ಉದ್ಯೋಗ ಸೃಷ್ಟಿಸುತ್ತಿರುವ ಜಿಟಿಟಿಸಿ ಬಗ್ಗೆ ನೀವು ತಿಳಿಯಲೇ ಬೇಕು

Posted By:

ಎಸ್ ಎಸ್ ಎಲ್ ಸಿ ಪಾಸ್ ಆಗಿ ಏನು ಮಾಡಬೇಕು ಎಂದು ಗೊಂದಲದಲ್ಲಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಸುಲಭವಾಗಿ ಉದ್ಯೋಗ ಪಡೆಯುವ ಕೋರ್ಸ್.

ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವು (ಜಿಟಿಟಿಸಿ), ವಿದ್ಯಾಭ್ಯಾಸ ಮುಗಿದ ತಕ್ಷಣ ಉದ್ಯೋಗ ಬಯಸುವವರಿಗೆ ಇದು ಹೇಳಿ ಮಾಡಿಸಿದ ಕೋರ್ಸ್.

ರಾಜ್ಯಾದ್ಯಂತ 20ಕ್ಕೂ ಅಧಿಕ ಜೆಲ್ಲೆಗಳಲ್ಲಿ ದಶಕಗಳಿಂದ ಕಾರ್ಯ ನಿರ್ವಹಿಸುತ್ತಿರುವ ಈ ಕೋರ್ಸ್ ಅನ್ನು ಬಡ ಹಾಗೂ ಮಧ್ಯಮ ವರ್ಗದವರನ್ನು ದೃಷ್ಟಿಯಲ್ಲಿಟ್ಟುಕೊಂಡೇ ಆರಂಭಿಸಲಾಗಿದೆ.

4 ವರ್ಷದ ಡಿಪ್ಲೊಮಾ ಕೋರ್ಸ್‌ನಿಂದ ಹಿಡಿದು ಅಲ್ಪಾವಧಿ ಸರ್ಟಿಫಿಕೆಟ್ ಕೋರ್ಸ್ ಇಲ್ಲಿವೆ. ಒಂದು ವರ್ಷ ಅವಧಿಯ ಕಾಂಪೋಸಿಟ್ ಮೆಷಿನಿಸ್ಟ್ ಮತ್ತು 2 ವರ್ಷ ಅವಧಿಯ ಟೂಲ್ ಆ್ಯಂಡ್ ಡೈ ಟೆಕ್ನಿಷಿಯನ್, ಮೂರು ವರ್ಷದ ಕಾಂಫಿಟೆನ್ಸಿ ಸರ್ಟಿಫಿಕೆಟ್ ಡಿಪ್ಲೊಮಾ ಮುಂತಾದ ಅಲ್ಪಾವಧಿ ವೃತ್ತಿ ತರಬೇತಿ ಕೋರ್ಸ್‌ಗಳಿವೆ.

ಉದ್ಯೋಗ ಸೃಷ್ಟಿಸುತ್ತಿರುವ ಜಿಟಿಟಿಸಿ

ಟೂಲ್ ಆ್ಯಂಡ್ ಡೈ ಮೇಕಿಂಗ್ ವಿಭಾಗದಲ್ಲಿ 60 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಮೆರಿಟ್ ಕಮ್ ರೋಸ್ಟರ್ ಪದ್ಧತಿಯಲ್ಲಿ ಆಯ್ಕೆ ಮಾಡಲಾಗುತ್ತದೆ. 20 ಸೀಟುಗಳು ವಿದ್ಯಾರ್ಥಿನಿಯರಿಗೆ ಮೀಸಲಾಗಿವೆ.

ಈ ಕೇಂದ್ರದಲ್ಲಿ ಶಿಕ್ಷಣ ಪಡೆದ ಅನೇಕ ವಿದ್ಯಾರ್ಥಿಗಳು ದೇಶ-ವಿದೇಶಗಳ ಕಂಪೆನಿಗಳಲ್ಲಿ ಉದ್ಯೋಗಿಗಳಾಗಿದ್ದಾರೆ. ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಆಸಕ್ತಿ ಹೊಂದಿರುವ ಎಸ್ಸೆಸ್ಸೆಲ್ಸಿ ಪಾಸಾಗಿರುವ ವಿದ್ಯಾರ್ಥಿಗಳು ಜಿಟಿಟಿಸಿಯಲ್ಲಿ ಪ್ರವೇಶ ಪಡೆಯಬಹುದು.

ಟೂಲ್ ಆ್ಯಂಡ್ ಡೈ ಮೇಕಿಂಗ್ ಮೂರು ವರ್ಷದ ವಿಷಯಾಧಾರಿತ ತರಬೇತಿ ಹಾಗೂ ಒಂದು ವರ್ಷದ ಕೈಗಾರಿಕೆಗಳಲ್ಲಿ ಉದ್ಯಮ ತರಬೇತಿ ಇರುತ್ತದೆ. ಉದ್ಯಮ ತರಬೇತಿ ಪಡೆಯುವ ಪ್ರತಿ ವಿದ್ಯಾರ್ಥಿಗೂ ಪ್ರತಿ ತಿಂಗಳು ₹ 10 ರಿಂದ 13 ಸಾವಿರ ಗೌರವ ಧನ ನೀಡಲಾಗುತ್ತದೆ.

ಸೆಮಿಸ್ಟೆರ್ ಪದ್ಧತಿ ಅಳವಡಿಸಿಕೊಳ್ಳಲಾಗಿದ್ದು, ಪ್ರತಿ ಸೆಮಿಸ್ಟರ್‌ಗೆ ₹11,000 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಕೊನೆಯ ಒಂದು ವರ್ಷಕ್ಕೆ ₹ 11,000 ಶುಲ್ಕ ಭರಿಸಬೇಕಾಗುತ್ತದೆ.

ಒಂದು ವರ್ಷದ ಅಧ್ಯಯನಕ್ಕೆ ₹ 20 ಸಾವಿರ ಶುಲ್ಕ ಭರಿಸಬೇಕಾಗುತ್ತದೆ. ಕಾಂಪೋಸಿಟ್ ಮೆಷಿನಿಸ್ಟ್‌ನಲ್ಲಿ 30 ಸೀಟು ಹಾಗೂ ಟೂಲ್ ಆಂಡ್ ಡೈ ಟೆಕ್ನಿಷಿಯನ್‌ನಲ್ಲಿ 30 ಸೀಟುಗಳಿವೆ.

ಜಿಟಿಟಿಸಿಯಲ್ಲಿ ನಾಲ್ಕು ವರ್ಷದ ಡಿಪ್ಲೊಮಾ ಓದಿದ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಮೂರನೇ ಸೆಮಿಸ್ಟರ್‌ಗೆ ಪ್ರವೇಶ ಹೊಂದಲು ಅವಕಾಶವಿದೆ. ಅತ್ಯಾಧುನಿಕ ಯಂತ್ರೋಪಕರಣ ಅಳವಡಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ www.karnataka.gov.in ಗಮನಿಸಿ

English summary
oday, the GTTC have acquired mastery in mould and die making technology and have blossomed into an epitome of precision and quality in the development and manufacture of sophisticated moulds, dies and tools.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia