Guru Purnima 2021 : ಗುರು ಪೂರ್ಣಿಮೆಯ ದಿನಾಂಕ, ಶುಭ ಮುಹೂರ್ತ, ಪೂಜಾ ವಿಧಾನ ಮತ್ತು ಮಹತ್ವ ತಿಳಿಯಿರಿ

ಗುರು ಪೂರ್ಣಿಮೆಯ ದಿನಾಂಕ, ಶುಭ ಮುಹೂರ್ತ, ಪೂಜಾ ವಿಧಾನ ಮತ್ತು ಮಹತ್ವ ಇಲ್ಲಿದೆ

ದೇಶದಾದ್ಯಂತ ಜುಲೈ 24ರಂದು ಗುರು ಪೂರ್ಣಿಮೆಯ ದಿನವನ್ನು ಆಚರಿಸಲಾಗುತ್ತದೆ. ವೇದಗಳ ಲೇಖಕ ಮಹರ್ಷಿ ವೇದ ವ್ಯಾಸರು ಆಷಾಢ ಪೂರ್ಣಿಮೆಯ ದಿನಾಂಕದಂದು ಜನಿಸಿದರು ಎನ್ನುವ ನಂಬಿಕೆಯಿದೆ. ಹಾಗಾಗಿಯೇ ಗುರು ಪೂರ್ಣಿಮಾವನ್ನು ವ್ಯಾಸ ಪೂರ್ಣಿಮಾ ಎಂದೂ ಕರೆಯುತ್ತಾರೆ.

ನಿಮಗೆ ಗೊತ್ತಿರುವ ಹಾಗೆ ಈ ದಿನದಂದು ವೇದವ್ಯಾಸರ ಜನ್ಮ ದಿನವನ್ನಾಗಿ ಆಚರಿಸಲಾಗುತ್ತದೆ. ವೇದವ್ಯಾಸರ ಜನ್ಮದಿನದ ಸ್ಮರಣಾರ್ಥವಾಗಿ ಗುರು ಪೂರ್ಣಿಮೆಯನ್ನು ಕೂಡ ಆಚರಿಸಲಾಗುತ್ತದೆ. ಈ ದಿನ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಗುರುಗಳನ್ನು ಆರಾಧಿಸುವ ಮೂಲಕ ಪೂಜೆಯನ್ನು ಮಾಡುತ್ತಾರೆ. ಬನ್ನಿ ನೀವು ಈ ದಿನದ ಶುಭ ಮುಹೂರ್ತ, ಶುಭ ಸಮಯ, ಪೂಜಾ ವಿಧಾನ ಮತ್ತು ಮಹತ್ವವನ್ನು ಇಲ್ಲಿ ತಿಳಿಯಿರಿ.

ಗುರು ಪೂರ್ಣಿಮಾ 2021 : ಶುಭ ಮುಹೂರ್ತ

ಗುರು ಪೂರ್ಣಿಮಾ 2021 ದಿನಾಂಕ: ಜುಲೈ 24,2021 ಶನಿವಾರ
ಗುರು ಪೂರ್ಣಿಮಾ ತಿಥಿ ಪ್ರಾರಂಭ: ಜುಲೈ 23,2021 ರಂದು ಶುಕ್ರವಾರ ಬೆಳಗ್ಗೆ 10:43 ರಿಂದ
ಗುರು ಪೂರ್ಣಿಮಾ ತಿಥಿ ಮುಕ್ತಾಯ: ಜುಲೈ 24,2021 ರಂದು ಶನಿವಾರ ಬೆಳಗ್ಗೆ 8:06 ರವರೆಗೆ

ಗುರು ಪೂರ್ಣಿಮಾ 2021 ಪೂಜೆಯ ವಿಧಾನ:

ಸನಾತನ ಧರ್ಮದಲ್ಲಿ ಹೇಳುವಂತೆ ಈ ದಿನದಂದು ಗಂಗೆಯಲ್ಲಿ ಮಿಂದು, ನಂತರ ದಾನ ಮಾಡುವುದು ಶ್ರೇಷ್ಠ ಎನ್ನಲಾಗುತ್ತದೆ. ಜ್ಯೋತಿಷಿಗಳ ಪ್ರಕಾರ, ಗುರು ಪೂರ್ಣಿಮೆಯ ದಿನದಂದು ವೀಳ್ಯದೆಲೆಗಳು, ತೆಂಗಿನ ನೀರು, ಮೋದಕ, ಕರ್ಪೂರ, ಲವಂಗ, ಏಲಕ್ಕಿಗಳೊಂದಿಗೆ ಪೂಜೆ ಮಾಡುವುದು ಅಪೇಕ್ಷಿತ ಫಲಿತಾಂಶವನ್ನು ನೀಡುತ್ತದೆ.

ಗುರು ಪೂರ್ಣಿಮಾ 2021 ಮಹತ್ವ :

ಪ್ರತಿಯೊಬ್ಬರ ಬದುಕಿನಲ್ಲೂ ಗುರುವಿಗೆ ವಿಶೇಷ ಸ್ಥಾನವಿದೆ. ಅವರ ತ್ಯಾಗ ಮತ್ತು ಬೋಧನೆಗಳಿಂದ ಹಲವಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನವಾಗಿದೆ. ಹಾಗಾಗೆ ಪ್ರತಿಯೊಬ್ಬ ಗುರುವಿಗೂ ವಿಶೇಷವಾಗಿ ಗೌರವಿಸಲು ಆಷಾಡ ಮಾಸದ ಶುಕ್ಲ ಪಕ್ಷದಂದು ಬರುವ ಹುಣ್ಣಿಮೆಯಂದು ಗುರುಪೌರ್ಣಿಮಾ ದಿನವನ್ನು ಆಚರಿಸಲಾಗುತ್ತದೆ.

For Quick Alerts
ALLOW NOTIFICATIONS  
For Daily Alerts

English summary
Guru purnima is on july 24, here is the time, shubh muhurat, puja vidhi and significance in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X