ಕಲಾ ವಿಭಾಗಕ್ಕೆ ಹೆಚ್ಚುತ್ತಿರುವ ಬೇಡಿಕೆ

Posted By:

ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪೂರೈಸಿ ಮುಂದೇನು ಎಂದು ಯೋಚಿಸುವವರಿಗೆ ಕಲಾ ವಿಭಾಗವು ಕೈಬೀಸಿ ಕರೆಯುತ್ತಿದೆ. ದಿನದಿಂದ ದಿನಕ್ಕೆ ಸಾಕಷ್ಟು ಬೆಳವಣಿಗೆ ಕಾಣುತ್ತಿರುವ ದೃಶ್ಯ ಮಾಧ್ಯಮಗಳು ಕಲಾ ವಿಭಾಗಕ್ಕೆ ಹೆಚ್ಚಿನ ಸ್ಥಾನ ಸಿಗುವಂತೆ ಮಾಡಿವೆ.

ಕಲಾ ವಿಭಾಗದಲ್ಲಿ ಉದ್ಯೋಗಾವಕಾಶಗಳು ಕೂಡ ಹೆಚ್ಚಿದ್ದು, ಇಂದು ಎಲ್ಲಾ ಕ್ಷೇತ್ರದಲ್ಲೂ ಕಲೆ ಮನ್ನಣೆ ಪಡೆದಿದೆ. ಪಿಯುಸಿ ನಂತರದ ಪದವಿಗಳಾದ ಬಿವಿಎ ಮತ್ತು ಬಿಎಫ್ಎ ಕೋರ್ಸುಗಳು ಹೊಸ ಹೊಸ ಅವಕಾಶವನ್ನು ನಿರ್ಮಿಸುತ್ತಿವೆ.

ಫೈನ್ ಆರ್ಟ್ಸ್ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುವವರಿಗೆ ಹಲವಾರು ಕೋರ್ಸ್‌ಗಳು ಲಭ್ಯವಿವೆ. ನಾಲ್ಕು ವರ್ಷಗಳ ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್ (ಬಿಎಫ್‌ಎ) ಅಥವಾ ಬ್ಯಾಚುಲರ್ ಆಫ್ ವಿಶುವಲ್ ಆರ್ಟ್ (ಬಿವಿಎ) ಆಯ್ಕೆ ಮಾಡಿಕೊಂಡು ಪೇಂಟಿಂಗ್, ಸ್ಕ್ಲಪ್ಚರ್, ಮೆಟಲ್ ವರ್ಕ್, ಟೆಕ್ಸ್‌ಟೈಲ್ ಡಿಸೈನ್, ಇಂಟೀರಿಯರ್ ಡೆಕೊರೇಶನ್ ಮುಂತಾದ ವಿಭಾಗಗಳಲ್ಲಿ ಸ್ಪೆಶಲೈಸೇಶನ್ ಮಾಡಲು ಸಾಧ್ಯವಿದೆ.

ಕಲೆಗೆ ಹೆಚ್ಚು ಬೆಲೆ

ವಾಣಿಜ್ಯ ಕಲೆ ವಿಭಾಗದಲ್ಲಿ ಉದ್ಯೋಗ ಪಡೆಯಲು ಬಯಸುವ ವಿದ್ಯಾರ್ಥಿಗಳು ಅನಿಮೇಶನ್, ನ್ಯೂ ಮಿಡಿಯಾ ಆರ್ಟ್, ಗ್ರಾಫಿಕ್ಸ್ ಡಿಸೈನ್, ಇಂಡಸ್ಟ್ರಿಯಲ್ ಡಿಸೈನ್, ಫ್ಯಾಶನ್ ಡಿಸೈನಿಂಗ್, ಇಂಟೀರಿಯರ್ ಡಿಸೈನಿಂಗ್ ಮೊದಲಾದ ವಿಷಯಗಳನ್ನು ಕಲಿತುಕೊಂಡು ಪರಿಣತಿ ಸಾಧಿಸಬಹುದಾಗಿದೆ. ಇದರ ಜೊತೆಗೆ ಫೈನ್ ಆರ್ಟ್ಸ್‌ನಲ್ಲಿ ಡ್ಯಾನ್ಸ್, ಮ್ಯೂಸಿಕ್, ಡ್ರಾಮಾ ಕೂಡ ಆಯ್ದುಕೊಳ್ಳಬಹುದು.

ಸಾಂಪ್ರದಾಯಿಕವಾಗಿ ಕಲಾ ವಿಭಾಗವನ್ನು ವಿಶುವಲ್ ಮತ್ತು ಅಪ್ಲೈಡ್ ಆರ್ಟ್ಸ್ ಎಂದು ಎರಡು ವಿಭಾಗವಾಗಿ ವಿಂಗಡಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಎಲ್ಲಾ ಉದ್ಯಮ ವಿಭಾಗಗಳಲ್ಲೂ ಕ್ರಿಯೇಟಿವ್ ಪ್ರೊಫೈಲ್ ಸಂಖ್ಯೆ ದೊಡ್ಡ ಮಟ್ಟದಲ್ಲಿ ಹೆಚ್ಚಾಗಿರುವುದರಿಂದ ವಿದ್ಯಾರ್ಥಿಗಳು ಫೈನ್ ಆರ್ಟ್ಸ್ ಮತ್ತು ಪರ್ಫಾರ್ಮಿಂಗ್ ಆಟ್ಸ್ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ.

ಇನ್ನು ಪೇಂಟಿಂಗ್ ಕಲಿಯ ಬಯಸುವ ವಿದ್ಯಾರ್ಥಿಗಳಲ್ಲಿ ಕ್ರಿಯೇಟಿವಿಟಿ ಹೆಚ್ಚಿರಬೇಕು. ಅದರಲ್ಲೂ ಮುಖ್ಯವಾಗಿ ಸುಂದರವಾಗಿ ಚಿತ್ರ ಬಿಡಿಸುವ ಸಾಮರ್ಥ್ಯ ಅವರಿಗೆ ಇನ್ನಷ್ಟು ಲಾಭ ತಂದುಕೊಡುತ್ತದೆ. ಜೊತೆಗೆ ಇತ್ತೀಚಿನ ತಂತ್ರಜ್ಞಾನ, ಸಾಫ್ಟ್‌ವೇರ್ ಸೇರಿದಂತೆ ಡಿಜಿಟಲ್ ಕ್ಷೇತ್ರದ ಹೊಸ ಬೆಳವಣಿಗೆಗಳ ಬಗ್ಗೆ ಅರಿವಿರಬೇಕು.

ಈ ಕೋರ್ಸ್‌ಗಳ ಪ್ರವೇಶ ನಿಯಮಗಳು ಸಂಸ್ಥೆಯಿಂದ ಸಂಸ್ಥೆಗೆ ವಿಭಿನ್ನವಾಗಿರುತ್ತದೆ. ಸಾಮಾನ್ಯವಾಗಿ ವಿದ್ಯಾರ್ಥಿಗಳು ಕೋರ್ಸ್ ಪ್ರವೇಶಕ್ಕೆ ಹನ್ನೆರಡನೇ ತರಗತಿ ಉತ್ತೀರ್ಣರಾಗಬೇಕಾಗುತ್ತದೆ. ಕೆಲವು ಶಿಕ್ಷಣ ಸಂಸ್ಥೆಗಳು ರಾಜ್ಯ ಮಟ್ಟದ ಪ್ರವೇಶ ಪರೀಕ್ಷೆಯನ್ನು ಕೂಡ ಏರ್ಪಡಿಸುತ್ತವೆ. ಇನ್ನು ಕೆಲವು ಫೌಂಡೇಶನ್ ಕೋರ್ಸ್ ಪೂರ್ಣಗೊಳಿಸಲು ಹೇಳುತ್ತವೆ. ಪ್ರತಿ ವರ್ಷವೂ ವಿದ್ಯಾರ್ಥಿಗಳು ಥಿಯರಿ ಮತ್ತು ಪ್ರಾಕ್ಟಿಕಲ್ ಅಸೈನ್‌ಮೆಂಟ್ ಮಾಡಬೇಕಾಗುತ್ತದೆ. ಅಂತಿಮ ವರ್ಷದಲ್ಲಿ ವಿದ್ಯಾರ್ಥಿಗಳು ಪ್ರಾಜೆಕ್ಟ್ ಡೆಸರ್ಟೇಶನ್ ಮತ್ತು ವೈವಾ ಪೂರ್ಣಗೊಳಿಸಬೇಕಾಗುತ್ತದೆ.

ಪದವಿ ಪೂರ್ಣಗೊಳಿಸಿದ ಬಳಿಕ ಮಲ್ಟಿಮೀಡಿಯಾ ಆರ್ಟಿಸ್ಟ್, ಆರ್ಟ್ ಡೈರೆಕ್ಟರ್, ಆರ್ಟ್ ಟೀಚರ್, ಡೈರೆಕ್ಟರ್, ಪೇಂಟರ್, ಕ್ರಾಫ್ಟ್ ಆರ್ಟಿಸ್ಟ್, ಕ್ರಿಯೇಟಿವ್ ಡೈರೆಕ್ಟರ್, 3ಡಿ ಆರ್ಟಿಸ್ಟ್ ಅಥವಾ ಗ್ರಾಫಿಕ್ಸ್ ಡೀಸೈನರ್ ಆಗಬಹುದು. ಇದರ ಜೊತೆಗೆ ಮ್ಯೂಸಿಯಂ, ಆರ್ಟ್ ಗ್ಯಾಲರಿ, ಥಿಯೇಟರ್, ಪ್ರೊಡಕ್ಷನ್ ಹೌಸ್, ಜಾಹೀರಾತು ಸಂಸ್ಥೆ, ಪ್ರಕಾಶನ, ಮೀಡಿಯಾ ಹೌಸ್ ಮೊದಲಾದ ಕಡೆ ಕೂಡ ಕೆಲಸ ಮಾಡಬಹುದಾಗಿದೆ.

ಬಹು ವಿಷಯಗಳಲ್ಲಿ ಸ್ಪೆಶಲೈಸೇಶನ್ ಪಡೆಯಲು ವಿದ್ಯಾರ್ಥಿಗಳು ಪದವಿಯ ಜೊತೆಗೆ ಅನಿಮೇಶನ್‌ನಲ್ಲಿ ಡಿಪ್ಲೊಮಾ ಅಥವಾ ಸರ್ಟಿಫಿಕೇಟ್ ಕೋರ್ಸ್ ಮಾಡಬಹುದಾಗಿದೆ. ಅನಿಮೇಶನ್‌ನಲ್ಲಿ ಬ್ಯಾಚುಲರ್ ಡಿಗ್ರಿ ಪೂರ್ಣಗೊಳಿಸಿದ ಬಳಿಕ ಟೆಕ್ಸ್ಚರ್ ಆರ್ಟಿಸ್ಟ್, ಕ್ಯಾರೆಕ್ಟರ್ ಮಾಡ್ಯುಲರ್, ಕ್ಯಾರೆಕ್ಟರ್ ಅನಿಮೇಟರ್, ಸ್ಟೋರಿ ಬೋರ್ಡ್ ಆರ್ಟಿಸ್ಟ್, ಕಾನ್ಸೆಪ್ಚುವಲ್ ಇಲ್ಲಸ್ಟ್ರೇಟರ್, ವಿಎಫ್‌ಎಕ್ಸ್ ಅನಿಮೇಟರ್, ವಿಡಿಯೋ ಗೇಮಿಂಗ್, ಪ್ರೊಡಕ್ಷನ್ ಹೌಸ್, ಮೊಬೈಲ್ ಆ್ಯಪ್ ಡೆವಲಪರ್ ಮೊದಲಾದ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯಲು ಸಾಧ್ಯವಿದೆ.

English summary
Bachelor of fine arts (BFA) and Bachelor of visual arts are creating many jobs now a days.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia