ಗೇಮ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟನಾ... ಹಾಗಿದ್ರೆ ನೀವು ಕೂಡಾ ಯಾಕೆ ಗೇಮಿಂಗ್ ಇಂಡಸ್ಟ್ರಿಗೆ ಎಂಟ್ರಿ ಆಗಬಾರದು!

Posted By:

ಆಟ ಅಂದ್ರೆ ಯಾರಿಗೆ ತಾನೇ ಇಷ್ಟವಿರಲ್ಲ ಹೇಳಿ. ಬೋರ್ ಆದಾಗ ಕಂಪ್ಯೂಟರ್, ಮೊಬೈಲ್‌ಗಳಲ್ಲಿ ಹಾಗೂ ವಿಡಿಯೋ ಗೇಮ್‌ಗಳನ್ನ ಆಡಿಕೊಂಡು ಹೆಚ್ಚಿನ ಮಂದಿ ಸಮಯ ಕಳೆಯುತ್ತಾರೆ. ನಾವೇನೋ ಸುಲಭವಾಗಿ ಗೇಮ್ಸ್ ಗೆ ಅಡಿಕ್ಟ್ ಆಗಿ ಬಿಡುತ್ತೇವೆ. ಅಷ್ಟೇ ಅಲ್ಲ ಗೇಮ್ಸ್ ಆಡಿ ರಿಲಾಕ್ಸ್ ಕೂಡಾ ಆಗಿತ್ತೇವೆ. ಆದ್ರೆ ಆ ಗೇಮ್ಸ್ ಹಿಂದೆ ಅಡಗಿದೆ ಹಲವಾರು ಮಂದಿಯ ಶ್ರಮ.

ಗೇಮಿಂಗ್ ಇಂಡಸ್ಟ್ರಿಗೆ ಎಂಟ್ರಿ ಹೇಗೆ... ನೀವು ತಿಳಿದುಕೊಳ್ಳಲೇ ಬೇಕಾದುದು ಇದು!

ಮನೋರಂಜನಾ ಜಗತ್ತಿನಲ್ಲಿ ಗೇಮಿಂಗ್ ಪಾತ್ರ ಹೆಚ್ಚಿದೆ. ಪ್ರಪಂಚದಾದ್ಯಂತ ಗೇಮಿಂಗ್‌ನ್ನು ಹಾಟೆಸ್ಟ್ ಪ್ರೊಫೆಶನ್ ಎಂದು ಗುರುತಿಸಲಾಗಿದೆ. ಇತ್ತೀಚಿಗಿನ ಮಾರ್ಡನ್ ದಿನಗಳಲ್ಲಿ ಈ ಜಾಬ್ ಗೆ ತುಂಬಾ ಬೇಡಿಕೆ ಕೂಡಾ ಇದೆ. ಅಷ್ಟೇ ಅಲ್ಲ ಈ ಇಂಡಸ್ಟ್ರಿ ತುಂಬಾ ವೇಗವಾಗಿ ಕೂಡಾ ಬೆಳೆಯುತ್ತಿದೆ.

ಗೇಮಿಂಗ್ ಇಂಡಸ್ಟ್ರಿಯಲ್ಲಿ ಕೆರಿಯರ್ ಹೇಗೆ ಸಾಧ್ಯ ಅಂತೀರಾ?

 • ಗೇಮಿಂಗ್ ಇಂಡಸ್ಟ್ರಿಯಲ್ಲಿ ಕೆರಿಯರ್ ಅಂದ್ರೆ ಅದೊಂದು ಉತ್ಸಾಹಕರ ಜಾಬ್ ಆಗಿದೆ. ಫನ್, ಟೆಕ್ನಾಲಾಜಿ ಹಾಗೂ ಕ್ರಿಯೇಟಿವಿಟಿಗೆ ಸಂಬಂಧಪಟ್ಟಂತೆ ಈ ಕ್ಷೇತ್ರದಲ್ಲಿ ಸ್ಪರ್ಧೆಕೂಡಾ ಹೆಚ್ಚಾಗಿಯೇ ಇದೆ. ಇದು ಯಾವಾಗಲೂ ವಿಶೇಷವಾದ ಹಾಗೂ ಆಸಕ್ತಿಕರವಾದ ಗೇಮ್ ಆಗಿದೆ.
 • ಹೊಸ ಗೇಮ್‌ನ್ನು ಕ್ರಿಯೇಟ್ ಮಾಡುವುದು ಸುಲಭದ ಮಾತಲ್ಲ. ಇಲ್ಲಿ ಸ್ಪರ್ಧೆ ಕೂಡಾ ಜಾಸ್ತಿ ಇದ್ದು ಪ್ರತಿ ದಿನ ಇಲ್ಲ ಬದಲಾವಣೆ ಮಾಡುತ್ತಾ ಇರಬೇಕು ಅಂತೆಯೇ ಹೊಸ ಹೊಸ ಆಟಗಳನ್ನ ಕ್ರಿಯೇಟ್ ಮಾಡುತ್ತಾ ಕೂಡಾ ಇರಬೇಕು. ಈ ಕ್ಷೇತ್ರದಲ್ಲಿ ಯುವಜನತೆಗೆ ಲೆಕ್ಕ ಇಡಲು ಸಾಧ್ಯವಾಗದಷ್ಟು ಅವಕಾಶಗಳಿವೆ. ಈ ಇಂಡಸ್ಟ್ರಿಗೆ ಎಂಟ್ರಿ ಆಗಬೇಕು ಅಂದುಕೊಂಡಿದ್ದರೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳು ಈ ಕೆಳಗಿನಂತಿವೆ.

ಅರ್ಹತ ಮಾನದಂಡಗಳು:

 • ಇಂತಹ ಕೋರ್ಸ್ ಗಳಿಗೆ ಕಡಿಮೆ ಅಂದ್ರೂ 12 ನೇ ತರಗತಿ ಪಾಸಾಗಿರಬೇಕು
 • ಆನಿಮೇಶನ್, ಗ್ರಾಫಿಕ್ಸ್, ಡಿಸೈನಿಂಗ್, ಗೇಮ್ ಡಿಸೈನಿಂಗ್, ಟೆಕ್ನಾಲಜಿ ಮುಂತಾದ ಫೀಲ್ಡ್ ಬಗ್ಗೆ ಜ್ಞಾನವಿರಬೇಕು. ಗೇಮಿಂಗ್ ಇಂಡಸ್ಟ್ರಿಯಲ್ಲಿ ಎಕ್ಸಲೆಂಟ್ ಕೆರಿಯರ್ ಸ್ಟಾರ್ಟ್ ಮಾಡಲು ಈ ಎಲ್ಲಾ ಅರ್ಹತೆಗಳು ಇರಬೇಕು.
 • ಗೇಮಿಂಗ್ ಇಂಡಸ್ಟ್ರಿಯಲ್ಲಿ ಯಾರೆಲ್ಲಾ ಕೆರಿಯರ್ ಪ್ರಾರಂಭಮಾಡಬೇಕು ಅಂದುಕೊಂಡಿದ್ದೀರೋ ಅವರೆಲ್ಲಾ ಮೊದಲಿಗೆ ಕಂಪ್ಯೂಟರ್‌ಗೆ ಸಂಬಂಧಪಟ್ಟ ಸಿ++ ಅಥವಾ ಜಾವಾ ಕುರಿತು ಹೈಸ್ಕೂಲ್ ಹಂತದಲ್ಲೇ ಕೋರ್ಸ್ ಪಡೆದಿದ್ದರೆ ಎಕ್ಸಲೆಂಟ್ ಆಗಿ ವರ್ಕ್ ಮಾಡಬಹುದು
 • ಹಲವಾರು ಶಿಕ್ಷಣ ಸಂಸ್ಥೆಗಳು ಗೇಮಿಂಗ್ ಕೋರ್ಸ್ ಬಗ್ಗೆ ಶಿಕ್ಷಣ ನೀಡುತ್ತದೆ
 • ನಿಮಗೆ ಗೇಮ್ ಪ್ರೋಗ್ರಾಮರ್ ಆಗಬೇಕು ಅಂದುಕೊಂಡಿದ್ದರೆ, ಕಂಪ್ಯೂಟರ್ ಇಂಜಿನಿಯರಿಂಗ್ ವಿಷಯದಲ್ಲಿ ಬಿಇ, ಬಿಟೆಕ್ ಪದವಿ ಪಡೆದಿರಬೇಕು.
 • ಗೇಮ್ ಡಿಸೈನಿಂಗ್, ಆನಿಮೇಶನ್ ಬಗ್ಗೆ ಆನ್‌ಲೈನ್ ಕೋರ್ಸ್ ಗಳು ಕೂಡಾ ಲಭ್ಯವಿದೆ. ಎಕ್ಸಲೆಂಟ್ ಟೆಕ್ನಿಕಲ್ ಸ್ಕಿಲ್ಸ್ ಯಾರಿಗೆ ಇದೆಯೋ ನೀವು ಈ ಫೀಲ್ಡ್ ಗೆ ಎಂಟ್ರಿ ಕೊಡಬಹುದಾಗಿದೆ.

ಗೇಮಿಂಗ್ ಉದ್ಯಮದಲ್ಲಿ ಉತ್ಕೃಷ್ಟಗೊಳಿಸಲು ಅಗತ್ಯವಾದ ವೈಯಕ್ತಿಕ ಲಕ್ಷಣಗಳು:

 • ಗೇಮ್ ಇಂಡಸ್ಟ್ರಿಗೆ ಎಂಟ್ರಿಯಾಗಬೇಕಾದ್ರೆ ಮುಖ್ಯವಾಗಿ ಇರಬೇಕಾದುದು ಇಚ್ಚೆ ಹಾಗೂ ಆಸಕ್ತಿ
 • ಗೇಮ್ ಡಿಸೈನಿಂಗ್ ನಲ್ಲಿ ಕೆರಿಯರ್ ಪ್ರಾರಂಭಿಸಬೇಕೆಂದಿದ್ದರೆ, ಸಾಫ್ಟ್‌ವೇರ್, ಕ್ರಿಯೇಟೀವ್, ಹಾಗೂ ಆಟದ ಥಿಯರಿಯನ್ನ ಅರ್ಥ ಮಾಡಿಕೊಳ್ಳುವ ಟ್ಯಾಲೆಂಟ್ ಹೊಂದಿರಬೇಕು.
 • ಗುಡ್ ಡಿಸೈನರ್ ಗೆ ಟೈಂ ಮ್ಯಾನೇಜ್‌ಮೆಂಟ್ ಬಗ್ಗೆಯೂ ತಿಳಿದಿರಬೇಕು.

ಗೇಮಿಂಗ್ ಇಂಡಸ್ಟ್ರಿಯಲ್ಲಿ ಕೆರಿಯರ್ ಆಪ್ಷನ್ ಹೀಗಿದೆ:

 • ಗೇಮ್ ಡೆವಲಪರ್
 • ಗೇಮ್ ಡಿಸೈನರ್
 • ಗೇಮ್ ಆರ್ಟಿಸ್ಟ್
 • ಗೇಮ್ ಪ್ರೋಗ್ರಾಮರ್
 • ನೆಟ್‌ವರ್ಕ್ ಪ್ರೋಗ್ರಾಮರ್
 • ಗೇಮ್/ಸ್ಕ್ರಿಪ್ಟ್ ರೈಟರ್ಸ್
 • ಆಡಿಯೋ ಸೌಂಡ್ ಇಂಜಿನಿಯರ್ಸ್
 • ಗೇಮ್ ಟೆಸ್ಟರ್ಸ್
 • ಗೇಮ್ ಮ್ಯಾನೇಜ್‌ಮೆಂಟ್

ವೇತನ ಶ್ರೇಣಿ ಹೀಗಿದೆ:

 • ಗೇಮಿಂಗ್ ಇಂಡಸ್ಟ್ರಿಯು ಅತೀ ಹೆಚ್ಚು ಸಂಭಾವನೆ ಪಡೆಯುವ ಕ್ಷೇತ್ರವಾಗಿದೆ. ನಾವು ಹೇಗೆ ಕೆಲಸ ಮಾಡುತ್ತೇವೆ ಅನ್ನೋದರ ಮೇಲೆ ವೇತನ ನಿರ್ಧಾರವಾಗುತ್ತದೆ. ಟ್ರೀನೀಗೆ ಸಾಮಾನ್ಯವಾಗಿ ತಿಂಗಳಿಗೆ ಸುಮಾರು 7000 ರೂ. ದಿಂದ 10,000 ರೂ ವರೆಗೆ ಸಿಗಬಹುದು.
 • ಇನ್ನು ಫ್ರೀಲೈನ್ಸರ್ ಆಗಿ ಕೆಲಸ ಮಾಡುವವರಿಗೆ ಅವರ ಪ್ರಾಜೆಕ್ಟ್ ಮೇಲೆ ವೇತನ ನಿರ್ಧಾರವಾಗುತ್ತದೆ

ಗೇಮಿಂಗ್ ಕೋರ್ಸ್ ಗಳನ್ನ ಆಫರ್ ಮಾಡುವ ಶಿಕ್ಷಣ ಸಂಸ್ಥೆಗಳು:

ಭಾರತದ 5 ಟಾಪ್ ಶಿಕ್ಷಣ ಸಂಸ್ಥೆಗಳ ಲಿಸ್ಟ್ ಹೀಗಿದೆ

 • ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ಗೇಮಿಂಗ್ ಆಂಡ್ ಆನಿಮೇಶನ್, ಬೆಂಗಳೂರು
 • ಗ್ಲೋಬಲ್ ಇನ್‌ಸ್ಟಿಟ್ಯೂಟ್ ಆಫ್ ಗೇಮಿಂಗ್ ಆಂಡ್ ಆನಿಮೇಶನ್ - ಜಿಐಜಿಎ ಸಿ
 • ಎಡೆನ್ ಆನಿಮೇಶನ್ ಆಂಡ್ ಗೇಮಿಂಗ್ ಅಕಾಡೆಮಿ, ಬಿಕನೆರ್
 • ಅಕಾಡೆಮಿ ಆಫ್ ಆನಿಮೇಶನ್ ಆಂಡ್ ಗೇಮಿಂಗ್ ( ಗುರ್ ಗಾನ್)
 • ಐಐಎಫ್ಎ ಮಲ್ಟಿಮೀಡಿಯಾ (ಇನ್‌ಸ್ಟಿಟ್ಯೂಟ್ ಫಾರ್ ಇಂಟೇರಿಯರ್ ಫ್ಯಾಶನ್ ಆಂಡ್ ಆನಿಮೇಶನ್)

ಹೊರದೇಶದಲ್ಲಿ ಇರುವ ಟಾಪ್ 5 ಇನ್‌ಸ್ಟಿಟ್ಯೂಟ್:

 • ಯೂನಿವರ್ಸಿಟಿ ಆಫ್ ಸೌತ್ ವೇಲ್ಸ್
 • ಏಂಜೆಲಿಯಾ ರಸ್ಕಿನ್ ಯೂನಿವರ್ಸಿಟಿ
 • ಲಂಡನ್ ಸೌತ್ ಬ್ಯಾಂಕ್ ಯೂನಿವರ್ಸಿಟಿ
 • ಪ್ಲೇಮೌತ್ ಯೂನಿವರ್ಸಿಟಿ
 • ಗ್ಲಾಸ್ ಗೌ ಕ್ಯಾಲೆಡೊನಿಯನ್ ಯೂನಿವರ್ಸಿಟಿ

English summary
Who doesn't love playing games? Most of us love playing games and spend hours, be it on our phone, computer or video. We get easily addicted to games but does anyone think of the efforts behind the making of the games

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia