಿರ್ಲಕ್ಷ್ಯ ಬೇಡ. ನಿಮ್ಮಲ್ಲಿರುವ ಆ ಕೌಶಲ್ಯಕ್ಕೆ ಇನ್ನಷ್ಟು ಒತ್ತು ನೀಡಲು ಗ್ರಾಫಿಕ್ ಡಿಸೈನಿಂಗ್ ಕೋರ್ಸ್‌ನ ಕಲಿಕೆಯನ್ನು ಆರಂಭಿಸಿ. ಈ ಕೋರ್ಸ್‌ನಲ್ಲಿ ಸ್ಕೆಚಿಂಗ್ ಮತ್ತು ಡಿಸೈನಿಂಗ್ ಬಗೆಗೆ ಹೆಚ್ಚು ತಿಳಿಯುತ್ತೀರಿ. ಇದರಿಂದ ನಿಮಗೆ ವಿಫುಲ ಉದ್ಯೋಗಾವಕಾಶಗಳು ದೊರೆಯುತ್ತವೆ.

2. ಬಿಗ್ ಡಾಟಾ ಅನಾಲಿಸಿಸ್:

2. ಬಿಗ್ ಡಾಟಾ ಅನಾಲಿಸಿಸ್:

ಒಂದು ಸಂಸ್ಥೆಯಲ್ಲಿ ಡಾಟಾ ಅನಾಲಿಸಿಸ್ ಮಾಡುವುದು ಪ್ರಮುಖ ಕರ್ತವ್ಯವಾಗಿರುತ್ತದೆ. ಈ ಡಾಟಾ ಅನಾಲಿಸಿಸ್ ಅನ್ನುವುದು ಕಂಪೆನಿಯ ಆಗು ಹೋಗುಗಳ ಸ್ಟ್ಯಾಟಿಸ್ಟಿಕ್ಸ್ ಆಧಾರದ ಮೇಲೆ ಮಾಡಲಾಗುವುದು. ಹಾಗಾಗಿ ಯಾರಿಗೆ ಈ ಬಗೆಗೆ ಹೆಚ್ಚು ಆಸಕ್ತಿ ಇದೆಯೋ ಅವರು ಆನ್‌ಲೈನ್‌ನಲ್ಲಿ ಈ ಕಲಿಕೆಯನ್ನು ಮಾಡಬಹುದು.

3. ಆನ್‌ಲೈನ್ ಎಂಬಿಎ:
 

3. ಆನ್‌ಲೈನ್ ಎಂಬಿಎ:

ಆನ್‌ಲೈನ್ ಕಲಿಕೆ ಎಲ್ಲರಿಗೂ ಪ್ರಯೋಜನವಾಗುವಂತದ್ದು ಅದರಲ್ಲೂ ಈಗಾಗಲೆ ಕೆಲಸಕ್ಕೆ ಸೇರಿ ಪ್ರತಿನಿತ್ಯ ದುಡಿಮೆಯಲ್ಲಿ ತೊಡಗಿರುವವರಿಗಂತೂ ಆನ್‌ಲೈನ್ ಎಂಬಿಎ ಕಲಿಕೆ ಹೆಚ್ಚು ಪ್ರಯೋಜನವಾದೀತು. ಆನ್‌ಲೈನ್ ನಲ್ಲಿ ಎಂಬಿಎ ಕೋರ್ಸ್‌ ಮಾಡುವುದರಿಂದ ಯಾವುದೇ ನಿರ್ಧಿಷ್ಟ ಕಲಿಕಾ ಸಮಯ ಅಂತ ಇರುವುದಿಲ್ಲ ಮತ್ತು ಯಾವುದೇ ಕಾಲೇಜು ಹೋಗಬೇಕೆಂದಿರುವುದಿಲ್ಲ ಹಾಗಾಗಿ ಈ ಆನ್‌ಲೈನ್ ಕಲಿಕೆ ನಿಮಗೆ ಸಹಾಯವಾದೀತು.

4 . ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್:

4 . ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್:

ನೀವು ಸ್ವಂತ ಉದ್ಯೋಗವನ್ನು ಪ್ರಾರಂಭಿಸಿದಲ್ಲಿ ನಿಮ್ಮ ಬ್ಯುಸಿನೆಸ್‌ ಸುಧಾರಣೆಗಾಗಿ ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ ತುಂಬಾನೆ ಅಗತ್ಯ. ನಿಮ್ಮ ಬ್ಯುಸಿನೆಸ್ ಜನರಿಗೆ ತಲುಪಬೇಕೆಂದರೆ ಸಾಮಾಜಿಕ ಜಾಲತಾಣಗಳಲ್ಲಿ ಜನರಿಗೆ ಪರಿಚಯಿಸುವ ಕೆಲಸ ಮಾಡಬೇಕು. ಈಗೆಲ್ಲಾ ಎಲ್ಲರೂ ಸಾಮಾಜಿಕ ಜಾಲತಾಣಗಳನ್ನು ಹೆಚ್ಚಾಗಿ ಬಳಸುವುದರಿಂದ ನಿಮ್ಮ ಕೆಲಸ ಸಲೀಸು ಆದರೆ ಈ ಬಗೆಗೆ ನೀವು ಹೆಚ್ಚು ತಿಳಿದಲ್ಲಿ ಇನ್ನಷ್ಟು ನಿಮ್ಮ ಬ್ಯುಸಿನೆಸ್‌ ಅನ್ನು ವಿಸ್ತರಿಸಬಹುದು. ಹಾಗಾಗಿ ಈ ಬಗೆಗೆ ನೀವು ಆನ್‌ಲೈನ್ ಕೋರ್ಸ್‌ ಅನ್ನು ಮಾಡಬಹುದು.

5. ಪ್ರೊಗ್ರಾಮಿಂಗ್:

5. ಪ್ರೊಗ್ರಾಮಿಂಗ್:

ವೆಬ್‌ಸೈಟ್ ಸ್ಥಾಪಿಸುವಲ್ಲಿ ಪ್ರೋಗ್ರಾಮಿಂಗ್ ಒಂದು ಪ್ರಮುಖ ಭಾಗವಾಗಿದೆ. ಪ್ರೊಗ್ರಾಮಿಂಗ್‌ನಲ್ಲಿ ವಿವಿಧ ಭಾಷೆಗಳಿವೆ ಈ ಬಗೆಗೆ ನಿಮಗೆ ಆಸಕ್ತಿ ಇದ್ದಲ್ಲಿ ನೀವು ಆನ್‌ಲೈನ್‌ ಕೋರ್ಸ್‌ ಅನ್ನು ಮಾಡಬಹುದು. ಇದನ್ನು ಕಲಿತು ವೆಬ್‌ಸೈಟ್‌ಗಳನ್ನು ಸರಾಗವಾಗಿ ನಿಭಾಯಿಸುವಲ್ಲಿ ನಿಮ್ಮ ಪಾತ್ರವನ್ನು ನಿಭಾಯಿಸಬಹುದು.

6. ವಿದೇಶ ಭಾಷೆಗಳ ಕಲಿಕೆಯ ಕೋರ್ಸ್‌:

6. ವಿದೇಶ ಭಾಷೆಗಳ ಕಲಿಕೆಯ ಕೋರ್ಸ್‌:

ವಿದೇಶಿ ಭಾಷೆಗಳನ್ನು ನೀವು ಆನ್‌ಲೈನ್ ಮೂಲಕ ಕಲಿತು ನಿಮ್ಮ ರೆಸ್ಯುಮೆಯಲ್ಲಿ ನಿಮ್ಮ ಕೌಶಲ್ಯಗಳನ್ನು ನಮೂದಿಸುವುದರಿಂದ ನಿಮಗೆ ಬೇಡಿಕೆ ಹೆಚ್ಚಬಹುದು. ಹಾಗಾಗಿ ಆನ್‌ಲೈನ್‌ ನಲ್ಲಿ ವಿವಿಧ ಭಾಷೆಗಳನ್ನು ಕಲಿತಲ್ಲಿ ನಿಮಗೆ ಉತ್ತಮ ಅವಕಾಶಗಳು ದೊರೆಯಬಹುದು. ಬಹುಬೇಗ ಈ ಕಲಿಯನ್ನು ಆರಂಭಿಸಿ ಇದರಿಂದ ಭಾ‍ಷಾಂತರಕಾರರಾಗಿ ಕೂಡ ಕೆಲಸ ನಿರ್ವಹಿಸಬಹುದು.

 7. ಆಪ್ ಡೆವಲಪ್ಮೆಂಟ್:

7. ಆಪ್ ಡೆವಲಪ್ಮೆಂಟ್:

ಇತ್ತೀಚೆಗೆ ನೀವು ಆನ್‌ಲೈನ್ ನಲ್ಲಿ ಏನಾದರೂ ಕೊಳ್ಳುವುದು, ಟಿಕೆಟ್ ಬುಕ್ ಮಾಡಿರುವುದು ನೆನಪಿದೆಯಾ ಯಾಕೆಂದರೆ ನೀವು ಮೊಬೈಲ್‌ನಲ್ಲಿ ಆಪ್ ಬಳಸಿ ಈ ಕೆಲಸಗಳನ್ನು ಮಾಡುತ್ತೀರಿ. ಇತ್ತೀಚೆಗೆ ಮೊಬೈಲ್ ಆಪ್‌ಗಳ ಬಳಕೆ ಕೂಡ ಅಧಿಕವಾಗಿರುತ್ತದೆ ಹಾಗಾಗಿ ಆಪ್‌ಗಳೂ ಕೂಡ ಹೆಚ್ಚುತಲಿದೆ. ನೀವು ಕೂಡ ಆನ್‌ಲೈನ್‌ನಲ್ಲಿ ಈ ಕೋರ್ಸ್‌ ಕಲಿತಲ್ಲಿ ನೀವೂ ಕೂಡ ನಿಮ್ಮ ಕ್ರಿಯಾಶೀಲತೆ ಇಂದ ಹೊಸ ಹೊಸ ಆಪ್‌ಗಳ ಆವಿಷ್ಕಾರ ಮಾಡಬಹುದು.

8. ಫಿಲ್ಮ್ ಮೇಕಿಂಗ್:

8. ಫಿಲ್ಮ್ ಮೇಕಿಂಗ್:

ಫಿಲ್ಮ್ ಅಂದ್ರೆ ಎಲ್ಲರಿಗೂ ಇಷ್ಟವಾಗುವಂತದ್ದು ಅದರಲ್ಲೂ ತೆರೆಯ ಹಿಂದೆ ಅಲ್ಲದೇ ಕ್ಯಾಮೆರಾ ಹಿಂದೆ ನಿಂತು ಯಾರಿಗೆ ಕೆಲಸ ಮಾಡುವ ಆಸಕ್ತಿ ಇದೆಯೋ ಅವರು ಆನ್‌ಲೈನ್‌ನಲ್ಲಿ ಫಿಲ್ಮ್ ಮೇಕಿಂಗ್ ಕೋರ್ಸ್‌ ಅನ್ನು ಮಾಡಬಹುದು. ಈ ಕೋರ್ಸ್‌ನಲ್ಲಿ ನೀವು ಬೇಸಿಕ್ ಹಂತದ ಕಲಿಕೆಯನ್ನು ಮಾಡಬಹುದು ಜೊತೆಗೆ ಕೌಶಲ್ಯವನ್ನು ಅಭಿವೃದ್ದಿ ಪಡಿಸಿಕೊಳ್ಳಬಹುದು. ಅಲ್ಲದೇ ಕಲಿಕೆ ಮುಗಿದ ನಂತರ ನೀವು ಕಿರು ಚಿತ್ರ ಮತ್ತು ಫೀಚರ್‌ ಫಿಲ್ಮ್‌ಗಳನ್ನು ತೆಗೆಯುವುದರೊಂದಿಗೆ ನಿಮ್ಮ ಕರಿಯರ್‌ ಅನ್ನು ಪ್ರಾರಂಭಿಸಬಹುದು.

9. ಮಾನವ ಸಂಪನ್ಮೂಲ ನಿರ್ವಹಣೆ:

9. ಮಾನವ ಸಂಪನ್ಮೂಲ ನಿರ್ವಹಣೆ:

ನೀವು ಜನರೊಂದಿಗೆ ಉತ್ತಮ ಸಂವಹನ ಹೊಂದಿರುವುದಾದರೆ ಹಾಗೂ ಎಲ್ಲರೊಡನೆ ಬೆರೆಯು ಮತ್ತು ಎಲ್ಲಾ ಕೆಲಸಗಳನ್ನು ನಿರ್ವಹಿಸುವ ಕೌಶಲ್ಯವನ್ನು ಹೊಂದಿದ್ದರೆ ಮಾನವ ಸಂಪನ್ಮೂಲ ನಿರ್ವಹಣೆಯ ಆನ್‌ಲೈನ್ ಕೋರ್ಸ್‌ಗಳನ್ನು ಮಾಡಬಹುದು.

ಈ ಕಲಿಕೆಯನ್ನು ಮಾಡುವುದರಿಂದ ನಿಮಗೆ ಹೆಚ್ಚಿನ ಬೇಡಿಕೆ ಇರುತ್ತದೆ ಮತ್ತು ಸಂಸ್ಥೆಗಳಲ್ಲಿ ಉತ್ತಮ ಹುದ್ದೆಯನ್ನು ಅಲಂಕರಿಸಬಹುದು.

10. ಛಾಯಾಗ್ರಹಣ:

10. ಛಾಯಾಗ್ರಹಣ:

ನೀವು ಸದಾ ಫೋಟೋ ಕ್ಲಿಕ್ಕಿಸುವುದು, ಎಲ್ಲೆಡೆ ಪ್ರಯಾಣಿಸಿದಾಗ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದು ಹೀಗೆ ನಿಮ್ಮಲ್ಲಿ ಸದಾ ಫೋಟೋ ತೆಗೆಯುವ ಹುಚ್ಚಿದ್ದರೆ ಅದನ್ನು ಕಡೆಗಾಣಿಸಬೇಡಿ. ಇತ್ತೀಚೆಗೆ ಅನೇಕರು ಈ ರೀತಯಾಗಿ ಫೋಟೋಗ್ರಫಿಯ ಬಗೆಗೆ ಹೆಚ್ಚು ಆಸಕ್ತಿಯುತರಾಗಿದ್ದಾರೆ ಕಾರಣ ಅದಕ್ಕಾಗಿ ಇರುವ ಅನೇಕ ಕೋರ್ಸ್‌ಗಳು. ಫೋಟೋಗ್ರಫಿಯ ಬಗೆಗೆ ಆಸಕ್ತಿ ಇರುವ ಅನೇಕ ಅಭ್ಯರ್ಥಿಗಳು ಫೋಟೋಗ್ರಫೀ ಕೋರ್ಸ್‌ ಕಲಿಕೆಗೆ ಮುಂದಾಗಿದ್ದಾರೆ. ನಿಮಗೂ ಫೋಟೋಗ್ರಫಿಯಲ್ಲಿ ಆಸಕ್ತಿಯಿದ್ದರೆ ನೀವೂ ಕೂಡ ಫೋಟೋಗ್ರಫಿ ಆನ್‌ಲೈನ್ ಕೋರ್ಸ್‌ ಅನ್ನು ಮಾಡಬಹುದು. ಕೋರ್ಸ್‌ ಮುಗಿದ ಬಳಿಕ ಜಾಹೀರಾತು ಏಜೆನ್ಸಿಗಳಲ್ಲಿ, ಮಾಧ್ಯಮಗಳಲ್ಲಿ ಮತ್ತು ಫ್ರೀಲ್ಯಾನ್ಸರ್ ಆಗಿ ಕೂಡ ಕೆಲಸ ಮಾಡಬಹುದು.

11. ಕ್ರಿಯಾಶೀಲ ಬರೆವಣಿಗೆ:

11. ಕ್ರಿಯಾಶೀಲ ಬರೆವಣಿಗೆ:

ನಿಮ್ಮಲ್ಲಿ ಸದಾ ಹೊಸ ಹೊಸ ಆಲೋಚನೆಗಳು ಮೂಡುತ್ತಿದ್ದರೆ ಜೊತೆಗೆ ಬರೆವಣಿಗೆಯಲ್ಲಿ ಆಸಕ್ತಿಯಿದ್ದರೆ ನೀವು ಕ್ರೀಯಾಶೀಲ ಬರೆವಣಿಗೆ ಕಲಿಕೆಯ ಆನ್‌ಲೈನ್ ಕೋರ್ಸ್‌ಗಳನ್ನು ಮಾಡಬಹುದು. ಈ ಕೋರ್ಸ್‌ ಅನ್ನು ಮಾಡುವುದರಿಂದ ನಿಮ್ಮ ಬರೆವಣಿಗೆ

ಇನ್ನಷ್ಟ ಸುಧಾರಣೆಯಾಗುತ್ತೆ. ಇದರಿಂದ ನೀವು ಫ್ರಿಲ್ಯಾನ್ಸರ್ ಆಗಿ ಕೆಲಸವನ್ನು ಪ್ರಾರಂಭಿಸಬಹುದು ಅಥವಾ ಉನ್ನತ ಸಂಸ್ಥೆಯಯಲ್ಲಿ ಕ್ರಿಯಾಶೀಲ ಬರವಣಿಗೆಗಾರರಾಗಿ ಕೆಲಸ ನಿರ್ವಹಿಸಬಹುದು.

For Quick Alerts
ALLOW NOTIFICATIONS  
For Daily Alerts

English summary
Here we are giving some information about free online courses available to do from home.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more